ದೇವರ ಮಕ್ಕಳ ಮನೆಗೆ ಭೇಟಿ ನೀಡಿದ ಡ್ರೋನ್ ಪ್ರತಾಪ್, ಸರಿಗಮಪ ಮಂಜಮ್ಮ ಕುಟುಂಬಕ್ಕೆ ಸಹಾಯ..!

22ರ ಹರೆಯದಲ್ಲಿ 600ಕ್ಕೂ ಅಧಿಕ ಡ್ರೋನ್‌ಗಳನ್ನು ತಯಾರಿಸಿರುವುದಾಗಿ ಹೇಳಿ ಪ್ರಚಾರವನ್ನು ಪಡೆದು ಆ ನಂತರ ಕರುನಾಡಿನೆಲ್ಲೆಡೆ ಅಪಹಾಸ್ಯಕ್ಕೆ ಗುರಿಯಾದವರು ಡ್ರೋನ್ ಪ್ರತಾಪ್. ಆ ನಂತರ ಬಿಗ್ ಬಾಸ್ ಮನೆಗೆ ಹೋಗಿ ಡ್ಯಾಮೇಜ್ ಆಗಿದ್ದ ಇಮೇಜ್‌ನ ಸರಿ ಮಾಡಿಕೊಂಡು ಬಂದ ಡ್ರೋನ್ ಪ್ರತಾಪ್, ಈಗ ಮತ್ತೊಮ್ಮೆ ಜನರ ಹೃದಯವನ್ನು ಗೆದ್ದಿದ್ದಾರೆ. ಅಗಲಿದ ಮಂಜಮ್ಮ ಅವರ ಅಕ್ಕ ರತ್ನಮ್ಮ ಅವರಿಗೆ ಸಹಾಯದ ಹಸ್ತವನ್ನು ಚಾಚಿದ್ದಾರೆ.

ಹೌದು, ತಮ್ಮ ಚಿನ್ನದ ಕಂಠದ ಮೂಲಕ ಜೀ ಕನ್ನಡದ ಜನಪ್ರಿಯ ಸಂಗೀತ ರಿಯಾಲಿಟಿ ಕಾರ್ಯಕ್ರಮ ಸರಿಗಮಪದಲ್ಲಿ ಜನ ಮನ ಗೆದ್ದ ಮಂಜಮ್ಮ ಮೂರು ದಿನಗಳ ಹಿಂದೆ ಅನಾರೋಗ್ಯದಿಂದ ನಿಧನರಾಗಿದ್ದರು. ಜೀ ಕನ್ನಡ ಮೂಲಕ ಕರುನಾಡಿನೆಲ್ಲೆಡೆ ಮಂಜಮ್ಮ ತಮ್ಮ ಅಕ್ಕ ರತ್ನಮ್ಮ ಜೊತೆ ಹೆಸರು ಮಾಡಿದರು ಕೂಡ ಆರ್ಥಿಕ ಪರಿಸ್ಥಿತಿ ಮೊದಲಿಂದ ಸರಿ ಇರಲಿಲ್ಲ.

Former Bigg Boss contestant Drone Prathap provides financial support to Manjamma s family after her

ಸರಿಗಮಪ ಸೀಸನ್ 17ರಲ್ಲಿ ಭಾಗಿಯಾಗುವ ಮುನ್ನ ವಿಶೇಷ ಚೇತನ ಗಾಯಕಿಯರಾದ ಮಂಜಮ್ಮ ಮತ್ತು ರತ್ನಮ್ಮ ದೇವಸ್ಥಾನದ ಮುಂದೆ ಹಾಡುತ್ತಿದ್ದರು. ಮಂಜಮ್ಮ ಮತ್ತು ರತ್ನಮ್ಮ ಕಂಠಕ್ಕೆ ಮನಸೋತ ಜೀ ಕನ್ನಡ ತಮ್ಮ ಸರಿಗಮಪ ವೇದಿಕೆಗೆ ಇವರನ್ನು ಕರೆತಂದಿತ್ತು. ಇನ್ನು ಸರಿಗಮಪ ಕಾರ್ಯಕ್ರಮಕ್ಕೆ ಬರುವ ಮುನ್ನ ಮಂಜಮ್ಮ ಮತ್ತು ರತ್ನಮ್ಮ ಅವರಿಗೆ ಇರಲು ಸರಿಯಾದ ಮನೆ ಇರಲಿಲ್ಲ. ಇದ್ದ ಮನೆ ಸಂಪೂರ್ಣ ಹಾಳಾಗಿತ್ತು. ಇವರ ಕಂಠಕ್ಕೆ ಮನ ಸೋತಿದ್ದ ಹಿರಿಯ ನಟ ಜಗ್ಗೇಶ್ ಇವರಿಗೆ ಹೊಸ ಮನೆ ಕಟ್ಟಿಸಿಕೊಡುವ ಭರವಸೆಯನ್ನು ನೀಡಿದ್ದರು.

ಕೊಟ್ಟ ಮಾತಿನಂತೆ ರತ್ನಮ್ಮ ಮತ್ತು ಮಂಜಮ್ಮ ಅವರಿಗೆ ಮನೆಯನ್ನು ನಿರ್ಮಿಸಿದ್ದರು. ಶ್ರೀ ರಂಭಾಪುರಿ ಖಾಸಾ ಶಾಖಾ ಮಠದ ಶ್ರೀ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮಿಗಳ ಸಾನಿಧ್ಯದಲ್ಲಿ ಮಾರ್ಚ್ ಹನ್ನೆರಡರಂದು ಗೃಹ ಪ್ರವೇಶ ನಡೆದಿತ್ತು. ಜಗ್ಗೇಶ್ ಪರಿಮಳ ನಿಲಯ ಎಂದು ಹೆಸರಿರುವ ಮನೆಯ ಗೃಹ ಪ್ರವೇಶಕ್ಕೆ ಜಗ್ಗೇಶ್ ತಮ್ಮ ಪತ್ನಿ ಪರಿಮಳ ಅವರ ಜೊತೆ ಹೋಗಿದ್ದರು. ಈಗ ಇದೇ ಮನೆಗೆ ಒಂದು ಕಾಲದಲ್ಲಿ ಜಗ್ಗೇಶ್ ಅವರ ಕೆಂಗಣ್ಣಿಗೆ ಗುರಿಯಾಗಿದ್ದ ಡ್ರೋನ್ ಪ್ರತಾಪ್ ಹೋಗಿದ್ದಾರೆ. ಮಂಜಮ್ಮ ಅವರ ಫೋಟೋಗೆ ಪೂಜೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಮಂಜಮ್ಮ ಅವರ ಅಕ್ಕ ರತ್ನಮ್ಮ ಅವರಿಗೆ ತಮ್ಮ ಕೈಲಾದಷ್ಟು ಹಣವನ್ನು ನೀಡಿದ್ದಾರೆ.

ತಮ್ಮ ಈ ಭೇಟಿಯ ವಿಡಿಯೋವನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಡ್ರೋನ್ ಪ್ರತಾಪ್ ಗಾಯಕಿ ಮಂಜಮ್ಮ ಅವರ ಆತ್ಮಕ್ಕೆ ಈಗ ನೆಮ್ಮದಿ ಸಿಕ್ಕಿರಬಹುದು ಎಂದು ನಾನು ಭಾವಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ. ಸದ್ಯ ಡ್ರೋನ್ ಪ್ರತಾಪ್ ಅವರ ಈ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದ್ದು ಕಲಿಯುಗದ ದೇವರು ನೀವು ಎಂದೆಲ್ಲ ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ. ನಿಮಗೆ ಒಳ್ಳೆಯದಾಗಬೇಕು ನಿಮ್ಮ ಒಳ್ಳೆಯ ಮನಸಿಗೆ ಒಳ್ಳೆಯದೇ ಆಗುತ್ತೆ ಎಂದು ಹಾರೈಸಿದ್ದಾರೆ. ರತ್ನಮ್ಮ ಅವರ ಅಕೌಂಟ್ ನಂಬರ್ ಅಥವಾ ಅವರ ಫೋನ್ ಪೇ, ಗೂಗಲ್ ಪೇ ನಂಬರ್ ಹಾಕಿದರೆ ನಾವು ಕೂಡ ನಮ್ಮ ಕೈಲಾದಷ್ಟು ಸಹಾಯ ಮಾಡುತ್ತೇವೆ ಎಂದು ಕೂಡ ಕಾಮೆಂಟ್ ಮಾಡಿದ್ದಾರೆ. ಡ್ರೋನ್ ಪ್ರತಾಪ್ ಅವರ ಈ ದೊಡ್ಡ ಗುಣಕ್ಕೆ ಸಲಾಂ ಹೊಡೆಯುತ್ತಿದ್ದಾರೆ. ಇನ್ನು ಎತ್ತರೆತ್ತರಕ್ಕೆ ನೀವು ಬೆಳೆಯಬೇಕು ಎಂದು ಹರಸಿ ಹಾರೈಸುತ್ತಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X