Mahanati: ಗಗನಾನೇ ವಿನ್ನರ್ ಅಂತ ಒಬ್ಬ ಅಂದ್ರೆ ಚಾನ್ಸೆ ಇಲ್ಲ ಅಂತ ಇನ್ನೊಬ್ಬ; 'ಮಹಾನಟಿ'ಯರ ಬಗ್ಗೆ ಬಿಸಿಬಿಸಿ ಚರ್ಚೆ
'ಮಹಾನಟಿ' ವೇದಿಕೆಯಲ್ಲಿ ಗಗನಾ ಬಾರಿ ಎಂಬ ಸ್ಪರ್ಧಿ ಕೂಡ ಇದ್ದಾರೆ. ಮೂಲತಃ ಚಿತ್ರದುರ್ಗದವರು ಇವರು. ಆರಂಭದಿಂದಾನೂ ಎಲ್ಲರನ್ನು ಆಕರ್ಷಿಸುತ್ತಾ ಬಂದಿದ್ದಾರೆ. ಸ್ಪಾಟ್‌ನಲ್ಲಿಯೇ ಆಕೆ ಮಾಡುವ ಡೈಲಾಗ್ ಡೆಲಿವರಿಗೇನೆ ಎಲ್ಲರೂ ಫಿದಾ ಆಗಿದ್ದಾರೆ. ಇನ್ನು ಅವರ ಡ್ಯಾನ್ಸ್ ಅಂತೂ ಸೂಪರ್.
ಗಗನಾ ಸ್ಟೇಜ್ ಮೇಲೆ ಮಾಡುವ ಪರ್ಫಾಮೆನ್ಸ್ ಮೂಲಕ ಗಮನ ಸೆಳೆದವರು. ಅದರಲ್ಲೂ ತರುಣ್ ಸುಧೀರ್ ಆರಂಭದಲ್ಲಿ ಅಡ್ವಾನ್ಸ್ ಕೊಟ್ಟಿದ್ದು ಇವರಿಗೇನೆ. ಹೀಗೆ ಎಲ್ಲಾ ವಾರದಲ್ಲೂ ತನ್ನ ಪ್ರತಿಭೆಯಿಂದಾಗಿ ಹೆಚ್ಚು ಗಮನ ಸೆಳೆಯುತ್ತಾರೆ. ಈ ವಾರದ ಸಾಂಗ್ ಶೂಟ್ ಕಾನ್ಸೆಪ್ಟ್ ನಲ್ಲೂ ಮುಂಗಾರು ಮಳೆ ಹಾಡಿಗೆ ಅಭಿನಯಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಕುಣಿದು ಕುಣಿದು ಬಾರೆ ಎಂದ ಗಗನಾ
'ಮುಂಗಾರುಮಳೆ' ಸಿನಿಮಾದ ಹಾಡು ಇಂದಿಗೂ ಎವರ್ ಗ್ರೀನ್ ಹಾಡು. ಈ ಹಾಡನ್ನೇ ಆಯ್ಕೆ ಮಾಡಿಕೊಂಡ ಗಗನಾ, ನದಿ, ಬೆಟ್ಟ ಗುಡ್ಡ ಸೇರಿದಂತೆ ಪ್ರಕೃತಿ ಸೌಂದರ್ಯದ ನಡುವೆ ಶೂಟ್ ಮಾಡಿಸಿದ್ದಾರೆ. ಈ ಹಾಡಿಗೆ ತನ್ನದೇ ಸ್ಟೈಲ್‌ನಲ್ಲಿ ಹೆಜ್ಜೆ ಹಾಕಿ ಸೈ ಎನಿಸಿಕೊಂಡಿದ್ದಾರೆ.
ಐಕಾನ್ ಸ್ಟೆಪ್ಸ್ ಮಿಸ್ ಮಾಡಿದ ಗಗನಾ
ಗಗನಾ ಬಾರಿ ಅವರದ್ದು ಒಂದು ಐಕಾನ್ ಸ್ಟೆಪ್ ಇದೆ. ಅದನ್ನ ಶೋಗೆ ಬಂದಾಗಲೇ ಇಂಟ್ರೂಡ್ಯೂಸ್ ಮಾಡಿದ್ದರು. ಆದರೆ ಮುಂಗಾರು ಮಳೆ ಹಾಡಿಗೆ ಅದ್ಯಾಕೋ ಆ ಸ್ಟೆಪ್ ಹಾಕಲೇ ಇಲ್ಲ. ಇದು ಅನುಶ್ರೀ ಅವರ ಗಮನಕ್ಕೂ ಬಂದಿದೆ. ಅವರನ್ನೇ ಕೇಳಿದ್ದಾರೆ. ನಾನು ಆ ಹಾಡಿನಲ್ಲಿ ತುಂಬಾ ನಿರೀಕ್ಚೆ ಇಟ್ಟುಕೊಂಡಿದ್ದೆ ಈ ಸ್ಟೆಪ್ ಮಾಡ್ತೀಯ ಅಂತ ಹೇಳಿ ಎಂದಾಗ, ನಾನು ಸುಮಾರು ಸಲ ಕೇಳಿದೆ. ನಮ್ಮ ಡ್ಯಾನ್ಸ್ ಮಾಸ್ಟರ್ ಗೆ, ಇದು ನನ್ನ ಐಕಾನ್ ಸ್ಟೆಪ್ ಪ್ಲೀಸ್ ಇದನ್ನು ಡ್ಯಾನ್ಸ್ ನಲ್ಲಿ ತೋರಿಸಿ ಅಂತ. ಆದರೆ ಅವರು ಬಿಲ್ಕುಲ್ ಆಗಲ್ಲ ಅಂದುಬಿಟ್ಟರು ಎಂದಿದ್ದಾರೆ.

ಮಾಸ್ಟರ್ ಹೀರೋ ಎಂದ ಗಗನಾ
ಇನ್ನು ಜೀ ಕನ್ನಡದಲ್ಲಿ ಹಲವು ವರ್ಷಗಳ ಕಾಲ ಓಡಿದ ಧಾರಾವಾಹಿ ಅಂದ್ರೆ 'ಗಟ್ಟಿಮೇಳ'. ಅದರಲ್ಲಿ ಅಮೂಲ್ಯ ಹಾಗೂ ವೇದಾಂತ್ ಜೋಡಿ ಖ್ಯಾತಿ ಪಡೆದಿತ್ತು. ಅಮ್ಮು, ವೇದಾಂತ್‌ನ ಸಿಡುಕುಮೂತಿ ಸಿದ್ದಪ್ಪ ಅಂತಾನೇ ಕರೀತಾ ಇದ್ಲು. ಈಗ ರಾಹುಲ್ ಮಾಸ್ಟರ್ ಅನ್ನ ಗಗನಾ ಹಂಗೆ ಹೋಲಿಕೆ ಮಾಡಿದ್ದಾರೆ. 'ಗಟ್ಟಿಮೇಳ-2' ಸೀರಿಯಲ್ ಬಂದ್ರೆ ಅದಕ್ಕೆ ನಾನೇ ಹೀರೋಯಿನ್, ರಾಹುಲ್ ಮಾಸ್ಟರ್ ಹೀರೋ. ಯಾಕಂದ್ರೆ ಸಿಡುಕುಮೂತಿ ಸಿದ್ದಪ್ಪ ಅಂತ ಕರೀಬೇಕು ಎಂದು ಎಲ್ಲರನ್ನು ನಗಿಸಿದ್ದಾರೆ.
ಮಹಾನಟಿ ವಿನ್ನರ್‌ಗಾಗಿ ಫ್ಯಾನ್ಸ್ ಕಿತ್ತಾಟ
ಇನ್ನು ಸೋಷಿಯಲ್ ಮೀಡಿಯಾದಲ್ಲಿ ಗಗನಾ ವಿಚಾರಕ್ಕೆ ಹಲವರು ಆಗಾಗ ಬೇಸರ ಹೊರ ಹಾಕುತ್ತಾ ಇರುತ್ತಾರೆ. ಯಾವಾಗಲೂ ಗಗನಾ ಪ್ರೋಮೋ ಜಾಸ್ತಿ ಹಾಕುತ್ತೀರಾ, ಬೇರೆ ಕಂಟೆಸ್ಟೆಂಟ್ ಕೂಡ ಅದ್ಭುತವಾಗಿ ಅಭಿನಯ ಮಾಡ್ತಾರೆ. ಅವರನ್ನು ಪ್ರೋತ್ಸಾಹಿಸಿ ಅಂತ. ಇದೀಗ ಗಗನಾ ವಿಚಾರಕ್ಕೆ ಇಬ್ಬರು ಸೋಷಿಯಲ್ ಮೀಡಿಯಾದಲ್ಲಿ ಕಮೆಂಟ್ ಮೂಲಕ ವಾದ ಮಾಡಿದ್ದಾರೆ. ಒಬ್ಬರು ಈ ಬಾರಿ ಗಗನಾ ವಿನ್ನರ್ ಎಂದರೆ ಇನ್ನೊಬ್ಬರು ಇವರು ವಿನ್ನರ್ ಆಗೋಕೆ ಸಾಧ್ಯವೇ ಇಲ್ಲ. ಇವರಿಗಿಂತ ಬೇರೆ ಸ್ಪರ್ಧಿಗಳೇ ಸೂಪರ್ ಎಂದಿದ್ದಾರೆ.


Click it and Unblock the Notifications











