'ಹಿಟ್ಲರ್ ಕಲ್ಯಾಣ' ಲೀಲಾ ಅಭಿನಯಕ್ಕೆ ಫ್ಯಾನ್ಸ್ ಫಿದಾ!
ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಟಾಪ್ ಧಾರಾವಾಹಿಗಳಲ್ಲಿ 'ಹಿಟ್ಲರ್ ಕಲ್ಯಾಣ' ಸೀರಿಯಲ್ ಕೂಡ ಒಂದು. ಧಾರಾವಾಹಿಯ ಪ್ರಮುಖ ಆಕರ್ಷಣೆ ಲೀಲಾ ಪಾತ್ರ ಬಹಳ ಜನಪ್ರಿಯತೆಯನ್ನು ಪಡೆದುಕೊಂಡಿದೆ. ತನ್ನ ಎಡವಟ್ಟುಗಳಿಂದಲೇ ಪ್ರೇಕ್ಷಕರನ್ನು ನಗಿಸುವುದರ ಜೊತೆಗೆ ಆಗಾಗ ಭಾವುಕರಾಗುವಂತೆಯೂ ಮಾಡುವ ಈಕೆ ಈಗ ಮನೆ ಮಗಳಾಗಿದ್ದಾಳೆ.
ಬಾಲ್ಯದಿಂದಲೂ ಆಕ್ಟಿಂಗ್ ಮೇಲೆ ಒಲವು ಇದ್ದ ಲೀಲಾ ನಿಜವಾದ ಮಲೈಕಾ ವಾಸುಪಾಲ್ ಅನ್ನುವುದು ಈಗ ಬಹುತೇಕರಿಗೆ ಗೊತ್ತಿರುವ ವಿಷಯವೇ. ದಾವಣಗೆರೆಯಲ್ಲಿ ಹುಟ್ಟಿದ ಮಲೈಕಾ ನಟಿಯಾಗುವ ಕನಸು ಕಾಣುತ್ತಿದ್ದರೆ, ಪೋಷಕರು ಮಗಳು ಓದಿದರೆ ಸಾಕು ಎನ್ನುತ್ತಿದ್ದರು. ಕೊನೆಗೂ ಹೆತ್ತವರಿಗಾಗಿ ಸಿವಿಲ್ ಎಂಜಿನಿಯರಿಂಗ್ ಓದಿ ಮುಗಿಸಿದ ಮಲೈಕಾ ವಾಸುಪಾಲ್ ಕೊನೆಗೂ ಗುರಿ ತಲುಪಿ ಬಿಟ್ಟರು.
ಚಂದದ ಪ್ರೊಫೈಲ್ ರೆಡಿ ಮಾಡಿ ಸಾಕಷ್ಟು ಸೀರಿಯಲ್ ತಂಡಗಳನ್ನು ಸಂಪರ್ಕಿಸಿ, ಆಡಿಷನ್ ಗಳನ್ನು ಕೊಟ್ಟಿದ್ದೇ ಕೊಟ್ಟಿದ್ದು. ಪ್ರತೀ ವಾರ ಸಮಯ ಸಿಕ್ಕಾಗಲೆಲ್ಲಾ ದಾವಣಗೆರೆಯಿಂದ ಬೆಂಗಳೂರಿಗೆ ಹಾರಿ ಬರುತ್ತಿದ್ದ ಮಲೈಕಾ, ಅದೊಂದು ದಿನ 'ಹಿಟ್ಲರ್ ಕಲ್ಯಾಣ' ಧಾರಾವಾಹಿಗೆ ಸೆಲೆಕ್ಟ್ ಆಗೇ ಬಿಟ್ಟರು. ಕಷ್ಟಪಟ್ಟರೆ ಫಲವುಂಟು, ಧೃಢವಾದ ನಂಬಿಕೆ ಇದ್ದರೆ ಎಲ್ಲವೂ ಸಾಧ್ಯ ಎಂಬುದನ್ನು ಸಾಧಿಸಿ ತೋರಿಸಿದ ಮಲೈಕಾ ಈಗ ಎಲ್ಲರ ಪ್ರೀತಿಯ ಎಡವಟ್ಟು ಲೀಲಾ.

ಲೀಲಾ ಅಂದರೆ ಜನರಿಗೆ ಅಚ್ಚು ಮೆಚ್ಚು!
ಮಲೈಕಾ ವಸುಪಾಲ್ ಸದಾ ಚಟಪಟ ಅಂತ ಮಾತನಾಡುತ್ತಲೇ ಇರುತ್ತಾರೆ. ಕಾದ ಹೆಂಚಿನ ಮೇಲಿನ ಬೆಣ್ಣೆ ದೋಸೆಯಂತೆ ಗರಿ ಗರಿಯಾದ ಮಾತುಗಳನ್ನು ಮಲೈಕಾ ಊಣಬಡಿಸುತ್ತಾರೆ. 'ಹಿಟ್ಲರ್ ಕಲ್ಯಾಣ' ಧಾರಾವಾಹಿಯಲ್ಲಿ ಪೆದ್ದು ಪೆದ್ದಾಗಿ ನಟಿಸಿದ್ದು, ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಧಾರಾವಾಹಿಯಲ್ಲಿ ಸದಾ ಒಂದಿಲ್ಲೊಂದು ಎಡವಟ್ಟು ಮಾಡಿಕೊಂಡು ಎಲ್ಲರನ್ನೂ ತನ್ನ ನಟನೆಯ ಮೂಲಕವೇ ಕಟ್ಟಿ ಹಾಕುತ್ತಿರುವ ಹುಡುಗಿ ಲೀಲಾ. ಇತ್ತೀಚಿಗೆ ಕಿರುತೆರೆಯಲ್ಲಿ ವೀಕ್ಷಕರಿಗೂ ಲೀಲಾ ಎಂದರೆ ಬಹಳ ಅಚ್ಚು ಮೆಚ್ಚು.

ಮಲೈಕಾ ಹೆಸರಲ್ಲಿ ಹಲವು ಫ್ಯಾನ್ ಪೇಜ್!
ಮಲೈಕಾ ವಾಸುಪಾಲ್‌ಗೆ ನಟನೆಯ ಮೇಲೆ ಎಷ್ಟು ಒಲವಿದೆಯೋ ಅಷ್ಟೇ ಒಲವು ಡ್ಯಾನ್ಸ್ ಮೇಲೂ ಇದೆ. ನೃತ್ಯ ಮಾಡಲು ಬಯಸುವ ಮಲೈಕಾ ವಾಸುಪಾಲ್ ಕಥಕ್ ಡ್ಯಾನ್ಸ್ ಅನ್ನು ಕರಗತ ಮಾಡಿಕೊಂಡಿದ್ದಾರೆ. ಆದರೆ ಈ ನೃತ್ಯವನ್ನು ಮಾಡಿ ಯಾವಾಗ ಅಭಿಮಾನಿಗಳನ್ನು ರಂಜಿಸುತ್ತಾರೋ ಗೊತ್ತಿಲ್ಲ. ಅಭಿಮಾನಿಗಳಂತೂ ಮಲೈಕಾ ಡ್ಯಾನ್ಸ್ ಅನ್ನು ನೋಡಲು ಕಾತುರರಾಗಿದ್ದಾರೆ. ಬಹಳ ಕಡಿಮೆ ಸಮಯದಲ್ಲಿ ಹೆಚ್ಚು ಅಭಿಮಾನಿ ಬಳಗವನ್ನು ಹೊಂದಿರುವ ಮಲೈಕಾ. ಮಲೈಕಾಗಾಗಿ ಅಭಿಮಾನಿಗಳು ಹಲವು ಫ್ಯಾನ್ ಪೇಜ್‌ಗಳನ್ನು ಕೂಡ ತೆರೆದಿದ್ದಾರೆ.

ತೆಲುಗಿನಿಂದ ಲೀಲಾಗೆ ಆಫರ್!
ನಟನೆ ಮೇಲೆ ತುಂಬಾ ಆಸಕ್ತಿ ಹೊಂದಿರುವ ಮಲೈಕಾ ವಸುಪಾಲ್‌ಗೆ ಈಗ ತುಂಬಾ ಪ್ರಾಜೆಕ್ಟ್‌ಗಳ ಆಫರ್ ಬರುತ್ತಿವೆಯಂತೆ. ಸದ್ಯಕ್ಕೆ ಅವರು ಯಾವುದನ್ನೂ ಒಪ್ಪಿಕೊಂಡಿಲ್ಲ. ಅಲ್ಲದೇ, ಮಲೈಕಾ ಅವರಿಗೆ ಸಿನಿಮಾಗಳಲ್ಲಿ ನಟಿಸುವ ಆಫರ್‌ಗಳು ಬರುತ್ತಿವೆಯಂತೆ. ತೆಲುಗು ಕಿರುತೆರೆಯಿಂದಲೂ ಅವಕಾಶಗಳು ಒದಗಿ ಬಂದಿದ್ದು, ಸದ್ಯಕ್ಕೆ 'ಹಿಟ್ಲರ್ ಕಲ್ಯಾಣ' ಸಾಕು. ಇದರ ಕಡೆ ಹೆಚ್ಚು ಗಮನ ಹರಿಸುತ್ತಿದ್ದೇನೆ ಎಂದಿದ್ದಾರೆ. ಇನ್ನೂ ಈಗಷ್ಟೇ ಧಾರಾವಾಹಿಯಲ್ಲಿ ನಟಿಸಲು ಆರಂಭಿಸಿರುವ ಕಾರಣ ಯಾವುದನ್ನೂ ಒಪ್ಪಿಕೊಂಡಿಲ್ಲವಂತೆ. ಮುಂದೆ ಒಳ್ಳೆಯ ಕಥೆಯುಳ್ಳ ಸಿನಿಮಾ ಬಂದರೆ ನೋಡೋಣ ಎಂದು ಹೇಳಿದ್ದಾರೆ.

ಯಶ್ ಜೊತೆಗೆ ನಟಿಸಬೇಕಂತೆ ಮಲೈಕಾ!
ಕೆಲ ದಿನಗಳ ಹಿಂದಷ್ಟೇ ಮಲೈಕಾ ವಾಸುಪಾಲ್ ಲೈವ್ ಬಂದು, ತಮ್ಮ ಆಸೆ, ಇಷ್ಟಗಳ ಬಗ್ಗೆ ಹೇಳಿಕೊಂಡಿದ್ದರು. ಮಲೈಕಾ ಅವರಿಗೆ ಯಶ್ ಅಂದರೆ ಸಿಕ್ಕಾಪಟ್ಟೆ ಇಷ್ಟವಂತೆ. ಮುಂಚೆಯಿಂದಲೂ ಯಶ್ ಅಂದರೆನೇ ಇಷ್ಟ. ಅವರ ಜೊತೆ ಕೆಲಸ ಮಾಡುವ ಆಸೆ ಇದೆ, ಲಕ್ ಇದ್ರೆ ನೋಡೋಣ ಎಂದಿದ್ದಾರೆ. ಅಂದ್ಹಾಗೆ ಮಲೈಕಾಗೆ ಆರ್‌ಸಿಬಿ ಫ್ಯಾನ್ ಅಂತೆ.


Click it and Unblock the Notifications











