ನಟಿ ಸಿತಾರಾ ಕೈಯಲ್ಲಿರುವ ಕಂದಮ್ಮ ಯಾರದ್ದು ಎಂದು ಗೊತ್ತಾ..?
'ಪಾರು' ಧಾರಾವಾಹಿಯ ಖಳನಟಿ ದಾಮಿನಿ ಅಲಿಯಾಸ್ ಸಿತಾರಾ ಎಲ್ಲರಿಗೂ ಚಿರಪರಿಚಿತೆ. ಅದರಲ್ಲೂ ಕಳೆದ ತಿಂಗಳು ಆಕೆ ಕ್ಯಾಮರಾಗೆ ಬೋಲ್ಡ್ ಆಗಿ ಪೋಸ್ ಕೊಟ್ಟಿದ್ದರು. ಆ ಫೋಟೊಗಳು ಸಖತ್ ವೈರಲ್ ಆಗಿತ್ತು. ಈ ಫೊಟೋ ನೋಡಿ ಎಲ್ಲರೂ ಸಿತಾರಾ ಅವರಿಗೆ ವಯಸ್ಸು ಕಡಿಮೆಯಾಗುತ್ತಿದೆ ಎಂದು ಕಮೆಂಟ್ ಕೂಡ ಮಾಡಿದ್ದರು.
ಸದಾ ಸೀರೆಯಲ್ಲಿ ಮಿನುಗುತ್ತಿದ್ದ ಸಿತಾರಾ ಅವರು ವೆಸ್ಟರ್ನ್ ಡ್ರೆಸ್ ನಲ್ಲಿ ಡಿಫರೆಂಟ್ ಆಗಿ ಕಾಣಿಸಿಕೊಂಡಿದ್ದರು. ಮಾರ್ಡರ್ನ್ ಲುಕ್‌ನಲ್ಲಿ ಕಾಣಿಸಿಕೊಂಡ ಬಳಿಕ ಇದೀಗ ಮಗುವನ್ನು ಎತ್ತಿಕೊಂಡಿರುವ ಫೋಟೊಗಳು ವೈರಲ್ ಆಗುತ್ತಿದೆ. ಇದನ್ನು ನೋಡಿ ಅಭಿಮಾನಿಗಳು ಮತ್ತಷ್ಟು ಶಾಕ್ ಆಗಿದ್ದಾರೆ.

ಹೌದು.. ಕಳೆದ ಒಂದು ವಾರದಿಂದ ಸಿತಾರಾ ಅವರು ಪದೇ ಪದೇ ಮಗುವಿನ ಜೊತೆಗೆ ರೀಲ್ಸ್ ಮಾಡುತ್ತಿದ್ದಾರೆ. ಇನ್ನು ವರ್ಷ ತುಂಬದ ಕಂದಮ್ಮನನ್ನು ಹೆಗಲ ಮೇಲೆ ಮಲಗಿಸಿಕೊಂಡಿದ್ದಾರೆ. ಈ ರೀಲ್ಸ್ ಅನ್ನು ನೋಡಿದ ಅಭಿಮಾನಿಗಳು ನಿಮ್ಮ ಮಗುನಾ ಎಂದು ಪ್ರಶ್ನೆ ಮಾಡಿದ್ದಾರೆ. ಇವತ್ತೂ ಕೂಡ ಸಿತಾರಾ ಅವರು ಮಗುವಿನ ಜೊತೆಗೆ ವೀಡಿಯೋ ಒಂದನ್ನು ಇನ್ ಸ್ಟಾಗ್ರಾಂ ಪೇಜ್‌ನಲ್ಲಿ ಅಪ್ ಲೋಡ್ ಮಾಡಿದ್ದಾರೆ.

"ಪವಡಿಸು ಪರಮಾತ್ಮ ಶ್ರೀವೆಂಕಟೇಶ ಸಪ್ತಗಿರಿವಾಸ" ಎಂದು ಹಾಡು ಹಾಡಿ ಮಗುವನ್ನು ಮಲಗಿಸಿದ್ದಾರೆ. ಆದರೆ, ಇದು ಯಾರ ಮಗು ಎಂಬ ಹಲವರ ಪ್ರಶ್ನೆಗಳಿಗೆ ಉತ್ತರ ನೀಡದೇ ಗೊಂದಲ ಸೃಷ್ಟಿಸಿದ್ದಾರೆ.
ಪವಡಿಸು ಪರಮಾತ್ಮ ಎಂದ ಸಿತಾರಾ
ಇನ್ನು ಡಿಸ್ಕ್ರಿಪ್ಶನ್‌ನಲ್ಲಿ ನಾನು ಹಾಡೋದನ್ನ ಸುಮ್ಮನೆ ಕೇಳಿಸಿಕೊಂಡು ಕೊನೆಗೆ ಓಹೋ ಅಂತಾನೆ, ನಮ್ಮ ತ್ರಿಷಾನ್ ಎಂದು ಹೇಳಿ ಹಾರ್ಟ್ ಸಿಂಬಲ್‌ಗಳನ್ನು ಹಾಕಿದ್ದಾರೆ. ಈ ಪೋಸ್ಟ್‌ನಲ್ಲಿ ಪಲ್ಲು ಅಮ್ಮ ಎಂಬುವರನ್ನು ಟ್ಯಾಗ್ ಮಾಡಿದ್ದಾರೆ. ಈ ಹಿಂದೆ ಶೂಟಿಂಗ್‌ನಲ್ಲಿ ಡೈರೆಕ್ಟರ್ ಸೀನ್ ಬಗ್ಗೆ ವಿವರಿಸುವಾಗಲೂ ಈ ಮಗುವನ್ನು ನಟಿ ಪವಿತ್ರ ಅವರು ಎತ್ತಿಕೊಂಡಿದ್ದಾರೆ. ಈ ಮಗು ಯಾರದ್ದು ಎಂಬುದನ್ನು ಈ ಸೀನ್ ನೋಡಿ ಹೇಳುವುದಾದರೆ, ಧಾರಾವಾಹಿಗಾಗಿ ಈ ಮಗುವನ್ನು ಕರೆ ತಂದಿದ್ದಾರೆ ಎಂದು ಊಹಿಸಿದ್ದಾರೆ.
ಶೂಟಿಂಗ್‌ಗಾಗಿ ಬಂದ ಕಂದಮ್ಮ
'ಪಾರು' ಧಾರಾವಾಹಿಯಲ್ಲಿ ಈಗ ನಟಿ ಮೋಕ್ಷಿತಾ ಪೈ ಅವರು ಗರ್ಭಿಣಿ ಆಗಿದ್ದಾರೆ. ಆದರೆ, ಸೀನ್ ವಿವರಿಸುವ ವೀಡಿಯೋದಲ್ಲಿ ನಟಿ ಮೋಕ್ಷಿತಾ ಪೈ ಅವರಿಗೆ ಹೊಟ್ಟೆಯೇ ಕಾಣಿಸುತ್ತಿಲ್ಲ. ಅಂದರೆ, ಧಾರಾವಾಹಿಯಲ್ಲಿ ಪಾರುಗೆ ಹೆರಿಗೆ ಆಗಿದ್ದು, ಮಗು ಜನಿಸಿರುವ ಸೀನ್‌ಗಾಗಿ ಈ ಮಗುವನ್ನು ಕರೆತಂದಿರಬೇಕು ಎಂದು ಎಲ್ಲರೂ ಊಹಿಸಿದ್ದಾರೆ. ಇದರ ಜೊತೆಗೆ ಮಮ್ಮ ಆಫ್ ಚಿಂಟು ಎಂಬ ಪೇಜ್‌ನಲ್ಲಿ ಮಗುವನ್ನು ನಟಿ ವಿನಯ ಪ್ರಸಾದ್ ಅವರು ತೊಡೆಯ ಮೇಲೆ ಮಲಗಿಸಿಕೊಂಡು ಆಡಿಸುತ್ತಿದ್ದಾರೆ. ಸೋ ಇದು ಧಾರಾವಾಹಿಯ ಶೂಟಿಂಗ್‌ಗಾಗಿ ಬಂದಿರುವ ಮಗು ಎಂಬುದು ಕನ್ಫರ್ಮ್ ಆಗಿದೆ.
ನಟನೆಯಲ್ಲಿ ಘಾಟಿಯಾದರೂ ಸಾಫ್ಟ್ ವ್ಯಕ್ತಿ
ಇನ್ನು ಸಿತಾರಾ ಅವರು 'ಅಗ್ನಿಸಾಕ್ಷಿ', 'ಪಾರು' ಸೇರಿದಂತೆ ಕೆಲ ಧಾರಾವಾಹಿಗಳಲ್ಲಿ ನಟಿಸಿದ್ದು, ರಿಯಾಲಿಟಿ ಶೋಗಳಲ್ಲೂ ಕಾಣಿಸಿಕೊಂಡಿದ್ದಾರೆ. ಆಗಾಗ ವರ್ಕೌಟ್ ಮಾಡುವ ಹಾಗೂ ಡ್ಯಾನ್ಸ್ ಮಾಡುವ ವೀಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡುತ್ತಿರುತ್ತಾರೆ. 'ಪಾರು' ಧಾರಾವಾಹಿಯಲ್ಲಿ ಘಾಟಿಯಂತೆ ಕಂಡರೂ, ನಿಜ ಜೀವನದಲ್ಲಿ ಸಿತಾರಾ ಅವರು ಬಹಳ ಸಾಫ್ಟ್ ವ್ಯಕ್ತಿ. ತಂದೆ-ತಾಯಿ ಇಲ್ಲದೆ ಬೆಳೆದ ಸಿತಾರಾ ಅವರು ಇಂದು ಕಿರುತೆರೆಯಲ್ಲಿ ತಮ್ಮ ನಟನೆಯ ಮೂಲಕ ಎಲ್ಲರ ಮನಸ್ಸನ್ನು ಗೆದ್ದಿದ್ದಾರೆ.


Click it and Unblock the Notifications











