ಮಗನ ಭವಿಷ್ಯಕ್ಕಾಗಿ ಬೇರೆಯವರ ಜೊತೆ ಮಲಗುವುದರಲ್ಲಿ ತಪ್ಪೇನಿದೆ ? ಹೇಳಿಕೆ ಸಮರ್ಥಿಸಿಕೊಂಡ ಬಿಗ್ ಬಾಸ್ ಚೆಲುವೆ
ಬದುಕು ತುಂಬಾನೇ ವಿಚಿತ್ರ. ಸರಿಯಾದ ದಾರಿಯಲ್ಲಿ ನಡೆದುಕೊಂಡು ಹೋಗುವಾಗ ಇಲ್ಲಿ ಕೆಲ ಅನಿರೀಕ್ಷಿತ ತಿರುವುಗಳು ಎದುರಾಗುತ್ತಾವೆ. ಹೀಗೆ ಎದುರಾಗುವ ಈ ತಿರುವುಗಳಿಂದ ಕೆಲ ಒಮ್ಮೆ ಬದುಕು ಅಲ್ಲೋಲ.. ಕಲ್ಲೋಲವಾಗುತ್ತೆ. ಇನ್ನೂ ಕೆಲ ಒಮ್ಮೆ ಕತ್ತಲೆ ತುಂಬಿದ್ದ ಬದುಕಿನಲ್ಲಿ ಬೆಳಕು ಮೂಡುತ್ತೆ.
ಇನ್ನು ಬಡವನಿಗೆ ಮಾತ್ರ ಕಷ್ಟ ಇರುವುದೆಂದಲ್ಲ. ಎಂತಹ ಸಿರಿವಂತನಾದರೂ ಕಷ್ಟಗಳನ್ನು ಎದುರಿಸಲೇಬೇಕು. ಆದರೆ, ಕಷ್ಟಗಳನ್ನು ಧೈರ್ಯದಿಂದ ಎದುರಿಸಿ ಬದುಕುವುದೇ ಜೀವನ. ಪ್ರತಿಯೊಬ್ಬರಿಗೂ ತಾವು ಅನುಭವಿಸುವ ಕಷ್ಟವೇ ಹಿರಿದು ಎಂದೆನಿಸುತ್ತದೆ. ಇದು ಸಹಜ ಕೂಡಾ. ಅವರವರ ಕಷ್ಟ ಅವರವರಿಗೆ ಹಿರಿದು.

ಆದರೆ, ಇದೇ ಕಷ್ಟಕ್ಕೆ ಕ್ಷಣಕ್ಷಣಕ್ಕೂ ಹೆದರಿ ಬದುಕಬಾರದು. ಯಾಕೆಂದರೆ ಬದುಕಲು ನೂರಾರು ದಾರಿಗಳಿವೆ. ಆ ದಾರಿಯಲ್ಲಿ ಹೋಗದೇ ಅಡ್ಡದಾರಿಯಲ್ಲಿ ಹೋಗುವ ಪ್ರಯತ್ನ ಮಾಡಬಾರದು. ಹಾಗೇನಾದರೂ ಮಾಡಿದ್ದೇ ಆದಲ್ಲಿ ಅಥವಾ ಯೋಚಿಸಿದ್ದೇ ಆದಲ್ಲಿ ಜೀವನ ಇನ್ನಷ್ಟು ಕಷ್ಟಕರವಾಗುತ್ತದೆ ಎಂಬುದು ಕೂಡಾ ಸತ್ಯ. ಇದಕ್ಕೆ ಉದಾಹರಣೆಯಂತೆ ಸದ್ಯ ಕಣ್ಮುಂದೆ ಇರುವವರು ಚಂದ್ರಿಕಾ ದೀಕ್ಷಿತ್.
ಹೌದು, , ಚಂದ್ರಿಕಾ ದೀಕ್ಷಿತ್ ..ದೆಹಲಿಯ ''ವಡಾ ಪಾವ್ ಗರ್ಲ್'' ಎಂದೇ ಜನಜನಿತರಾದವರು. ರಾತ್ರಿ ಕಳೆದು ಹಗಲಾಗುವಷ್ಟರಲ್ಲಿ ಸೋಶಿಯಲ್ ಮೀಡಿಯಾದ ಸಹಾಯದ ಮೂಲಕ ಭಾರತದೆಲ್ಲೆಡೆ ಮನೆ ಮಾತಾದ ಚಂದ್ರಿಕಾ ದೀಕ್ಷಿತ್, ತಮಗೆ ಸಿಕ್ಕ ಈ ಜನಪ್ರಿಯತೆಯ ಪ್ರಭೆಯಲ್ಲಿಯೇ ''ಬಿಗ್ ಬಾಸ್'' ಮನೆಗೆ ಕೂಡ ಹೋಗಿ ಬಂದರು. ವ್ಯೂವ್ಸ್ ಮತ್ತು ಲೈಕ್ಸ್ ಆಸೆಯಲ್ಲಿ ದಾರಿ ತಪ್ಪಿದರು. ತಮ್ಮ ವ್ಯೆಯಕ್ತಿಕ ಬದುಕನ್ನು ಸಾರ್ವಜನಿಕವಾಗಿ ಪ್ರದರ್ಶನಕಿಟ್ಟರು. ಹಲವರ ಪಾಲಿಗೆ ಮನರಂಜನೆಯ ಸರಕಾದರು.
ಸದ್ಯ ಇವರ ನಡೆ ಮತ್ತು ನುಡಿಗಳಿಂದ ಬೇಸತ್ತು ಒಂದ್ಕಾಲದಲ್ಲಿ ಹೆಗಲಿಗೆ ಹೆಗಲಾಗಿದ್ದ ಇವರ ಗಂಡ ಯುಗಮ್ ಗೇರಾ ದೂರವಾಗಿದ್ಧಾರೆ. ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದಾರೆ. ಸೈಫ್ ಎಂಬಾತನ ಜೊತೆ ಮೂರೊತ್ತು ರೀಲ್ಸ್ ಮಾಡುವುದನ್ನೇ ಚಂದ್ರಿಕಾ ಸದ್ಯ ಕೆಲಸವನ್ನಾಗಿಸಿಕೊಂಡಿದ್ಧಾರೆ.
ಇಂಥಾ ಚಂದ್ರಿಕಾ ದೀಕ್ಷಿತ್ ಕೆಲ ದಿನಗಳ ಹಿಂದೆ ಸಂದರ್ಶನವೊಂದರಲ್ಲಿ ನನ್ನ ಮಗನ ಭವಿಷ್ಯಕ್ಕಾಗಿ, ಅವನನ್ನು ಸಾಕಲು, ಹಣಕ್ಕಾಗಿ ನಾನು ಯಾರ ಜೊತೆ ಬೇಕಾದರೂ ಮಲಗಲು ಸಿದ್ಧ ಎಂದು ಹೇಳಿದ್ದರು. ಈ ವಿಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣಗಳಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿತ್ತು.ವ್ಯಾಪಕವಾಗಿ ವೈರಲ್ ಆಗಿತ್ತು.
ಹಲವರು ಚಂದ್ರಿಕಾ ಅವರ ಈ ನುಡಿಯನ್ನು ಕೇಳಿ ಬೆಚ್ಚಿ ಬಿದ್ದಿದ್ದರು. ಜೀವನೋಪಾಯಕ್ಕೆ ಹಲವಾರು ಕಾನೂನುಬದ್ಧ ಮತ್ತು ಗೌರವಯುತ ಮಾರ್ಗಗಳಿವೆ ಎನ್ನುವುದನ್ನು ಮರೆತು ಇಂತಹ ಅಸಹ್ಯಕರವಾದ ಮಾತುಗಳನ್ನಾಡಲು ನಾಚಿಕೆಯಾಗಲ್ವಾ..? ಎಂದು ಕಿಡಿ ಕಾರಿದ್ದರು.
ಸದ್ಯ ತಮ್ಮ ವಿರುದ್ಧ ಭುಗಿಲೆದ್ದ ಈ ಆಕ್ರೋಶವನ್ನು ಕಂಡು ಚಂದ್ರಿಕಾ ಮತ್ತೆ ಮಾತನಾಡಿದ್ಧಾರೆ. ತಮ್ಮ ಬಗ್ಗೆ ಮಾತನಾಡುತ್ತಿರುವವರ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ನಿಮ್ಮ ವ್ಯೂವ್ಸ್ ಹುಚ್ಚಿಗೆ ನನ್ನ ಚಾರಿತ್ರ್ಯ ಹರಣ ಮಾಡುತ್ತಿದ್ದೀರಾ ಎಂದು ಪ್ರಶ್ನೆ ಮಾಡಿದ್ಧಾರೆ.

ಈ ಕುರಿತು ಮಾತನಾಡಿರುವ ಚಂದ್ರಿಕಾ ದೀಕ್ಷಿತ್ ಫಾಲೋವರ್ಸ್‌ಗಳ ಸಂಖ್ಯೆ ಸಾವಿರ ಇರಲಿ ಅಥವಾ ಲಕ್ಷಾಂತರ ಇರಲಿ ನಿಮಗೆಲ್ಲ ಕೇವಲ ವ್ಯೂವ್ಸ್ ಬೇಕು ಅಷ್ಟೇ ಎಂದು ಹೇಳಿದ್ದಾರೆ. ಬೇರೆಯವರ ಜೊತೆ ಮಲಗಲು ಸಿದ್ಧ ಎಂದು ನಾನಾಡಿದ ಕೇವಲ ಅದೊಂದು ಮಾತಿನ ಆಧಾರದ ಮೇಲೆ ನೀವೆಲ್ಲ ನನ್ನ ಚಾರಿತ್ಯ್ರವನ್ನು ಪ್ರಶ್ನೆ ಮಾಡ್ತಿದ್ದೀರಲ್ಲ..? ನೀವು ಆ ಮೂರುವರೆ ಗಂಟೆಯ ಸಂಪೂರ್ಣ ಪಾಡ್‌ಕಾಸ್ಟ್‌ನ ನೋಡಿದ್ದೀರಾ..? ಎಂದು ಪ್ರಶ್ನೆ ಮಾಡಿದ್ಧಾರೆ. ನಾನು ಆ ಮಾತ್ಯಾಕೆ ಹೇಳಿದೆ ಅದಕ್ಕೂ ಮೊದಲು ನಾನು ಮಾತನಾಡಿದ್ದೇನು ಎನ್ನುವುದಾದರೂ ಗೊತ್ತಾ..? ಎಂದಿದ್ಧಾರೆ.
ನಾನು ರಸ್ತೆಯಲ್ಲಿ ಅಂಗಡಿ ಹಾಕಲು ಕೂಡ ಸಿದ್ದ, ಇಟ್ಟಿಗೆ ಎತ್ತಲು ಕೂಡ ಸಿದ್ದ, ಕೂಲಿ ಕೆಲಸಕ್ಕೂ ಸಿದ್ದ, ತಲೆ ಮೇಲೆ ಕಲ್ಲು ಹೊರಲು ಕೂಡ ಸಿದ್ಧ ಎಂದು ಹೇಳಿರುವ ಚಂದ್ರಿಕಾ ದೀಕ್ಷಿತ್ ಎಲ್ಲಾ ಕೆಲಸವನ್ನು ಮಾಡಲು ಕೂಡ ನಾನು ಸಿದ್ಧ ಎಂದು ಹೇಳಿದ್ದಾರೆ. ಕೊನೆಯಲ್ಲಿ ನನ್ನ ಬಳಿ ಬೇರೆ ಯಾವ ಆಯ್ಕೆ ಇಲ್ಲದಿದ್ದಾಗ ನಾನು ನನ್ನ ಮಗನ ಭವಿಷ್ಯಕ್ಕಾಗಿ ಬೇರೆಯವರ ಜೊತೆ ಮಲಗಲು ಸಿದ್ಧ ಎಂದು ನಾನು ಹೇಳಿದ್ದು ಎಂದು ಹೇಳಿದ್ದಾರೆ. ಈ ಮೂಲಕ ತಮ್ಮ ಮಾತನ್ನು ಸಮರ್ಥಿಸಿಕೊಂಡಿದ್ಧಾರೆ.
ಮುಂದುವರೆದು ನನ್ನ ಉಸಿರು ಇರುವವರೆಗೆ, ನನ್ನಲ್ಲಿ ಶಕ್ತಿ ಇರುವವರೆಗೆ ನಾನು ಹೋರಾಡುತ್ತೇನೆ ಹೊರತು ಆತ್ಮ*ಹತ್ಯೆ ಮಾಡಿಕೊಳ್ಳಲ್ಲ ಎಂದು ಹೇಳಿರುವ ಚಂದ್ರಿಕಾ ನಾನೇನು ತಪ್ಪು ಮಾಡಿದ್ದೇನೆ ಎಂದಿದ್ದಾರೆ. ನಿಮ್ಮೆಲ್ಲರಿಗೆ ಕೇವಲ ವ್ಯೂವ್ಸ್ ಬೇಕು, ಅದಕ್ಕಾಗಿ ನೀವು ಯಾವ ಹಂತಕ್ಕೂ ಬೇಕಾದರೂ ಹೋಗುತ್ತೀರಾ ಎಂದು ಕಿಡಿ ಕಾರಿರುವ ಚಂದ್ರಿಕಾ ದೀಕ್ಷಿತ್ ನನ್ನ ಜಾಗದಲ್ಲಿ ಬೇರೆಯವರು ಇದ್ದರೆ ನಿಮ್ಮ ಈ ಮಾನಸಿಕ ಕಿರುಕುಳದಿಂದ ಅವರೇನು ಮಾಡಿಕೊಳ್ತಿದ್ದರೋ ಏನೋ ಎಂದು ಹೇಳಿದ್ಧಾರೆ.
ನಾನು ಮಾನಸಿಕವಾಗಿ ಸದೃಢವಾಗಿದ್ದೇನೆ ಹೀಗಾಗಿಯೇ ಇನ್ನೂ ಇದ್ದೇನೆ ಎಂದು ಹೇಳಿರುವ ಚಂದ್ರಿಕಾ ನಾನು ಎಲ್ಲವನ್ನೂ ಮಾಡಬಲ್ಲೆ ಕೊನೆಯದಾಗಿ ನನ್ನ ಬಳಿ ಏನೂ ಉಳಿಯದಿದ್ದಾಗ ನಾನು ಮಲಗಲು ಸಿದ್ಧ ಎಂದು ಹೇಳಿದ್ದೇನೆ ಎಂದು ಪುನರುಚ್ಚಿಸಿದ್ದಾರೆ. ನಾನು ಹೇಡಿಯಂತೆ ಸಾಯಲಾರೆ ಎಂದಿದ್ದಾರೆ. ಚಂದ್ರಿಕಾ ದೀಕ್ಷಿತ್ ಅವರ ಈ ವಿಡಿಯೋ ಕೂಡ ವೈರಲ್ ಆಗಿದ್ದು ಹಲವರು ಚಂದ್ರಿಕಾ ವಿರುದ್ಧ ಮತ್ತೊಮ್ಮೆ ತಮ್ಮ ಆಕ್ರೋಶವನ್ನು ಹೊರ ಹಾಕುತ್ತಿದ್ದಾರೆ. ಟ್ರೋಲ್ ಮಾಡುತ್ತಿದ್ದಾರೆ.


Click it and Unblock the Notifications











