twitter
    For Quick Alerts
    ALLOW NOTIFICATIONS  
    For Daily Alerts

    ಸಾವಿನ ಬಾಗಿಲು ತಟ್ಟಿ ಗೆದ್ದು ಬಂದ 'ಫೈಟರ್' ಗಿರೀಶ್ ಯಶೋಗಾಥೆ

    |

    ಕಿಕ್ ಬಾಕ್ಸಿಂಗ್ ನಲ್ಲಿ K1 (ನಾಕ್ ಔಟ್ ರೌಂಡ್) ಫೈಟರ್. ಇದು ಬಹಳ ಚಾಲೆಂಜಿಂಗ್ ಆಗಿರುತ್ತೆ. ಇಂತಹ ಬಾಕ್ಸರ್ ಗಿರೀಶ್. ದೇಶಕ್ಕೆ ಮತ್ತು ರಾಜ್ಯಕ್ಕೆ ಮೊದಲ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಹಾಗೂ ಮೊದಲ ಕನ್ನಡಿಗ. ರಾಷ್ಟ್ರಮಟ್ಟದಲ್ಲಿ ರಾಜ್ಯವನ್ನ ಪ್ರತಿನಿಧಿಸಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನ ಪ್ರತಿನಿಧಿಸಿ ಚಿನ್ನದ ಪದಕ ಗೆದ್ದಿದ್ದಾರೆ.

    10 ಸಲ ರಾಷ್ಟ್ರಮಟ್ಟದಲ್ಲಿ ಚಿನ್ನದ ಪದಕ ಗೆದ್ದಿರುವ ಗಿರೀಶ್, ಮೂರು ಸಲ ಭಾರತವನ್ನ ಪ್ರತಿನಿಧಿಸಿದ್ದಾರೆ. ಇಲ್ಲಿಯವರೆಗೂ ಕರಾಟೆ, ಕಿಕ್ ಬಾಕ್ಸಿಂಗ್, ಮೊಯ್ ಥಾಯ್ ವಿಭಾಗದಲ್ಲಿ 175ಕ್ಕೂ ಅಧಿಕ ಫೈಟ್ ಮಾಡಿದ್ದಾರೆ.

    ವೀಕೆಂಡ್ ವಿತ್ ರಮೇಶ್ ಫಿನಾಲೆಯಲ್ಲಿ ಅಣ್ಣಾಮಲೈ ಮತ್ತು ವಿಲಾಸ್ ನಾಯಕ್.! ವೀಕೆಂಡ್ ವಿತ್ ರಮೇಶ್ ಫಿನಾಲೆಯಲ್ಲಿ ಅಣ್ಣಾಮಲೈ ಮತ್ತು ವಿಲಾಸ್ ನಾಯಕ್.!

    ಹೀಗೆ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವು ಪ್ರಶಸ್ತಿಗಳನ್ನ ಗೆದ್ದು ರಾಜ್ಯಕ್ಕೆ ಹಾಗೂ ದೇಶಕ್ಕೆ ಕೀರ್ತಿ ತಂದಿರುವ ಫೈಟರ್ ಗಿರೀಶ್, ಒಂದು ಸಮಯದಲ್ಲಿ ನರಕದ ಬಾಗಿಲು ತಟ್ಟಿ ಬಂದಿದ್ದಾರೆ. ತನ್ನ ಜೀವನ ಮುಗಿದೇ ಹೋಯಿತು ಎನ್ನುವ ಸಂದರ್ಭದಲ್ಲಿ ಫಿನಿಕ್ಸ್ ನಂತೆ ಎದ್ದು ನಿಂತು ಮತ್ತೆ ಸಾಧನೆಯ ಏಣಿ ಹತ್ತಿದರು. ಅಷ್ಟಕ್ಕೂ ಗಿರೀಶ್ ಅವರಿಗೆ ಏನಾಗಿತ್ತು? ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಫೈಟರ್ ಬಿಚ್ಚಿಟ್ಟ ತನ್ನ ಯಶೋಗಾಥೆ ಇಲ್ಲಿದೆ. ಮುಂದೆ ಓದಿ....

    ಫೈಟ್ ಅಭ್ಯಾಸದ ವೇಳೆ ಕುಸಿದು ಬಿದ್ದರು

    ಫೈಟ್ ಅಭ್ಯಾಸದ ವೇಳೆ ಕುಸಿದು ಬಿದ್ದರು

    ಏಷ್ಯಾನ್ ಚಾಂಪಿಯನ್ ಷಿಪ್ ಗಾಗಿ ಅಭ್ಯಾಸ ಮಾಡುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಗಿರೀಶ್ ಕುಸಿದು ಬಿದ್ದರು. ವೈದ್ಯರ ಬಳಿ ತೆರೆಳಿದ ಗಿರೀಶ್ ಗೆ ಪ್ಲೇಟ್ ರೇಟ್ಸ್ ನಲ್ಲಿ ಭಾರಿ ವ್ಯತ್ಯಾಸ ಆಗಿರುವುದು ತಿಳಿದು ಬಂತು. ಕನಿಷ್ಠ 1.5 ಲಕ್ಷ ಇರಬೇಕಾಗಿದ್ದ ಪ್ಲೇಟ್ ರೇಟ್ ಕೇವಲ 6 ಸಾವಿರಕ್ಕೆ ಬಂದಿತ್ತು. ಡೆಂಗ್ಯೂ ನೆಗಿಟೀವ್ ಇದೆ ಎಂದು ರಿಪೋರ್ಟ್ ಬಂತು. ಆಗಲೇ ಗಿರೀಶ್ ಗೆ ಗೊತ್ತಾಗಿದ್ದು ಅಸಲಿ ಸತ್ಯ.

    ವಿಷ್ಣು ಕಪಾಳಕ್ಕೆ ಸುಹಾಸಿನಿ ಹೊಡೆದ ದೃಶ್ಯ ಬಾಬು ಎಂದಿಗೂ ಮರೆಯೋಲ್ಲ!ವಿಷ್ಣು ಕಪಾಳಕ್ಕೆ ಸುಹಾಸಿನಿ ಹೊಡೆದ ದೃಶ್ಯ ಬಾಬು ಎಂದಿಗೂ ಮರೆಯೋಲ್ಲ!

    ಕ್ಯಾನ್ಸರ್ ಎಂದು ಹೇಳಿದ ವೈದ್ಯರು

    ಕ್ಯಾನ್ಸರ್ ಎಂದು ಹೇಳಿದ ವೈದ್ಯರು

    ''ಡೆಂಗ್ಯೂ ನೆಗಿಟೀವ್ ಅಂದ್ಮೇಲೆ 6 ಸಾವಿರ ಪ್ಲೇಟ್ ರೇಟ್ ಹೇಗೆ ಬಂತು ಅಂತ ಕೇಳಿದ್ರೆ, ಇದು ಬ್ಲಡ್ ಕ್ಯಾನ್ಸರ್ ಎಂದು ಡಾಕ್ಟರ್ ಹೇಳಿದ್ರು. ಇದನ್ನ ಕೇಳಿದ ಗಿರೀಶ್ ದಿಗ್ಬ್ರಮೆಗೊಂಡರು. ಕುಡಿಯುವುದಿಲ್ಲ, ಸಿಗರೇಟ್ ಸೇದಲ್ಲ, ಗುಟುಕ ಹಾಕಲ್ಲ, ಫಿಟ್ನೆಸ್ ನಲ್ಲಿ ಇರ್ತಿದ್ದರೂ ಕ್ಯಾನ್ಸರ್ ಯಾಕೆ?'' ಎಂದು ವೀಕೆಂಡ್ ವೇದಿಕೆಯಲ್ಲಿ ಭಾವುಕರಾದರು.

    ಫೈಟರ್ ಗಿರೀಶ್, ತೂಕ ಕಳೆದುಕೊಂಡರು

    ಫೈಟರ್ ಗಿರೀಶ್, ತೂಕ ಕಳೆದುಕೊಂಡರು

    ಒಳ್ಳೆಯ ಫಿಟ್ನೆಸ್ ಕಾಪಾಡಿಕೊಂಡಿದ್ದ ಗಿರೀಶ್ ಸಂಪೂರ್ಣವಾಗಿ ತೂಕ ಕಳೆದುಕೊಂಡರು. ದಿನಗಳು ಕಳೆಯುತ್ತಿದ್ದಂತೆ ಜೀವನ ಮುಗಿತು ಎಂದು ನಿರ್ಧರಿಸಿದರು. ಇಂತಹ ಸಮಯದಲ್ಲಿ ಡಾಕ್ಟರ್ ಗಿರೀಶ್ ಅವರಿಗೆ ಸ್ಫೂರ್ತಿ ತುಂಬಿದರು. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ್ಮೇಲೆ ಒಂದು ನಿರ್ಧಾರಕ್ಕೆ ಬಂದ್ರಂತೆ. ಇನ್ನು ಜೀವನ ಇದೆ, ಪ್ರಯತ್ನ ಮಾಡು ಅಂತ.

    ಒಂದು ಪಾತ್ರ ಕೊಟ್ಟು ಬಿರಾದರ್ ಗೆ ಕಂಡಿಷನ್ ಹಾಕಿದ್ದರಂತೆ ಕಾಶೀನಾಥ್.!ಒಂದು ಪಾತ್ರ ಕೊಟ್ಟು ಬಿರಾದರ್ ಗೆ ಕಂಡಿಷನ್ ಹಾಕಿದ್ದರಂತೆ ಕಾಶೀನಾಥ್.!

    ನರಕದ ಬಾಗಿಲು ತಟ್ಟಿ ಬಂದ ಫೈಟರ್

    ನರಕದ ಬಾಗಿಲು ತಟ್ಟಿ ಬಂದ ಫೈಟರ್

    ''ಧೃಡ ಮನಸ್ಸಿನಿಂದ ಜೀವದ ಮೇಲೆ ಆಸೆ ಉಳಿಸಿಕೊಂಡ ನಾನು ಮೆಲ್ಲಗೆ ನಡೆಯಲು ಆರಂಭಿಸಿದೆ. ಎರಡು ವರ್ಷ ಡಾಕ್ಟರ್ ಬಾಕ್ಸಿಂಗ್ ಮಾಡುವಂತಿಲ್ಲ ಎಂದರು. ಆದ್ರೆ, ನಾನು ಅಷ್ಟೋತ್ತಿಗೆ ಬಾಕ್ಸಿಂಗ್ ಪ್ರಾಕ್ಟೀಸ್ ಮಾಡ್ತಿರುವ ವಿಡಿಯೋವನ್ನ ನಮ್ಮ ಅಣ್ಣ ಡಾಕ್ಟರ್ ಗೆ ಕಳುಹಿಸಿದರು. ಅದನ್ನ ನೋಡಿ ಡಾಕ್ಟರ್ ಹೇಳಿದ್ದು, 'ನಿಮ್ಮ ತಮ್ಮ ನರಕದ ಬಾಗಿಲು ತಟ್ಟಿ ಬಂದಿದ್ದಾನೆ' ಅಂತ''

    ಚೆನ್ನೈನಲ್ಲಿದ್ದ ಅಣ್ಣಾವ್ರ ಮನೆ ಹುಡುಕಿಕೊಂಡು ಹೋಗಿದ್ದ ಬಿರಾದರ್ ಗೆ ರಾಜ್ ಹೇಳಿದ್ದೇನು?ಚೆನ್ನೈನಲ್ಲಿದ್ದ ಅಣ್ಣಾವ್ರ ಮನೆ ಹುಡುಕಿಕೊಂಡು ಹೋಗಿದ್ದ ಬಿರಾದರ್ ಗೆ ರಾಜ್ ಹೇಳಿದ್ದೇನು?

    ಹೋರಾಟದ ಮುಂದೆ ಕ್ಯಾನ್ಸರ್ ಚಿಕ್ಕದು

    ಹೋರಾಟದ ಮುಂದೆ ಕ್ಯಾನ್ಸರ್ ಚಿಕ್ಕದು

    ''ಎಲ್ಲರೂ ಕೇಳಿದ್ರು ಕ್ಯಾನ್ಸರ್ ನ ಹೇಗೆ ಗೆದ್ದು ಬಂದೆ ಅಂತ. ನಾನು ಹಿಂದೆ ತಿರುಗಿ ನೋಡಿದಾಗ ನಾನು ನಡೆಸಿದ ಹೋರಾಟ ಮಾತ್ರ ಕಾಣಿಸಿತು. ಆ ಕ್ಯಾನ್ಸರ್ ಬಹಳ ಚಿಕ್ಕದಾಗಿ ಕಂಡು ಬಂತು. ನಮ್ಮ ಲೈಫ್ ನಲ್ಲಿ ನಾವೇ ಸ್ಫೂರ್ತಿ ಆಗ್ಬೇಕು. ಈ ಮಧ್ಯೆ ಭಾರತದ ಕಿಕ್ ಬಾಕ್ಸಿಂಗ್ ಕೋಚ್ ಆದೆ. ವಿದೇಶಿ ತರಬೇತಿ ಪಡೆದುಕೊಂಡೆ. ಇದುವರೆಗೂ 500ಕ್ಕೂ ಹೆಚ್ಚು ಕುರುಡು ಮಹಿಳೆಯರಿಗೆ ಆತ್ಮರಕ್ಷಣೆಯ ತರಬೇತಿ ನೀಡಿದ್ದೇನೆ'' ಎಂದು ಗಿರೀಶ್ ತಮ್ಮ ಯಶೋಗಾಥೆ ಹಂಚಿಕೊಂಡರು.

    English summary
    National kickboxer girish was participated in weekend with ramesh 4 final. he told his Success story in this Show.
    Thursday, July 18, 2019, 13:26
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X