ವೆಬ್ ಸೀರಿಸ್ ಲೋಕಕ್ಕೆ ಕಾಲಿಟ್ಟ 'ಮಹಾಭಾರತ' ಧಾರಾವಾಹಿಯ ಅರ್ಜುನ

ಹಿಂದಿ ಕಿರುತೆರೆ ಲೋಕದ ಜನಪ್ರಿಯ ನಟ ಶಾಹೀರ್ ಶೇಖ್ ಕನ್ನಡ ಪ್ರೇಕ್ಷಕರಿಗೂ ಚಿರಪರಿಚಿತ. ಶಾಹೀರ್ ಶೇಖ್ ಎನ್ನುವುದಕ್ಕಿಂತ 'ಮಹಾಭಾರತ'ದ ಅರ್ಜುನ ಎಂದರೆ ಕನ್ನಡ ಪ್ರೇಕ್ಷಕರಿಗೆ ಥಟ್ ಅಂತ ನೆನಪಾಗುತ್ತೆ. ಮಹಾಭಾರತದ ಅರ್ಜುನ ಪಾತ್ರದ ಮೂಲಕ ಶಾಹೀರ್ ಶೇಖ ಕನ್ನಡ ಪ್ರೇಕ್ಷಕರ ಮನಗೆದ್ದಿದ್ದಾರೆ.

'ಮಹಾಭಾರತ' ಧಾರಾವಾಹಿ ಮೂಲಕ ಅಪಾರ ಸಂಖ್ಯೆಯ ಅಭಿಮಾನಿ ಬಳಗ ಹೊಂದಿರುವ ಶಾಹೀರ್ ಸದ್ಯ 'ಯೇ ರಿಶ್ತಾ ಹೇ ಪ್ಯಾರ್ ಕಿ' ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಮೂಲತಹ ಕಾಶ್ಮೀರದವರಾದ ಶಾಹೀರ್ 2009ರಲ್ಲಿ ಕಿರುತೆರೆ ಲೋಕಕ್ಕೆ ಕಾಲಿಟ್ಟಿದ್ದಾರೆ. ಚಿಕ್ಕ ಪುಟ್ಟ ಪಾತ್ರಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿದ್ದ ಶಹೀರ್ ಗೆ ದೊಡ್ಡ ಮಟ್ಟದ ಖ್ಯಾತಿ ತಂದು ಕೊಟ್ಟಿದ್ದು 2014ರಲ್ಲಿ ಬಂದ 'ಮಹಾಭಾರತ' ಧಾರಾವಾಹಿಯ ಅರ್ಜುನ ಪಾತ್ರ. ಇದೀಗ ಕಿರುತೆರೆಯಿಂದ ಶಾಹೀರ್ ವೆಬ್ ಸರಣಿಗೆ ಕಾಲಿಟ್ಟಿದ್ದಾರೆ. ಮುಂದೆ ಓದಿ..

ಬ್ಯಾಕ್ ಟು ಬ್ಯಾಕ್ ಧಾರಾವಾಹಿಯಲ್ಲಿ ನಟನೆ

ಬ್ಯಾಕ್ ಟು ಬ್ಯಾಕ್ ಧಾರಾವಾಹಿಯಲ್ಲಿ ನಟನೆ

ಸಾಮಾಜಿಕ ಜಾಲತಾಣದಲ್ಲಿ ಅಪಾರ ಸಂಖ್ಯೆಯ ಫಾಲೋವರ್ಸ್ ಹೊಂದಿರುವ ಶಾಹೀರ್ ಗೆ ಮಹಿಳಾ ಅಭಿಮಾನಿಗಳೇ ಹೆಚ್ಚು. ಈ ಹ್ಯಾಂಡ್ ಸಮ್ ಹಂಕ್ ಒಂದು ಧಾರಾವಾಹಿ ಮುಗಿಯುತ್ತಿದ್ದಂತೆ ಮತ್ತೊಂದು ಧಾರಾವಾಹಿ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಾ, ಮಹಿಳಾ ಅಭಿಮಾನಿಗಳ ಹಾರ್ಟ್ ಬೀಟ್ ಹೆಚ್ಚಿಸುತ್ತಿದ್ದಾರೆ.

ಧಾರಾವಾಹಿಯಿಂದ ಹೊರ ಬಂದ ಶಾಹೀರ್

ಧಾರಾವಾಹಿಯಿಂದ ಹೊರ ಬಂದ ಶಾಹೀರ್

ಸದ್ಯ ಶಾಹೀರ್ ನಟಿಸುತ್ತಿರುವ 'ಯೇ ರಿಶ್ತಾ ಹೇ ಪ್ಯಾರ್ ಕಿ' ಧಾರಾವಾಹಿ ಅಕ್ಟೋಬರ್ 17ಕ್ಕೆ ಕೊನೆಗೊಳ್ಳುತ್ತಿದೆ. ಈ ಸುದ್ದಿ ಶಾಹೀರ್ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಹಾಗಾದ್ರೆ ಶಾಹೀರ್ ಮತ್ತೆ ನಟಿಸಲ್ವಾ ಅಂತ ಯೋಚಿಸಬೇಡಿ. ಶಾಹೀರ್ ನನ್ನು ಟಿವಿಯಲ್ಲಿ ಮಿಸ್ ಮಾಡಿಕೊಳ್ಳುವವರು ಇನ್ಮುಂದೆ ವೆಬ್ ಸೀರಿಸ್ ನಲ್ಲಿ ನೋಡಬಹುದು.

ವೆಬ್ ಸೀರಿಸ್ ಲೋಕದಲ್ಲಿ ಶಾಹೀರ್

ವೆಬ್ ಸೀರಿಸ್ ಲೋಕದಲ್ಲಿ ಶಾಹೀರ್

ಧಾರಾವಾಹಿ ಕೊನೆಯಾದ್ರೆ ಏನಂತೆ ಶಾಹೀರ್ ವೆಬ್ ಸೀರಿಸ್ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಹೌದು, ಶಾಹೀರ್ ಮೊದಲ ಬಾರಿಗೆ ವೆಬ್ ಸೀರಿಸ್ ಲೋಕದಲ್ಲಿ ಮಿಂಚಲು ಸಜ್ಜಾಗಿದ್ದಾರೆ. ಕಿರುತೆರೆಯಲ್ಲಿ ಜನಪ್ರಿಯ ನಟನಾಗಿ ಗುರುಸಿಕೊಂಡಿರುವ ಶಾಹೀರ್ ಬಾಲಿವುಡ್ ನ ಸಾಕಷ್ಟು ಸಿನಿಮಾ ಆಫರ್ ಗಳನ್ನು ರಿಜೆಕ್ಟ್ ಮಾಡಿದ್ದಾರೆ. ಆದರೀಗ ವೆಬ್ ಸೀರಿಸ್ ನಲ್ಲಿ ಮಿಂಚಲು ತಯಾರಿ ನಡೆಸುತ್ತಿದ್ದಾರೆ.

'ಪೌರಶ್ ಪುರ್' ವೆಬ್ ಸರಣಿ

'ಪೌರಶ್ ಪುರ್' ವೆಬ್ ಸರಣಿ

ಅಂದ್ಹಾಗೆ ಶಾಹೀರ್ 'ಪೌರಶ್ ಪುರ್' ಹೆಸರಿನ ವೆಬ್ ಸೀರಿಸ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಭವ್ಯವಾದ ಸೆಟ್, ಅದ್ದೂರಿಯಾದ ವೇಷಭೂಷಣ, ಅದ್ಬುತ ಪಾತ್ರವರ್ಗಳಿವೆ. ದೊಡ್ಡ ಮಟ್ಟದಲ್ಲಿ ತಯಾರಾಗುತ್ತಿರುವ ಈ ವೆಬ್ ಸೀರಿಸ್ ನಲ್ಲಿ ಶಾಹೀರ್ ಜೊತೆ ಮಿಲಿಂದ್ ಸೋಮನ್ ಮತ್ತು ಶಿಲ್ಪಾ ಶಿಂಧೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ವೆಬ್ ಸೀರಿಸ್ ಮೂಲಕ ಶಾಹೀರ್ ಶೇಖ್ ನೋಡಲು ಅಭಿಮಾನಿಗಳು ಉತ್ಸುಕರಾಗಿದ್ದಾರೆ.

More from Filmibeat

English summary
Famous TV Artist Shaheer Sheikh bags a web series in Paraspur.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X