Yashwanth Bettaswamy: 'ಗೌರಿ ಶಂಕರ' ಧಾರಾವಾಹಿ ಹೀರೊ ಬಳಿ ಅಭಿಮಾನಿಗಳ ವಿಶೇಷ ಮನವಿ ಏನು?
ಸ್ಟಾರ್ ಸುವರ್ಣ ವಾಹಿನಿಯಲ್ಲಿ 'ಗೌರಿ ಶಂಕರ' ಧಾರಾವಾಹಿ ಮೂಡಿ ಬರುತ್ತಿದೆ. ಗ್ರಾಮೀಣ ಭಾಗದ, ದೊಡ್ಡ ಮನೆತನದ ಕಥೆ. ಹಳ್ಳಿ ಭಾಷೆ ಕೇಳುವುದಕ್ಕೇನೆ ಚೆಂದ. ಆದರೆ ಈ ಧಾರಾವಾಹಿಯಲ್ಲಿ ಅತ್ತೆಯ ಪಾತ್ರಧಾರಿಯ ಮಾತೆ ಕಿರಿಕಿರಿ ಉಂಟು ಮಾಡಬೇಕು, ಅಷ್ಟು ಗಯ್ಯಾಳಿಯ ರೀತಿ ಆಡುತ್ತಾರೆ. ಜೋಗಿ ಮನೆತನದ ಒಬ್ಬನೇ ಮಗ ಶಂಕರ.
ಶಂಕರನನ್ನು ಮದುವೆಯಾಗಿರುವ ಗೌರಿ ವಿದ್ಯಾವಂತೆ, ಬುದ್ದಿವಂತೆ, ಗುಣವಂತೆ. ಆದರೆ ಅವಳಿಗೆ ಸಿಕ್ಕಿರುವ ಹುಡುಗ ತದ್ವಿರುದ್ಧ. ಓದು ತಲೆಗೆ ಹತ್ತಿಲ್ಲ, ಬರೆಯುವುದಕ್ಕೆ ಮೊದಲೇ ಬರುವುದಿಲ್ಲ, ಪೆದ್ದು ಪೆದ್ದಾಗಿ ಆಡ್ತಾನೆ. ಈ ರೀತಿ ಪೆದ್ದು ಪೆದ್ದಾಗಿ ಆಡುವವರೆ ಯಶ್ವಂತ್ ಬೆಟ್ಟಸ್ವಾಮಿ.

ಶಂಕರನಾಗಿ ಯಶ್ವಂತ್ ಬೆಟ್ಟಸ್ವಾಮಿ
ಗೌರಿ ಶಂಕರ ಧಾರಾವಾಹಿ ಚೆನ್ನಾಗಿಯೇ ಮೂಡಿ ಬರುತ್ತಿದೆ. ಗಯ್ಯಾಳಿ ಅತ್ತೆಯನ್ನ ಸಾಫ್ಟ್ ಸೊಸೆ ಹೇಗೆ ಬಗ್ಗಿಸುತ್ತಾಳೆ, ದಾರಿಗೆ ತರುತ್ತಾಳೆ ಎಂಬುದೇ ಕುತೂಹಲ. ಮಾತಿನ ಮೂಲಕವೇ ಅತ್ತೆ ಫುಲ್ ಜೋರು ಇದ್ದಾಳೆ. ಗೌರಿ ಈ ರೀತಿಯ ವಾತಾವರಣ ಎಂದು ಕಂಡಿರಲಿಲ್ಲ. ಅತ್ತೆಯ ಮನೆಗೆ ಬಂದ ಹೊಸತರಲ್ಲಿ ಗೌರಿಗೂ ಕಷ್ಟವಾಗಿತ್ತು. ಇನ್ನು ಶಂಕರ ಪೆದ್ದು ಪೆದ್ದಾಗಿ ಗೌರಿಗೆ ಇನ್ನಷ್ಟು ಕೋಪ ತರಿಸುತ್ತಿದ್ದಾನೆ. ಈ ಶಂಕರನ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ಯಶ್ವಂತ್ ಬೆಟ್ಟಸ್ವಾಮಿ. ರಿಯಲ್ ಲೈಫ್‌ನಲ್ಲಿ ಸಖತ್ ಕ್ಯೂಟ್. ಆದರೆ ಗೌರಿ ಶಂಕರದಲ್ಲಿ ಮಾತ್ರ ಕೊಂಚ ಪೆದ್ದು ಪೆದ್ದು.
ಕನ್ನಡ, ತೆಲುಗಿನಲ್ಲೂ ನಟನೆ
ಯಶ್ವಂತ್ ಬೆಟ್ಟಸ್ವಾಮಿ ಮೂಲತಃ ಬೆಂಗಳೂರಿನವರು. ಡಿಪ್ಲೋಮೋ ಮುಗಿಸಿದ ಯಶ್ವಂತ್‌ಗೆ ನಟನೆಯಲ್ಲಿ ಆಸಕ್ತಿ ಜಾಸ್ತಿ ಬೆಳೆದಿತ್ತು. ಅಲ್ಲಿಂದ ಮಾಡೆಲಿಂಗ್ ಕ್ಷೇತ್ರ ಆಯ್ಕೆಮಾಡಿಕೊಂಡರು, ರಂಗಭೂಮಿಯಲ್ಲೂ ತಮ್ಮನ್ನು ತಾವೂ ಪಳಗಿಸಿಕೊಂಡರು. ಆ ಮೂಲಕ ತಮ್ಮ ನಟನಾ ಜರ್ನಿಯನ್ನು ಆರಂಭಿಸಿದರು. ಮೊದಲಿಗೆ 2019ರಲ್ಲಿ 'ಅರಮನೆ ಗಿಳಿ' ಎಂಬ ಧಾರಾವಾಹಿಯ ಮೂಲಕ ಕಿರುತೆರೆಗೆ ಪರಿಚಿತರಾದರು. 'ಇವಳು ಸುಜಾತ', 'ಹೂಮಳೆ' ಧಾರಾವಾಹಿಯ ಬಳಿಕ ತೆಲುಗು ಇಂಡಸ್ಟ್ರಿಯಲ್ಲೂ ಕೆಲಸ ಮಾಡಿ ಬಂದಿದ್ದಾರೆ.

ಫಿಟ್ನೆಸ್ ಫ್ರೀಕ್ ಕೂಡ
ಯಶ್ವಂತ್ ಬೆಟ್ಟಸ್ವಾಮಿ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಕಡಿಮೆ ಆಕ್ಟೀವ್ ಆಗಿರುವುದು. ಆದರೆ ಒಂದಷ್ಟು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಅವರಿಗಿರುವ ಕ್ರೇಜ್ ಬಗ್ಗೆಯೂ ಅನಾವರಣವಾಗುತ್ತದೆ. ಕುದುರೆ ರೈಡ್ ಕೂಡ ಮಾಡಿದ್ದಾರೆ. ಇನ್ನು ಆರ್ಟಿಸ್ಟ್ ಎಂದರೆ ಪಿಟ್ನೆಸ್ ಬಹಳ ಮುಖ್ಯವಾಗುತ್ತದೆ. ಯಶ್ವಂತ್ ಕೂಡ ಆ ಫಿಟ್ನೆಸ್ ಅನ್ನು ಅಚ್ಚುಕಟ್ಟಾಗಿ ಮೆಂಟೇನ್ ಮಾಡಿದ್ದಾರೆ. ಜಿಮ್‌ನಲ್ಲಿ ದೇಹ ದಂಡಿಸುವ ವಿಡಿಯೋ ಒಂದನ್ನು ಯಶ್ವಂತ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಅಭಿಮಾನಿಗಳಿಂದ ಯಶ್ವಂತ್ ಗೆ ಬೇಡಿಕೆ
ಮೊದಲೇ ಹೇಳಿದಂತೆ ಯಶ್ವಂತ್ ಬೆಟ್ಟಸ್ವಾಮಿ ಸೋಷಿಯಲ್ ಮೀಡಿಯಾದಲ್ಲಿ ಅಷ್ಟೇನು ಆಕ್ಟೀವ್ ಆಗಿಲ್ಲ. ಆಕ್ಟರ್ ಆದರೂ ಕೂಡ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ಇರುವುದು ಹತ್ತೊಂಬತ್ತೇ ಫೋಟೋ. ಫಾಲೋವರ್ಸ್ ಏನೋ ಒಂದು ರೇಂಜಿಗೆ ಓಕೆ. ಆದರೆ ಯಶ್ವಂತ್ ಆಕ್ಟೀವ್ ಇಲ್ಲದ ಕಾರಣ, ಫಾಲೋವರ್ಸ್ ಕೂಡ ಹೆಚ್ಚಿಲ್ಲ. ಹಾಕಿರುವ ಕಡಿಮೆ ಪೋಸ್ಟ್‌ಗಳಿಗೆ ಫ್ಯಾನ್ಸ್ ಡಿಮ್ಯಾಂಡ್ ಇಟ್ಟಿದ್ದಾರೆ. ಪ್ಲೀಸ್ ಯಶ್ವಂತ್ ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರಿ. ಫೋಟೋಸ್ ಹಾಕುತ್ತಾ ಇರಿ ಎಂದಿದ್ದಾರೆ. ಇದರ ಜೊತೆಗೆ ಗೌರಿ ಶಂಕರ ಧಾರಾವಾಹಿಯಲ್ಲಿ ಈಗಾಗಲೇ ಹೀರೋಯಿನ್ ಬದಲಾವಣೆಯಾಗಿದೆ. ಹೀರೋ ನೀವೇ ಇರಿ ಎಂದೆಲ್ಲಾ ರಿಕ್ವೆಸ್ಟ್ ಮಾಡುತ್ತಿದ್ದಾರೆ.


Click it and Unblock the Notifications











