'ಬಿಗ್ ಬಾಸ್' ಮನೆಯೊಂದು ಮೂರು ಬಾಗಿಲು
'ಬೆಂಕಿ ಬಿರುಗಾಳಿ'ಯಂತೆ ರಿಷಿಕಾ ಅವರು 'ಬಿಗ್ ಬಾಸ್' ಮನೆಗೆ ಭೇಟಿ ನೀಡಿದ ಮೇಲೆ ಮನೆಯೊಂದು ಮೂರು ಬಾಗಿಲಾಗಿದೆ. ಈಗ ಅಕ್ಷರಶಃ ಬೆಂಕಿ ಬಿರುಗಾಳಿ ಜೊತೆಗೆ ಚಂಡಮಾರುತವೂ ಎದ್ದಿದೆ. ಒಂದೇ ವಾರದಲ್ಲಿ ಫೈರ್ ಬ್ರ್ಯಾಂಡ್ ರಿಷಿಕಾ ಮನೆಯ ಎಲ್ಲ ಸದಸ್ಯರ ನಿದ್ದೆಗೆ ಹೊಗೆ ಹಾಕಿದ್ದಾರೆ.
ಈ ಶುಕ್ರವಾರ (ಮೇ.10) ಮೂಡಿಬಂದ 'ವಾರದ ಕಥೆ ಕಿಚ್ಚನ ಜೊತೆ'ಯಲ್ಲಿ ಹೈಲೈಟ್ ಆಗಿದ್ದು ರಿಷಿಕಾ. ಮನೆಯಲ್ಲಿ ಗ್ರೂಪಿಸಂ ಮಾಡುತ್ತಿದ್ದಾರೆ ಎಂದು ರಿಷಿಕಾ ನೇರವಾಗಿ ಆರೋಪಿಸಿದರು. ಇದಕ್ಕೆ ನರ್ಸ್ ಜಯಲಕ್ಷ್ಮಿ, ಚಂದ್ರಿಕಾ ಹಾಗೂ ರೋಹನ್ ಗೌಡ ಧ್ವನಿಗೂಡಿಸಿದರು. ಕೆಲವರು ಮೂರು ಗ್ರೂಫ್ ಎಂದರೆ ಇನ್ನೂ ಕೆಲವರು ನಾಲ್ಕು ಎಂದರು.

ಹೆಚ್ಚು ಹೆಚ್ಚು ಜನರನ್ನು, ಗೆಳೆಯರನ್ನು ಪ್ರೀತಿಯಿಂದ ಸಂಪಾದಿಸಿಕೊಳ್ಳಬಹುದೇ ಹೊರತು ಡಿಮ್ಯಾಂಡ್ ಮಾಡಿ ಅಲ್ಲ ಎಂದು ಯಾರನ್ನೂ ಹೆಸರಿಸದೆ ಹೇಳಿದರು. ಅದು ರಿಷಿಕಾ ಅವರ ಮನಸ್ಸಿಗೆ ಸರಿಯಾಗಿ ನಾಟಿತು ಎನ್ನಿಸುತ್ತದೆ. ಅವರ ಮುಖಭಾವ ಬದಲಾಗಿದ್ದು ಹೆಚ್ ಡಿ ಕ್ಲಾರಿಟಿಯಲ್ಲಿ ಕಾಣುತ್ತಿತ್ತು.
More from Filmibeat
English summary
Nurse Jayalakshmi second time evicted from Bigg Boss house on this Friday, 10th May. Wild card entry inmate Rishika Sing becomes thunderbolt for other inmates in the house. The shows weekly roundup 'Vaarada Kathe Kichchana Jothe' highlights.
bigg boss tv etv kannada narendra babu sharma sudeep small screen ಬಿಗ್ ಬಾಸ್ ಕಿರುತೆರೆ ನರೇಂದ್ರ ಬಾಬು ಶರ್ಮಾ ಸುದೀಪ್ ಟಿವಿ ಈಟಿವಿ ಕನ್ನಡ


Click it and Unblock the Notifications











