'ಓಂ ನಮಃ ಶಿವಾಯ್' ಧಾರಾವಾಹಿಯ ನಿರ್ಮಾಪಕ ಧೀರಜ್ ಕುಮಾರ್ ನಿಧನ
ಭಾರತೀಯ ಚಿತ್ರರಂಗಕ್ಕೆ ತಮ್ಮದೇ ಆದ ಸೇವೆಯನ್ನು ಸಲ್ಲಿಸಿದ ಅನೇಕ ತಾರೆಯರು ಒಬ್ಬರಾದ ಮೇಲೊಬ್ಬರಂತೆ ಎದ್ದು ನಡೆಯುತ್ತಿದ್ದಾರೆ. ನಿನ್ನೆಯಷ್ಟೇ {ಜುಲೈ 14 } ಬಿ ಸರೋಜಾದೇವಿಯವರನ್ನು ಕಳೆದುಕೊಂಡ ದುಖದಲ್ಲಿ ಚಿತ್ರರಂಗ ಇರುವಾಗ ಮತ್ತೊಂದು ಬರ ಸಿಡಿಲು ಬಡಿದಿದೆ. ಖ್ಯಾತ ನಟ ಮತ್ತು ನಿರ್ಮಾಪಕರಾದ ಧೀರಜ್ ಕುಮಾರ್ ಅವರನ್ನು ಭಾರತೀಯ ಚಿತ್ರರಂಗ ಮತ್ತು ಕಿರುತೆರೆಯ ಲೋಕ ಕಳೆದುಕೊಂಡಿದೆ.
ಹೌದು. ಧೀರಜ್ ಕುಮಾರ್ .. ಬಾಲಿವುಡ್‌ನ ಖ್ಯಾತ ಹೆಸರು. ಹಿಂದಿ ಮತ್ತು ಪಂಜಾಬ್ ಚಿತ್ರರಂಗಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದ ಧೀರಜ್ ಕುಮಾರ್ 1970ರಿಂದ 1984ರವರೆಗೆ 21 ಪಂಜಾಬಿ ಚಿತ್ರಗಳಲ್ಲಿ ಅಭಿನಯಿಸಿದ್ದರು.

'ರೋಟಿ ಕಪಡಾ ಔರ್ ಮಕಾನ್' .. 'ಹೀರಾ ಪನ್ನಾ'.. 'ರಾತೋನ್ ಕಾ ರಾಜಾ' .. 'ಬಹರೂಪಿಯಾ'..'ಸ್ವಾಮಿ'.. 'ಕ್ರಾಂತಿ'.. ಸೇರಿ ಹಲವು ಹಿಂದಿ ಚಿತ್ರಗಳಲ್ಲಿ ಕೂಡ ಪ್ರಮುಖವಾದ ಪಾತ್ರಗಳನ್ನು ನಿರ್ವಹಿಸಿದ್ದ ಧೀರಜ್ ಕುಮಾರ್, ಜೀನತ್ ಅಮಾನ್ ಮತ್ತು ಮನೋಜ್ ಕುಮಾರ್ ಅವರ ಜೊತೆ ಕೂಡ ತೆರೆ ಹಂಚಿಕೊಂಡಿದ್ದರು.
ಇನ್ನು ಧೀರಜ್ ಕುಮಾರ್ ಕೇವಲ ಆಕ್ಟರ್ ಮಾತ್ರ ಆಗಿರಲಿಲ್ಲ. ಬದಲಿಗೆ ನಿರ್ಮಾಪಕರಾಗಿದ್ದರು. ತಮ್ಮದೇ 'ಕ್ರಿಯೇಟಿವ್ ಐ' ಎಂಬ ನಿರ್ಮಾಣ ಸಂಸ್ಥೆಯನ್ನು ಶುರು ಮಾಡಿದ್ದರು. ತಮ್ಮ ಈ ಸಂಸ್ಥೆಯ ಮೂಲಕ ಭಕ್ತಿ ಪ್ರಧಾನ ಧಾರಾವಾಹಿಗಳನ್ನು ಧೀರಜ್ ಕುಮಾರ್ ನಿರ್ಮಾಣ ಮಾಡಿದ್ದರು. ಆ ಪೈಕಿ 90ರ ದಶಕದಲ್ಲಿ ಪ್ರಸಾರವಾದ ''ಓಂ ನಮಃ ಶಿವಾಯ'' ತುಂಬಾನೇ ಪ್ರಮುಖವಾದದ್ದು.

ದೂರದರ್ಶನದ ಮೂಲಕ ಮನೆ ಮನೆಗಳನ್ನು ತಲುಪಿದ ಈ ಧಾರಾವಾಹಿ ಅಪಾರವಾದ ಯಶಸ್ಸನ್ನು ಗಳಿಸಿತ್ತು. ಶಿವನ ಪಾತ್ರದಲ್ಲಿ ಯಶೋಧನ್ ರಾಣಾ ಸಿಂಗ್ ಮತ್ತು ಪಾರ್ವತಿಯ ಪಾತ್ರದಲ್ಲಿ ಗಾಯತ್ರಿ ಶಾಸ್ತ್ರಿ ಅಭಿನಯಿಸಿದ್ದರು. ಹೆಚ್ಚು ಕಡಿಮೆ ನಾಲ್ಕು ವರ್ಷ ಈ ಧಾರಾವಾಹಿ ಪ್ರಸಾರವಾಗಿತ್ತು.
''ಓಂ ನಮಃ ಶಿವಾಯ'' ಧಾರಾವಾಹಿ ಮಾತ್ರವಲ್ಲದೇ ''ಜೈ ಸಂತೋಷಿ ಮಾ''.. ''ಜಪ್ ತಪ್ ವೃತ್''.. ಹೀಗೆ ಹಲವು ಧಾರಾವಾಹಿಗಳನ್ನು ಕೂಡ ಕಿರುತೆರೆಯ ಪ್ರೇಕ್ಷಕರಿಗೆ ಧೀರಜ್ ಕುಮಾರ್ ನೀಡಿದ್ದರು.
ಹೀಗೆ ಬೆಳ್ಳಿತೆರೆ ಮತ್ತು ಹಿರಿತೆರೆಗೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದ ಧೀರಜ್ ಕುಮಾರ್ ಇತ್ತೀಚೆಗೆ ತೀವೃ ಉಸಿರಾಟದ ಸಮಸ್ಯೆ, ನಿಮೋನಿಯಾದಿಂದ ಬಳಲುತ್ತಿದ್ದರು. ಈ ಹಿನ್ನೆಲೆ ಧೀರಜ್ ಕುಮಾರ್ ಅವರನ್ನು ಮುಂಬೈನ ಅಂಧೇರಿಯ ಕೊಕಿಲಾ ಬೆನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆಸ್ಪತ್ರೆಗೆ ದಾಖಲಾಗುವ ಮುನ್ನ ಖಾರ್ಘರ್ ಬಳಿ ಇರುವ ಇಸ್ಕಾನ್ ದೇವಸ್ಥಾನಕ್ಕೆ ತೆರಳಿ ಪೂಜೆಯನ್ನು ಸಲ್ಲಿಸಿದ್ದ ಧೀರಜ್ ಕುಮಾರ್ ಮರಳಿ ಮನೆಗೆ ಬರುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದರು. ಆದರೆ.. ನಿನ್ನೆ { ಜುಲೈ 14 } ಧೀರಜ್ ಕುಮಾರ್ ಅವರ ಆರೋಗ್ಯ ಬಿಗಡಾಯಿಸಿತು.
ಹೀಗಾಗಿ ಅವರನ್ನು ವೆಂಟಿಲೇಟರ್ ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಇಂದು { ಜುಲೂ 15} ಚಿಕಿತ್ಸೆ ಫಲಕಾರಿಯಾಗದೇ ಧೀರಜ್ ಕುಮಾರ್ ತಮ್ಮ 79ನೇ ವಯಸ್ಸಿನಲ್ಲಿ ನಿಧನರಾದರು.
ಧೀರಜ್ ಕುಮಾರ್ ಅವರ ನಿಧನಕ್ಕೆ ಬೆಳ್ಳಿತೆರೆ ಮತ್ತು ಕಿರುತೆರೆಯ ಅನೇಕ ಗಣ್ಯರು ಕಂಬನಿ ಮಿಡಿದು ಸಂತಾಪವನ್ನು ಸೂಚಿಸಿದ್ದು, ಧೀರಜ್ ಕುಮಾರ್ ಅವರ ಅಂತ್ಯಕ್ರಿಯೆಯು ನಾಳೆ {ಜುಲೈ 16} ಬೆಳಿಗ್ಗೆ 11 ಗಂಟೆಗೆ ಮುಂಬೈನ ವಿಲೆ ಪಾರ್ಲೆ ಪಶ್ಚಿಮದಲ್ಲಿರುವ ಪವನ್ ಹಾನ್ಸ್ ಚಿತಾಗಾರದಲ್ಲಿ ನಡೆಯಲಿದೆ.
ಧೀರಜ್ ಕುಮಾರ್ ಅವರ ಪಾರ್ಥಿವ ಶರೀರವನ್ನು ನಾಳೆ ಬೆಳಿಗ್ಗೆ 6 ಗಂಟೆಗೆ ಅವರಬೆಳಿಗ್ಗೆ 10 ಗಂಟೆಯವರೆಗೆ ಮನೆಯಲ್ಲಿ ಅಂತಿಮ ದರ್ಶನಕ್ಕೆ ಇಡಲಾಗುತ್ತಿದ್ದು, ಬಾಲಿವುಡ್ ನ ಅನೇಕ ಸೆಲೆಬ್ರಿಟಿಗಳು ಅವರ ಮನೆಗೆ ಭೇಟಿ ನೀಡಿ ಅಂತಿಮ ದರ್ಶನ ಪಡೆಯುವ ನಿರೀಕ್ಷೆಯಿದೆ.


Click it and Unblock the Notifications











