ಅಯೋಧ್ಯೆ ಶ್ರೀರಾಮನ ಸನ್ನಿಧಿಯಲ್ಲಿ ಕನ್ನಡ ಧಾರಾವಾಹಿ ಚಿತ್ರೀಕರಣ; ಯಾವುದು ಆ ಸೀರಿಯಲ್?
ಮನರಂಜನೆಗಂತಲೇ ಮೀಸಲಾಗಿರೋ ಚಾನೆಲ್‌ಗಳಲ್ಲಿ ಧಾರಾವಾಹಿಗಳಿಗೆ ಬೇಡಿಕೆ ಹೆಚ್ಚಿದೆ. ಭಾರತದ ಉದ್ದಗಲಕ್ಕೆ ಹೋದರೂ ಇದೇ ವಾತಾವರಣವಿದೆ. ಹಾಗೇ ಕನ್ನಡದಲ್ಲೂ ಧಾರಾವಾಹಿಗಳಿಗೆ ಸಿಕ್ಕಾಪಟ್ಟೇ ಕ್ರೇಜ್ ಇದೆ. ಒಂದಲ್ಲ ಒಂದು ಧಾರಾವಾಹಿ ತಂಡ ಪೈಪೋಟಿಗೆ ಬಿದ್ದು, ಪ್ರೇಕ್ಷಕರನ್ನು ಸೆಳೆಯುವುದಕ್ಕೆ ಕ್ರಿಯೇಟಿವ್ ಆಗಿ ಏನನ್ನಾದರೂ ಮಾಡುತ್ತಲೇ ಇರುತ್ತಾರೆ.
ಈಗ ಕನ್ನಡದ ಧಾರಾವಾಹಿ ತಂಡವೊಂದು ಅಯೋಧ್ಯೆ ಶ್ರೀರಾಮನ ಸನ್ನಿಧಾನಕ್ಕೆ ತೆರಳಿ ಅಲ್ಲಿ ಚಿತ್ರೀಕರಣ ಮಾಡಿಕೊಂಡು ಬಂದಿದೆ. ಅದುವೇ 'ಕನ್ಯಾದಾನ'. ಉದಯ ಟಿವಿಯಲ್ಲಿ ಪ್ರಸಾರ ಆಗುತ್ತಿರುವ 'ಕನ್ಯಾದಾನ' ಧಾರಾವಾಹಿ ಇಂತಹದ್ದೊಂದು ಸಾಹಸಕ್ಕೆ ಕೈ ಹಾಕಿದೆ. ತನ್ನ ಕಿರುತೆರೆ ವೀಕ್ಷಕರಿಗೆ ಅಯೋಧ್ಯೆ ಶ್ರೀರಾಮನ ದರ್ಶನ ಮಾಡಿಸಲೇಬೇಕು ಅಂತ ತೀರ್ಮಾನಿಸಿದೆ. ಚಿತ್ರೀಕರಣ ಮಾಡಿಕೊಂಡು ಬಂದಿದೆ.

ಅಂದ್ಹಾಗೆ, 'ಕನ್ಯಾದಾನ' ಧಾರಾವಾಹಿಯಲ್ಲಿ ಐದು ಜನ ಹೆಣ್ಣುಮಕ್ಕಳ ಜೀವನ ನೆಮ್ಮದಿಯಾಗಿ ಇರಿಸಬೇಕು ಅಂತ ಪರಿತಪಿಸೋ ತಂದೆಯ ಭಾವನಾತ್ಮಕ ಹೋರಾಟದ ಕಥೆ. ಹೀಗಾಗಿ ಮಧ್ಯಮ ವರ್ಗದ ಜನರ ಕಥೆಯನ್ನು ಹೇಳುತ್ತಿರುವ ಈ ಧಾರಾವಾಹಿ ಕನ್ನಡಿಗರ ಮನ ಗೆದ್ದಿದೆ. ಈಗಾಗಲೇ ಸುಮಾರು 800 ಸಂಚಿಕೆಗಳನ್ನು ಪೂರೈಸುವ ಸನಿಹದಲ್ಲಿದೆ.
'ಕನ್ಯಾದಾನ' ತಂಡ ವಿಭಿನ್ನ ಪ್ರಯೋಗಗನ್ನು ಮಾಡುವ ಮೂಲಕ ಹೊಸತನವನ್ನು ತರುವ ಪ್ರಯತ್ನ ಮಾಡುತ್ತಲೇ ಇದೆ. ಈ ಕಾರಣಕ್ಕೆ ಸುಮಾರು 800 ಸಂಚಿಕೆಗಳನ್ನು ಪೂರೈಸುವ ಸನಿಹದಲ್ಲಿದೆ. ಈಗ ಅಯೋಧ್ಯೆಗೆ ತೆರಳಿ ಶ್ರೀರಾಮನ ಸನ್ನಿಧಿಯಲ್ಲಿ ಧಾರಾವಾಹಿಯ ವಿಶೇಷ ಸಂಚಿಕೆಗಳನ್ನು ಚಿತ್ರೀಕರಿಸಿಕೊಂಡು ಬಂದಿದೆ. ಅದಕ್ಕೊಂದು ಕಾರಣ ಕೂಡ ಇದೆ.

ಇದೇ ಏಪ್ರಿಲ್ 17ರಂದು ಶ್ರೀರಾಮ ನವಮಿ ಇರುವ ಹಿನ್ನೆಲೆಯಲ್ಲಿ ರಾಮ ಭಕ್ತರಿಗಾಗಿ ವಿಶೇಷ ಸಂಚಿಕೆಗಳನ್ನು ಚಿತ್ರೀಕರಿಸಿದೆ. ಇದೇ ಏಪ್ರಿಲ್ 15ರಿಂದ ಈ ಅಪರೂಪದ ಸಂಚಿಕೆಗಳು ಶ್ರೀರಾಮ ನವಮಿಯ ಅಂಗವಾಗಿ ಪ್ರಸಾರ ಆಗುತ್ತಿವೆ. ಕನ್ನಡ ಕಿರುತೆರೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅಯೋಧ್ಯೆ ಶ್ರೀರಾಮನ ಸನ್ನಿಧಿಯಲ್ಲಿ ಧಾರಾವಾಹಿ ಚಿತ್ರೀಕರಿಸಿ ಇತಿಹಾಸ ಮೆರೆದಿದ್ದಾರೆ.
'ಕನ್ಯಾದಾನ' ಧಾರಾವಾಹಿಯ ಪ್ರಮುಖ ಪಾತ್ರಗಳು ಶ್ರೀರಾಮನ ಸನ್ನಿಧಿಯಲ್ಲಿ ಹೇಗೆ ತೆರೆದುಕೊಳ್ಳುತ್ತವೆ ಅನ್ನೋದು ವಿಶೇಷ. 'ಕನ್ಯಾದಾನ'ದ ಕುಟುಂಬಗಳಲ್ಲಿ ಅಶ್ವತ್ಥನ ಹೆಣ್ಣುಮಕ್ಕಳ ಸಂಸಾರಗಳು ಶ್ರೀರಾಮನವಮಿಯ ವಿಶೇಷ ಸಂದರ್ಭದಲ್ಲಿ ಎದುರಾಗುವ ಅಗ್ನಿಪರೀಕ್ಷೆಗಳನ್ನು ಶ್ರೀರಾಮನ ಕೃಪೆಯಿಂದ ಹೇಗೆ ಮೆಟ್ಟಿ ನಿಲ್ಲುತ್ತವೆ ಎಂಬುದನ್ನು ನೋಡಬಹುದಾಗಿದೆ. ಉದಯ ಟಿವಿಯಲ್ಲಿ 'ಕನ್ಯಾದಾನ' ಧಾರಾವಾಹಿ ಭಾನುವಾರ ಹೊರತು ಪಡಿಸಿದ ಸಂಜೆ 6 ಗಂಟೆಗೆ ಪ್ರಸಾರ ಆಗುತ್ತಿದೆ.


Click it and Unblock the Notifications











