Bhagyalakshmi: ಮಧುಮಗ ತಾಂಡವ್ ಬಿಟ್ಟು ಶ್ರೇಷ್ಠಾ ಸಿಂಗಲ್ ಆಗಿ ರೀಲ್ಸ್: ಭಾವಿ ಪತಿಯನ್ನ ಕೇಳಿದ ಫ್ಯಾನ್ಸ್!

By ಎಸ್ ಸುಮಂತ್

ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ತಾಂಡವ್ ಹಾಗೂ ಶ್ರೇಷ್ಠಾ ಮದುವೆಯ ಎಲ್ಲಾ ತಯಾರಿಗಳು ನಡೆಯುತ್ತಿವೆ. ಮನೆಯವರಿಗೆ ತಿಳಿಯದೇನೆ ಸಿದ್ಧತೆಗಳನ್ನ ಮಾಡಿಕೊಳ್ಳುತ್ತಿದ್ದಾರೆ. ಪಾಪ ಭಾಗ್ಯಾಳಿಗೆ ಎಷ್ಟೇ ಕುರುಹುಗಳನ್ನು ನೀಡಿದರೂ ಶ್ರೇಷ್ಠಾ‌ ಮದುವೆಯಾಗುತ್ತಿರುವ ಹುಡುಗ ತನ್ನ ಗಂಡನೇ ಎಂಬುದು ಗೊತ್ತಾಗುತ್ತಿಲ್ಲ. ಪೂಜಾ, ಸುಂದ್ರಿ ಎಲ್ಲರೂ ಅದರ ಬಗ್ಗೆ ಹಿಂಟ್ ಕೊಟ್ಟರೂ ಗೊತ್ತಾಗುತ್ತಿಲ್ಲ.

ಕುಸುಮಾಗೆ ತಾಂಡವ್ ನಡವಳಿಕೆ ಏನೋ ಅನುಮಾನ ತಂದಿದೆ. ಎಲ್ಲವೂ ಸರಿ ಇಲ್ಲ ಅಂತ ಅನ್ನಿಸಿದೆ. ತಾಂಡವ್ ಯಾವುದೋ ಹುಡುಗಿಯ ಸಹವಾಸ ಮಾಡಿರಬಹುದು ಎಂಬ ಅನುಮಾನ ಶುರುವಾಗಿದೆ. ಅದಕ್ಕೆ ಅಂದು ಕೂತು ಶಾಂತ ರೀತಿಯಲ್ಲಿ, ಮಗನನ್ನು ಕೇಳಿದ್ದಳು. ಭಾಗ್ಯಾ ಬೇಡ ಅಂದ್ರೆ ಯಾರನ್ನಾದರೂ ಇಷ್ಟಪಡ್ತಾ ಇದ್ದೀಯಾ ರಾಜಾ ಅಂತ. ಅಂದು ತಾಂಡವ್ ಹೇಳಿರಲಿಲ್ಲ. ಆದ್ರೀಗ ಕುಸುಮಾ ಆ ಹುಡಿಗಿ ಹುಡುಕಾಟದಲ್ಲಿದ್ದಾಳೆ.

Fans Funny comments for Bhagyalakshmi serial fame Kavya s new Reels

ಶ್ರೇಷ್ಠಾಳಿಗೆ ಭಾಗ್ಯಾ ಸವಾಲು

ಇತ್ತಿಚೆಗೆ ಭಾಗ್ಯಾ, ಶ್ರೇಷ್ಠಾಳ ಮದುವೆಯಾಗುತ್ತಿರುವ ಹುಡುಗನ ಬಗ್ಗೆ ಮಾತಾಡಿದ್ದಳು. ಅವನನ್ನು ನೋಡಲೇಬೇಕೆಂದು ಹೇಳಿದ್ದಳು. ಸೀದಾ ಭಾಗ್ಯಾಳನ್ನ ತಾಂಡವ್ ಮನೆಗೆ ಕರೆದುಕೊಂಡು ಬಂದು ಎಚ್ಚರಿಕೆಯನ್ನು ನೀಡಿದ್ದಳು. ನನ್ನ ಮದುವೆ ವಿಚಾರದಲ್ಲಿ ಯಾರೂ ತಲೆ ಹಾಕಬಾರದು ಅಂತ. ಆದರೆ ಭಾಗ್ಯಾ ಅದಕ್ಕೆ ಕೌಂಟರ್ ಕೊಟ್ಟು ಅದೇಗೆ ಮದುವೆ ಆಗ್ತೀಯಾ ನೋಡೋಣಾ ಎನ್ನುವಂತೆ ಸವಾಲು ಹಾಕಿ ಕಳುಹಿಸಿದ್ದಾಳೆ.

ಒಂಟಿಯಾಗಿ ರೀಲ್ಸ್ ಮಾಡಿದ ಶ್ರೇಷ್ಠಾ

ಈಗ ಶ್ರೇಷ್ಠಾ ರೀಲ್ಸ್ ಮಾಡುತ್ತಾ ಬ್ಯುಸಿಯಾಗಿದ್ದಾರೆ. ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಇತ್ತಿಚೆಗೆ ಒಬ್ಬರೆ ರೀಲ್ಸ್ ಮಾಡಿರುವ ವಿಡಿಯೋವೊಂದನ್ನು ಹಾಕಿಕೊಂಡಿದ್ದಾರೆ. ಮಳೆಯ ಮೋಡದಂತೆ ಆ ಸುಡುವ ಬಿಸಿಲ ತಡೆವ ಎಂಬ ಹಾಡಿಗೆ ರೀಲ್ಸ್ ಮಾಡಿದ್ದಾರೆ. ಮದುವೆ ಬೇರೆ ಹತ್ತಿರ ಬರುತ್ತಿದೆ. ಮಧುಮಗಳ ಮುಖದಲ್ಲಿ ಈ ಹಾಡು ಹಾಡುವಾಗ ನಾಚಿಕೆ ಎದ್ದು ಕಾಣಿಸುತ್ತಿತ್ತು. ಹಾಡಿನ ಸಾಲುಗಳಿಗೆ ಶ್ರೇಷ್ಠಾ ಫುಲ್ ನಾಚಿಕೆ ಪಟ್ಟುಕೊಳ್ಳುತ್ತಿದ್ದರು.

ತಾಂಡವ್ ಎಲ್ಲಿ ಅಂತಿದ್ದಾರೆ ವೀಕ್ಷಕರು

ಮದುವೆ ಇನ್ನೇನು ಕೆಲವೇ ದಿನಗಳಲ್ಲಿದೆ. ಈಗಾಗಲೇ ತಾಂಡವ್ ಮತ್ತು ಶ್ರೇಷ್ಠಾ ಸೇರಿಕೊಂಡು ಎಲ್ಲಾ ಶಾಪಿಂಗ್ ಮುಗಿಸಿದ್ದಾರೆ. ಇನ್ನೇನಿದ್ದರು ಬೇಕಾದವರಿಗೆ ಪತ್ರಿಕೆ ಹಂಚಬೇಕು ಅಷ್ಟೇ. ಈಗಲೇ ಮಧುಮಗಳಂತೆ ಶ್ರೇಷ್ಠಾ ರೆಡಿಯಾಗಿದ್ದಾಳೆ. ಲಂಗ-ದಾವಣಿಯಲ್ಲಿ ಮಿಂಚಿದ್ದಾರೆ. ಮರೂನ್ ಕಲರ್ ದಾವಣಿ ಲಂಗ ಮತ್ತು ಬ್ಲೌಸ್ ತೊಟ್ಟಿದ್ದು, ಗೋಲ್ಡನ್ ಕಲರ್ ದಾವಣಿ ಹಾಕಿದ್ದಾರೆ. ಅದಕ್ಕೆ ಸಿಂಪಲ್ ಆಗಿ ಒಂದು ಜ್ಯುವೆಲ್ಲರಿ ಹಾಕಿದ್ದಾರೆ. ಈಗಾಗಲೇ ಶ್ರೇಷ್ಠಾ ಮನೆಯಲ್ಲಿ ಶಾಸ್ತ್ರಗಳು ಶುರುವಾಗಿರಬೇಕು ಅನ್ನಿಸುತ್ತದೆ. ಹೀಗಾಗಿ ಈ ರೀತಿಯ ಡ್ರೆಸ್ ನಲ್ಲಿ ವಿಡಿಯೋ ಮಾಡಿದ್ದಾರೆ. ಇನ್ನು ಸಿಂಗಲ್ ಆಗಿ ವಿಡಿಯೋ ಮಾಡಿದ್ದಕ್ಕೆ ತಾಂಡವ್ ಎಲ್ಲಿ ಅಂತ ಪ್ರಶ್ನೆ ಮಾಡುತ್ತಿದ್ದಾರೆ.

ದುಷ್ಮನ್‌ಗಳ ಜೊತೆಗೆ ರೀಲ್ಸ್‌ನಲ್ಲಿ ಬ್ಯುಸಿ

ಶ್ರೇಷ್ಠಾ ಪಾತ್ರದಲ್ಲಿ ಕಾಣಿಸಿಕೊಂಡಿರುವ ಕಾವ್ಯಾ. ಸೋಷಿಯಲ್ ಮೀಡಿಯಾದಲ್ಲಿ ಕಾವ್ಯಾ ಸಿಕ್ಕಾಪಟ್ಟೆ ಬ್ಯುಸಿ. 56 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ. ಇನ್ನು ಶೂಟಿಂಗ್ ಸಮಯದಲ್ಲಿ ಸೈಕಲ್ ಗ್ಯಾಪ್ ಸಿಕ್ಕಿದರೆ ಸಾಕು ರೀಲ್ಸ್ ಮಾಡುತ್ತಾ ಇರುತ್ತಾರೆ. ಭಾಗ್ಯಾ ಅಪ್ಪಟ ಶತ್ರು ಸೀರಿಯಲ್ ನಲ್ಲಿ ಆದ್ರೆ ಕಾವ್ಯಾ ಪ್ರೊಫೈಲ್ ನಲ್ಲಿ ಭಾಗ್ಯಾ ಜೊತೆಗೆ ಸುಂದ್ರಿ ಜೊತೆಗೆ ರೀಲ್ಸ್ ಗಳು ಇದಾವೆ. ಕಮೆಂಟ್ಸ್, ಲೈಕ್ ಹೆಚ್ಚೆಚ್ಚು ಬರುತ್ತಾ ಇರುತ್ತವೆ.

More from Filmibeat

English summary
Colors kannada Bhagyalakshmi Written Update on Kavya social Media. Here is the details about Shrestha made the reels alone;
Read more about: filmbeat original tv sumanth
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X