ಹುಟ್ಟುಹಬ್ಬದ ಸಂಭ್ರಮದಲ್ಲಿ ಧನುಷ್ ಗೌಡ: ಶೀಘ್ರದಲ್ಲೇ ಚಿತ್ರರಂಗಕ್ಕೆ ಎಂಟ್ರಿ
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಪುಟ್ಟಕ್ಕನ ಮಕ್ಕಳು'ಸೀರಿಯಲ್ ಅಪಾರ ಜನಮೆಚ್ಚುಗೆಯನ್ನು ಪಡೆದುಕೊಂಡಿದೆ. ಇದರ ಜೊತೆಗೆ ಹೊಸ ಪ್ರತಿಭೆಗಳಿಗೆ ಒಳ್ಳೆಯ ವೇದಿಕೆ ಕಲ್ಪಿಸಿದೆ.
ಧಾರಾವಾಹಿಯಲ್ಲಿ ಪುಟ್ಟಕ್ಕ ತನ್ನ ಮೂವರು ಹೆಣ್ಣು ಮಕ್ಕಳಲ್ಲಿ ದೊಡ್ಡ ಮಗಳು ಸಹನಾಳ ಮದುವೆ ಸಂಭ್ರಮ ನಡೆಯುತ್ತಿದೆ. ಈ ನಡುವೆ ಕಂಠಿ ಮತ್ತು ಪುಟ್ಟಕ್ಕನ ಎರಡನೇ ಮಗಳ ಮನದಲ್ಲಿ ಪ್ರೀತಿ ಅರಳಿದೆ.
ಪುಟ್ಟಕ್ಕನ ಮಕ್ಕಳು ಧಾರಾವಾಹಿ ಮೂಲಕ ಮನೆ ಮಾತಾಗಿರುವ ಧನುಷ್ ಗೌಡಗೆ ಈಗ ಕೆಲವು ಸಿನಿಮಾ ಆಫರ್‌ಗಳು ಬರುತ್ತಿವೆಯಂತೆ. ಹೀಗಾಗಿ ಈ ಕಿರುತೆರೆ ಹೀರೋ ಶೀಘ್ರದಲ್ಲೇ ಬೆಳ್ಳಿ ತೆರೆಗೆ ಎಂಟ್ರಿ ಕೊಟ್ಟರೂ ಅಚ್ಚರಿಯಿಲ್ಲ.

ಕಂಠಿ ಸರ್ಕಸ್ ಸೂಪರ್
ಪುಟ್ಟಕ್ಕನ ಮಗಳನ್ನು ಇಷ್ಟಪಟ್ಟು ಕಣ್ಣು ಹಾಕುವುದು ಈ ಕಂಠಿಯ ಕೆಲಸ. ಅದಕ್ಕಾಗಿಯೇ ಗೆಳೆಯರ ಜೊತೆ ಮಾಡುವ ಸರ್ಕಸ್ ಧಾರಾವಾಹಿಯಲ್ಲಿ ಕಚಗುಳಿ ನೀಡುತ್ತಿದೆ. ಕಂಠಿ ಅವರ ನಿಜವಾದ ಹೆಸರು ಧನುಷ್ ಗೌಡ. ಸಿವಿಲ್ ಎಂಜಿನಿಯರಿಂಗ್ ಪದವಿ ಮುಗಿಸಿದ್ದೇ ತಡ ಧನುಷ್ ನೇರವಾಗಿ ಬಣ್ಣದ ಬದುಕಿಗೆ ಕಾಲಿಟ್ಟಿದ್ದಾರೆ. ಇದಕ್ಕೂ ಮೊದಲು ಧನುಷ್ ಅವರು, 'ಅನಿರೀಕ್ಷಿತ, '18+2' ಕಿರುಚಿತ್ರಗಳಲ್ಲಿ ನಟಿಸಿದ್ದರು. 'ನನ್ನ ನಗು'ಎಂಬ ಹಾಡಿನ ಆಲ್ಬಂ ಕೂಡ ಮಾಡಿದ್ದಾರೆ. ಚಿಕ್ಕ ವಯಸ್ಸಿನಿಂದಲೂ ನಾಯಕನಾಗಬೇಕು ಎಂಬ ಕನಸು ಕಂಡವರು. ಆ ಕನಸಿನ ದಾರಿಯಲ್ಲಿ 'ಪುಟ್ಟಕ್ಕನ ಮಕ್ಕಳ' ಜೊತೆ ಹೆಜ್ಜೆ ಹಾಕಿದ್ದಾರೆ.

ಆಲ್ಬಂಗಳಲ್ಲಿ ಧನುಷ್ ಮಿಂಚು
ಕೋಲಾರ ಜಿಲ್ಲೆಯ ಸಂತೆಹಳ್ಳಿಯವರಾದ ಧನುಷ್ ತಂದೆ ಉದ್ಯಮಿ. ಧನುಷ್ ಅವರು ಎಂಜಿನಿಯರಿಂಗ್ ಮುಗಿಯುತ್ತಿದ್ದಂತೆಯೇ ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ಆಡಿಷನ್‌ನಲ್ಲಿ ಆಯ್ಕೆಯಾದರು. ಇತ್ತೀಚೆಗಷ್ಟೇ ಧನುಷ್ ಗೌಡ ಕಾಣಿಸಿಕೊಂಡಿದದ 'ಮನಸೆಲ್ಲಾ ನೀನೇ' ಆಲ್ಬಂ ರಿಲೀಸ್ ಆಗಿತ್ತು. ಇನ್ನು ಕಂಠಿಗೆ ಉತ್ತಮ ಪಾತ್ರದಲ್ಲಿ ಸ್ಯಾಂಡಲ್‌ವುಡ್‌ನಲ್ಲೂ ಮಿಂಚಬೇಕು ಎಂಬ ಆಸೆ ಇದೆ. ಉತ್ತಮ ಆಫರ್ ಅನ್ನು ನಿರೀಕ್ಷಿಸುತ್ತಿದ್ದಾರೆ.

ಸ್ನೇಹಾ – ಕಂಠಿ ಲವ್ ಕಹಾನಿ
ಸದ್ಯ 'ಪುಟ್ಟಕ್ಕ'ನ ಮನೆಯಲ್ಲಿ ಮದುವೆಯ ಸಂಭ್ರಮ ಜೋರಾಗಿದೆ. ಸಹನಾ ಮದುವೆಯಲ್ಲಿ ಇಡೀ ಮನೆಯವರೆಲ್ಲಾ ಎಂಜಾಯ್ ಮಾಡುತ್ತಿದ್ದಾರೆ. ರಾಜೇಶ್ವರಿ ಮಾತ್ರ ಮನೆ ಹಾಗೂ ಹೋಟೆಲ್ ಅನ್ನು ತನ್ನ ಹೆಸರಿಗೆ ಬೇಕೆಂದು ಪುಟ್ಟಕ್ಕನನ್ನು ಬ್ಲ್ಯಾಕ್ ಮೇಲ್ ಮಾಡಿದ್ದಾಳೆ. ಪುಟ್ಟಕ್ಕ ಇಬ್ಬಂದಿ ಸ್ಥಿತಿಯಲ್ಲಿದ್ದಾಳೆ. ಮನೆಯಲ್ಲೆಲ್ಲಾ ನಗು- ಸಂತೋಷವೇ ತುಂಬಿ ತುಳುಕುತ್ತಿದೆ. ಈ ಮದುವೆ ಸಂಭ್ರಮದಲ್ಲಿ ಸ್ನೇಹಾ ಹಾಗೂ ಕಂಠಿಯ ಪ್ರೀತಿಯೂ ಕೂಡ ಸೈಲೆಂಟ್ ಆಗಿ ಮುಂದುವರಿದಿದೆ.

ಧನುಷ್ ಹುಟ್ಟು ಹಬ್ಬ
ಸ್ನೇಹಾ ಹಾಗೂ ಕಂಠಿ ಇಬ್ಬರ ಜೋಡಿಯನ್ನು ನೋಡಲು ವೀಕ್ಷಕರು ಬಹಳ ಇಷ್ಟ ಪಡುತ್ತಾರೆ. ಆಗಾಗ ಈ ಜೋಡಿ ಒಟ್ಟಿಗೆ ಫೋಟೋಶೂಟ್ ನಡೆಸಿ, ಸೋಶಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡುತ್ತಿರುತ್ತಾರೆ. ಇದನ್ನು ವೀಕ್ಷಕರು ನೋಡಿ ಖುಷಿ ಪಡುತ್ತಿರುತ್ತಾರೆ. ಇನ್ನು ಇತ್ತೀಚೆಗೆ ಆಚಿ ಮಸಾಲ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು. ಇನ್ನು ನಟ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದು ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ. ಆದರೆ ಹುಟ್ಟು ಹಬ್ಬದ ಬಗ್ಗೆ ಧನುಷ್ ಅವರು ಸೋಶಿಯಲ್ ಮೀಡಿಯಾದಲ್ಲಿ ಯಾವುದೇ ಅಪ್ ಡೇಟ್ಸ್ ಅನ್ನೂ ಹಾಕಿಲ್ಲ.


Click it and Unblock the Notifications











