ಕರಾವಳಿಗರ ಮನ ಗೆದ್ದ ಫೆಮಿನಾ ಮಿಸ್ ಇಂಡಿಯಾ ಸಿನಿ ಶೆಟ್ಟಿ

By Poorva

ಕರಾವಳಿಗರ ಮನಗೆದ್ದ ಸುಂದರಿ ಸಿನಿ ಶೆಟ್ಟಿ. ಸಿನಿ ಶೆಟ್ಟಿ ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ -2022 ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಇವರು ಮೂಲತಃ ಉಡುಪಿಯವರು. ಆದರೆ ಬೆಳೆದಿದ್ದು ಮಾತ್ರ ಮುಂಬೈ ನಲ್ಲಿ. ಸಿನಿ ಶೆಟ್ಟಿ ನೋಟ ಬಹಳ ಅಂದ. ಪಡ್ಡೆ ಹೈಕಳ ಮನಗೆದ್ದ ಮಾಡಲ್ ಈಕೆ.

ಮುಂಬೈನ ಜಿಯೋ ವಲ್ಡ್‌ ಕನ್ವೆಂನ್ಷನ್ ಸೆಂಟರ್‌ನಲ್ಲಿ ಜುಲೈ 3 ರಂದು ನಡೆದ ಸ್ಪರ್ಧೆಯಲ್ಲಿ ವಿಜೇತರಾಗಿ ಹೊರಹೊಮ್ಮಿ ಕರಾವಳಿ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ. ಸಿನಿ ಶೆಟ್ಟಿ ಮುಂಬೈನಲ್ಲಿ ಅಕೌಂಟಿಂಗ್ ಹಾಗೂ ಫೈನಾನ್ಸ್​ನಲ್ಲಿ ಮಾಸ್ಟರ್ಸ್ ಪದವಿ ಪಡೆದಿದ್ದು ಈಗ ಚಾರ್ಟರ್ಡ್ ಫೈನಾನ್ಶಿಯಲ್ ಅನಾಲಿಸ್ಟ್ ಕೋರ್ಸ್ ಮಾಡುತ್ತಿದ್ದಾರೆ. ಸಿನಿ ಶೆಟ್ಟಿ ಸೋಶಿಯಲ್ ಮೀಡಿಯಾದಲ್ಲಿ ಸದಾ ಕಾಲ ಆಕ್ಟೀವ್ ಆಗಿರುತ್ತಾರೆ. ಇನ್‌ಸ್ಟಾಗ್ರಾಂನಲ್ಲಿ 66.6 ಸಾವಿರ ಫಾಲೋವರ್‌ಗಳನ್ನು ಹೊಂದಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಸುಂದರವಾದ ಫೋಟೊಗಳನ್ನು ಹಂಚಿಕೊಳ್ಳುತ್ತಾ ಸಂಭ್ರಮ ಪಡುತ್ತಿರುತ್ತಾರೆ. "ಮಿಸ್ ವರ್ಲ್ಡ್ 2000 ಕಿರೀಟವನ್ನು ಅಲಂಕರಿಸಿದ ಪ್ರಿಯಾಂಕಾ ಚೋಪ್ರಾ ಮಾತುಗಳು ನನ್ನ ಬಹಳ ಗಾಢವಾಗಿ ಕಾಡಿತ್ತು. ಸಿನಿ ಶೆಟ್ಟಿಗೆ ಪ್ರಿಯಾಂಕಾ ಮಾರ್ಗಗಳು ಸ್ಫೂರ್ತಿಯಾಗಿತ್ತಂತೆ ಹೀಗಂತ ಸಿನಿ ಶೆಟ್ಟಿ ಹೇಳಿಕೊಂಡಿದ್ದಾರೆ. ನೀವು ಒಬ್ಬ ವ್ಯಕ್ತಿಯನ್ನು ನೋಡಿದಾಗ, ಅವರ ಕೆಲವು ಮಾತುಗಳು ನಿಮಗೆ ಬಹಳ ಇಷ್ಟವಾಗುತ್ತದೆ" ಎಂದಿದ್ದಾರೆ. ಪ್ರಿಯಾಂಕಾ ಅವರ ಕೆಲ ಮಾತುಗಳು ನನಗೆ ಬಹಳ ಕಾಡಿದೆ ಎಂದಿದ್ದಾರೆ.

Femina Miss India World 2022 Sini Shetty Life Journey And Biography

ಸಿನಿ ಶೆಟ್ಟಿಗೆ ನೃತ್ಯ ಎಂದರೆ ಬಹಳ ಅಚ್ಚುಮೆಚ್ಚು. ಅವರು ನಾಲ್ಕನೇ ವಯಸ್ಸಿನಲ್ಲಿ ನೃತ್ಯ ಮಾಡಲು ಪ್ರಾರಂಭಿಸಿದ್ದರು. ಹದಿನಾಲ್ಕು ವರ್ಷದವರಿದ್ದಾಗ ಭರತನಾಟ್ಯಂ ಪ್ರದರ್ಶನ ನೀಡಿದ್ದರು. ಇನ್ನೂ ಮಿಸ್ ಇಂಡಿಯಾ ಕಿರೀಟ ಗೆದ್ದ ಸಿನಿ ಶೆಟ್ಟಿಯನ್ನು ಅವರ ಹುಟ್ಟೂರು ಉಡುಪಿಯಲ್ಲಿ ಭರ್ಜರಿಯಾಗಿ ಸ್ವಾಗತಿಸಲಾಯಿತು.

ಸಿನಿ ಶೆಟ್ಟಿ 71ನೇ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಸಿನಿ ಶೆಟ್ಟಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಇದಕ್ಕಾಗಿ ಸಾಕಷ್ಟು ಶ್ರಮಿಸುತ್ತಿದ್ದಾರೆ ಕೂಡ. ಈ ಬಾರಿಯೂ ಗೆಲ್ಲಬೇಕು ಎಂಬ ಹಂಬಲವನ್ನು ವ್ಯಕ್ತಪಡಿಸುತ್ತಿದ್ದಾರೆ. ಸಿನಿ ಶೆಟ್ಟಿಯವರು ಅಜ್ಜಿಯ ಬಗ್ಗೆ ಭಾವುಕವಾಗಿ ಮಾತುಗಳನ್ನು ಆಡಿದ್ದಾರೆ. ಚಿಕ್ಕ ವಯಸ್ಸನಲ್ಲಿ ಅಜ್ಜಿ ನನಗೆ ತುಂಬಾ ಸಪೋರ್ಟ್ ಮಾಡುತ್ತಿದ್ದರು. ನನಗೆ ಈ ಪಟ್ಟ ಸಿಕ್ಕಿದ್ದಕ್ಕೆ ಅಜ್ಜಿಗೆ ಬಹಳ ಖುಷಿ ಇದೆ. ಏರ್ ಪೋರ್ಟ್‌ಗೆ ಬಂದಾಗ ನನ್ನ ಸ್ವಾಗತಿಸಲು ನನ್ನ ಫ್ಯಾಮಿಲಿ ಬಂದಿರಬಹುದು ಎಂದುಕೊಂಡಿದ್ದೆ ಆದರೆ ಇಡೀ ಊರಿನವರು ಎಲ್ಲರೂ ಬಂದಿರುವುದನ್ನು ಕಂಡು ಆಶ್ಚರ್ಯ ಆಯಿತು. ನಿಮ್ಮೆಲ್ಲರ ಪ್ರೀತಿ ಕಂಡು ನನಗೆ ಬಹಳ ಖುಷಿ ಆಗಿದೆ ಎಂದು ಸಿನಿ ಹೇಳುತ್ತಿದ್ದರು.

ಇನ್ನೂ ಸಿನಿ ಶೆಟ್ಟಿ ಹುಟ್ಟಿ ಬೆಳೆದಿದ್ದು ಮುಂಬೈನಲ್ಲಿ ಆದುದರಿಂದ ಕನ್ನಡ ಅಷ್ಟಾಗಿ ಮಾತನಾಡಲು ಬರುವುದಿಲ್ಲ. ಸ್ಪಷ್ಟವಾಗಿ ತುಳು ಭಾಷೆಯನ್ನು ಮಾತನಾಡುತ್ತಾರೆ. ಇನ್ನೂ ತವರೂರಿಗೆ ಆಗಮಿಸಿದ ಸಿನಿ ಶೆಟ್ಟಿಗೆ ಅದ್ಧೂರಿ ಸ್ವಾಗತ ನೀಡಲಾಗಿದೆ. ಅಲ್ಲಿನ ಜನತೆ ಕೂಡ ಊರಿನ ಹುಡುಗಿಯ ಜೊತೆ ಫೋಟೊ ತೆಗೆಸಿಕೊಂಡಿದ್ದು, ಪ್ರೀತಿಯಿಂದ ಬರಮಾಡಿಕೊಂಡಿದ್ದಾರೆ. ಹುಟ್ಟಿದ ಊರಿನ ಗರಿಮೆ ಹೆಚ್ಚು ಮಾಡಿರುವ ಸಿನಿ ಶೆಟ್ಟಿಯನ್ನು ಜನ ಕೊಂಡಾಡುವಂತಾಗಿದೆ. ಮನೆ ಮಗಳನ್ನು ಮಿಸ್ ಇಂಡಿಯಾ ಕಿರೀಟದಲ್ಲಿ ನೋಡಿ ಜನರು ಸಂತೋಷಗೊಂಡಿದ್ದು, ಸಿನಿ ಶೆಟ್ಟಿಗೆ ಆರತಿ ಎತ್ತಿ, ಹೂ ಮಾಲೆ ಹಾಕಿ ಸಡಗರದಿಂದಲೇ ಬರಮಾಡಿಕೊಂಡು, ಸಂತಸ ವ್ಯಕ್ತಪಡಿಸಿದ್ದಾರೆ.

More from Filmibeat

English summary
Femina Miss India World 2022 Sini Shetty Life Journey And Biography, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X