ಕೇವಲ ಹದಿನೇಳು ದಿನದಲ್ಲಿ ನಾಲ್ಕು ಕೆಜಿ ತೂಕ ಇಳಿಸಿಕೊಂಡ ರ‍್ಯಾಪಿಡ್ ರಶ್ಮಿ; ನಿರೂಪಕಿ ಕೊಟ್ಟ ಟಿಪ್ಸ್ ಏನು?

By ಅನಿತಾ ಬನಾರಿ Category : Tv

ರ‍್ಯಾಪಿಡ್ ರಶ್ಮಿ ಬಗ್ಗೆ ಗೊತ್ತಿಲ್ಲದವರಾರು ಹೇಳಿ? ರೇಡಿಯೋ ಜಾಕಿಯಾಗಿ ಗುರುತಿಸಿಕೊಂಡಿರುವ ರಶ್ಮಿ ಅರಳು ಹುರಿದಂತೆ ಪಟಪಟನೆ ಮಾತನಾಡುತ್ತಾ ಕೇಳುಗರ ಮನ ಸೆಳೆದ ಬೆಡಗಿ. ಜನಪ್ರಿಯ ರೆಡಿಯೋ ಶೋ 'ರೆಟ್ರೋ ಸವಾರಿ'ಯ ಸಾರಥಿಯಾಗಿದ್ದ ಈಕೆ ತಮ್ಮ ಮಾತಿನ ಮೂಲಕವೇ ಗುರುತಿಸಿಕೊಂಡವರು. ಮಾತ್ರವಲ್ಲ ಶೋತೃಗಳ ಮನ ಸೆಳೆದವರು. ಇದರ ಜೊತೆಗೆ ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸ್ಪರ್ಧಿಯಾಗಿ ಮೋಡಿ ಮಾಡಿದ್ದಾರೆ ರಶ್ಮಿ.

'ಬಿಗ್ ಬಾಸ್ ಕನ್ನಡ ಸೀಸನ್ 6'ರ ಸ್ಪರ್ಧಿಯಾಗಿ ದೊಡ್ಮನೆಯೊಳಗೆ ಕಾಲಿಟ್ಟಿದ್ದ ರ‍್ಯಾಪಿಡ್ ರಶ್ಮಿ ಅಲ್ಲೂ ಕೂಡಾ ಕಿರುತೆರೆ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾದರು. ಮುಂದೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಡ್ಯಾನ್ಸಿಂಗ್ ಸ್ಟಾರ್' ಸ್ಪರ್ಧಿಯಾಗಿ ರಶ್ಮಿ ಗಮನ ಸೆಳೆದಿದ್ದರು.

former Bigg Boss contestant Rapid Rashmi, who lost four kg in just seventeen days

ಹೀಗಿರುವಾಗ ರಶ್ಮಿ ಅವರು ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಅದೇನೆಂದರೆ, ರ‍್ಯಾಪಿಡ್ ರಶ್ಮಿ ಅವರು ತೂಕ ಇಳಿಸಿಕೊಂಡಿದ್ದಾರೆ. ಬರೋಬ್ಬರಿ ನಾಲ್ಕು ಕೆ.ಜಿ. ಅದು ಕೇವಲ 17 ದಿನಗಳಲ್ಲಿ. ಆಶ್ಚರ್ಯ ಎಂದರೂ ಅದು ಸತ್ಯ. ಅಂದ ಹಾಗೇ ರಶ್ಮಿ ಅವರು ತಾವು ತೂಕ ಕಳೆದುಕೊಂಡಿರುವ ವಿಚಾರದ ಜೊತೆಗೆ ಹೇಗೆ ಇಳಿಸಿಕೊಂಡಿದ್ದೇನೆ ಎಂಬುದನ್ನು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಸವಿವರವಾಗಿ ಹಂಚಿಕೊಂಡಿದ್ದಾರೆ.

ರಶ್ಮಿ ಅವರು ನೀಡಿರುವ ಸಿಂಪಲ್‌ ಟಿಪ್ಸ್‌ ಇಲ್ಲಿದೆ. ಅದೇನೆಂದರೆ ರಾತ್ರಿ 7.30 ಒಳಗೆ ಊಟ ಮುಗಿಸಿ ಎಂದಿರುವ ಆಕೆ, ಬೆಳಿಗ್ಗೆ 11 ಗಂಟೆಗೆ ತಿಂಡಿ, 2.30ಕ್ಕೆ ಊಟ ಮುಗಿಸುತ್ತಾರೆ. ಇದರ ಜೊತೆಗೆ ಆಕೆ ಮುಖ್ಯವಾಗಿ 40-30-30 ಫಾರ್ಮುಲಾವನ್ನು ಹೇಳಲು ಮರೆಯಲಿಲ್ಲ. ಅದೇನೆಂದರೆ ನಾರಿನಂಶ, ಪ್ರೊಟೀನ್ ಮತ್ತು ಕಾರ್ಬೋಹೈಡ್ರೇಟ್‌ ಪ್ರಮಾಣವನ್ನು ಪ್ರತಿನಿತ್ಯ 40- 30- 30ರ ಫಾರ್ಮುಲಾದಲ್ಲಿ ಸ್ವೀಕರಿಸಬೇಕು ಎಂದು ಹೇಳಿದ್ದಾರೆ ರಶ್ಮಿ.

former Bigg Boss contestant Rapid Rashmi, who lost four kg in just seventeen days

ಈ ರೀತಿಯ ಫಾರ್ಮುಲಾವನ್ನು ನಾವು ಜೀವನದಲ್ಲಿ ಅಳವಡಿಸಲಾರಂಭಿಸಿದರೆ ತುಂಬಾ ಸುಲಭವಾಗಿ ತೂಕವನ್ನು ಕಳೆದುಕೊಳ್ಳಬಹುದು ಎಂದು ರ‍್ಯಾಪಿಡ್ ರಶ್ಮಿ ಹೇಳಿಕೊಂಡಿದ್ದಾರೆ. ಜೊತೆಗೆ ನಾವು ಪ್ರತಿದಿನ ಸೇವಿಸುವ ಆಹಾರದಲ್ಲಿ ಮೊಳಕೆಕಾಳು, ಸೊಪ್ಪು, ತರಕಾರಿಯ ಅಂಶಗಳು ಹೇರಳವಾಗಿರಬೇಕು ಎನ್ನುತ್ತಾರೆ ರಶ್ಮಿ. ಇದು ಸಸ್ಯಹಾರಿಗಳಿಗೆ ಮಾತ್ರ. ಒಂದು ವೇಳೆ ಮಾಂಸಹಾರಿಗಳಾದರೆ ಮೀನು, ಚಿಕನ್‌, ಮೊಟ್ಟೆಯ ಬಿಳಿಯ ಭಾಗ ತಿನ್ನಬೇಕು ಎಂದು ಹೇಳುತ್ತಾರೆ ರಶ್ಮಿ.

ಮುಖ್ಯವಾದ ವಿಚಾರವೆಂದರೆ ಜಂಕ್ ಫುಡ್ ಅವಾಯ್ಡ್ ಮಾಡಬೇಕು ಎಂದು ಹೇಳಿದ್ದಾರೆ. ಒಮ್ಮೆ ತಿಂದರೆ ಮತ್ತೊಮ್ಮೆ, ಮಗದೊಮ್ಮೆ ಜಂಕ್ ಫುಡ್ ತಿನ್ನಬೇಕು ಎನಿಸುತ್ತದೆ. ಹಾಗಾಗಿ, ಆರೋಗ್ಯದ ದೃಷ್ಟಿಯಿಂದ ಜಂಕ್ ಫುಡ್ ಅವಾಯ್ಡ್ ಮಾಡಿ ಎಂದು ಸಲಹೆ ನೀಡುವ ರಶ್ಮಿ, ದಿನಕ್ಕೆ ಮೂರು ಗಂಟೆ ವರ್ಕ್ ಔಟ್ ಕೂಡಾ ಮಾಡುತ್ತಾರಂತೆ.

More from Filmibeat

English summary
Rapid Rashmi who gained attention through Bigg Boss is now in the news after losing weight
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X