For Quick Alerts
  ALLOW NOTIFICATIONS  
  For Daily Alerts

  ಎರಡನೇ ಬಾರಿ ತಂದೆಯಾದ ಸಂಭ್ರಮದಲ್ಲಿ ಖ್ಯಾತ ಕಾಮಿಡಿಯನ್ ಕಪಿಲ್ ಶರ್ಮಾ

  |

  ಹಿಂದಿ ಕಿರುತೆರೆ ಲೋಕದ ಖ್ಯಾತ ಕಾಮಿಡಿಯನ್ ಕಪಿಲ್ ಶರ್ಮಾ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಹೌದು, ಕಪಿಲ್ ಶರ್ಮಾ ಎರಡನೇ ಬಾರಿ ತಂದೆಯಾದ ಸಂತಸದಲ್ಲಿದ್ದಾರೆ. ಕಪಿಲ್ ಪತ್ನಿ ಗಿನ್ನಿ ಇಂದು ಬೆಳಗ್ಗೆ (ಫೆಬ್ರವರಿ 1) ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಬಗ್ಗೆ ಕಪಿಲ್ ಶರ್ಮಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

  'ನಮಸ್ಕಾರ ನಮಗೆ ಗಂಡು ಮಗುವಾಗಿದೆ. ಮಗು ಮತ್ತು ತಾಯಿ ಇಬ್ಬರು ಆರೋಗ್ಯವಾಗಿದ್ದಾರೆ. ನಿಮ್ಮೆಲ್ಲರ ಪ್ರೀತಿ ಕಾಳಜಿಗೆ ಧನ್ಯವಾದಗಳು.' ಎಂದು ಬರೆದುಕೊಂಡಿದ್ದಾರೆ.

  ಸೆಲೆಬ್ರಿಟಿ ಕಾರ್ ಡಿಸೈನರ್ ವಿರುದ್ಧ 5.7ಕೋಟಿ ರೂ.ವಂಚನೆ ಆರೋಪ ಮಾಡಿದ ಕಪಿಲ್ ಶರ್ಮಾಸೆಲೆಬ್ರಿಟಿ ಕಾರ್ ಡಿಸೈನರ್ ವಿರುದ್ಧ 5.7ಕೋಟಿ ರೂ.ವಂಚನೆ ಆರೋಪ ಮಾಡಿದ ಕಪಿಲ್ ಶರ್ಮಾ

  ಅಂದಹಾಗೆ ಕಪಿಲ್ ಶರ್ಮಾಗೆ ಈಗಾಗಲೇ ಮುದ್ದಾದ ಹೆಣ್ಣು ಮುಗುವಿದೆ. ಮೊದಲ ಮಗುವಿಗೆ ಅನೈರಾ ಎಂದು ನಾಮಕರಣ ಮಾಡಿದ್ದಾರೆ. ಎರಡನೇ ಮಗುವನ್ನು ಸ್ವಾಗತಿಸುವ ಬಗ್ಗೆ ಕಪಿಲ್ ಇತ್ತೀಚಿಗಷ್ಟೆ ಮಾಹಿತಿ ಹಂಚಿಕೊಂಡಿದ್ದರು.

  ಕಪಿಲ್ 2018ರಲ್ಲಿ ಗೆಳತಿ ಗಿನ್ನಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದೀಗ ಮದುವೆಯಾಗಿ ಎರಡು ವರ್ಷದಲ್ಲೇ ಎರಡು ಮುದ್ದಾದ ಮಕ್ಕಳ ತಂದೆಯಾಗಿದ್ದಾರೆ. ಅಂದಹಾಗೆ ಇತ್ತೀಚಿಗೆ ಕಪಿಲ್ ಶರ್ಮಾ ಶೋ ರದ್ದು ಮಾಡಲಾಗಿತ್ತು.

  ಪ್ರತೀ ಶನಿವಾರ ಮತ್ತು ಭಾನುವಾರ ಶೋಗಾಗಿ ಕಾದುಕುಳಿತಿದ್ದ ಅಭಿಮಾನಿಗಳಿಗೆ ಶೋ ರದ್ದಾಗಿರುವುದು ಭಾರಿ ನಿರಾಸೆ ಮೂಡಿಸಿತ್ತು. ಶೋ ಮುಕ್ತಾಯವಾಯಿತು ಎಂದೇ ಎಲ್ಲರೂ ಅಂದುಕೊಂಡಿದ್ದರು. ಆದರೆ ಕಪಿಲ್ ಪತ್ನಿಗಾಗಿ ಶೋ ರದ್ದು ಮಾಡಿರುವುದಾಗಿ ಬಹಿರಂಗ ಪಡಿಸುವ ಮೂಲಕ ವದಂತಿಗೆ ಬ್ರೇಕ್ ಹಾಕಿದರು. ಗರ್ಭಿಣಿ ಪತ್ನಿ ಜೊತೆ ಸಮಯ ಕಳೆಯಲು ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದರು.

  ಕಪಿಲ್ ಶರ್ಮಾ ಕೊರೊನಾ ಕಾರಣದಿಂದ 4 ತಿಂಗಳು ಶೋ ರದ್ದಾಗಿತ್ತು. ಬಳಿಕ ಮತ್ತೆ ಕೊರೊನಾ ನಿಯಮಗಳ ಜೊತೆಗೆ ಶೋ ಪ್ರಾರಂಭ ಮಾಡಿ ಯಶಸ್ವಿಯಾದರು.

  English summary
  Famous comedian kapil sharma and Ginni blessed with baby boy.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X