Anu Janardhan: ಸತ್ಯ, ಚಿಕ್ಕಿ ಜೊತೆ ಕಾಣಿಸಿಕೊಂಡ ಅನು ಜನಾರ್ಧನ್: ಧಾರಾವಾಹಿಗೆ ಕಮ್ ಬ್ಯಾಕ್ ಮಾಡ್ತಾರಾ?

By ಎಸ್ ಸುಮಂತ್

ಜೀ ಕನ್ನಡದಲ್ಲಿ 'ಸತ್ಯ' ಧಾರಾವಾಹಿ ಆರಂಭದಿಂದಲೂ ಎಲ್ಲರಿಗೂ ಇಷ್ಟವಾಗಿದೆ. ಮೊದಲಿಗೆ ಟಾಮ್ ಬಾಯ್ ಕ್ಯಾರೆಕ್ಟರ್ ಇದ್ದವರಿಗಂತೂ ಸಿಕ್ಕಾಪಟ್ಟೆ ಇಷ್ಟವಾಗುತ್ತಿತ್ತು. ಟಾಮ್ ಬಾಯ್ ಟ್ರೆಂಡ್ ಕ್ರಿಯೇಟ್ ಮಾಡಿತ್ತು ಧಾರಾವಾಹಿ. ಸತ್ಯಳ ಲುಕ್, ಸತ್ಯಳ ಕ್ಯಾರೆಕ್ಟರ್, ಸತ್ಯಳ ಧೈರ್ಯ ಎಲ್ಲವೂ ಸ್ಪೂರ್ತಿಯೇ ಆಗಿತ್ತು. ಆದರೆ ಈಗ ಕಥೆ ಬೇರೆಯದ್ದೇ ರೀತಿಗೆ ಬದಲಾಗಿದೆ.

ಸತ್ಯ ಮದುವೆಯಾದ ಮೇಲೆ ಧಾರಾವಾಹಿಯ ಕಥೆಯೂ ಬದಲಾಗಿದೆ. ರಗಡ್ ಹುಡುಗಿಯಲ್ಲೂ ಸಂಸಾರದ ಕಷ್ಟ, ಸುಖ ತೋರಿಸುತ್ತಿದ್ದಾರೆ. ಜವಾಬ್ದಾರಿ ಹೊತ್ತು ರಗಡ್ ಆಗಿದ್ದ ಸತ್ಯ, ಮನೆಯ ಸಂಪ್ರದಾಯ, ಸಂಸ್ಕಾರಕ್ಕೆ ಎಷ್ಟು ಒತ್ತು ಕೊಡುತ್ತಾಳೆ ಎಂಬುದನ್ನು ನಿರ್ದೇಶಕರು ಅನಾವರಣ ಮಾಡಿದ್ದಾರೆ.

Fans requested Anu Janardhan to come back for Satya serial

ಅತ್ತೆ ಮನೆಯಲ್ಲಿ ನಾದಿನಿ ಇದ್ದರೆ, ಅಲ್ಲೊಂದಿಷ್ಟು ಕಿತಾಪತಿ ಇರಲೇಬೇಕಲ್ಲವಾ? ಆ ನಾದಿನಿ ಸೀರಿಯಲ್‌ನಲ್ಲಿ ಈಗ ಇಲ್ಲ. ಕಾಣೆಯಾಗಿದ್ದ ಕೀರ್ತನಾ ಈಗ ಅದೇ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ.

ಕೀರ್ತನಾ ಸ್ಥಾನಕ್ಕೆ ರಶ್ಮಿ ಎಂಟ್ರಿ

ಸತ್ಯ ಧಾರಾವಾಹಿಯಲ್ಲಿ ಅನು ಜನಾರ್ಧನ್ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ತವರು ಮನೆಯಲ್ಲಿಯೇ ಇದ್ದರೂ ಎಲ್ಲರನ್ನು ಗೋಳು ಹುಯ್ದುಕೊಳ್ಳುತ್ತಿದ್ದರು. ಆದರೆ ಇತ್ತಿಚೆಗೆ ಕೀರ್ತನಾ ಪಾತ್ರಧಾರಿಯ ಬದಲಾವಣೆಯಾಗಿದೆ. ಅನು ಸ್ಥಾನಕ್ಕೆ ರಶ್ಮಿ ಬಂದಿದ್ದಾರೆ. ವಿಲನ್ ಪಾತ್ರ ಯಾಕೆ ರಿಪ್ಲೇಸ್ ಆಗಿದೆ ಎಂಬುದು ಇನ್ನು ತಿಳಿದಿಲ್ಲ. ಆದರೆ ಮೊದಲಿದ್ದ ಕೀರ್ತನಾ ಬದಲಾಗಿದ್ದಾರೆ.

ಸತ್ಯಳಿಗೆ ತೊಂದರೆ ಕೊಡುತ್ತಿದ್ದ ಕೀರ್ತನಾ

ಧಾರಾವಾಹಿಯಲ್ಲಿ ಕೀರ್ತನಾ ಪಕ್ಕಾ ವಿಲನ್. ಅದರಲ್ಲೂ ಸತ್ಯಾಳಿಗೆ ತೊಂದರೆ ಕೊಡಲು ಹೋಗಿ, ಯಾವಾಗಲೂ ಕ್ಲಾಸ್ ತೆಗೆದುಕೊಳ್ಳುತ್ತಿರುತ್ತಾಳೆ. ಸತ್ಯಾಳಿಂದ ಒದೆ ತಿಂದಿದ್ದಾಳೆ. ಆದರೂ ಕಿತಾಪತಿ ಬುದ್ದಿ ಮಾತ್ರ ಬಿಟ್ಟಿಲ್ಲ. ಆ ಕಿತಾಪತಿ ಬುದ್ದಿಯಿಂದಾನೇ ಮನೆಯವರ ಬಳಿ ಎಲ್ಲಾ ಛೀಮಾರಿ ಹಾಕಿಸಿಕೊಳ್ಳುತ್ತಾ ಇರುತ್ತಾಳೆ. ಪಕ್ಕಾ ಖಳನಟಿಯ ಪಾತ್ರ ಕೀರ್ತನಾಳದ್ದು. ಎಲ್ಲಾ ಆಸ್ತಿ, ಅಧಿಕಾರ ತನ್ನದಾಗಬೇಕೆಂಬ ಸ್ವಾರ್ಥ. ಮನೆಯಲ್ಲಿ ಅದಾಗಲೇ ಎಲ್ಲರಿಗೂ ಕೀರ್ತನಾ ಬಗ್ಗೆ ಗೊತ್ತಾಗಿದೆ. ಹೀಗಾಗಿ ಯಾರೂ ಬೆಂಬಲ ನೀಡುವುದಿಲ್ಲ.

Fans requested Anu Janardhan to come back for Satya serial

ಸತ್ಯ, ಚಿಕ್ಕಿ ಜೊತೆಗೆ ಕೀರ್ತನಾ ಮಸ್ತಿ

ಕೀರ್ತನಾ ಜಾಗಕ್ಕೆ ಈಗ ರಶ್ಮಿ ಬಂದಾಗಿದೆ. ಇದು ಸೀರಿಯಲ್ ಕಥೆ. ಆದರೆ ಸೀರಯಲ್‌ಗಿಂತ ನಿಜ ಜೀವನವೂ ಬಹಳ ಮುಖ್ಯವಾಗುತ್ತದೆ. ಒಟ್ಟಿಗೆ ನಟಿಸುತ್ತಾ ಸಹ ಕಲಾವಿದರ ಜೊತೆಗೆ ಒಳ್ಳೆ ಬಾಂಧವ್ಯ ಬೆಳೆಯುತ್ತದೆ. ಹೊರಗಡೆ ಸುತ್ತಾಡುವಷ್ಟು ಆತ್ಮೀಯರಾಗಿ ಬಿಡುತ್ತಾರೆ. ಸತ್ಯ ತಂಡ ಅಂತೂ ಆಗಾಗ ಎಲ್ಲಾ ಕಡೆಗೂ ಓಡಾಡುತ್ತಾ ಇರುತ್ತಾರೆ. ಇದೀಗ ಅನು ಜನಾರ್ಧನ್ ಕೂಡ ಸೀರಿಯಲ್ ಬಿಟ್ಟರು, ತಂಡದವರ ಜೊತೆಗಿನ ನಂಟನ್ನು ಬಿಡಲಾರೆ ಎನ್ನುತ್ತಿದ್ದಾರೆ. ಹೊರಗಡೆ ಭೇಟಿ ಮಾಡಿರುವ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಕಮ್ ಬ್ಯಾಕ್ ಆಗಿ ಅಂತಿದ್ದಾರೆ ಜನ

ಕೀರ್ತನಾ ಆಗಿ ಅನು ಜನಾರ್ಧನ್ ನೋಡುತ್ತಾ ಇದ್ದರೆ ಎಂಥವರಿಗೂ ವಾವ್ ಎನಿಸುತ್ತಿತ್ತು. ಅವರ ಹೇರ್ ಸ್ಟೈಲ್, ಮೇಕಪ್, ಡ್ರೆಸ್ಸಿಂಗ್ ಎಲ್ಲವೂ ಹೆಣ್ಣು ಮಕ್ಕಳ ಆಕರ್ಷಣೆಯ ಟಾಪಿಕ್ ಆಗಿತ್ತು. ಇನ್ನು ವಿಲನ್ ಲುಕ್‌ಗಂತು ಪಕ್ಕಾ ಮ್ಯಾಚ್ ಆಗುತ್ತಾ ಇದ್ದರು. ಒಂದು ಖಡಕ್ ಲುಕ್ ಕೊಟ್ಟರೆ ಆ ಕಣ್ಣಿನ ಸೌಂದರ್ಯಕ್ಕರ ಬಿದ್ದು ಹೋಗುತ್ತಿದ್ದರು. ಇದೀಗ ಸತ್ಯ, ಚಿಕ್ಕಿ, ರಿತು ಜೊತೆಗೆ ಕಾಣಿಸಿಕೊಂಡ ಕೀರ್ತನಾರನ್ನು ಕಮ್ ಬ್ಯಾಕ್ ಮಾಡಿ ಎಂದು ಅಭಿಮಾನಿಗಳು ಕೇಳುತ್ತಿದ್ದಾರೆ.

More from Filmibeat

English summary
zee kannada serial Sathya Written Update on Anu Janardhan social media story. Here is the details about Fans demand to come back to the serial
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X