twitter
    For Quick Alerts
    ALLOW NOTIFICATIONS  
    For Daily Alerts

    ಎಫ್ ಟಿವಿಯ ಮೊಟ್ಟ ಮೊದಲ ಫ್ಯಾಷನ್ ಕ್ಯಾಲೆಂಡರ್ ಲಾಂಚ್

    |

    ಕಮಾರ್ ಫಿಲಂ ಫ್ಯಾಕ್ಟರಿ ಎಫ್.ಟಿ.ವಿ.ಯ ಫ್ಯಾಷನ್ ಕ್ಯಾಲೆಂಡರನ್ನು ನಗರದಲ್ಲಿ ಸೋಮವಾರ ಏರ್ಪಡಿಸಿದ್ದ ಅದ್ಧೂರಿ ಕಾರ್ಯಕ್ರಮದಲ್ಲಿ ಲಾಂಚ್ ಮಾಡಲಾಯಿತು. ಬೆಂಗಳೂರಿನ ವಸಂತನಗರದಲ್ಲಿರುವ ಶ್ಯಾಂಘ್ರಿಲಾ ಹೋಟೆಲ್‍ನಲ್ಲಿ ಈ ಕಾರ್ಯಕ್ರಮ ಅದ್ಧೂರಿಯಾಗಿ ಜರುಗಿತು.

    ಇತ್ತೀಚೆಗಷ್ಟೇ ಹೈದರಾಬಾದ್‍ನಲ್ಲಿ ಕ್ಯಾಲೆಂಡರ್ ಲಾಂಚ್ ಮಾಡಿದ್ದು ಈಗ ಬೆಂಗಳೂರಿನಲ್ಲೂ ಬಿಡುಗಡೆ ಮಾಡಲಾಯಿತು. ಈ ಕಾರ್ಯಕ್ರಮಕ್ಕೆ ಫ್ಯಾಷನ್ ಮತ್ತು ಬೆಳ್ಳಿತೆರೆಯ ಪ್ರಮುಖರು ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಬೆಂಗಳೂರಿನ ಮಾಡೆಲ್‍ಗಳಿಂದ ಫ್ಯಾಷನ್ ಷೋ ಕೂಡಾ ನಡೆಸಲಾಯಿತು.

    ಫ್ಯಾಷನ್ ಟಿ.ವಿ.ಯ ಭಾರತದ ಮಾಲೀಕ ಕಮಾರ್ ಹೇಳುವಂತೆ, "ಅಂತರಾಷ್ಟ್ರೀಯ ಮಟ್ಟದ ಫ್ಯಾಷನ್ ‍ನ್ನು ಭಾರತೀಯರಿಗೆ ತಲುಪಿಸುವ ಕಾರ್ಯಕ್ಕೆ ಮುಂದಾಗಿದ್ದೇವೆ. ಇದು ಎಲ್ಲಾ ಮೆಟ್ರೋಸಿಟಿಗಳಿಗೂ ಮುಂದುವರೆಯುವ ಪ್ರಯಾಣವಾಗಿದೆ. ಭಾರತೀಯ ಫ್ಯಾಷನ್ ಕ್ಷೇತ್ರದ ಆಯ್ಕೆ ಫ್ಯಾಷನ್ ಮತ್ತು ಶೈಲಿಗಳ ಸಮ್ಮಿಲನವಾಗಿದೆ. ಇದು ಭಾರತದಲ್ಲಿ ಶುರುವಾದ ಒಂದು ಬಗೆಯ ಪಯಣ." ಎಂದು ಸಂತಸ ವ್ಯಕ್ತಪಡಿಸಿದರು.

    Fashion tv first calendar launched

    ಎಫ್ ಟಿವಿ ಬಗ್ಗೆ:
    1997ರಲ್ಲಿ ಪ್ರಾರಂಭವಾದಾಗಿನಿಂದಲೂ ಎಫ್ ಟಿ ವಿ ಫ್ಯಾಷನ್ ಮತ್ತು ಲೈಫ್ ಸ್ಟೈಲ್ ಗಳಲ್ಲಿ ಅತ್ತುತ್ತಮ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿ ಅದನ್ನು ಅತ್ಯುನ್ನತ ಮಟ್ಟಕ್ಕೆ ತೆಗೆದುಕೊಂಡ ಹೆಗ್ಗಳಿಕೆಯನ್ನು ಸೃಷ್ಟಿಸಿದೆ. ಬೇರೆ ಯಾವ ಜಾಲತಾಣಗಳಲ್ಲೂ ದೊರೆಯದ ಫ್ಯಾಷನ್ ಕುರಿತ ಮಾಹಿತಿಯನ್ನು ವಸ್ತುನಿಷ್ಠವಾಗಿ ನೀಡುವ ಏಕೈಕ ವಾಹಿನಿಯಾಗಿದ್ದು ಫ್ಯಾಷನ್ ಜಗತ್ತಿನ ಅತ್ಯದ್ಭುತ ಚಿತ್ರಗಳು ಮತ್ತು ಅದರ ಕುರಿತ ಪ್ರತ್ಯೇಕ ಮಾಹಿತಿಗಳೊಂದಿಗೆ ತಿಳುವಳಿಕೆ ಮೂಡಿಸಿ ವಿಶ್ವಮಟ್ಟದ ಬ್ರಾಂಡ್‍ಗಳನ್ನು ತನ್ನತ್ತ ಸೆಳೆಯುತ್ತಿರುವ ವಾಹಿನಿ ಎಫ್.ಟಿ.ವಿ. ಆಗಿದೆ.

    English summary
    Kamar Film Factory has launched FTV Fashion Calendar in a grand event held in Bengaluru, on Monday evening, 15 April.
    Friday, April 19, 2019, 18:06
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X