ಹೊಸ ಸೀಸನ್, ಹೊಸ ಲೋಗೋ ; ಬಿಡುಗಡೆಯಾಯ್ತು 'ಬಿಗ್ ಬಾಸ್‌'ನ ಹೊಸ ಪ್ರೋಮೊ - ವಿಡಿಯೋ ಇಲ್ಲಿದೆ.

'ಬಿಗ್ ಬ್ರದರ್' ಎಂಬ ವಿದೇಶಿ ಮೂಲದ ಶೋದ ಯಥಾವತ್ತು ನಕಲು 'ಬಿಗ್ ಬಾಸ್'. ಒಂದರ್ಧ ಡಜನ್ ವ್ಯಕ್ತಿಗಳನ್ನು ಮನೆಯಲ್ಲಿ ಗುಡ್ಡೆ ಹಾಕಿ ವಾರಪೂರ್ತಿ ಅವರ ನಡುವೆ ದ್ವೇಷ- ಅಸೂಯೆಯ ಕಿಚ್ಚು ಹತ್ತಿಸುವ ಈ ಕಾರ್ಯಕ್ರಮ 2006ರಲ್ಲಿ ಭಾರತದಲ್ಲಿ ಮೊದಲ ಬಾರಿ ಪ್ರಸಾರವಾಗಿತ್ತು. 'ಸೋನಿ' ಟಿವಿಯಲ್ಲಿ ಪ್ರಸಾರವಾದ ಮೊದಲ ಬಿಗ್ ಬಾಸ್ ಸೀಸನ್ ಸುಮಾರು 86 ದಿನಗಳ ಕಾಲ ನಡೆದಿತ್ತು.

ಮೊದಲ ಪ್ರಯತ್ನದಲ್ಲಿಯೇ ಅಪಾರವಾದ ಯಶಸ್ಸನ್ನು ಕೂಡ ಈ ಕಾರ್ಯಕ್ರಮ ಪಡೆಯಿತು. ಅಲ್ಲಿಂದ ಇಲ್ಲಿಯವರೆಗೆ ಈ ಬಿಗ್ ಬಾಸ್ ಲಂಗು ಲಗಾಮು ಇಲ್ಲದೇ ಸಾಗುತ್ತಲೇ ಇದೆ. ಹಿಂದಿಯಲ್ಲಿ ಈ ಕಾರ್ಯಕ್ರಮದ 18 ಸೀಸನ್‌ಗಳು ಪೂರ್ಣಗೊಂಡಿವೆ. ಕನ್ನಡದಲ್ಲಿ 11 ಸೀಸನ್‌ ಯಶಸ್ವಿಯಾಗಿ ನಡೆದಿವೆ. ತೆಲುಗು ಮತ್ತು ತಮಿಳಿನಲ್ಲಿ 8 ಸೀಸನ್ ಪೂರ್ಣಗೊಂಡಿದ್ದರೆ ಮಲಯಾಳಂನಲ್ಲಿ 7 ಸೀಸನ್‌ಗಳು ಮುಕ್ತಾಯಗೊಂಡಿವೆ. ಮರಾಠಿಯಲ್ಲಿ ಇಲ್ಲಿಯವರೆಗೆ 5 ಸೀಸನ್‌ಗಳಾಗಿವೆ.

First Look Bigg Boss 19 Promo Drops See The Bold New Logo amp amp August Premiere Details

ಇಂಥಾ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಈಗ ಮತ್ತೊಮ್ಮೆ ಎಲ್ಲ ಭಾಷೆಗಳಲ್ಲಿ ಮುಹೂರ್ತ ಕೂಡಿ ಬಂದಿದ್ದು ಇನ್ನೊಂದು 35-50 ದಿನಗಳ ಒಳಗೆ ಭಾರತದೆಲ್ಲೆಡೆ ಬಿಗ್ ಬಾಸ್ ಭಜನೆ ಶುರುವಾಗಲಿದೆ. ಇದರ ಮುನ್ಸೂಚನೆ ಎಂಬಂತೆ ಈಗಾಗಲೇ ಆ ಭಾಷೆ ಈ ಭಾಷೆ ಎನ್ನದೇ ಎಲ್ಲ ಭಾಷೆಗಳಲ್ಲಿ ಬಿಗ್ ಬಾಸ್ ತಯಾರಿಗಳು ಶುರುವಾಗಿದ್ದು ಹಿಂದಿಯಲ್ಲಿ ಸದ್ಯ ಬಿಗ್ ಬಾಸ್ ಹೊಸ ಲೋಗೋವನ್ನು ಬಿಡುಗಡೆ ಮಾಡಲಾಗಿದೆ.

ಮಹಾ ಮನರಂಜನೆಯ ಕಲರ್‌ಫುಲ್ ಪ್ರಯಾಣಕ್ಕೆ ಕೈಗನ್ನಡಿ ಹಿಡಿದಂತೆ ಇರುವ ಈ ಹೊಸ ಲೋಗೋವನ್ನು ಜೀಯೊ ಹಾಟ್‌ಸ್ಟಾರ್‌ ಲೋಕಾರ್ಪಣೆ ಮಾಡಿದ್ದು ಬಿಗ್ ಬಾಸ್ ಹೊಸ ಸೀಸನ್‌ಗೆ ದಿನಗಣನೆ ಆರಂಭವಾಗಿದೆ ಎಂಬ ಸಂದೇಶವನ್ನು ರವಾನೆ ಮಾಡಿದೆ. ಈ ಬಾರಿ ಬಿಗ್ ಬಾಸ್‌ನ ಥೀಮ್ ಆರ್ಟಿಫಿಷಿಯಲ್ ಇಂಟೆಲಿಜೆನ್ಸಿ ಇರಲಿದ್ದು ಟೆಕ್ನಾಲಜಿಯೇ ಈ ಬಾರಿಯ ಬೆನ್ನೆಲುಬು ಎನ್ನುವ ಮಾತು ಕೂಡ ಸದ್ಯ ಇದೇ ವೇಳೆ ಕೇಳಿ ಬರುತ್ತಿದೆ.

ಅಂದ್ಹಾಗೇ ''ದಿ ಇಂಡಿಯನ್ ಎಕ್ಸ್‌ಪ್ರೆಸ್‌'' ವರದಿಯ ಪ್ರಕಾರ ಈ ಬಾರಿಯ ಹಿಂದಿ ಬಿಗ್ ಬಾಸ್ ಕಾರ್ಯಕ್ರಮ, ಆಗಸ್ಟ್ 30ರಿಂದ ಆರಂಭವಾಗಲಿದೆ. ಈಗಾಗಲೇ ಸಲ್ಮಾನ್ ಖಾನ್ ಬಿಗ್ ಬಾಸ್‌ನ ಪ್ರೋಮೋದ ಚಿತ್ರೀಕರಣದಲ್ಲಿ ಕೂಡ ಭಾಗಿಯಾಗಿದ್ದಾರೆ ಎನ್ನುವ ಸುದ್ದಿ ಇದೆ. ಇನ್ನು, ಈ ಬಾರಿಯ ಬಿಗ್ ಬಾಸ್ ಕಾರ್ಯಕ್ರಮ ಮೂರಲ್ಲ ಬದಲಿಗೆ ಐದು ತಿಂಗಳು ಪ್ರಸಾರವಾಗಲಿದೆ ಎಂದು ''ಪಿಂಕ್‌ವಿಲ್ಲಾ'' ಸೇರಿ ಹಲವು ಮಾಧ್ಯಮಗಳು ವರದಿಯನ್ನು ಮಾಡಿದ್ದು ಈ ಮೂರು ತಿಂಗಳಿಗೆ ಸಲ್ಮಾನ್ ಖಾನ್ 150 ಕೋಟಿ ಸಂಭಾವನೆ ಪಡೆದಿದ್ದಾರೆ ಎಂದು ''ದಿ ಇಂಡಿಯನ್ ಎಕ್ಸ್‌ಪ್ರೆಸ್‌'' ವರದಿಯನ್ನು ಮಾಡಿದೆ.

ಇನ್ನು ಸ್ಫರ್ಧಿಗಳ ವಿಚಾರಕ್ಕೆ ಬಂದರೆ ಈಗಾಗಲೇ ಹಲವರ ಹೆಸರುಗಳು ಬಿಗ್ ಬಾಸ್ ಮನೆಯ ಸುತ್ತ ಮುತ್ತ ಕೇಳಿ ಬರುತ್ತಿವೆ. ಆ ಪೈಕಿ ಹಿಂದಿಯ ಪ್ರಖ್ಯಾತ ನಟ ರಾಮ್ ಕಪೂರ್ ನಾನು 20 ಕೋಟಿ ಹಣ ನೀಡಿದರು ಕೂಡ ಬಿಗ್‌ ಬಾಸ್‌ಗೆ ಹೋಗುವುದಿಲ್ಲ ಎಂದು ಹೇಳಿದ್ದಾರೆ. ಡೈಸಿ ಷಾ ಮತ್ತು ಜರೀನ್ ಖಾನ್ ಕೂಡ ಬಿಗ್ ಬಾಸ್‌ ಮನೆಗೆ ಕಾಲಿಡುವ ಮಾತೇ ಇಲ್ಲ ಎಂದು ಹೇಳಿದ್ದಾರೆ.

ಇವರನ್ನು ಹೊರತು ಪಡಿಸಿದರೆ ಯೂಟ್ಯೂಬರ್ ಗೌತಮ್ ತನೇಜಾ, ಶಿಲ್ಪಾ ಶೆಟ್ಟಿಯ ಪತಿ ರಾಜ್ ಕುಂದ್ರಾ, ಕೃಷ್ಣಾ ಶ್ರಾಫ್, ಮಿಕ್ಕಿ ಮೇಕ್‌ ಓವರ್, ಫೈಸಲ್ ಶೇಖ್, ಧೀರಜ್ ಧೋಪರ್, ಮಮತಾ ಕುಲಕರ್ಣಿ, ಧನಶ್ರೀ ವರ್ಮಾ, ಅಪೂರ್ವ ಮುಖಿಜಾ, ಹೀಗೆ ಹಲವರ ಹೆಸರುಗಳು ಸದ್ಯ ಸಂಭಾವ್ಯ ಸ್ಫರ್ಧಿಗಳ ಲಿಸ್ಟ್‌ನಲ್ಲಿ ಕಂಡು ಬರುತ್ತಿವೆ. ಇವರಲ್ಲಿ ಯಾರು ಹೋಗಲಿದ್ದಾರೆ ಎನ್ನುವುದಕ್ಕೆ ಉತ್ತರ ಕಾರ್ಯಕ್ರಮದ ಆರಂಭವಾಗುವ ದಿನವೇ ಅಧಿಕೃತವಾಗಿ ಸಿಗಲಿದೆ.

More from Filmibeat

English summary
Watch the official Bigg Boss 19 promo now! See the exciting new logo and get all the August premiere details. Salman Khan is ready to host the new season.
Read more about: biggboss bigg boss ಟಿವಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X