9 ವರ್ಷಗಳ ದಾಂಪತ್ಯ ಅಂತ್ಯ ; ಡಿವೋಸ್‌ ಪೇಪರ್ ಜೊತೆ ಫ್ಯಾಮಿಲಿ ಕೋರ್ಟ್‌ನಲ್ಲಿ ಕಾಣಿಸಿಕೊಂಡ ಖ್ಯಾತ ನಟಿ

ಬಣ್ಣದ ಪ್ರಪಂಚದಲ್ಲಿ ಬದುಕು ರೂಪಿಸಿಕೊಂಡವರ ಬಹುತೇಕರ ವ್ಯೆಯಕ್ತಿಕ ಜೀವನದಲ್ಲಿ ಪ್ರೀತಿ-ಪ್ರೇಮ-ಪ್ರಣಯ-ಮದುವೆ ಮತ್ತು ವಿಚ್ಛೇದನ ಮಾಮೂಲು. ಇಲ್ಲಿ ಮದುವೆಯಾದ ಆರಂಭದಲ್ಲಿ ಬದುಕು ತುಂಬಾನೇ ಸಂತೋಷಮಯವಾಗಿರುತ್ತೆ. ಆದರೆ ದಾಂಪತ್ಯ ಜೀವನ ನಡೆಸುತ್ತಾ ಒಬ್ಬರನ್ನೊಬ್ಬರು ಹುಚ್ಚರಂತೆ ಪ್ರೀತಿಸುವ ಅನೇಕರು ಆ ನಂತರ ತಮ್ಮ ಸಂಬಂಧಕ್ಕೆ ಗುಡ್ ಬೈ ಹೇಳಿ ಹೊರ ಬರುತ್ತಾರೆ.ಆದರ್ಶ ದಂಪತಿಗಳಂತೆ ಬದುಕುತ್ತೇವೆ ಎಂದು ಹೇಳಿ, ಮದುವೆಯಾದ ಕೆಲವೇ ದಿನ..

ಅಥವಾ ವರ್ಷಗಳಲ್ಲಿ ಅದ್ಯಾವುದೋ ಕ್ಷುಲ್ಲಕ ಕಾರಣಕ್ಕಾಗಿ ಸಂಬಂಧ ಕಡಿದುಕೊಂಡೂ ಬಿಡುತ್ತಾರೆ. ಒಂದೆರಡಲ್ಲ ಹಲವಾರು ವರ್ಷ ಜೊತೆಯಾಗಿ ಒಂದೇ ಮನೆಯಲ್ಲಿ ಕೂಡಿ ಬಾಳಿದರೂ ಕೂಡ ಆ ನಂತರ ಏಕಾಏಕಿ ಡಿವೋರ್ಸ್ ಘೋಷಿಸುತ್ತಾರೆ.

FINAL CHAPTER Hunar Hali amp amp Mayank Gandhi Appear In Court to Officially Begin DIVORCE

ಅದರಲ್ಲಿಯೂ ಕಳೆದ ಎರಡು ಮೂರು ವರ್ಷಗಳಲ್ಲಿ ಚಿತ್ರರಂಗದಲ್ಲಿ ಮದುವೆ ಮತ್ತು ಪ್ರೀತಿಗೆ ಅರ್ಥವೇ ಇಲ್ಲದಂತಾಗಿದೆ. ಅನ್ಯೋನ್ಯತೆಯ ಕೊರತೆಯಿಂದ.. ಚಿಕ್ಕ ಚಿಕ್ಕ ಕಾರಣಗಳಿಂದ ಹಲವರು ಸಂಬಂಧ ಮುರಿದುಕೊಂಡು ಎದ್ದು ಬಂದಿದ್ದಾರೆ. ಈ ಸಾಲಿಗೆ ''ಹುನರ್ ಅಲಿ'' ಕೂಡ ಈಗ ಅಧಿಕೃತವಾಗಿ ಸೇರಿಕೊಂಡಿದ್ದಾರೆ.

ಹೌದು.. ಹುನರ್ ಅಲಿ.. ಹಿಂದಿಯ ಖ್ಯಾತ ಕಿರುತೆರೆ ನಾಯಕಿ. 2007ರಿಂದ ಕಿರುತೆರೆಯಲ್ಲಿ ಸಕ್ರಿಯರಾಗಿರುವ ಹುನರ್ ಅಲಿ ಜಗದ್ವಿಖ್ಯಾತ ''ಕಹಾನಿ ಘರ್ ಘರ್ ಕೀ'' ಧಾರಾವಾಹಿಯಲ್ಲಿ ಆಕ್ಟ್ ಮಾಡಿದ್ದರು. ''ಕೆಹ್ತಾ ಹೈ ದಿಲ್ ಜೀ ಲೇ ಜರಾ''.. ''ಟಿವಿ ಬಿವಿ ಔರ್ ಮೈ''.. ''ಪಟಿಯಾಲಾ ಬೇಬಿಸ್'' .. ''ದಿವಾನಿ''.. ಇವರು ಅಭಿನಯದ ಕೆಲ ಪ್ರಸಿದ್ಧ ಸೀರಿಯಲ್‌ಗಳು.

ಸದ್ಯ ''ವೀರ್‌ ಹನುಮಾನ್‌'' ಧಾರಾವಾಹಿಯಲ್ಲಿ ''ಕೈಕೇಯಿ'' ಪಾತ್ರ ನಿರ್ವಹಿಸುತ್ತಿರುವ ಹುನರ್ ಅಲಿ ಆಗಸ್ಟ್ 28-2016ರಂದು ''ಮಯಾಂಕ್ ಗಾಂಧಿ'' ಅವರನ್ನು ಮದುವೆಯಾಗಿದ್ದರು. ವಿಶೇಷ ಅಂದರೆ ಇವರಿಬ್ಬರದ್ದು ಲವ್ ಮ್ಯಾರೇಜ್ ಅಲ್ಲ ಬದಲಿಗೆ ಅರೆಂಜ್ ಮ್ಯಾರೇಜ್ ಆಗಿತ್ತು.

ಆದರೆ ಈಗ 09 ವರ್ಷದ ನಂತರ ಇಬ್ಬರ ದಾಂಪತ್ಯದಲ್ಲಿ ಬಿರುಕು ಮೂಡಿದೆ. ಸಂಬಂಧ ಸರಿಪಡಿಸಲಾಗದಷ್ಟು ಹಾಳಾಗಿದೆ. ಇದಕ್ಕೆ ಪುರಾವೆ ಎಂಬಂತೆ ಹುನರ್ ಅಲಿ ಮತ್ತು ಮಯಾಂಕ್ ಗಾಂಧಿ ತಮ್ಮ ತಮ್ಮ ವಕೀಲರ ಜೊತೆ ಕೌಟಂಬಿಕ ನ್ಯಾಯಾಲಯದಲ್ಲಿ ಕಾಣಿಸಿಕೊಂಡಿದ್ದಾರೆ. ವಿಚಾರಣೆಗೆ ಹಾಜರಾಗಿದ್ದಾರೆ.

FINAL CHAPTER Hunar Hali amp amp Mayank Gandhi Appear In Court to Officially Begin DIVORCE

ಸದ್ಯ ಹುನರ್ ಅಲಿ ಮತ್ತು ಮಯಾಂಕ್ ಗಾಂಧಿ ಫ್ಯಾಮಿಲಿ ಕೋರ್ಟ್‌ನಲ್ಲಿ ವಿಚ್ಛೇದನಕ್ಕೆ ವಿಚಾರಣೆಗೆ ಹಾಜರಾದ ಸಂದರ್ಭದಲ್ಲಿನ ವಿಡಿಯೋಗಳು ಮತ್ತು ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಇವರ ಅಭಿಮಾನಿಗಳಿಗೆ ಆಘಾತವನ್ನುಂಟು ಮಾಡಿವೆ. ವೈರಲ್ ಆದ ವಿಡಿಯೋದಲ್ಲಿ ವಕೀಲರ ಜೊತೆ ಚರ್ಚೆ ಮಾಡಿ ಹುನರ್ ಅಲಿ ನ್ಯಾಯಾಲಯದ ಒಳಗಡೆ ಹೋಗುವುದನ್ನು ಮತ್ತು ಮಯಾಂಕ್ ಗಾಂಧಿ ಹೊರಗಡೆ ಬರುತ್ತಿರುವುದನ್ನು ಗಮನಿಸಬಹುದು.

ಇನ್ನು ತಮ್ಮ ವಿಚ್ಚೇದನದ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ದಿನಗಳ ಹಿಂದೆಯಷ್ಟೇ ''ಇಂಡಿಯಾ ಫೋರಮ್ಸ್''ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದರು. ಸದ್ಯಕ್ಕೆ ವ್ಯೆಯಕ್ತಿಕ ಜೀವನದ ಕುರಿತು ನಾನು ಹೆಚ್ಚೇನು ಹೇಳಲಾರೆ, ಮಾತನಾಡಲು ನನಗೆ ಮನಸಿಲ್ಲ ಎಂದಿದ್ದರು. ಖಾಸಗಿ ವಿಷಯಗಳನ್ನು ನಾನು ಗೌಪ್ಯವಾಗಿ ಇಡಲು ಬಯಸಿದ್ದೇನೆ ಎಂದು ಹೇಳಿದ್ದ ಹುನರ್ ಅಲಿ ಸದ್ಯ ಡಿವೋರ್ಸ್ ಪ್ರಕ್ರಿಯೆ ನಡೆಯುತ್ತಿದೆ, ಅಷ್ಟು ಮಾತ್ರ ನಾನು ಹೇಳಬಲ್ಲೆ ಎಂದು ಹೇಳಿದ್ದರು. ನಾವು ಇಬ್ಬರು ಪ್ರಬುದ್ಧರು ಗೌರವಯುತವಾಗಿ ದೂರವಾಗಲು ನಿರ್ಧಾರ ಮಾಡಿದ್ದೇವೆ ಎಂದಿದ್ದರು.

ಇನ್ನೂ ಇದಕ್ಕೂ ಮುನ್ನ''E Times''ಗೆ ನೀಡಿದ್ದ ಈ ಸಂದರ್ಶನದಲ್ಲಿ ಹಲವು ವಿಚಾರಗಳ ಕುರಿತು ಮಾತನಾಡಿದ್ದ ಹುನರ್ ಅಲಿ ನಾವು LAT ಮದುವೆ ಅಂದರೆ ''ಲಿವಿಂಗ್ ಅಪಾರ್ಟ್ ಟುಗೆದರ್'' ಎಂದು ಕರೆಯಲ್ಪಡುವ ಮದುವೆಯಲ್ಲಿದ್ದೇವೆ ಎಂದು ಹೇಳಿದ್ದರು. ಮುಂಬೈನಲ್ಲಿ ನನ್ನ ಪಾಡಿಗೆ ನಾನಿದ್ದೇನೆ, ಮಯಾಂಕ್ ಕೆಲಸದ ಪ್ರಯುಕ್ತ ಅಲ್ಲಿ ಇಲ್ಲಿ ಓಡಾಡುತ್ತಿರುತ್ತಾರೆ ಎಂದು ಹೇಳಿದ್ದ ಹುನರ್ ಅಲಿ ಅಗತ್ಯ ಇದ್ದಾಗ, ಅವಶ್ಯಕತೆ ಇದ್ದಾಗ ಮಾತ್ರ ನಾವು ಒಬ್ಬರನ್ನೊಬ್ಬರು ಸಂಪರ್ಕ ಮಾಡುತ್ತೇವೆ ಎಂದು ಹೇಳಿದ್ದರು. ಉಳಿದ ದಿನ ನಮ್ಮ ನಮ್ಮ ಜೀವನ ನಮ್ಮದು ಎಲ್ಲಾ ಮದುವೆಯನ್ನು ಒಂದೇ ಸೂರಿನಡಿ ಅಳೆಯಲು ಸಾಧ್ಯ ಇಲ್ಲ ಎಂದು ಹೇಳಿದ್ದ ಹುನರ್ ಅಲಿ ನಮ್ಮ ನಡುವೆ ಇರುವ ಅನ್ಯೋನ್ಯತೆಯನ್ನು ನಾನು ಸೋಶಿಯಲ್ ಮೀಡಿಯಾದಲ್ಲಿ ಪ್ರದರ್ಶನಕ್ಕಿಡಲಾರೆ ಎಂದು ಕೂಡ ಹೇಳಿದ್ದರು.

ಸದ್ಯ ಹುನರ್ ಅಲಿ ಮತ್ತು ಮಯಾಂಕ್ ಗಾಂಧಿ ಅವರ ದಾಂಪತ್ಯ ಜೀವನ ಮುರಿದು ಬಿದ್ದಿದ್ದು, ಇಬ್ಬರು ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗಿದ್ದಾರೆ. ಶೀಘ್ರದಲ್ಲಿಯೇ ಅಧಿಕೃತವಾಗಿ ದೂರವಾಗಲಿದ್ದಾರೆ.

More from Filmibeat

English summary
The final chapter begins: Hunar Hali and Mayank Gandhi appear in court to officially start their divorce proceedings after nine years of marriage.
Read more about: divorce marriage ಟಿವಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X