For Quick Alerts
  ALLOW NOTIFICATIONS  
  For Daily Alerts

  ಕಾಸ್ಟಿಂಗ್ ನಿರ್ದೇಶಕನ ವಿರುದ್ಧ ಅತ್ಯಾಚಾರ ಆರೋಪ ಹೊರಿಸಿದ ನಟಿ: FIR ದಾಖಲು

  |

  ಕಿರುತೆರೆ ನಟಿಯ ಮೇಲೆ ಅತ್ಯಾಚಾರವೆಸಗಿದ ಆರೋಪದಡಿ ಕಾಸ್ಟಿಂಗ್ ನಿರ್ದೇಶಕನ ವಿರುದ್ಧ ಮುಂಬೈ ಪೊಲೀಸರು ಎಫ್ ಐ ಆರ್ ದಾಖಲು ಮಾಡಿದ್ದಾರೆ. ಕಳೆದ ವಾರ ಕಿರುತೆರೆ ನಟಿ ಮುಂಬೈನ ವರ್ಸೋವಾ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಆರೋಪದ ದೂರು ನೀಡಿದ್ದರು.

  ಕಾಸ್ಟಿಂಗ್ ನಿರ್ದೇಶಕ ತನ್ನನ್ನು ಮದುವೆ ಆಗುವುದಾಗಿ ಭರವಸೆ ನೀಡಿ, ಮುಂಬೈ ತುಂಬಾ ಸುತ್ತಾಡಿಸಿದ್ದಾರೆ. ನಗರದ ವಿವಿದ ಭಾಗಗಳಿಗೆ ಕರೆದು, ಜುಲೈಯಿಂದ ಅಕ್ಟೋಬರ್ ತಿಂಗಳವರೆಗೂ ಅನೇಕ ಬಾರಿ ಅತ್ಯಾಚಾರವೆಸಗಿದ್ದಾರೆ, ಗರ್ಭಿಣಿ ಎಂದು ಗೊತ್ತಾದ ಬಳಿಕ ಮದುವೆ ಆಗಲು ನಿರಾಕರಿಸಿದ್ದಾರೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.

  ಮಿಥುನ್ ಚಕ್ರವರ್ತಿ ಪುತ್ರನ ಮೇಲೆ ಅತ್ಯಾಚಾರ ಆರೋಪ, ಪತ್ನಿ ವಿರುದ್ಧವೂ ದೂರುಮಿಥುನ್ ಚಕ್ರವರ್ತಿ ಪುತ್ರನ ಮೇಲೆ ಅತ್ಯಾಚಾರ ಆರೋಪ, ಪತ್ನಿ ವಿರುದ್ಧವೂ ದೂರು

  ಅತ್ಯಾಚಾರ ಆರೋಪ ಎದುರಿಸುತ್ತಿರುವ 27 ವರ್ಷದ ಕಾಸ್ಟಿಂಗ್ ನಿರ್ದೇಶಕ ಮತ್ತು ಕಿರುತೆರೆ ನಟಿ ಸುಮಾರು ಎರಡು ವರ್ಷಗಳಿಂದ ಪರಚಿತರಾಗಿದ್ದರು ಎಂದು ತಿಳಿದು ಬಂದಿದೆ. ಮಾರ್ಚ್ ತಿಂಗಳಲ್ಲಿ ಸಿನಿಮಾ ಪ್ರಾಜೆಕ್ಟ್ ವಿಚಾರವಾಗಿ ಪರಿಚಯವಾದ ಇಬ್ಬರ ನಡುವೆ ಸ್ನೇಹ ಬೆಳೆದಿದೆ. ಬಳಿಕ ಇಬ್ಬರು ಮದುವೆ ಆಗುವ ನಿರ್ಧಾರ ಮಾಡಿದ್ದರು ಎಂದು ಹೇಳಲಾಗುತ್ತಿದೆ.

  ಜಗ್ಗೇಶ್ ವಿರುದ್ಧ ತಿರುಗಿಬಿದ್ದ ಅಭಿಮಾನಿಗಳು | Jaggesh 40 Years | Filmibeat Kannada

  ಈ ಬಗ್ಗೆ ಮಾಹಿತಿ ನೀಡಿರುವ ವರ್ಸೋವಾದ ಹಿರಿಯ ಪೊಲೀಸ್ ಅಧಿಕಾರಿ ರಾಘವೇಂದ್ರ ಠಾಕೂರ್, ಆರೋಪಿ ಮದುವೆ ಆಗುವುದಾಗಿ ನಂಬಿಸಿ, ಬಳಿಕ ನಿರಾಸಕರಿಸಿದ್ದಾರೆ ಎಂದು ನಟಿ ದೂರು ನೀಡಿರುವುದಾಗಿ ತಿಳಿಸಿದ್ದಾರೆ. ಸೆಕ್ಷನ್ 376 ಅಡಿಯಲ್ಲಿ ಆರೋಪಿಯ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ಕಾಸ್ಟಿಂಗ್ ನಿರ್ದೇಶಕನ ಬಂಧನವಾಗಿಲ್ಲ ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.

  English summary
  FIR Lodged Against Casting Director For Allegedly Raping Tv Actress In Mumbai.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X