ರಾಮನ ಅವತಾರದಲ್ಲಿ ಮಿಂಚಿದ ಮಾಜಿ ಬಿಗ್ ಬಾಸ್ ಸ್ಪರ್ಧಿ: ಕಿಶನ್ ಬಿಳಗಲಿ ಫೋಟೊಗಳು ವೈರಲ್

By ಅನಿತಾ ಬನಾರಿ

ಕಿಶನ್ ಬಿಳಗಲಿ.. ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಮೂಲಕ ಕನ್ನಡ ಕಿರುತೆರೆಗೆ ಪರಿಚಿತರಾದ ಹ್ಯಾಂಡ್ ಸಮ್ ಹುಡುಗ. ಡ್ಯಾನ್ಸರ್ ಆಗಿಯೂ ಗುರುತಿಸಿ ಸೈ ಎನಿಸಿಕೊಂಡಿರುವ ಕಿಶನ್ ಬಿಳಗಲಿ ಸೋಶಿಯಲ್ ಮೀಡಿಯಾದಲ್ಲಿ ಸಕತ್ ಆ್ಯಕ್ಟೀವ್. ಆಗಾಗ ತಮ್ಮ ಡ್ಯಾನ್ಸ್ ನ ಕ್ಲಿಪ್ಪಿಂಗ್ ಜೊತೆಗೆ ಫೋಟೋಶೂಟ್‌ಗಳನ್ನು ಕೂಡಾ ಹಂಚಿಕೊಳ್ಳುವ ಕಿಶನ್ ಹೊಸ ಫೋಟೋಶೂಟ್ ಸಖತ್ ಸದ್ದು ಮಾಡುತ್ತಿದೆ.

ರಾಮಮಂದಿರದ ಉದ್ಘಾಟನೆಯ ಶುಭದಿನದಂದು ಸಾಕ್ಷಾತ್ ರಾಮನ ಅವತಾರದಲ್ಲಿ ಕಿಶನ್ ಬಿಳಗಲಿ ಕಾಣಿಸಿಕೊಂಡಿದ್ದಾರೆ . ಆ ಮೂಲಕ ನೆಟ್ಟಿಗರ ಮನ ಸೆಳೆದಿದ್ದಾರೆ. ರಾಮನಂತೆ ಕಾವಿ ಧರಿಸಿರುವ ಕಿಶನ್ ರುದ್ರಾಕ್ಷಿ ಮಾಲೆಯನ್ನು ಹಾಕಿದ್ದಾರೆ. ಹಣೆಗೆ ರಾಮನಂತೆ ತಿಲಕವನ್ನು ಇಟ್ಟಿರುವ ಅವರು ಕೈಯಲ್ಲಿ ಬಿಲ್ಲು ಬಾಣ ಹಿಡಿದು ಫೋಟೋಕ್ಕೆ ಫೋಸ್ ನೀಡಿದ್ದಾರೆ. ಕಿಶನ್ ಫೋಟೋಗಳನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದು, ಕಮೆಂಟ್‌ಗಳ ಮಹಾಪೂರವೇ ಹರಿದುಬಂದಿದೆ.

Former Bigg Boss contestant Kishan Bilagali as Lord Ram Photo shoot Viral

ಅಂದ ಹಾಗೆ ಅದ್ಭುತವೆಂದರೆ ಕಿಶನ್ ಅಪ್‌ಲೋಡ್ ಮಾಡಿರುವ ಒಂದು ಫೋಟೋವಂತೂ ಬಹಳ ಅದ್ಭುತವಾಗಿದೆ. ಆಕಾಶದೆತ್ತರ ಬಾಣವನ್ನು ಗುರಿಮಾಡಿರುವ ಫೋಟೋವದು. ಈ ಹಿನ್ನಲೆಯಲ್ಲಿ ಸೂರ್ಯನೂ ಇದ್ದ ಕಾರಣ ಆ ಫೋಟೋ ತುಂಬಾ ಸೊಗಸಾಗಿ ಮೂಡಿಬಂದಿದೆ. ಕಿಶನ್ ಅವರು 'ಜೈ ಶ್ರೀರಾಮ್' ಎನ್ನುವ ಕ್ಯಾಪ್ಶನ್ ನಡಿಯಲ್ಲಿ ತಮ್ಮ ರಾಮನ ಅವತಾರದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಕಿಶನ್ ಅವರು ಹಾಕಿರುವಂತಹ ಫೋಟೋಗಳಿಗೆ 27 ಸಾವಿರಕ್ಕೂ ಅಧಿಕ ಲೈಕ್‌ಗಳು ಬಂದಿವೆ. ಮಾತ್ರವಲ್ಲದೇ ನೀವು ಸಾಕ್ಷಾತ್ ಶ್ರೀರಾಮನಂತೆ ಕಾಣಿಸುತ್ತಿದ್ದೀರಿ ಎಂಬ ಕಮೆಂಟ್ ಕೂಡಾ ಬಂದಿದ್ದು, ಕಿಶನ್ ಅವರ ಹೊಸ ಅವತಾರವನ್ನು ನೆಟ್ಟಿಗರ ಮನ ಸೆಳೆದಿರುವುದಕ್ಕೆ ಸಾಕ್ಷಿ.

ಮೂಲತಃ ಚಿಕ್ಕಮಗಳೂರಿನವರಾದ ಕಿಶನ್ ಬಿಳಗಲಿ ಅದ್ಭುತ ನೃತ್ಯಕಲಾವಿದ. ಶೈಮಕ್ ದಾವನ್ ಅವರ ಡ್ಯಾನ್ಸ್ ಅಕಾಡೆಮಿಯಲ್ಲಿ ಪಳಗಿದ ಕಿಶನ್ ಬಿಳಗಲಿ ಅವರು ತಮ್ಮದೇ ಆದ ಡ್ಯಾನ್ಸ್ ಸ್ಟುಡಿಯೋ ಹಾಗೂ ಫಿಟ್ನೆಸ್ ಸೆಂಟರ್ ಅನ್ನು ಕೂಡಾ ತೆರೆದಿದ್ದಾರೆ. 2018 ರ ಹಿಂದಿ ಕಿರುತೆರೆಯ ರಿಯಾಲಿಟಿ ಶೋ "ಡ್ಯಾನ್ಸ್ ದಿವಾನಿ ಶೋ" ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದ ಕಿಶನ್ ಬಿಳಗಲಿ ಆ ಶೋವಿನ ವಿಜೇತರಾಗಿಯೂ ಹೊರಹೊಮ್ಮಿದ್ದರು.

Former Bigg Boss contestant Kishan Bilagali as Lord Ram Photo shoot Viral

ಮುಂದೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ತಕಧಿಮಿತಾ' ಎನ್ನುವ ಕಾರ್ಯಕ್ರಮದಲ್ಲಿಯೂ ಭಾಗವಹಿಸಿದ್ದ ಕಿಶನ್ ಅಲ್ಲಿಯೂ ತಮ್ಮ ನೃತ್ಯದ ಮೂಲಕ ಗಮನಸೆಳೆದಿದ್ದಾರೆ. ಜೊತೆಗೆ ತಮ್ಮದೇ ಆದ ನೃತ್ಯ ತಂಡವನ್ನು ಕೂಡಾ ಅವರು ಹೊಂದಿದ್ದು ಹತ್ತು ಹಲವು ವೇದಿಕೆಗಳಲ್ಲಿ ನೃತ್ಯ ಪ್ರದರ್ಶನ ನೀಡಿದ್ದಾರೆ.

ಮುಂದೆ ಹಿಂದಿ ಬಿಗ್ ಬಾಸ್ ಸೀಸನ್ 12 ರಲ್ಲಿ ನೃತ್ಯ ಪ್ರದರ್ಶನ ನೀಡಿ ಸೈ ಎನಿಸಿಕೊಂಡಿದ್ದ ಕಿಶನ್ ಬಿಳಗಲಿ ಅವರು ಕಿಚ್ಚ ಸುದೀಪ್ ನಿರೂಪಣೆಯ ಕನ್ನಡ ಬಿಗ್ ಬಾಸ್ 7 ಸೀಸನ್ ನಲ್ಲಿ 10 ನೇ ಸ್ಪರ್ಧಿಯಾಗಿ ಭಾಗವಹಿಸಿದ್ದರು. ಇನ್ನು ವಿಸ್ಮಯ ಗೌಡ ಅವರ ನಿರ್ದೇಶನದ ಸಿನಿಮಾ ಮೂಲಕ ಹಿರಿತೆರೆಗೂ ಪಾದಾರ್ಪಣೆ ಮಾಡಿದ ಕಿಶನ್ ಬಿಳಗಲಿ ಅಲ್ಲೂ ಸಿನಿ ಪ್ರಿಯರ ಮನ ಸೆಳೆದಿದ್ದಾರೆ.

More from Filmibeat

English summary
Kishan Bilagali, who attracted attention through the photo shoot, charmed as Ram
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X