»   » ವೀಕ್ಷಕರು ಹೇಳಿದ್ದು.! 'ಬಿಗ್ ಬಾಸ್' ಮನೆಯಲ್ಲಿ ಮಾಸ್ಟರ್ ಮೈಂಡ್ ಇವರೇ.!

ವೀಕ್ಷಕರು ಹೇಳಿದ್ದು.! 'ಬಿಗ್ ಬಾಸ್' ಮನೆಯಲ್ಲಿ ಮಾಸ್ಟರ್ ಮೈಂಡ್ ಇವರೇ.!

Posted By:
Subscribe to Filmibeat Kannada

ಬಹಿರಂಗವಾಗಿ ನಾಮಿನೇಷನ್ ಕುರಿತು ಚರ್ಚೆ ಮಾಡುವ ಹಾಗಿಲ್ಲ. 'ಬಿಗ್ ಬಾಸ್' ಮನೆಯಲ್ಲಿ ಪ್ಲಾನಿಂಗ್-ಪ್ಲಾಟಿಂಗ್ ಎಲ್ಲಾ ಬ್ಯಾನ್.!

ಹೀಗಿದ್ದರೂ, 'ಬಿಗ್ ಬಾಸ್-3' ಕಾರ್ಯಕ್ರಮದಲ್ಲಿ ಮಾಸ್ಟರ್ ಮೈಂಡ್ ಇದ್ದಾರೆ ಅನ್ನೋದು ವೀಕ್ಷಕರ ಅಭಿಪ್ರಾಯ.

'ಬಿಗ್ ಬಾಸ್-3' ಕಾರ್ಯಕ್ರಮದಲ್ಲಿ ಇದುವರೆಗೂ ಎಲಿಮಿನೇಷನ್ ಗೆ ನಾಮಿನೇಟ್ ಆಗದ ಮಾಸ್ಟರ್ ಆನಂದ್, ನಟಿ ಶ್ರುತಿ, ಕ್ರಿಕೆಟರ್ ಅಯ್ಯಪ್ಪ ಮತ್ತು ಈ ವಾರ ಮೊದಲ ಬಾರಿಗೆ ನೇರವಾಗಿ ನಾಮಿನೇಟ್ ಆಗಿರುವ ರೆಹಮಾನ್ 'ಬಿಗ್ ಬಾಸ್' ಮನೆಯಲ್ಲಿ ಇತರರನ್ನ ಟಾರ್ಗೆಟ್ ಮಾಡುವ ಮೂಲಕ ಮೈಂಡ್ ಗೇಮ್ ಆಡುತ್ತಿದ್ದಾರೆ ಅನ್ನುವ ಅಭಿಪ್ರಾಯ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗಿತ್ತು.

Filmibeat Kannada Poll; Who is Master Mind in Bigg Boss Kannada 3?

ಇದೇ ವಿಚಾರವಾಗಿ ನಿಮ್ಮ 'ಫಿಲ್ಮಿಬೀಟ್ ಕನ್ನಡ' ಕೂಡ ನಿನ್ನೆ ಟ್ವಿಟ್ಟರ್ ನಲ್ಲಿ ''ಬಿಗ್ ಬಾಸ್' ಕಾರ್ಯಕ್ರಮದಲ್ಲಿ ಮಾಸ್ಟರ್ ಮೈಂಡ್ ಯಾರು?'' ಅನ್ನುವ POLL ಕಂಡಕ್ಟ್ ಮಾಡಿತ್ತು.[ವೀಕ್ಷಕರೇ ಹೇಳಿದ್ದು.! 'ಬಿಗ್ ಬಾಸ್' ಮನೆಯಲ್ಲಿ 'ಡ್ರಾಮಾ ಕ್ವೀನ್' ಇವರೇ.!]

ಮಾಸ್ಟರ್ ಅನಂದ್, ಶ್ರುತಿ, ರೆಹಮಾನ್ ಮತ್ತು ಅಯ್ಯಪ್ಪ ಪೈಕಿ ಒಬ್ಬರಿಗೆ ವೀಕ್ಷಕರು ವೋಟ್ ಹಾಕ್ಬೇಕಿತ್ತು. ಸಿಕ್ಕ ವೋಟ್ ಗಳ ಪ್ರಕಾರ, ಮಾಸ್ಟರ್ ಆನಂದ್ ಮತ್ತು ಅಯ್ಯಪ್ಪ 'ಮಾಸ್ಟರ್ ಮೈಂಡ್' ಪಟ್ಟ ಪಡೆದಿದ್ದಾರೆ. ಇಬ್ಬರಿಗೂ ತಲಾ 31% ವೋಟ್ಸ್ ಸಿಕ್ಕಿದೆ. ರೆಹಮಾನ್ ಗೆ 18% ಮತಗಳು ಸಿಕ್ಕಿದ್ರೆ, ನಟಿ ಶ್ರುತಿ ಪರ 20% ಮತ ಚಲಾವಣೆ ಆಗಿದೆ.

ಇವತ್ತಿನ POLL ಹೀಗಿದೆ...''ಅತಿ ಹೆಚ್ಚು TRP ಹೊಂದಿರುವ ಈ 4 ಕಾರ್ಯಕ್ರಮಗಳ ಪೈಕಿ ನಿಮ್ಮ ಆಯ್ಕೆ ಯಾವುದು?''

ಆಯ್ಕೆಗಳು - ಪುಟ್ಟಗೌರಿ ಮದುವೆ, ಲಕ್ಷ್ಮಿ ಬಾರಮ್ಮ, ಅಕ್ಕ, ಬಿಗ್ ಬಾಸ್ ಕನ್ನಡ-3 (ಇಲ್ಲಿ ವೋಟ್ ಮಾಡಿ)

English summary
31% of people have voted Master Anand and Cricketer Aiyappa as 'Master Mind' in Bigg Boss Kannada 3 reality show in the poll conducted by Filmibeat Kannada.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada