'ನೂರು ಜನ್ಮಕೂ' ಧಾರಾವಾಹಿಯಲ್ಲಿ 'ಸಂಪೂರ್ಣ ಮಂತ್ರಾಲಯ ದರ್ಶನ'; ಮೈತ್ರಿ ಗೆ ಹಳೆ ನೆನಪು ಕಾಡುತ್ತಾ?

By ಪೂರ್ವ

'ನೂರು ಜನ್ಮಕೂ' ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿ. ಈ ಸೀರಿಯಲ್ ತಂಡ ವಿಶಿಷ್ಟ ಪ್ರಯತ್ನಕ್ಕೆ ಕೈ ಹಾಕಿ ಯಶಸ್ವಿಯಾಗಿದೆ. ಮೂರು ದಿನಗಳ ಕಾಲ ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಸನ್ನಿಧಿಯಲ್ಲಿ ಚಿತ್ರೀಕರಣ ಮಾಡಿದೆ. ಈ ಪವಿತ್ರ ಸ್ಥಳದಲ್ಲಿ ಚಿತ್ರೀಕರಿಸಿದ ಸನ್ನಿವೇಶಗಳನ್ನ ಇದೇ ವೀಕೆಂಡ್‌ನಲ್ಲಿ ಪ್ರಸಾರ ಆಗಲಿದೆ. ಇದೇ ಮೊದಲ ಬಾರಿಗೆ ಕನ್ನಡದ ಧಾರಾವಾಹಿಯೊಂದು ಮಂತ್ರಾಲಯವನ್ನು ಸಂಪೂರ್ಣವಾಗಿ ತೋರಿಸಿದೆ.

ಕಲರ್ಸ್ ಕನ್ನಡದ ನೂರು ಜನ್ಮಕೂ ಧಾರಾವಾಹಿ ತಂಡ ಮಂತ್ರಾಲಯದಲ್ಲಿ ಚಿತ್ರೀಕರಣ ಮಾಡುವುದಕ್ಕೆ ಕಾರಣವಿದೆ. 'ನೂರು ಜನ್ಮಕೂ' ಧಾರಾವಾಹಿಯ ಕಥಾನಾಯಕಿ ಮೈತ್ರಿ ಮತ್ತು ಕಥಾನಾಯಕ ಚಿರಂಜೀವಿ ತಮ್ಮ ಕುಟುಂಬದೊಂದಿಗೆ ಮಂತ್ರಾಲಯಕ್ಕೆ ತೆರಳಿ ರಾಘವೇಂದ್ರ ಸ್ವಾಮಿಯ ದರ್ಶನ ಮಾಡಲು ಮುಖ್ಯ ಕಾರಣ ಏನು ಗೊತ್ತಾ? ಒಂದು ಹಳೆಯ ಹರಕೆ.

First time in Kannada television shot the episodes of Nooru Janmaku serial in Mantralaya

ಇದೇ ಮೊದಲ ಬಾರಿಗೆ ಕನ್ನಡದ ಧಾರಾವಾಹಿಯೊಂದು ಮಂತ್ರಾಲಯದ ರಾಘವೇಂದ್ರ ರಾಯರ ಸನ್ನಿಧಿಯಲ್ಲಿ ಸಂಪೂರ್ಣವಾಗಿ ಚಿತ್ರೀಕರಣ ಮಾಡಿದೆ. ತಮ್ಮ ಧಾರಾವಾಹಿಯ ಮೂಲಕ ರಾಯರ ಸನ್ನಿಧಿಯನ್ನು ಒಳಗಿನಿಂದಲೂ ಹಾಗೂ ಹೊರಗಿನಿಂದಲೂ ತೊರಿಸುವ ಪ್ರಯತ್ನ ಮಾಡಿದೆ. ಇದಕ್ಕೆ ರಾಯರ ಮಠದ ಶ್ರೀ ಶ್ರೀ ಸುಬುಧೇಂದ್ರ ತೀರ್ಥರು ತಾವಾಗಿಯೇ ಕಾಣಿಸಿಕೊಂಡಿ ಆಶೀರ್ವಾದ ಮಾಡಿದ್ದಾರೆ. ಈ ಸಂಚಿಕೆಗಳನ್ನು ಇದೇ ವೀಕೆಂಡ್‌ನಲ್ಲಿ ನೋಡಬಹುದಾಗಿದೆ. ಯಾವಾಗ ಎಷ್ಟೊತ್ತಿಗೆ ಅನ್ನೋದನ್ನು ನೋಡುವುದಕ್ಕೆ ಮುಂದೆ ಓದಿ.

ಜನರು ತಮಗೆ ಕಷ್ಟ ಕಾರ್ಪಣ್ಯಗಳು ಬಂದಾಗ ಶ್ರೀರಾಘವೇಂದ್ರ ರಾಯರು ಮೊರೆ ಹೋಗುತ್ತಾರೆ. ಗುರು ರಾಯರನ್ನು ನೆನಪಿಸಿಕೊಂಡು ಕಷ್ಟಗಳನ್ನು ಹೇಳಿಕೊಳ್ಳುತ್ತಾರೆ. ರಾಯರೇ ಬಂದು ತಮ್ಮ ಕಷ್ಟಗಳನ್ನು ಪರಿಹಾರ ಮಾಡುತ್ತಾರೆಂಬುವುದು ಜನರ ನಂಬಿಕೆ. ಇದನ್ನೇ 'ನೂರು ಜನ್ಮಕೂ' ಧಾರಾವಾಹಿಯಲ್ಲಿಯೂ ತೋರಿಸಲಾಗಿದೆ. ಈ ಧಾರಾವಾಹಿಯ ಪ್ರಮುಖ ಪಾತ್ರಗಳು ಯಾಕೆ ಗುರು ರಾಯರ ಸನ್ನಿಧಿ ಹೋಯ್ತು ಅನ್ನೋದಕ್ಕೂ ಕಾರಣವಿದೆ.

ಕಲರ್ಸ್ ಕನ್ನಡದ 'ನೂರು ಜನ್ಮಕೂ' ಧಾರಾವಾಹಿಯ ನಾಯಕಿ ಮೈತ್ರಿಯ ಬದುಕಿನಲ್ಲಿ ಸಂಕಷ್ಟಗಳ ಸರಮಾಲೆಯೇ ತುಂಬಿದೆ. ಅವಳ ತಂದೆ ತಾಯಿ ಇಬ್ಬರೂ ಮೈತ್ರಿಯ ಕಷ್ಟಗಳಿಗೆ ಏನು ಕಾರಣ ಅಂತ ಯೋಚಿಸುತ್ತಿರಬೇಕಾದರೆ, ಅವರಿಗೆ ಮೈತ್ರಿ ಹುಟ್ಟುವ ಮುನ್ನ ತಾವು ಹೊತ್ತುಕೊಂಡಿದ್ದ ಹರಕೆ ನೆನಪಾಗುತ್ತೆ. ಈ ಎಲ್ಲಾ ಕಾರಣಕ್ಕೆ ಮೈತ್ರಿಗೆ ಜೀವನದಲ್ಲಿ ಕೆಟ್ಟದ್ದೇ ಆಗುತ್ತಿದೆ ಎನ್ನುವ ನಿರ್ಧಾರಕ್ಕೆ ಬಂದಿದ್ದಾರೆ. ಈ ಕಾರಣಕ್ಕೆ ಮಂತ್ರಾಲಯಕ್ಕೆ ಮಗಳು ಹಾಗೂ ಅಳಿಯ ಚಿರಂಜೀವಿಯನ್ನು ಕರೆದುಕೊಂಡು ಹರಕೆ ತೀರಿಸುವುದಕ್ಕೆ ಹೋಗಿದ್ದಾರೆ.

First time in Kannada television shot the episodes of Nooru Janmaku serial in Mantralaya

ತಂದೆ ತಾಯಿಯೊಂದಿಗೆ ಹರಕೆ ತೀರಿಸುವುದಕ್ಕೆ ಮೈತ್ರಿ ಮಂತ್ರಾಲಯಕ್ಕೆ ಕಾಲಿಡುತ್ತಿದ್ದಂತೆ ಅಲ್ಲಿ "ಆ ಜನ್ಮ ಸಂಬಂಧ" ಅರಿವಿಗೆ ಬರುತ್ತೆ. ಮೈತ್ರಿ ಮಂತ್ರಾಲಯಕ್ಕೆ ಕಾಲಿಡುತ್ತಿದ್ದಂತೆ ಅಲ್ಲಿನ ಸಾಧುವಿಗೆ ಈಕೆ ಬಂದಿರುವುದು ಗೊತ್ತಾಗುತ್ತೆ. ಈ ಮೂಲಕ ಮೈತ್ರಿಗೂ, ಮಂತ್ರಾಲಯಕ್ಕೂ ಏನೋ ನಂಟಿದೆ ಅನ್ನೋದು ಗಮನಕ್ಕೆ ಬರುವುದಂತೂ ಗ್ಯಾರಂಟಿ. ಸದ್ಯ ಕತೆ ಕೂಡ ಹಾಗೇ ಸಾಗಿದೆ. ಈಗ ಗುರುರಾಯರ ಪವಾಡಗಳು ಇವರ ಜೀವನದಲ್ಲಿ ನಡೆಯುತ್ತಾ ಹೋಗಿ ಮೈತ್ರಿ ಹಾಗೂ ಚಿರಂಜೀವಿ ಜೀವನದಲ್ಲಿ ಏನೆಲ್ಲ ಬದಲಾವಣೆ ಆಗುತ್ತವೆ ಅನ್ನೋದು ನೋಡಬೇಕಿದೆ.

'ನೂರು ಜನ್ಮಕೂ' ಧಾರಾವಾಹಿಯ ಕಥೆ ಈಗ ಟ್ವಿಸ್ಟ್‌ ಸಿಕ್ಕಿದೆ. "ಭವರೋಗ ಕಳೆಯುವ ರಾಘವೇಂದ್ರ ಸ್ವಾಮಿಯಂತಹ ಮಹಾಮಹಿಮರ ಸನ್ನಿಧಾನದಲ್ಲಿ ನೂರು ಜನ್ಮಕೂ ಧಾರಾವಾಹಿ ಚಿತ್ರೀಕರಣವಾಗಿದ್ದು ನಮ್ಮ ಭಾಗ್ಯ" ಎಂದು ಧಾರಾವಾಹಿಯ ನಿರ್ಮಾಪಕ ಗುರುದಾಸ್ ಶೆಣೈ ಹೇಳಿದ್ದಾರೆ. ಈ ವಿಶೇಷ ಸಂಚಿಕೆ ಈ ವೀಕೆಂಡ್‌ನಲ್ಲಿ ಇದೇ ಶನಿವಾರ ಹಾಗೂ ಭಾನುವಾರ (ಮಾರ್ಚ್ 22, 23) ಸಂಜೆ 6.30ಕ್ಕೆ ಭಾನುವಾರ ಪ್ರಸಾರ ಆಗಲಿದೆ. ಮನೆ ಮಂದಿಯೆಲ್ಲ ಕೂಡ ಈ ಧಾರಾವಾಹಿಯನ್ನು ಕಣ್ತುಂಬಿಕೊಳ್ಳಬಹುದಾಗಿದೆ.

More from Filmibeat

English summary
First time in Kannada television shot the episodes of Nooru Janmaku serial in Mantralaya
Read more about: tv show serial filmibeat original
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X