ಚೈತ್ರಾ ಕುಂದಾಪುರ, ಧರ್ಮ ಕೀರ್ತಿರಾಜ್, ಐಶ್ವರ್ಯ ಸಿಂಧೋಗಿ ; ಇಲ್ಲಿದೆ ಬಿಗ್ ಬಾಸ್ 11ನ ಸ್ಫರ್ಧಿಗಳ ಲಿಸ್ಟ್ ..!

ಮತ್ತೊಬ್ಬರ ಖಾಸಗೀ ಬದುಕಿನ ಮೇಲಿರೋ ಮನುಷ್ಯ ಸಹಜ ಕ್ಯೂರಿಯಾಸಿಟಿಯನ್ನೇ ಬಂಡವಾಳ ಮಾಡಿಕೊಂಡ ಬಿಗ್ ಬಾಸ್ ಕಾರ್ಯಕ್ರಮವನ್ನ ಜನ ಬೈದುಕೊಂಡೂ ನೋಡುತ್ತಾರೆ. ನೋಡುತ್ತಲೇ ಬೈಯುತ್ತಾರೆ. ಇಂಥಾ ಕಾರ್ಯಕ್ರಮ ಈಗ ಕನ್ನಡದಲ್ಲಿ ಮತ್ತೊಮ್ಮೆ ಶುರುವಾಗುತ್ತಿದೆ. ಈ ಹಿನ್ನೆಲೆ ಸಹಜವಾಗಿ ಈ ಕಾರ್ಯಕ್ರಮದಲ್ಲಿ ಯಾರೆಲ್ಲ ಭಾಗಿಯಾಬಹುದು ಎನ್ನುವ ಪ್ರಶ್ನೆ ಅನೇಕರನ್ನು ಕಾಡುತ್ತಿದೆ. ಇದಕ್ಕೆ ಉತ್ತರ ಸಿಗಲು ಇನ್ನೂ ಕೆಲವೇ ಕೆಲ ಘಂಟೆ ಇದೆಯಾದರೂ ನಿಮ್ಮ ಫಿಲ್ಮಿ ಬೀಟ್ ಕನ್ನಡ ನಿಮಗೋಸ್ಕರ ಎಕ್ಸ್‌ಕ್ಲೂಸಿವ್ ಆಗಿ ಈ ಬಾರಿ ಮನೆಗೆ ತೆರಳಲಿರುವ ಸದ್ಯಸರು ಯಾರ್ಯಾರು ಎನ್ನುವ ಮಾಹಿತಿಯನ್ನು ಹೆಕ್ಕಿ ತಂದಿದೆ.

ಹೌದು, ಈ ಬಾರಿ ಬಿಗ್ ಬಾಸ್ ಮನೆ ಪ್ರವೇಶ ಮಾಡಲಿರುವವರ ಲಿಸ್ಟ್ ನಿಮ್ಮ ಫಿಲ್ಮಿ ಬೀಟ್ ಕನ್ನಡ ಕೈ ಸೇರಿದೆ. ಆ ಪ್ರಕಾರ ನೋಡುವುದಾದರೆ ಕನ್ನಡತಿ ಧಾರಾವಾಹಿ ಮೂಲಕ ಕನ್ನಡಿಗರ ಹೃದಯ ಗೆದ್ದ ಕಿರಣ್ ರಾಜ್ ಈ ಬಾರಿ ಬಿಗ್ ಬಾಸ್ ಮನೆಗೆ ಹೋಗುವುದು ಬಹುತೇಕ ಅನುಮಾನ. ಈ ವಿಚಾರವನ್ನು ಖುದ್ದು ಕಿರಣ್ ರಾಜ್ ಹೇಳಿದ್ದಾರೆ ಕೂಡ. ಆದರೆ.. ಕಿರಣ್ ರಾಜ್ ಅವರನ್ನು ಹೊರತು ಪಡಿಸಿದರೆ ಈ ಬಾರಿ ಕಿರುತೆರೆ ಮತ್ತು ಹಿರಿತೆರೆ ಎರಡರಲ್ಲಿ ತಮ್ಮ ಛಾಪು ಮೂಡಿಸಿರುವ ಐಶ್ವರ್ಯ ಸಿಂಧೋಗಿ ಬಿಗ್ ಬಾಸ್ ಮನೆಯನ್ನು ಪ್ರವೇಶ ಮಾಡಲಿದ್ದಾರೆ. ಇದು ನೂರಕ್ಕೆ ನೂರು ಸತ್ಯ.

Filmibeat Kannada Exclusive Confirmed contestants for Bigg Boss Kannada Season 11

ಐಶ್ವರ್ಯ ಸಿಂಧೋಗಿ ಅವರನ್ನು ಹೊರತು ಪಡಿಸಿದರೆ ಈ ಬಾರಿ ಬಿಗ್ ಬಾಸ್ ಮನೆಗೆ ಧರ್ಮ ಕೀರ್ತಿರಾಜ್ ಕೂಡಾ ಬರಲಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಚಾಕ್ಲೇಟ್ ಹೀರೋ ಆಗಿ ನೆಲೆಯೂರುವ ಎಲ್ಲ ಪ್ರಯತ್ನ ಮಾಡಿದ ಧರ್ಮ ಕೀರ್ತಿರಾಜ್ ಬಿಗ್ ಬಾಸ್ ಕಾರ್ಯಕ್ರಮದ ಮೂಲಕ ನಿಮ್ಮ ಮನೆ ಮತ್ತು ಮನ ತಲುಪುವ ಪ್ರಾಮಾಣಿಕ ಪ್ರಯತ್ನವನ್ನು ಮಾಡಲಿದ್ದಾರೆ. ಐಶ್ವರ್ಯ ಸಿಂಧೋಗಿ ಮತ್ತು ಧರ್ಮ ಕೀರ್ತಿರಾಜ್ ಅವರನ್ನು ಹೊರತು ಪಡಿಸಿದರೆ ಹುಲಿ ಕಾರ್ತಿಕ್ ಕೂಡ ನಿಮ್ಮೆದುರು ಬಿಗ್ ಬಾಸ್ ಮೂಲಕ ಮತ್ತೊಮ್ಮೆ ಬರಲಿದ್ದಾರೆ. ಗಿಚ್ಚಿ ಗಿಲಿ ಗಿಲಿ ಸೀಸನ್ 3 ಯಲ್ಲಿ ವಿಜಯಶಾಲಿಯಾಗಿ ಹೊರಹೊಮ್ಮಿದ ಹುಲಿ ಕಾರ್ತಿಕ್ ಈ ಮೂಲಕ ಮತ್ತೊಮ್ಮೆ ತಮ್ಮ ಅದೃಷ್ಟವನ್ನು ಪರೀಕ್ಷೆ ಮಾಡಿಕೊಳ್ಳುತ್ತಿದ್ದಾರೆ.

ಈ ಮೂವರನ್ನು ಹೊರತು ಪಡಿಸಿದರೆ ಈ ಬಾರಿ ಬಿಗ್ ಬಾಸ್ ಮನೆಗೆ ಅನುಷಾ ರೈ ಕೂಡ ಬರುತ್ತಿದ್ದಾರೆ. ಮಹಾನುಭಾವರು, ಗೋಸಿ ಗ್ಯಾಂಗ್, ಬಿಎಂಡಬ್ಲೂ ಚಿತ್ರಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ನಾಯಕಿಯಾಗಿ ಮಿಂಚುವ ಪ್ರಯತ್ನ ಮಾಡಿದ ಅನುಷಾ ರೈ ಮೊನ್ನೆ ಮೊನ್ನೆಯೆಲ್ಲ ಜೈಲು ಪಾಲಾದ ದರ್ಶನ್ ಪರ ಮಾತನಾಡಿ ಸುದ್ದಿಯಾಗಿದ್ದರು ಅನ್ನುವುದು ನಿಮ್ಮ ಗಮನಕ್ಕಿರಲಿ.

ಇನ್ನೂ ಕರಾವಳಿಯ ಫೈರ್ ಬ್ರ್ಯಾಂಡ್, ಪ್ರಖರ ನಿಖರ ಭಾಷಣಗಾರ್ತಿ ಎಂದೆಲ್ಲ ಹೆಸರು ಮಾಡಿರುವ ವಂಚನೆ ಪ್ರಕರಣದಲ್ಲಿ ಜೈಲು ಕೂಡ ಸೇರಿದ್ದ ಹಿಂದೂ ಕಾರ್ಯಕರ್ತೆ ಚೈತ್ರಾ ಕುಂದಾಪುರ ಕೂಡ ಬಿಗ್ ಬಾಸ್ ಮನೆಗೆ ಬರಲಿದ್ದಾರೆ. ಈ ಮೂಲಕ ನಿಮ್ಮೆಲ್ಲರ ಹೃದಯವನ್ನು ಗೆಲ್ಲುವ ಪ್ರಯತ್ನವನ್ನು ಮಾಡಲಿದ್ದಾರೆ. ಇವರನ್ನು ಗೆಲ್ಲಿಸುವುದು ಬಿಡುವುದು ನಿಮಗೆ ಬಿಟ್ಟಿದ್ದು.

ಇವರೆಲ್ಲರನ್ನೂ ಹೊರತು ಪಡಿಸಿದರೆ ಈ ಬಾರಿಯ ಬಿಗ್ ಬಾಸ್ ನಲ್ಲಿ ಯೂಟ್ಯೂಬರ್ ಧನರಾಜ್, ಶಶಿರ್ ಕಾಣಿಸಿಕೊಳ್ಳುವುದು ನೂರಕ್ಕೆ ನೂರು ಸತ್ಯ ಅನ್ನುವುದು ಫಿಲ್ಮಿಬೀಟ್ ಕನ್ನಡಕ್ಕೆ ಸಿಕ್ಕಿರುವ ಮಾಹಿತಿ. ಉಳಿದಂತೆ ಇನ್ನೂ ಈ ಕಾರ್ಯಕ್ರಮದಲ್ಲಿ ಯಾರೆಲ್ಲ ಭಾಗಿಯಾಗಲಿದ್ದಾರೆ ಅನ್ನುವುದಕ್ಕೆ ಉತ್ತರ ಇನ್ನೇನು ಕೆಲವೇ ಘಂಟೆಗಳಲ್ಲಿ ಸಿಗಲಿದೆ. ಅಲ್ಲಿಯವರೆಗೆ Just Wait.

More from Filmibeat

Read more about: bigg boss biggboss sudeep
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X