ಮದುವೆ ಸಂಭ್ರಮದಲ್ಲಿ ಕಿರುತೆರೆಯ ಖ್ಯಾತ ನಟಿ ದೀಪಿಕಾ

Recommended Video

Serial Actress Deepika shares her wedding pictures and they are bliss | FILMIBEAT KANNADA

ಧಾರಾವಾಹಿ ಮೂಲಕ ಕಿರುತೆರೆ ವೀಕ್ಷಕರ ಮನೆಮಾತಾಗಿದ್ದ ನಟಿ ದೀಪಿಕಾ ಈಗ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಧನ್ಯಾ ಪಾತ್ರದ ಮೂಲಕ ಕಿರುತೆರೆ ಪ್ರೇಕ್ಷಕರ ಮನಗೆದ್ದಿರುವ ದೀಪಿಕಾ ಬಹುಕಾಲದ ಗೆಳೆಯ ಆಕರ್ಷ್ ಜೊತೆ ಸಪ್ತಪದಿ ತುಳಿಯುತ್ತಿದ್ದಾರೆ. ಈಗಾಗಲೆ ದೀಪಿಕಾ ಮನೆಯಲ್ಲಿ ಮದುವೆ ಸಂಭ್ರಮ ಕಳೆಗಟ್ಟಿದೆ.

ನಟಿ ದೀಪಿಕಾ ಬಹುಕಾಲದ ಗೆಳೆಯ ಆಕರ್ಷ್ ಜೊತೆ ಜೂನ್ ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ದೀಪಿಕಾ, ಈಗ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ದೀಪಿಕಾ ಮನೆಯಲ್ಲಿ ಅರಿಶಿಣ ಶಾಸ್ತ್ರ, ಮೆಹಂದಿ ಶಾಸ್ತ್ರಗಳು ಜೋರಾಗಿ ನಡೆಯುತ್ತಿದೆ. ಶಾಸ್ತ್ರಗಳ ಒಂದಿಷ್ಟು ಫೋಟೋವನ್ನು ದೀಪಿಕಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

Famous Serial Artist Deepika Is Getting Mrried To Her Love Akarsh

ದೀಪಿಕಾ ಕೈ ಹಿಡಿಯುತ್ತಿರುವ ಆಕರ್ಷ್ ಕೂಡ ಧಾರವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ. ಆಕರ್ಷ್ ಕಿರುತೆರೆ ಜೊತೆಗೆ ಸಿನಿಮಾಗಳಲ್ಲೂ ಕಾಣಿಸಿಕೊಂಡಿದ್ದಾರೆ. ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ 'ಮಾನಸ ಸರೋವರ' ಧಾರಾವಾಹಿಯಲ್ಲಿ ಆಕರ್ಷ್ ಅಭಿನಯಿಸುತ್ತಿದ್ದಾರೆ.

Famous Serial Artist Deepika Is Getting Mrried To Her Love Akarsh

ದೀಪಿಕಾ 'ಕುಲವಧು' ಎನ್ನುವ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದರು. ಕಿರುತೆರೆ ಮಾತ್ರವಲ್ಲದೆ ಬೆಳ್ಳೆ ಪರದೆ ಮೇಲು ದೀಪಿಕಾ ಮಿಂಚಿದ್ದಾರೆ. 'ನನ್ ಮಗಳೆ ಹೀರೋಯಿನ್' ಸಿನಿಮಾದಲ್ಲಿ ಬಣ್ಣಹಚ್ಚುವ ಮೂಲಕ ದೊಡ್ಡ ಪರದೆಯಲ್ಲು ಕಾಣಿಸಿಕೊಂಡಿದ್ದಾರೆ. ಸದ್ಯ ಅಭಿನಯದ ಕೊಂಚ ಬ್ರೇಕ್ ತೆಗೆದುಕೊಂಡಿರುವ ದೀಪಿಕಾ ಈಗ ಆಕರ್ಷ್ ಜೊತೆ ಹಸೆಮಣೆ ಏರುತ್ತಿದ್ದಾರೆ.

More from Filmibeat

English summary
Famous serial artist Deepika is getting married to her love Akarsh.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X