For Quick Alerts
  ALLOW NOTIFICATIONS  
  For Daily Alerts

  ಖ್ಯಾತ ಸಿನಿ ಜರ್ನಲಿಸ್ಟ್ ರಾಜೀವ್‌ ಮಸಂದ್‌ಗೆ ಕೊರೊನಾ; ಆರೋಗ್ಯ ಸ್ಥಿತಿ ಗಂಭೀರ

  |

  ಖ್ಯಾತ ಸಿನಿಮಾ ಪತ್ರಕರ್ತ ಮತ್ತು ವಿಮರ್ಶಕ ರಾಜೀವ್ ಮಸಂದ್ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ರಾಜೀವ್ ಮಸಂದ್ ಅವರಿಗೆ ಕೊರೊನಾ ಸೋಂಕು ತಗುಲಿದ್ದು, ಮುಂಬೈನ ಕೋಕಿಲಾಬೆನ್ ಧೀರುಭಾಯ್ ಅಂಬಾನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

  ಸಾವು ಬದುಕಿನ ನಡುವೆ ಹೋರಾಡುತ್ತಿರುವ ರಾಜೀವ್ ಶೀಘ್ರ ಚೇತರಿಸಿಕೊಳ್ಳಲಿ ಎಂದು ಸಿನಿ ಗಣ್ಯರು ಹಾರೈಸುತ್ತಿದ್ದಾರೆ. ಸದ್ಯ ವೆಂಟಿಲೇಟರ್ ಮೂಲಕ ಉಸಿರಾಡುತ್ತಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

  ಆಕ್ಸಿಜನ್ ಖರೀದಿಗೆ ನೆಚ್ಚಿನ ಬೈಕ್ ಮಾರಾಟಕ್ಕಿಟ್ಟ ನಟ ಹರ್ಷವರ್ಧನ್ ರಾಣೆ

  ಅನೇಕ ವರ್ಷಗಳಿಂದ ಸಿನಿಮಾ ಪತ್ರಕರ್ತರಾಗಿ ಕೆಲಸ ಮಾಡುತ್ತಿರುವ ರಾಜೀವ್ ಮಸಂದ್ ಸಾಕಷ್ಟು ಸಿನಿಮಾಗಳ ವಿಮರ್ಶೆ ಮಾಡಿದ್ದಾರೆ. ಜೊತೆಗೆ ಭಾರತೀಯ ಸಿನಿಮಾರಂಗದ ಖ್ಯಾತ ಕಲಾವಿದರ ಸಂದರ್ಶನ ಮಾಡಿದ್ದಾರೆ. ಬಾಲಿವುಡ್ ಮಾತ್ರವಲ್ಲದೆ, ತೆಲುಗು, ತಮಿಳು ಸೇರಿದಂತೆ ಬೇರೆ ಬೇರೆ ಭಾಷೆಯ ಪ್ರಮುಖ ನಟರ ಸಂದರ್ಶನ ಮಾಡಿದ್ದಾರೆ.

  ರಾಜೀವ್ ಮಸಂದ್ ಬೇಗ ಗುಣಮುಖರಾಗಲಿ ಎಂದು ಸುನಿಲ್ ಶೆಟ್ಟಿ, ರಿಚಾ ಚಡ್ಡಾ, ರಾಹುಲ್ ದೇವ್ ಸೇರಿದಂತೆ ಅನೇಕ ಗಣ್ಯರು ಹಾರೈಸಿದ್ದಾರೆ.

  ಚಾಮರಾಜಪೇಟೆಯ ಸ್ಮಶಾನದ ಭೀಕರ ದೃಶ್ಯವನ್ನು ತೋರಿಸಿದ ಜಿಮ್ ರವಿ | Filmibeat Kannada

  ದೇಶದಲ್ಲಿ ಕೊರೊನಾ ಭೀಕರತೆಗೆ ಸಾವಿರಾರು ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಅನೇಕ ಗಣ್ಯವ್ಯಕ್ತಿಗಳು ಸಹ ಕೊರೊನಾಗೆ ಬಲಿಯಾಗಿದ್ದಾರೆ. ಇತ್ತೀಚಿಗಷ್ಟೆ ಖ್ಯಾತ ಪತ್ರಕರ್ತ ರೋಹಿತ್ ಸರ್ದಾರ ಕೊರೊನಾಗೆ ಬಲಿಯಾಗಿದ್ದಾರೆ.

  English summary
  Film Journalist Rajeev Masand in critical condition after corona positive.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X