ಸಾರ್ಥಕ್ ಪರಿಸ್ಥಿತಿ ಕಂಡು ಮಿಡಿದ ಮನಗಳು: ವಧು ಪ್ರಶ್ನೆಗೆ ಫ್ಯಾನ್ಸ್ ಉತ್ತರವೇನು?

By ಪ್ರಿಯಾ ದೊರೆ

'ವಧು' ಧಾರಾವಾಹಿಯ ಕಥೆಯನ್ನು ವೀಕ್ಷಕರು ಇಷ್ಟಪಟ್ಟಿದ್ದಾರೆ. ಇದರಲ್ಲಿ ಪ್ರತಿಯೊಬ್ಬರ ಪಾತ್ರವೂ ತನ್ನದೇ ಆದ ತೂಕವನ್ನು ಹೊಂದಿದ್ದು. ಯಶೋಮತಿ, ಸಾರ್ಥಕ್, ವಧು ವೀಕ್ಷಕರ ಮನ ಗೆದ್ದಿದ್ದಾರೆ. ಈ ಮೂವರಲ್ಲೂ ಒಂದೇ ತೆನಾದ ಗುಣವಿದೆ. ಮೃದುತ್ವ, ನ್ಯಾಯದ ಪರ, ಸಕರಾತ್ಮಕ ಆಲೋಚನೆಗಳು. ಈ ಎಲ್ಲಾ ಗುಣಗಳಿಂದಲೇ ಯಶೋಮತಿ, ಸಾರ್ಥಕ್ ಮತ್ತು ವಧು ಮೂವರು ಪ್ರತಿ ಹೆಜ್ಜೆಯಲ್ಲೂ ಕಷ್ಟಗಳನ್ನು ಎದುರಿಸುತ್ತಿದ್ದಾರೆ.

ವಧು ಮಧ್ಯಮ ಕುಟುಂಬದಲ್ಲಿ ಬೆಳೆದವಳಾದರೂ ಎಂದಿಗೂ ಹಣ, ಐಶ್ವರ್ಯ, ಸಿರಿವಂತಿಕೆ ಬಗ್ಗೆ ಕನಸು ಕಂಡವಳಲ್ಲ. ಬದುಕಿಗೆ ಇದೆಲ್ಲಾ ಮುಖ್ಯ ಎಂಬುದನ್ನು ನಂಬುವುದಿಲ್ಲ.

Fans interesting comments on Vadhu serial durgashree questions

ಸಂಬಂಧ, ಪ್ರೀತಿಗೆ ಬೆಲೆ ಕೊಡುವ ವಧು, ನಿಸ್ವಾರ್ಥಿ. ಅದೇ ರೀತಿ ಸಾರ್ಥಕ್ ಮತ್ತು ಯಶೋಮತಿ ಕೂಡ. ಆದರೆ, ಇವರು ಆಗರ್ಭ ಶ್ರೀಮಂತರು. ಹಾಗಿದ್ದರೂ ಸಿಂಪಲ್ ಜೀವನ ನಡೆಸಲು ಬಯಸುವವರು.

ವಧು-ಪ್ರಿಯಾಂಕ ಮಧ್ಯೆ ಸಾರ್ಥಕ್

ಸದ್ಯ ಸಾರ್ಥಕ್‌ಗೆ ಡಿವೋರ್ಸ್ ಕೊಡಲು ಪ್ರಿಯಾಂಕ ಮುಂದಾಗಿದ್ದಾಳೆ. ಸಂಬಂಧವೇ ಬೇಡ ಎಂದು ಬಂದ ದಂಪತಿಗಳನ್ನೆಲ್ಲಾ ಒಂದು ಮಾಡಿರುವ ವಧು, ಮೊದಲ ಬಾರಿಗೆ ಜೋಡಿಯೊಂದನ್ನು ಬೇರೆ ಮಾಡಲು ಹೊರಟಿದ್ದಾಳೆ. ಇದಕ್ಕೆ ಕಾರಣವೇ ಪ್ರಿಯಾಂಕಾ. ಏನೇ ಆಗಲೀ ಸಾರ್ಥಕ್ ಜೊತೆಗೆ ಡಿವೋರ್ಸ್ ಪಡೆಯಲೇಬೇಕು ಎಂದು ಹಠ ಹಿಡಿದಿರುವ ಜೊತೆಗೆ ಕಂಪನಿಯಲ್ಲಿ ತನಗೂ ಅರ್ಧ ಶೇರ್ ಬೇಕು ಎಂದು ಡಿಮ್ಯಾಂಡ್ ಕೂಡ ಮಾಡಿದ್ದಾಳೆ. ಹೀಗಾಗಿ ವಧು ಕೂಡ ಡಿವೋರ್ಸ್ ಕೊಡಿಸುವ ನಿರ್ಧಾರ ಮಾಡಿದ್ದು, ಕಂಪನಿ ಶೇರ್ ವಿಚಾರದಲ್ಲಿ ಹಿಂದೇಟು ಹಾಕಿದ್ದಾಳೆ. ಡಿವೋರ್ಸ್ ಕೊಡಿಸುವ ಲಾಯರ್ ಈಗ ಸಾರ್ಥಕ್ ನನ್ನೇ ಪ್ರೀತಿಸಿ ಮದುವೆಯಾಗುವ ಲಕ್ಷಣಗಳೂ ಕಾಣುತ್ತಿವೆ.

ನಜ್ಜುಗುಜ್ಜಾದ ಸಾರ್ಥಕ್

ಸಾರ್ಥಕ್‌ಗೂ ಕೂಡ ಈಗಾಗಲೇ ವಧು ಬಗ್ಗೆ ಕಾಳಜಿ ಜೊತೆಗೆ ಲೈಟ್ ಆಗಿ ಲವ್ ಆಗಿದೆ. ಯಶೋಮತಿಗೂ ವಧು ಎಂದರೆ ಇಷ್ಟ. ಆದರೆ ಡಿವೋರ್ಸ್ ವಿಚಾರ ಗೊತ್ತಾದರೆ ಏನು ಮಾಡುತ್ತಾಳೆ ಎಂಬುದು ಗೊತ್ತಿಲ್ಲ. ಇದೆಲ್ಲಾ ಪಕ್ಕಕ್ಕಿಡೋಣ. ಆದರೆ ಈಗ ವಧು ಅಲಿಯಾಸ್ ನಟಿ ದುರ್ಗಶ್ರೀ ಅವರು ತಮ್ಮ ಇನ್ ಸ್ಟಾಗ್ರಾಂ ಪೇಜ್‌ನಲ್ಲಿ ಮೂರು ದಿನಗಳ ಹಿಂದೆ ವೀಡಿಯೋ ಒಂದನ್ನು ಶೇರ್ ಮಾಡಿದ್ದರು. ಅದರಲ್ಲಿ ವಧು, ಪ್ರಿಯಾಂಕ ಮತ್ತು ಸಾರ್ಥಕ್ ಮೂವರು ಇದ್ದರು. ಪ್ರಿಯಾಂಕ ಮತ್ತು ವಧು ಮಧ್ಯೆ ಸಾರ್ಥಕ್ ನಿಂತಿದ್ದರು. ಇದರ ಫೋಟೋವನ್ನು ವಧು ಇಂದು ತಮ್ಮ ಸ್ಟೋರಿಯಲ್ಲಿ ಹಾಕಿ ಈ ಪಿಕ್ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ಅಭಿಮಾನಿಗಳನ್ನು ಕೇಳಿದ್ದರು. ಎಲ್ಲರೂ ಇದಕ್ಕೆ ರಿಪ್ಲೈ ಕೂಡ ಮಾಡಿದ್ದಾರೆ.

ಸಾರ್ಥಕ್ ಪಾಡಿಗೆ ಮಿಡಿದ ಮನಗಳು

ಸಾರ್ಥಕ್ ಪಾಡನ್ನು ಎಲ್ಲರೂ ಕಂಡಿದ್ದು, ಒಬ್ಬೊಬ್ಬರು ಒಂದೊಂದು ರೀತಿ ಕಮೆಂಟ್ ಮಾಡಿದ್ದಾರೆ. ಇದನ್ನೆಲ್ಲಾ ನಟಿ ದುರ್ಗಶ್ರೀ ಅವರು ಶೇರ್ ಮಾಡಿಕೊಂಡಿದ್ದಾರೆ. ಅಯ್ಯೋ ಪಾಪ. ಹೀಗಾಗಬಾರದಿತ್ತು. ಬಕ್ರಾ ಮಾಡಿದ್ರಾ, ಇಬ್ಬರ ಮಧ್ಯೆ ಸಿಕ್ಕಿ ಹಪ್ಪಳ ಹಾಕ್ತಿದ್ದೀನಿ. ಹಾಳಾಗಿ ಹೋಗಿ ನೀವು, ಸೈಡ್ ಬಿಡ್ರಮ್ಮ ಮಹಾತಾಯಿಗಳ. ಐ ಆಮ್ ನಾಟ್ ಇಂಟರೆಸ್ಟೆಡ್ ವಿತ್ ಬೋತ್ ಆಫ್ ಯೂ ಹೀಗೆ ಒಬ್ಬೊಬ್ಬರು ಒಂದೊಂದು ರೀತಿ ಕಮೆಂಟ್ ಮಾಡಿದ್ದಾರೆ. ಪ್ರತಿಯೊಬ್ಬರೂ ಕೂಡ ಸಾರ್ಥಕ್ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡಿದ್ದು, ಕೆಲವೊಮ್ಮೆ ಪ್ರಿಯಾಂಕ ಆಡುವ ಆಟಕ್ಕೆ, ಸಾರ್ಥಕ್ ನಜ್ಜುಗುಜ್ಜಾಗಿದ್ದಾನೆ. ಅತ್ತ ವಧುಳನ್ನು ಬಿಟ್ಟು ಕೊಡಲಾಗದೇ, ಇತ್ತ ಪ್ರಿಯಾಂಕಳನ್ನೂ ಎದುರಿಸಲಾಗದೇ ಒದ್ದಾಡಿದ್ದಾನೆ. ಅಭಿಮಾನಿಗಲು ಸಾರ್ಥಕ್‌ಗಾಗಿ ಮಿಡಿದಿದ್ದಾರೆ.

More from Filmibeat

English summary
Colors kannada vadhu serial actress bhuvana murali projects;
Read more about: actress kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X