For Quick Alerts
  ALLOW NOTIFICATIONS  
  For Daily Alerts

  'ಶನಿ' ಧಾರಾವಾಹಿಯಿಂದ ಸುನೀಲ್ ಔಟ್: 'ಶನಿ' ಜಾಗಕ್ಕೆ ಹೊಸ ನಟನ ಎಂಟ್ರಿ

  |

  ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗ್ತಿರುವ ಜನಪ್ರಿಯ ಧಾರಾವಾಹಿಯಲ್ಲಿ ಮಹತ್ವದ ಬದಲಾವಣೆ ಆಗಿದೆ. ಹಲವು ದಿನಗಳಿಂದ ಶನಿ ಪಾತ್ರಧಾರಿ ಬದಲಾಗಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿತ್ತು. ಆದ್ರೆ, ಯಾವಾಗ ಎಂಬುದರ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿರಲಿಲ್ಲ.

  ಇದೀಗ, ಪಾತ್ರದ ಬದಲಾವಣೆಯ ಬಗ್ಗೆ ಶನಿ ಧಾರಾವಾಹಿ ತಂಡ ಖಚಿತ ಪಡಿಸಿದೆ. ಇಷ್ಟು ದಿನ ಶನಿಯಾಗಿದ್ದ ಬಾಲಕ ಇನ್ಮುಂದೆ ಇರುವುದಿಲ್ಲ. ಆ ಪಾತ್ರಕ್ಕೆ ಹೊಸ ನಟನನ್ನ ಈಗಾಗಲೇ ಶನಿ ತಂಡ ಹುಡುಕಿಕೊಂಡಿದೆ. ಹೊಸ ಶನಿಯನ್ನ ಕೂಡ ಪರಿಚಯ ಮಾಡಿಕೊಟ್ಟಿದ್ದಾರೆ.

  'ಶನಿ' ಧಾರಾವಾಹಿ ನೋಡುಗರಿಗೆ ಇದು ಬೇಸರದ ಸುದ್ದಿ! 'ಶನಿ' ಧಾರಾವಾಹಿ ನೋಡುಗರಿಗೆ ಇದು ಬೇಸರದ ಸುದ್ದಿ!

  ಇಷ್ಟೊಂದು ಕಡಿಮೆ ಅವಧಿಯಲ್ಲಿ ಸ್ಟಾರ್ ಆದ ಶನಿ ಪಾತ್ರಧಾರಿ ಸುನೀಲ್ ಅಷ್ಟಕ್ಕೂ ಬದಲಾಗಿದ್ದು ಯಾಕೆ.? ಆ ಜಾಗಕ್ಕೆ ಬಂದಿರುವುದಾದರೂ ಯಾರು.? ಶನಿ ಜೊತೆ ಬೇರೆ ಯಾರು ಬದಲಾಗಲಿದ್ದಾರೆ ಎಂಬುದನ್ನ ತಿಳಿಯಲು ಮುಂದೆ ಓದಿ.....

  ಇವರೇ ನೋಡಿ ಹೊಸ 'ಶನಿ'

  ಇವರೇ ನೋಡಿ ಹೊಸ 'ಶನಿ'

  'ಶನಿ' ಪಾತ್ರದಲ್ಲಿ ಬದಲಾವಣೆ ಆಗಿದ್ದು, ಈಗ ಹೊಸ ಶನಿಯ ಪಾತ್ರಧಾರಿ ಆಗಮಿಸಿದ್ದಾರೆ. ಧಾರಾವಾಹಿಯಲ್ಲಿ ಸಂವತ್ಸರಗಳು ಕಳೆದಿದ್ದು, ಶನಿ ಬೆಳೆದಿದ್ದು, ಕಥೆಗೆ ತಕ್ಕಂತೆ 'ಶನಿ' ಬದಲಾವಣೆ ಬಯಸಿದೆ. ಹಾಗಾಗಿ, ಸದ್ಯಕ್ಕಿದ್ದ 'ಶನಿ' ಪಾತ್ರಕ್ಕಿಂತ ದೊಡ್ಡ ವಯಸ್ಸಿನ ನಟನನ್ನು ಈಗ ಪರಿಚಯ ಮಾಡಿದೆ. ಇವರೇ ನೋಡಿ ಹೊಸ ಶನಿ.

  'ಶನಿ' ಧಾರಾವಾಹಿಯ ಈ ಬಾಲ ಹನುಮ ಯಾರು?'ಶನಿ' ಧಾರಾವಾಹಿಯ ಈ ಬಾಲ ಹನುಮ ಯಾರು?

  ಯಾವಾಗನಿಂದ ಪ್ರಸಾರ

  ಯಾವಾಗನಿಂದ ಪ್ರಸಾರ

  ಹೊಸದಾಗಿ ಆಗಮಿಸಿರುವ 'ಶನಿ' ಪಾತ್ರಧಾರಿಯ ಬಗ್ಗೆ ಸದ್ಯಕ್ಕೆ ಯಾವುದೇ ಮಾಹಿತಿ ಇಲ್ಲ. ಆದ್ರೆ, ಹೊಸ ಶನಿಯ ಪ್ರೋಮೋ ಮತ್ತು ಲುಕ್ ಬಹಿರಂಗವಾಗಿದೆ. ಈಗಾಗಲೇ ಹಳೆ ಶನಿಯ ಪಾತ್ರಕ್ಕೆ ಒಂದು ಅಂತ್ಯವಾಡಿದ್ದು, ಹೊಸ ಶನಿಯನ್ನ ಬರಮಾಡಿಕೊಳ್ಳಲು ಕಥೆ ಸಿದ್ಧವಾಗಿದೆ.

  ಯಾರೀ 'ಶನಿ' ಪಾತ್ರಧಾರಿ.? ಎಕ್ಸ್ ಕ್ಲೂಸಿವ್ ಮಾಹಿತಿ ಇಲ್ಲಿದೆ ಯಾರೀ 'ಶನಿ' ಪಾತ್ರಧಾರಿ.? ಎಕ್ಸ್ ಕ್ಲೂಸಿವ್ ಮಾಹಿತಿ ಇಲ್ಲಿದೆ

  ಶನಿಯ ಜೊತೆ ಇತರರು ಬದಲಾವಣೆ.?

  ಶನಿಯ ಜೊತೆ ಇತರರು ಬದಲಾವಣೆ.?

  ಶನಿ ಪಾತ್ರ ಬದಲಾವಣೆ ಆಗಿದೆ. ಅಲ್ಲಿಗೆ, ಶನಿಯ ಜೊತೆ ಅಭಿನಯಿಸುತ್ತಿದ್ದ ಇತರೆ ಪಾತ್ರಗಳು ಕೂಡ ಬದಲಾಗುವುದು ಖಚಿತ. ಕಾಕರಾಜ, ಯಮ, ಯಮಿ, ಹನುಮ ಇವರು ಕೂಡ ಬದಲಾಗಲಿದ್ದಾರೆ. ಯಾಕಂದ್ರೆ, ಕಥೆಯ ಪ್ರಕಾರ ಪಾತ್ರಗಳು ದೊಡ್ಡವರಾಗಿದ್ದಾರೆ. ಸಂವತ್ಸರ ದ ಬಳಿಕ ಕಥೆ ಆರಂಭವಾಗಲಿದ್ದು, ಎಲ್ಲ ಬಾಲಕಲಾವಿದರ ಅಧ್ಯಾಯ ಮುಗಿಸಲಾಗಿದೆ.

  ಕಿರಿಕ್ ಮಾಡಿಕೊಂಡು 'ಶನಿ' ಧಾರಾವಾಹಿಯಿಂದ ಹೊರಬಂದ 'ಸೂರ್ಯದೇವ'ಕಿರಿಕ್ ಮಾಡಿಕೊಂಡು 'ಶನಿ' ಧಾರಾವಾಹಿಯಿಂದ ಹೊರಬಂದ 'ಸೂರ್ಯದೇವ'

  ಕಥೆ ಮುಂದುವರೆಯಲಿದೆ

  ಕಥೆ ಮುಂದುವರೆಯಲಿದೆ

  ಶನಿ ಕಥೆಯಲ್ಲಿ ಬಾಲಕಲಾವಿದರ ಅಧ್ಯಾಯ ಮಾತ್ರ ಮುಗಿದಿದೆ. ಹಾಗಾಗಿ, ಇಲ್ಲಿ ಪಾತ್ರಗಳು ಮಾತ್ರ ಬದಲಾಗುತ್ತಿದೆ. ಉಳಿದಂತೆ ಶನಿ, ಕಾಕರಾಜ, ಹನುಮ, ಯಮ, ಯಮಿ ಎಲ್ಲ ಪಾತ್ರಗಳು ಮುಂದುವರೆಯಲಿದೆ. ಆದ್ರೆ, ಯೌವನದ ಕಥೆ ಸಾಗಲಿದೆ. ಬಹುಶಃ ಇದೇ ವಾರದಿಂದ ಈ ಬದಲಾವಣೆಯಾಗುವ ಸಾಧ್ಯತೆ ಇದೆ.

  500 ಜನರಲ್ಲಿ 'ಶನಿ' ಪಾತ್ರಕ್ಕೆ ಸುನೀಲ್ ಆಯ್ಕೆಯಾಗಲು ಈ ಡೈಲಾಗ್ ಕಾರಣ 500 ಜನರಲ್ಲಿ 'ಶನಿ' ಪಾತ್ರಕ್ಕೆ ಸುನೀಲ್ ಆಯ್ಕೆಯಾಗಲು ಈ ಡೈಲಾಗ್ ಕಾರಣ

  ಬಾಲ ಶನಿ ಕಥೆ ಹೇಗೆ ಅಂತ್ಯವಾಯಿತು.?

  ಬಾಲ ಶನಿ ಕಥೆ ಹೇಗೆ ಅಂತ್ಯವಾಯಿತು.?

  ಸೂರ್ಯಪತ್ನಿ ಸನ್ಯಾದೇವಿಯನ್ನ ಶನಿ ಅಂತ್ಯ ಮಾಡಿದ್ದಾರೆ. ಅದಕ್ಕೆ ತಾಯಿ ಛಾಯೆಯಿಂದ ಶಿಕ್ಷೆ ಕೂಡ ಪಡೆದುಕೊಂಡಿದ್ದಾರೆ. ಛಾಯೆಯ ಶಿಕ್ಷೆಯ ಅನುಸಾರ ಶನಿ ತನ್ನ ಕರ್ಮಫಲದಾತ ಪದವಿಯನ್ನ ತ್ಯಜಿಸಿ, ಸೂರ್ಯಲೋಕವನ್ನ ಬಿಟ್ಟುಹೋಗಬೇಕಿತ್ತು. ಹಾಗಾಗಿ, ತಾಯಿಯ ಸೂಚನೆಯಂತೆ ಶನಿ ಸೂರ್ಯಲೋಕ ಬಿಟ್ಟು ಹೋಗಿದ್ದಾರೆ. ಮಹಾದೇವ ಕೂಡ ತಪ್ಪಸಿಗೆ ಕೂತಿದ್ದಾರೆ.

  ಶತದಿನೋತ್ಸವ ಶನಿ ಧಾರಾವಾಹಿಯ ಪಾತ್ರ ಪರಿಚಯ ಶತದಿನೋತ್ಸವ ಶನಿ ಧಾರಾವಾಹಿಯ ಪಾತ್ರ ಪರಿಚಯ

  English summary
  Kannada famous serial shani changed shani character sunil and found new actor to this role.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X