'ಶನಿ' ಧಾರಾವಾಹಿಯಿಂದ ಸುನೀಲ್ ಔಟ್: 'ಶನಿ' ಜಾಗಕ್ಕೆ ಹೊಸ ನಟನ ಎಂಟ್ರಿ
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗ್ತಿರುವ ಜನಪ್ರಿಯ ಧಾರಾವಾಹಿಯಲ್ಲಿ ಮಹತ್ವದ ಬದಲಾವಣೆ ಆಗಿದೆ. ಹಲವು ದಿನಗಳಿಂದ ಶನಿ ಪಾತ್ರಧಾರಿ ಬದಲಾಗಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿತ್ತು. ಆದ್ರೆ, ಯಾವಾಗ ಎಂಬುದರ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿರಲಿಲ್ಲ.
ಇದೀಗ, ಪಾತ್ರದ ಬದಲಾವಣೆಯ ಬಗ್ಗೆ ಶನಿ ಧಾರಾವಾಹಿ ತಂಡ ಖಚಿತ ಪಡಿಸಿದೆ. ಇಷ್ಟು ದಿನ ಶನಿಯಾಗಿದ್ದ ಬಾಲಕ ಇನ್ಮುಂದೆ ಇರುವುದಿಲ್ಲ. ಆ ಪಾತ್ರಕ್ಕೆ ಹೊಸ ನಟನನ್ನ ಈಗಾಗಲೇ ಶನಿ ತಂಡ ಹುಡುಕಿಕೊಂಡಿದೆ. ಹೊಸ ಶನಿಯನ್ನ ಕೂಡ ಪರಿಚಯ ಮಾಡಿಕೊಟ್ಟಿದ್ದಾರೆ.
ಇಷ್ಟೊಂದು ಕಡಿಮೆ ಅವಧಿಯಲ್ಲಿ ಸ್ಟಾರ್ ಆದ ಶನಿ ಪಾತ್ರಧಾರಿ ಸುನೀಲ್ ಅಷ್ಟಕ್ಕೂ ಬದಲಾಗಿದ್ದು ಯಾಕೆ.? ಆ ಜಾಗಕ್ಕೆ ಬಂದಿರುವುದಾದರೂ ಯಾರು.? ಶನಿ ಜೊತೆ ಬೇರೆ ಯಾರು ಬದಲಾಗಲಿದ್ದಾರೆ ಎಂಬುದನ್ನ ತಿಳಿಯಲು ಮುಂದೆ ಓದಿ.....

ಇವರೇ ನೋಡಿ ಹೊಸ 'ಶನಿ'
'ಶನಿ' ಪಾತ್ರದಲ್ಲಿ ಬದಲಾವಣೆ ಆಗಿದ್ದು, ಈಗ ಹೊಸ ಶನಿಯ ಪಾತ್ರಧಾರಿ ಆಗಮಿಸಿದ್ದಾರೆ. ಧಾರಾವಾಹಿಯಲ್ಲಿ ಸಂವತ್ಸರಗಳು ಕಳೆದಿದ್ದು, ಶನಿ ಬೆಳೆದಿದ್ದು, ಕಥೆಗೆ ತಕ್ಕಂತೆ 'ಶನಿ' ಬದಲಾವಣೆ ಬಯಸಿದೆ. ಹಾಗಾಗಿ, ಸದ್ಯಕ್ಕಿದ್ದ 'ಶನಿ' ಪಾತ್ರಕ್ಕಿಂತ ದೊಡ್ಡ ವಯಸ್ಸಿನ ನಟನನ್ನು ಈಗ ಪರಿಚಯ ಮಾಡಿದೆ. ಇವರೇ ನೋಡಿ ಹೊಸ ಶನಿ.

ಯಾವಾಗನಿಂದ ಪ್ರಸಾರ
ಹೊಸದಾಗಿ ಆಗಮಿಸಿರುವ 'ಶನಿ' ಪಾತ್ರಧಾರಿಯ ಬಗ್ಗೆ ಸದ್ಯಕ್ಕೆ ಯಾವುದೇ ಮಾಹಿತಿ ಇಲ್ಲ. ಆದ್ರೆ, ಹೊಸ ಶನಿಯ ಪ್ರೋಮೋ ಮತ್ತು ಲುಕ್ ಬಹಿರಂಗವಾಗಿದೆ. ಈಗಾಗಲೇ ಹಳೆ ಶನಿಯ ಪಾತ್ರಕ್ಕೆ ಒಂದು ಅಂತ್ಯವಾಡಿದ್ದು, ಹೊಸ ಶನಿಯನ್ನ ಬರಮಾಡಿಕೊಳ್ಳಲು ಕಥೆ ಸಿದ್ಧವಾಗಿದೆ.

ಶನಿಯ ಜೊತೆ ಇತರರು ಬದಲಾವಣೆ.?
ಶನಿ ಪಾತ್ರ ಬದಲಾವಣೆ ಆಗಿದೆ. ಅಲ್ಲಿಗೆ, ಶನಿಯ ಜೊತೆ ಅಭಿನಯಿಸುತ್ತಿದ್ದ ಇತರೆ ಪಾತ್ರಗಳು ಕೂಡ ಬದಲಾಗುವುದು ಖಚಿತ. ಕಾಕರಾಜ, ಯಮ, ಯಮಿ, ಹನುಮ ಇವರು ಕೂಡ ಬದಲಾಗಲಿದ್ದಾರೆ. ಯಾಕಂದ್ರೆ, ಕಥೆಯ ಪ್ರಕಾರ ಪಾತ್ರಗಳು ದೊಡ್ಡವರಾಗಿದ್ದಾರೆ. ಸಂವತ್ಸರ ದ ಬಳಿಕ ಕಥೆ ಆರಂಭವಾಗಲಿದ್ದು, ಎಲ್ಲ ಬಾಲಕಲಾವಿದರ ಅಧ್ಯಾಯ ಮುಗಿಸಲಾಗಿದೆ.

ಕಥೆ ಮುಂದುವರೆಯಲಿದೆ
ಶನಿ ಕಥೆಯಲ್ಲಿ ಬಾಲಕಲಾವಿದರ ಅಧ್ಯಾಯ ಮಾತ್ರ ಮುಗಿದಿದೆ. ಹಾಗಾಗಿ, ಇಲ್ಲಿ ಪಾತ್ರಗಳು ಮಾತ್ರ ಬದಲಾಗುತ್ತಿದೆ. ಉಳಿದಂತೆ ಶನಿ, ಕಾಕರಾಜ, ಹನುಮ, ಯಮ, ಯಮಿ ಎಲ್ಲ ಪಾತ್ರಗಳು ಮುಂದುವರೆಯಲಿದೆ. ಆದ್ರೆ, ಯೌವನದ ಕಥೆ ಸಾಗಲಿದೆ. ಬಹುಶಃ ಇದೇ ವಾರದಿಂದ ಈ ಬದಲಾವಣೆಯಾಗುವ ಸಾಧ್ಯತೆ ಇದೆ.

ಬಾಲ ಶನಿ ಕಥೆ ಹೇಗೆ ಅಂತ್ಯವಾಯಿತು.?
ಸೂರ್ಯಪತ್ನಿ ಸನ್ಯಾದೇವಿಯನ್ನ ಶನಿ ಅಂತ್ಯ ಮಾಡಿದ್ದಾರೆ. ಅದಕ್ಕೆ ತಾಯಿ ಛಾಯೆಯಿಂದ ಶಿಕ್ಷೆ ಕೂಡ ಪಡೆದುಕೊಂಡಿದ್ದಾರೆ. ಛಾಯೆಯ ಶಿಕ್ಷೆಯ ಅನುಸಾರ ಶನಿ ತನ್ನ ಕರ್ಮಫಲದಾತ ಪದವಿಯನ್ನ ತ್ಯಜಿಸಿ, ಸೂರ್ಯಲೋಕವನ್ನ ಬಿಟ್ಟುಹೋಗಬೇಕಿತ್ತು. ಹಾಗಾಗಿ, ತಾಯಿಯ ಸೂಚನೆಯಂತೆ ಶನಿ ಸೂರ್ಯಲೋಕ ಬಿಟ್ಟು ಹೋಗಿದ್ದಾರೆ. ಮಹಾದೇವ ಕೂಡ ತಪ್ಪಸಿಗೆ ಕೂತಿದ್ದಾರೆ.


Click it and Unblock the Notifications











