»   » ವೀಕ್ಷಕರೇ ಹೇಳಿದ್ದು.! ನೇಹಾ ಗೌಡ ಔಟ್ ಆಗ್ಬೇಕಿತ್ತು.!

ವೀಕ್ಷಕರೇ ಹೇಳಿದ್ದು.! ನೇಹಾ ಗೌಡ ಔಟ್ ಆಗ್ಬೇಕಿತ್ತು.!

Posted By:
Subscribe to Filmibeat Kannada

ಯಾರ್ ಏನೇ ಹೇಳಿದ್ರೂ, ಚಂದನ್ ಕಾಮೆಂಟ್ ಮಾಡಿದ ಹಾಗೆ ನೇಹಾ ಗೌಡ ಲಕ್ಕಿ ಬಿಡಿ. ಎಲಿಮಿನೇಷನ್ ಗೆ ನಾಮಿನೇಟ್ ಆದ ಮೊದಲ ಬಾರಿಯೇ 'ಬಿಗ್ ಬಾಸ್-3' ಕಾರ್ಯಕ್ರಮದಿಂದ ನೇಹಾ ಗೌಡ ಹೊರನಡೆಯಬೇಕಿತ್ತು.

ಆದ್ರೆ, ಹುಚ್ಚ ವೆಂಕಟ್ ಹುಚ್ಚಾಟವಾಡಿ ಕಿಕ್ ಔಟ್ ಆದ ಪರಿಣಾಮ ನೇಹಾ ಗೌಡ ಸೇಫ್ ಆದರು. ನಂತರ ಎರಡೆರಡು ಬಾರಿ ನಾಮಿನೇಟ್ ಆದರೂ ಗಾಯಕ ರವಿ ಮುರೂರು ಮತ್ತು ನಟಿ ಪೂಜಾ ಗಾಂಧಿ 'ಬಿಗ್ ಬಾಸ್' ಮನೆ ಗೇಟ್ ಕಡೆ ಮುಖ ಮಾಡಿದರೇ ಹೊರತೂ, ನೇಹಾ ಗೌಡ ಔಟ್ ಆಗ್ಲಿಲ್ಲ.

Filmibeat Kannada Poll; Viewers wanted Neha Gowda to get eliminated

ಕಿರುತೆರೆ ವೀಕ್ಷಕರಿಗೆ ಪರಿಚಯವಿಲ್ಲದ ನೇಹಾ ಗೌಡ ಈ ವಾರ ಔಟ್ ಆಗ್ತಾರೆ ಅಂತ್ಲೇ ಎಲ್ಲರೂ ಭಾವಿಸಿದ್ದರು. ನಿಮ್ಮ 'ಫಿಲ್ಮಿಬೀಟ್ ಕನ್ನಡ' ಕಂಡಕ್ಟ್ ಮಾಡಿದ POLL ನಲ್ಲೂ ಜನರ ಅಭಿಪ್ರಾಯ ಇದೇ ಆಗಿತ್ತು.!

ನೇಹಾ ಗೌಡ ಹೊರ ಹೋಗುತ್ತಾರೆ ಅಂತ 53% ಮಂದಿ ಹೇಳಿದ್ರೆ, ರೆಹಮಾನ್ ಔಟ್ ಆಗ್ತಾರೆ 20% ಜನ ಅಭಿಪ್ರಾಯ ಪಟ್ಟಿದ್ದರು. ಕಿಟ್ಟಿ ಪರ 10% ಮತ ಚಲಾವಣೆ ಆಗಿದ್ದರೆ, ಪೂಜಾ ಗಾಂಧಿಗೆ 17% ಮಂದಿ ವೋಟ್ ಮಾಡಿದ್ದರು.

Filmibeat Kannada Poll; Viewers wanted Neha Gowda to get eliminated

ಹೀಗಿದ್ದರೂ, ಔಟ್ ಆಗಿದ್ದು ಮಾತ್ರ ಪೂಜಾ ಗಾಂಧಿ. ಈಗ ಅದೇ ಪೂಜಾ ಸೀಕ್ರೆಟ್ ರೂಮ್ ಗೆ ಲಗ್ಗೆ ಇಟ್ಟು ಅಲ್ಲಿಂದ ನೇರವಾಗಿ 'ಬಿಗ್ ಬಾಸ್' ಮನೆಗೆ ರೀಎಂಟ್ರಿ ಕೊಡ್ತಾರೆ. ['ಬಿಗ್ ಬಾಸ್' ಟ್ವಿಸ್ಟ್ ; ಸೀಕ್ರೆಟ್ ರೂಮ್ ನಲ್ಲಿ ನಟಿ ಪೂಜಾ ಗಾಂಧಿ.!]

ಈಗ ಪ್ರಶ್ನೆ ಅದಲ್ಲ. ಇವತ್ತಿನ ನಾಮಿನೇಷನ್ ಪ್ರಕ್ರಿಯೆಯಲ್ಲಿ ಯಾರ ಹೆಸರು ಖಂಡಿತ ಇರುತ್ತೆ? ಅನ್ನೋದು ಇವತ್ತಿನ POLL.

ಆಯ್ಕೆಗಳು : ನೇಹಾ ಗೌಡ, ರೆಹಮಾನ್, ಶ್ರುತಿ, ಚಂದನ್ (ಇಲ್ಲಿ ವೋಟ್ ಮಾಡಿ)

English summary
53% of people had voted that Neha Gowda will get eliminated from Bigg Boss Kannada 3 reality show in the poll conducted by Filmibeat Kannada.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada