'ಬಿಗ್ ಬಾಸ್'ಗೆ ಕುರಿ ಪ್ರತಾಪ್ ಹೋಗಲೇಬೇಕು, ಇದು ಓದುಗರ ಇಚ್ಛೆ.!

Recommended Video

Bigg Boss Kannada Season 6 : ಬಿಗ್ ಬಾಸ್ ಗೆ ಮಜಾ ಟಾಕೀಸ್ ನ ಕುರಿ ಪ್ರತಾಪ್ ಹೋಗ್ಬೇಕು ಅಂತಿದ್ದಾರೆ ಜನ

'ಬಿಗ್ ಬಾಸ್' ಮತ್ತೆ ಟ್ರೆಂಡಿಂಗ್ ನಲ್ಲಿದೆ. ಇನ್ನೂ ಕೆಲವೇ ದಿನಗಳಲ್ಲಿ 'ಬಿಗ್ ಬಾಸ್ ಕನ್ನಡ-6' ಪ್ರಸಾರ ಆಗಲಿದೆ. ಈ ಬಾರಿ 'ಬಿಗ್ ಬಾಸ್' ಮನೆಯೊಳಗೆ ಯಾರೆಲ್ಲಾ ಬಲಗಾಲಿಟ್ಟು ಹೋಗ್ತಾರೆ ಅನ್ನೋದಿನ್ನೂ ಪಕ್ಕಾ ಆಗಿಲ್ಲ. ಆದ್ರೆ, ಸೋಷಿಯಲ್ ಮೀಡಿಯಾದಲ್ಲಿ ಮಾತ್ರ ತರಹೇವಾರಿ ಪಟ್ಟಿಗಳು ಹರಿದಾಡುತ್ತಿವೆ.

'ಬಿಗ್ ಬಾಸ್ ಕನ್ನಡ-6' ಸಂಭಾವ್ಯ ಪಟ್ಟಿಯಲ್ಲಿ ಕುರಿ ಪ್ರತಾಪ್ ಹೆಸರೂ ಸಹ ಇತ್ತು. ಹಾಗ್ನೋಡಿದ್ರೆ, 'ಬಿಗ್ ಬಾಸ್' ಮೊದಲ ಆವೃತ್ತಿಯಿಂದಲೂ ಕುರಿ ಪ್ರತಾಪ್ ಹೆಸರು ಕೇಳಿಬರುತ್ತಲೇ ಇದೆ. ಆದ್ರೆ, ಅದ್ಯಾಕೋ ಇನ್ನೂ ಕುರಿ ಪ್ರತಾಪ್ 'ಬಿಗ್ ಬಾಸ್' ಕದ ತಟ್ಟಲು ಮನಸ್ಸು ಮಾಡಿಲ್ಲ.

ಸದ್ಯ 'ಮಜಾ ಟಾಕೀಸ್' ಮನೆಯಲ್ಲಿ ಭರ್ಜರಿ ಕಾಮಿಡಿಯಿಂದ ಎಲ್ಲರಿಗೂ ಮನರಂಜನೆ ಕೊಡುತ್ತಿರುವ ಕುರಿ ಪ್ರತಾಪ್ 'ಬಿಗ್ ಬಾಸ್' ಮನೆಗೆ ಹೋದರೆ, ಪ್ರತಿ ದಿನ ಕಾರ್ಯಕ್ರಮ ನೋಡಲು ಮಜಾ ಬರುತ್ತೆ.! ಹೀಗಂತ ನಾವ್ ಹೇಳ್ತಿಲ್ಲ. ಬದಲಾಗಿ ನಮ್ಮ ಓದುಗರೇ ಹೇಳ್ತಿದ್ದಾರೆ.! ಅದಕ್ಕೆ ಸಾಕ್ಷಿ ಇಲ್ಲಿದೆ, ನೋಡಿರಿ...

'ಫಿಲ್ಮಿಬೀಟ್ ಕನ್ನಡ'ದಲ್ಲಿ ಪೋಲ್

'ಫಿಲ್ಮಿಬೀಟ್ ಕನ್ನಡ'ದಲ್ಲಿ ಪೋಲ್

''ಕುರಿ ಪ್ರತಾಪ್ 'ಬಿಗ್ ಬಾಸ್' ಮನೆಗೆ ಹೋಗ್ಬೇಕಾ, ಬೇಡವಾ.?'' ಎಂಬ ಪ್ರಶ್ನೆಯನ್ನ ನಿಮ್ಮ ಫಿಲ್ಮಿಬೀಟ್ ಕನ್ನಡ, ಓದುಗರ ಮುಂದೆ ಇಟ್ಟಿತ್ತು. ಈ ಪ್ರಶ್ನೆಗೆ ಬಹುತೇಕ ಓದುಗರು ಸಕಾರಾತ್ಮಕವಾಗಿ ಪ್ರತಿಕ್ರಿಯೆ ಕೊಟ್ಟಿದ್ದಾರೆ.

70% ಓದುಗರಿಗೆ ಕುರಿ ಪ್ರತಾಪ್ ಬೇಕು.!

70% ಓದುಗರಿಗೆ ಕುರಿ ಪ್ರತಾಪ್ ಬೇಕು.!

70.61% ಓದುಗರು ''ಕುರಿ ಪ್ರತಾಪ್ 'ಬಿಗ್ ಬಾಸ್'ಗೆ ಹೋಗಲಿ, ಮಜಾ ಬರುತ್ತೆ'' ಎಂಬ ಆಯ್ಕೆಯನ್ನ ಕ್ಲಿಕ್ ಮಾಡಿದ್ದಾರೆ. ಅಲ್ಲಿಗೆ, ಪೋಲ್ ನಲ್ಲಿ ಪಾಲ್ಗೊಂಡ ಮುಕ್ಕಾಲು ಭಾಗದಷ್ಟು ಮಂದಿ ಈ ಬಾರಿಯ 'ಬಿಗ್ ಬಾಸ್'ನಲ್ಲಿ ಕುರಿ ಪ್ರತಾಪ್ ಇರಬೇಕೆಂದು ಬಯಸುತ್ತಿದ್ದಾರೆ ಅಂತರ್ಥ.

15% ಬೇಡ

15% ಬೇಡ

ಕೇವಲ 15.22% ಓದುಗರು ಮಾತ್ರ ''ಬಿಗ್ ಬಾಸ್'ಗೆ ಕುರಿ ಪ್ರತಾಪ್ ಹೋಗುವುದು ಬೇಡ, ಚೆನ್ನಾಗಿರಲ್ಲ'' ಎಂಬ ಆಯ್ಕೆಯನ್ನ ಕ್ಲಿಕ್ ಮಾಡಿದ್ದಾರೆ.

14% ಓದುಗರಿಗೆ ಆಸಕ್ತಿ ಇಲ್ಲ.!

14% ಓದುಗರಿಗೆ ಆಸಕ್ತಿ ಇಲ್ಲ.!

ಶೇಕಡ 14.16 ಓದುಗರಿಗೆ 'ಬಿಗ್ ಬಾಸ್' ಬಗ್ಗೆ ಆಸಕ್ತಿ ಇಲ್ಲ. ಹೀಗಾಗಿ, 'ಬಿಗ್ ಬಾಸ್' ಮನೆಗೆ ಯಾರೇ ಹೋಗಲಿ, ಬಿಡಲಿ.. ಅವರಿಗೆ ವ್ಯತ್ಯಾಸ ಏನೂ ಆಗಲ್ಲ.

ಕುರಿ ಪ್ರತಾಪ್ ಗೆ ಕರೆ ಹೋಗಿದ್ಯಾ.?

ಕುರಿ ಪ್ರತಾಪ್ ಗೆ ಕರೆ ಹೋಗಿದ್ಯಾ.?

'ಬಿಗ್ ಬಾಸ್'ನಲ್ಲಿ ಸ್ಪರ್ಧಿಸಲು ಕುರಿ ಪ್ರತಾಪ್ ಗೆ ಕಲರ್ಸ್ ವಾಹಿನಿ ಕಡೆಯಿಂದ ಕರೆ ಹೋಗಿದ್ಯಾ.? ಇದರ ಬಗ್ಗೆ ಪಕ್ಕಾ ಮಾಹಿತಿ ಲಭ್ಯವಿಲ್ಲ. 'ಬಿಗ್ ಬಾಸ್' ಮನೆಯೊಳಗೆ ಅಧಿಕೃತವಾಗಿ ಸ್ಪರ್ಧಿಗಳು ಕಾಲಿಡುವವರೆಗೂ ಯಾವುದನ್ನೂ ಹೇಳಲು ಅಸಾಧ್ಯ. ಯಾಕಂದ್ರೆ, ಕೊನೆ ಕ್ಷಣಕ್ಕೆ ಏನು ಬೇಕಾದರೂ ಬದಲಾವಣೆ ಆಗಬಹುದು.

More from Filmibeat

English summary
Filmibeat Kannada readers want Kuri Pratap to take part in Bigg Boss Kannada 6.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X