"30 ದಿನ.. 200 ಡ್ರೆಸ್.. ನಾಳೆ ತೊಡುವುದಕ್ಕೆ ಬಟ್ಟೆ ಇಲ್ಲ" ಎಂದ ನಿವೇದಿತಾ; ನೆಟ್ಟಿಗರ ಕಾಮೆಂಟ್ ಏನು ಗೊತ್ತಾ?

By ಪೂರ್ವ

ನಿವೇದಿತಾ ಗೌಡ ಇತ್ತೀಚಿನ ದಿನಗಳಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ನಿವಿ ಕ್ಯೂಟ್ ಲುಕ್ ನೋಡಲು ಅಭಿಮಾನಿಗಳು ದುಂಬಾಲು ಬೀಳುತ್ತಿದ್ದಾರೆ. ಜಾಲಿ ಮೂಡ್‌ನಲ್ಲಿರುವ ನಿವೇದಿತಾ ಗೌಡ ನೋಟಕ್ಕೆ ಸಾಕಷ್ಟು ಫ್ಯಾನ್ಸ್ ಫಿದಾ ಆಗಿದ್ದಾರೆ. ವಿಚ್ಛೇದನದ ಬಳಿಕ ರೀಲ್ಸ್ ಮಾಡುತ್ತಾ ಎಲ್ಲರ ಮನ ಗೆದ್ದಿರುವ ಹಾಟ್ ಬ್ಯೂಟಿ ಎಂದು ಹೇಳಿದರೆ ತಪ್ಪಾಗಲಾರದು. ನಿವೇದಿತಾ ಇದೀಗ ಬಿಕಿನಿ ತೊಟ್ಟು ಮೈ ಬಳುಕಿಸಿ ನೃತ್ಯ ಮಾಡಿದ್ದಾರೆ. ಈ ರೀಲ್ಸ್ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.

ನಿವೇದಿತಾ ಗೌಡ ಈ ವೈಯ್ಯಾರ ನೋಡುಗರಿಗೆ ಬಹಳಷ್ಟು ಖುಷಿ ನೀಡಿದೆ. ಆದರೆ, ಬಹಳಷ್ಟು ಜನ ನಿವೇದಿತಾ ಗೌಡ ಬಿಗ್ ಬಾಸ್‌ಗೆ ಹೋದಾಗ ಇರುವ ರೀತಿಗೂ ಹಾಗೆಯೇ ಈಗ ಇರುವ ರೀತಿಗೂ ಬಹಳಷ್ಟು ವ್ಯತ್ಯಾಸಗಳು ಇದೆ ಎಂದು ಆಗಾಗ ನಿವೇದಿತಾ ಗೌಡಗೆ ಫ್ಯಾನ್ಸ್ ಕೇಳುತ್ತಲೇ ಇರುತ್ತಾರೆ. ಯಾಕಂದ್ರೆ ಈಗ ನಿವೇದಿತಾ ಗೌಡ ಅರ್ಧಂಬರ್ಧ ಬಟ್ಟೆ ತೊಟ್ಟು ಬಹಳಷ್ಟು ಜನರ ಕೆಂಗಣ್ಣಿಗೆ ಗುರಿ ಆಗಿದ್ದರು. ಸಾಕಷ್ಟು ಟೀಕೆಗಳು ಕೂಡ ಅವರ ಮೇಲೆ ಬಂದಿತ್ತು. ಏನೇ ಮಾಡಿದರೂ, ಅಪವಾದಗಳು ಬಂದರೂ ಕೂಡ ನಿವೇದಿತಾ ಗೌಡ ಮಾತ್ರ ಯಾವುದಕ್ಕೂ ಕ್ಯಾರೆ ಎನ್ನುತ್ತಿಲ್ಲ.

Former Bigg Boss Kannada contestant Niveditha gowda another back short skirt went viral

ಸದ್ಯ ನಿವೇದಿತಾ ಗೌಡ ಥೈಲ್ಯಾಂಡ್ ಪ್ರವಾಸದಲ್ಲಿರುವುದು ಗೊತ್ತೇ ಇದೆ. ಅಲ್ಲಿಂದ ಸಖತ್ ಹಾಟ್ ಆಗಿ ರೀಲ್ಸ್ ಮಾಡಿ ಶೇರ್ ಮಾಡುತ್ತಿದ್ದಾರೆ. ಈಗ ಚೆಲುವೆ ಇನ್ನೊಂದು ರೀಲ್ಸ್ ಮೂಲಕ ಅಭಿಮಾನಿಗಳ ಹೃದಯಕ್ಕೆ ಕಲರ್ ಫುಲ್ ಚಿಟ್ಟೆ ಬಿಟ್ಟಿರುವುದು ಮಾತ್ರ ಸತ್ಯ. ನಿವೇದಿತಾ ಗೌಡ ಇದೀಗ ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ಮತ್ತೊಂದು ಹೊಸ ರೀಲ್ ಅನ್ನು ಹೊರ ಹಾಕಿದ್ದಾರೆ. ಅದರೊಂದಿಗೆ ಫೋಟೋಗಳನ್ನು ರಿವೀಲ್ ಮಾಡಿದ್ದಾರೆ.

ನಿವೇದಿತಾ ಗೌಡ ಕಪ್ಪು ಬಣ್ಣದ ಶಾರ್ಟ್ ಡ್ರೆಸ್‌ ತೊಟ್ಟು ಸೊಂಟ ಬಳುಕಿಸಿದ್ದಾರೆ. ರೀಲ್ಸ್ ನೋಡಿದ ನೆಟ್ಟಿಗರು ನಿವೇದಿತಾ ಗೌಡಗೆ ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ. ನಿನ್ನೆ ಶೇರ್ ಮಾಡಿದ್ದ ರೀಲ್ ನೋಡಿ "ಇವತ್ತು ಸಂಕ್ರಾಂತಿ ಹಬ್ಬ. ಇವತ್ತಾದರೂ ಸೀರೆಯುಟ್ಟು ಬರುತ್ತೀರಿ ಎಂದುಕೊಂಡಿದ್ದೆವು" ಎಂದು ನಿರಾಸೆಯ ಪ್ರತಿಕ್ರಿಯೆ ನೀಡಿದ್ದಾರೆ.

ವಿದೇಶದಲ್ಲಿ ನಿವೇದಿತಾ ಗೌಡ ಫ್ರೀ ಬರ್ಡ್

ನಿವೇದಿತಾ ಗೌಡ ಇನ್ನೂ ಕೂಡ ಥೈಲ್ಯಾಂಡ್‌ನಲ್ಲಿ ವೆಕೇಶನ್ ಮೂಡ್‌ನಲ್ಲಿದ್ದಾರೆ. ಹಾಗೆಯೇ ಸಖತ್ ಜಾಲಿ ಮೂಡ್‌ನಲ್ಲಿ ಇರುವ ನಟಿ ಗ್ಲಾಮರ್ ಅವತಾರಕ್ಕೆ ಸಾಕಷ್ಟು ಜನ ಫಿದಾ ಆಗಿರುವುದು ಸತ್ಯ. ಚಂದನ್ ಶೆಟ್ಟಿ ಜೊತೆಗೆ ಪ್ರೀತಿಸಿ ಮದುವೆಯಾದ ನಿವೇದಿತಾ ಗೌಡ ವಿಚ್ಛೇದನ ಮಾಡಿಕೊಂಡಿದ್ದರು. ಈ ನಿರ್ಧಾರಕ್ಕೆ ನೆಟ್ಟಿಗರು ನಿವೇದಿತಾ ಗೌಡರನ್ನು ತರಾಟೆಗೆ ತೆಗೆದುಕೊಂಡಿದ್ದರು. ಆದರೆ, ನಿವೇದಿತಾ ಗೌಡ ಅದ್ಯಾವುದಕ್ಕೂ ಪ್ರತಿಕ್ರಿಯೆ ನೀಡುವುದಕ್ಕೆ ಹೋಗಿಲ್ಲ.

ಕಾಮೆಂಟ್ ಮೇಲೆ ಕಾಮೆಂಟ್

"ನಿವೇದಿತಾ ಗೌಡ ರೀಲ್ಸ್ ಮಾಡುವುದಕ್ಕೆ ಚಂದನ್ ರನ್ನು ಬಿಟ್ಟಿದ್ದು, ಇನ್ನೂ ಜಾಲಿ ಆಗಿ ಇರಬಹುದು" ಅಂತ ಕಾಮೆಂಟ್‌ಗಳನ್ನು ಕೆಲವು ದಿನಗಳಿಂದ ಮಾಡುತ್ತಲೇ ಇದ್ದಾರೆ. ಪ್ರತಿ ಬಾರಿ ರೀಲ್ ಹಾಕಿದಾಗಲೂ ಕಾಮೆಂಟ್‌ಗಳೋ ಕಾಮೆಂಟ್. ಈಗ "ಯಾರೋ‌ಒಬ್ಬ ಹಣ ಮಾಡಿರೋ ಬಕರಾ ಪ್ರಡ್ಯೂಸರ್ ಸಿಗ್ತಾನೆ ಬಿಡಮ್ಮ. ಸದ್ಯದಲ್ಲೇ‌ ಹೀರೋಯಿನ್ ಆಗ್ತೀಯ" ಅಂತ ಟೀಕಿಸಿದ್ದಾರೆ. ಯಾರೆ ಏನೇ ಹೇಳಿದರೂ ಕೂಡ ಅದಕ್ಕೆ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ತಮ್ಮ ಪಾಡಿಗೆ ಕಾಲ ಕಳೆಯುತ್ತಿದ್ದಾರೆ. ಗಿಚ್ಚಿ ಗಿಲಿ ಗಿಲಿ ಮೂಲಕ ಎಲ್ಲರ ಮನಸನ್ನು ಕದ್ದ ನಿವೇದಿತಾ ಗೌಡ ಸಿನಿಮಾಗಳತ್ತ ಮುಖ ಮಾಡಿದ್ದಾರೆ.

More from Filmibeat

English summary
Former Bigg Boss Kannada contestant Niveditha gowda another back short skirt went viral;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X