Anupama Gowda: ಸುವರ್ಣದಲ್ಲಿ ನಿರೂಪಕಿ ಅನುಪಮಾ ಗೌಡ ಜಾಕ್ ಪಾಟ್ ಹೊಡಿತು
ವಿನೂತನ ಧಾರಾವಾಹಿಗಳ ಜೊತೆಗೆ ವಿಭಿನ್ನ ರೀತಿಯ ರಿಯಾಲಿಟಿ ಶೋ ಗಳ ಮೂಲಕ ಕಿರುತೆರೆ ವೀಕ್ಷಕರಿಗೆ ಮನರಂಜನೆಯ ಮಹಾಪೂರವನ್ನೇ ಉಣಬಡಿಸುತ್ತಿದೆ ಸ್ಟಾರ್ ಸುವರ್ಣ ವಾಹಿನಿ. ಇತ್ತೀಚೆಗಷ್ಟೇ 'ಅವನು ಮತ್ತು ಶ್ರಾವಣಿ' ಧಾರಾವಾಹಿಯ ಪ್ರಸಾರ ಶುರು ಮಾಡಿರುವ ಸ್ಟಾರ್ ಸುವರ್ಣ ವಾಹಿನಿಯು ಇದೀಗ ಮಗದೊಂದು ಸಿಹಿ ಸುದ್ದಿಯನ್ನು ನೀಡಿದೆ.
ನಿಮ್ಮ ನೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಇದೀಗ ಹೊಸದೊಂದು ರಿಯಾಲಿಟಿ ಶೋ ಶುರುವಾಗಲಿದೆ. ಹೌದು, 'ಸುವರ್ಣ ಜಾಕ್ ಪಾಟ್' ಎನ್ನುವ ರಿಯಾಲಿಟಿ ಶೋವನ್ನು ಸ್ಟಾರ್ ಸುವರ್ಣ ವಾಹಿನಿಯು ಶೀಘ್ರದಲ್ಲಿ ಶುರು ಮಾಡಲಿದ್ದು, ಕಿರುತೆರೆ ನಟಿ, ನಿರೂಪಕಿ ಅನುಪಮಾ ಗೌಡ ಈ ಶೋವಿನ ಸಾರಥ್ಯ ವಹಿಸಿಕೊಳ್ಳಲಿದ್ದಾರೆ.

ಈಗಾಗಲೇ 'ಸುವರ್ಣ ಜಾಕ್ ಪಾಟ್' ಶೋವಿನ ಪ್ರೋಮೋ ಕೂಡಾ ರಿಲೀಸ್ ಆಗಿದ್ದು, ಅದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಮಜಾಭಾರತ' ಶೋವಿನ ನಿರೂಪಣೆ ಮಾಡುವ ಮೂಲಕ ನಿರೂಪಕಿಯಾಗಿ ಭಡ್ತಿ ಪಡೆದ ಅನುಪಮಾ ಗೌಡ ಮುಂದೆ 'ಕನ್ನಡ ಕೋಗಿಲೆ', 'ರಾಜ ರಾಣಿ', 'ನನ್ನಮ್ಮ ಸೂಪರ್ ಸ್ಟಾರ್' ರಿಯಾಲಿಟಿ ಶೋಗಳ ಸಾರಥ್ಯವನ್ನು ವಹಿಸಿಕೊಂಡಿದ್ದರು.
ಇದರ ಜೊತೆಗೆ ವಾರಾಂತ್ಯದಲ್ಲಿ ಪ್ರಸಾರವಾಗುತ್ತಿರುವ 'ಸುವರ್ಣ ಸೂಪರ್ ಸ್ಟಾರ್' ಶೋವಿನ ನಿರೂಪಣೆ ಮಾಡುತ್ತಿರುವ ಅನುಪಮಾ ಗೌಡಗೆ ಕಿರುತೆರೆಯ ನಂಟು ಬೆಸೆದುಕೊಂಡಿದ್ದು ಕೂಡಾ ರಿಯಾಲಿಟಿ ಶೋ ಮೂಲಕ. 'ಹಳ್ಳಿ ದುನಿಯಾ' ಶೋ ಮೂಲಕ ಕಿರುತೆರೆಗೆ ಕಾಲಿಟ್ಡ ಅನುಪಮಾ ಗೌಡ ಮೊದಲು ಅಭಿನಯಿಸಿದ್ದು 'ಚಿ.ಸೌ.ಸಾವಿತ್ರಿ' ಧಾರಾವಾಹಿಯಲ್ಲಿ.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಅಕ್ಕ' ಧಾರಾವಾಹಿಯಲ್ಲಿ ದ್ವಿಪಾತ್ರದಲ್ಲಿ ನಟಿಸಿದ್ದ ಈಕೆ ನಂತರ ಸೀರಿಯಲ್‌ನಲ್ಲಿ ಕಾಣಿಸಿಕೊಂಡಿದ್ದು ಕಡಿಮೆಯೇ. ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್‌ನಲ್ಲಿ ಕಾಣಿಸಿಕೊಂಡ ಈಕೆ ಹಿರಿತೆರೆಗೂ ಹಾರಿದ್ದರು.
'ಆ ಕರಾಳ ರಾತ್ರಿ' ಸಿನಿಮಾ ಮೂಲಕ ಸ್ಯಾಂಡಲ್ ವುಡ್‌ಗೆ ಪಾದಾರ್ಪಣೆ ಮಾಡಿದ ಅನುಪಮಾ ಗೌಡ ಮುಂದೆ 'ತ್ರಯಬಕಂ','ಬೆಂಕಿಯಲ್ಲಿ ಅರಳಿದ ಹೂವು' ಸಿನಿಮಾಗೂ ಬಣ್ಣ ಹಚ್ಚಿದ್ದಾರೆ.


Click it and Unblock the Notifications











