₹20 ಕೋಟಿ ಕೊಟ್ಟರೂ ನಾನು ಬಿಗ್ ಬಾಸ್ ಮನೆಗೆ ಹೋಗುವುದಿಲ್ಲ ಎಂದ ಖ್ಯಾತ ನಟ..!
ಬಿಗ್ ಬಾಸ್ ಅಂದರೆ ಎಲ್ಲರ ಕಣ್ಣು ಅರಳುತ್ತೆ.. ಕಿವಿ ನಿಮಿರುತ್ತೆ. ಈ ವರ್ಷ ತಮ್ಮ ಇಷ್ಟದ ತಾರೆಯರು ಬಿಗ್ ಬಾಸ್ ಮನೆಗೆ ಬರಬಹುದಾ ಎನ್ನುವ ಪ್ರಶ್ನೆ ಕಾಡಲು ಶುರುವಾಗುತ್ತೆ. ಇದಕ್ಕೆ ಪೂರಕವಾಗಿ ಬಿಗ್ ಬಾಸ್ ಆರಂಭವಾಗುವ ಒಂದೆರಡು ತಿಂಗಳ ಮುಂಚೆಯೇ ಕೆಲವರ ಹೆಸರುಗಳು ಚಿತ್ರಸಂತೆಯಲ್ಲಿ ಕೇಳಿ ಬರಲು ಶುರುವಾಗುತ್ತವೆ. ಸಹಜವಾಗಿ ಈ ಅಂತೆ-ಕಂತೆಗಳನ್ನು ಕೇಳಿ ಹಲವು ಧಾರಾವಾಹಿ ಪ್ರೇಕ್ಷಕರು ಸಂಭ್ರಮ ಪಡ್ತಾರೆ.
ತಮ್ಮ ಇಷ್ಟದ ಸೆಲೆಬ್ರೆಟಿಯ ಬದುಕನ್ನು ಹತ್ತಿರದಿಂದ ನೋಡುವ ಅವಕಾಶ ನಮ್ಮದಾಯ್ತು ಎಂದುಕೊಳ್ಳುತ್ತಾರೆ. ಆದರೆ.. ಹೀಗೆ ಸದ್ದು ಮಾಡುವ ಸುದ್ದಿಯೆಲ್ಲಾ ನಿಜಾ ಆಗಿರುವುದಿಲ್ಲ. ಹಣದಾಸೆಗೆ ಎಲ್ಲರೂ ಬಿಗ್ ಬಾಸ್ ಮನೆಗೆ ಬರುವುದು ಇಲ್ಲ. ಉದಾಹರಣೆಗೆ ರಾಮ್ ಕಪೂರ್.

ಹೌದು.. ರಾಮ್ ಕಪೂರ್.. ಹಿಂದಿ ಕಿರುತೆರೆಯ ಖ್ಯಾತ ಹೆಸರು. ಕಳೆದ ಎರಡೂವರೆ ದಶಕಗಳಿಂದ ಹಿಂದಿ ಕಿರುತೆರೆಯಲ್ಲಿ ಕೆಲಸ ಮಾಡುತ್ತಿರುವ, ಸಮಯ-ಸಂದರ್ಭ ಒದಗಿ ಬಂದಾಗ ಬೆಳ್ಳಿತೆರೆಯಲ್ಲಿ ಕೂಡ ಅದೃಷ್ಟ ಪರೀಕ್ಷೆಯನ್ನು ಮಾಡಿಕೊಂಡ ರಾಮ್ ಕಪೂರ್ ಅವರನ್ನು ಇವತ್ತು ಅನೇಕ ಜನ ಗುರುತಿಸುವುದು ''ಬಡೇ ಅಚ್ಛೇ ಲಗ್ತೇ ಹೈ'' ಧಾರಾವಾಹಿಯ ಮೂಲಕವೇ.
ಇಂಥಾ ರಾಮ್ ಕಪೂರ್ ಈ ಬಾರಿಯ ಬಿಗ್ ಬಾಸ್ ಮನೆಗೆ ಹೋಗಲಿದ್ದಾರೆ ಎನ್ನುವ ಸುದ್ದಿ ಕಳೆದ ಕೆಲ ದಿನಗಳಿಂದ ಕೇಳಿ ಬರುತ್ತಿತ್ತು. ರಾಮ್ ಕಪೂರ್ ಅವರನ್ನು ಬಿಗ್ ಬಾಸ್ ಮನೆಯಲ್ಲಿ ನೋಡಲು ಒಂದು ವರ್ಗ ಕಾತುರದಿಂದ ಕಾಯುತ್ತಲಿತ್ತು. ಆದರೆ.. ಈ ನಿರೀಕ್ಷೆಗಳಿಗ ಹುಸಿಯಾಗಿವೆ. ಯಾಕೆಂದರೆ.. ರಾಮ್ ಕಪೂರ್ ಖುದ್ದು ನಾನು ಬಿಗ್ ಬಾಸ್ ಮನೆಗೆ ಹೋಗುವುದಿಲ್ಲ ಎಂದು ಹೇಳಿದ್ದಾರೆ. 20 ಕೋಟಿಯ ಆಮಿಷವನ್ನೊಡಿದರು ಕೂಡ ನಾನು ಕ್ಯಾರೇ ಎನ್ನಲ್ಲ ಎಂದು ಹೇಳಿದ್ದಾರೆ.

ಹೌದು.. ನಿಮ್ಮ ''ಫಿಲ್ಮಿ ಬೀಟ್''ಗೆ ನೀಡಿರುವ ಎಕ್ಸ್ ಕ್ಲೂಸಿವ್ ಸಂದರ್ಶನದಲ್ಲಿ ನಮ್ಮ ರಿಪೋರ್ಟರ್ ''ಕಿನ್ನರಿ ಸಿಂಗ್'' ಜೊತೆ ಮಾತನಾಡಿರುವ ರಾಮ್ ಕಪೂರ್ ನನಗೆ ಅವರು ₹20 ಕೋಟಿ ಸಂಭಾವನೆಯನ್ನು ನೀಡಿದರು ಕೂಡ ನಾನು ಆ ಮನೆಗೆ ಹೋಗುವುದಿಲ್ಲ ಎಂದು ಹೇಳಿದ್ದಾರೆ. ಈ ಕುರಿತು ಮಾತನಾಡಿರುವ ರಾಮ್ ಕಪೂರ್ ಬಿಗ್ ಬಾಸ್ ಕಾರ್ಯಕ್ರಮ ತುಂಬಾನೇ ಒಳ್ಳೆಯ ಕಾರ್ಯಕ್ರಮ ಆದರೆ .. ನನಗೆ ಆ ಕಾರ್ಯಕ್ರಮ ಸೂಕ್ತವಲ್ಲ ಎಂದು ಹೇಳಿದ್ದಾರೆ.
ನಾನು ನನ್ನನ್ನೂ ಸದಾ ಕಾಲ ಆಕ್ಟರ್ ಆಗಿ ನೋಡಲು ಬಯಸುತ್ತೇನೆ ಎಂದು ಹೇಳಿರುವ ರಾಮ್ ಕಪೂರ್, ಬಿಗ್ ಬಾಸ್ ಮನೆಯಲ್ಲಿ.. ನಮ್ಮ ಪ್ರತಿಭೆಯ ಪ್ರದರ್ಶನಕ್ಕೆ ಅವಕಾಶ ಇರುವುದಿಲ್ಲ.. ಎಲ್ಲಕ್ಕಿಂತ ಹೆಚ್ಚಾಗಿ ನಾನು ನನ್ನ ಖಾಸಗಿ ಬದುಕನ್ನು ತುಂಬಾನೇ ಖಾಸಗಿಯಾಗಿಯೇ ಇಡಲು ಬಯಸುತ್ತೇನೆ ಎಂದಿರುವ ರಾಮ್ ಕಪೂರ್, ಬಿಗ್ ಬಾಸ್ ಮನೆಗೆ ಹೋದರೆ ಜನ ನಮ್ಮನ್ನು ಬಹುಬೇಗ ಮರೆತು ಹೋಗುತ್ತಾರೆ ಹೀಗಾಗಿ ಆ ಮನೆಗೆ ಹೋಗದೇ ನಮ್ಮ ಮನೆಯಲ್ಲಿ ಇರುವುದೇ ಉತ್ತಮ ಎಂದು ಕೂಡ ರಾಮ್ ಕಪೂರ್ ಹೇಳಿದ್ದಾರೆ. ನಾನು ಆ ಮನೆಗೆ ಹೋದರೆ ಬಿಗ್ ಬಾಸ್ ಇತಿಹಾಸದಲ್ಲಿಯೇ ಅತ್ಯಂತ ಕೆಟ್ಟ ಸ್ಫರ್ಧಿ ಎನ್ನುವ ಕುಖ್ಯಾತಿಗೆ ಕೂಡ ನಾನು ಪಾತ್ರವಾಗುತ್ತೇನೆ ಎಂದು ರಾಮ್ ಕಪೂರ್ ಹೇಳಿದ್ಧಾರೆ.
ಇನ್ನುಳಿದಂತೆ ಸದ್ಯ ಪ್ರತಿ ಬಾರಿ ಎಲ್ಲ ಭಾಷೆಯಲ್ಲಿ ಬಿಗ್ ಬಾಸ್ ಕಾರ್ಯಕ್ರಮ ಶುರುವಾಗಿ ಒಂದೆರಡು ವಾರದ ನಂತರ ಶುರುವಾಗುತ್ತಿದ್ದ ಹಿಂದಿಯ ಬಿಗ್ ಬಾಸ್ ಈ ಬಾರಿ ಬೇರೆ ಎಲ್ಲ ಭಾಷೆಗಳಿಗಿಂತ ಮೊದಲು ಶುರುವಾಗಲಿದೆ ಎನ್ನುವ ಮಾತು ಕೇಳಿ ಬರುತ್ತಿದೆ. ಈ ಬಾರಿ ಬಿಗ್ ಬಾಸ್ ಆಗಸ್ಟ್ 3ರಿಂದ ಶುರುವಾಗಲಿದೆ ಎಂದು ಹೇಳಲಾಗುತ್ತಿದೆ.


Click it and Unblock the Notifications











