Vaishnavi Gowda: ಹೊಸ ಫೋಟೋಶೂಟ್‌ನಲ್ಲಿ ವೈಷ್ಣವಿ ಗೌಡ, ಮಾಡರ್ನ್ ಸೀತಾ ಎಂದ ಅಭಿಮಾನಿಗಳು
ಸೀತಾರಾಮ ಧಾರಾವಾಹಿಯ ಮೂಲಕ ಮಿಂಚುತ್ತಿರುವ ನಟಿ ವೈಷ್ಣವಿ ಗೌಡ ಇದೀಗ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಇವರ ಫೋಟೋ ನೋಡಿದ ಅಭಿಮಾನಿಗಳು ಕಳೆದು ಹೋಗಿದ್ದಾರೆ. ವೈಷ್ಣವಿ ಗೌಡ ಸಾಮಾಜಿಕ ಜಾಲತಾಣದಲ್ಲಿ ಬಹಳ ಆಕ್ಟಿವ್ ಆಗಿದ್ದು ಆಗ್ಗಾಗೆ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಇತ್ತೀಚೆಗೆ ಹೊಸ ಫೋಟೋಶೂಟ್‌ನಲ್ಲಿ ಮಿಂಚಿದ್ದಾರೆ.
ವೈಷ್ಣವಿ ಗೌಡ ಫೋಟೋಗಳನ್ನು ನೋಡಿದ ಅಭಿಮಾನಿಗಳು ಖುಷಿಪಟ್ಟು ಲೈಕ್, ಕಾಮೆಂಟ್‌ಗಳನ್ನು ಮಾಡುತ್ತಾರೆ. ಸದ್ಯಕ್ಕೆ ನಟಿ ವೈಷ್ಣವಿ ಗೌಡ ಸೀತಾರಾಮ ಧಾರಾವಾಹಿಯಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. 'ಅಗ್ನಿಸಾಕ್ಷಿ' ಧಾರಾವಾಹಿಯ ಸನ್ನಿಧಿ ಪಾತ್ರದ ಮೂಲಕ ಎಲ್ಲರ ಮನೆಮಾತಾಗಿದ್ದ ಇವರು ಮನೆ ಮಂದಿಯ ಫೇವರೆಟ್ ನಟಿ.

ತನ್ನ ಮುದ್ದಾದ ಮಾತುಗಳಿಂದ ಎಲ್ಲರ ಮನಗೆದ್ದ ನಟಿ ಫೋಟೋ ಎಲ್ಲೆಡೆ ವೈರಲ್ ಆಗುತ್ತಿದೆ. ಮೆರೂನ್ ಬಣ್ಣದ ಮೈಗಂಟುವ ಸ್ಟೈಲಿಶ್ ಗೌನ್ ಧರಿಸಿಕೊಂಡು ಕ್ಯಾಮೆರಾಗೆ ಪೋಸ್ ಕೊಟ್ಟ ವೈಷ್ಣವಿ ತುಂಬಾ ಕ್ಯೂಟ್ ಆಗಿ ಕಾಣಿಸಿದ್ದಾರೆ . ಇನ್ನು ಫೋಟೋ ನೋಡಿದ ಅಭಿಮಾನಿಗಳು ಮಾತ್ರ ಸೋ ಕ್ಯೂಟ್ ಎಂದು ಹೇಳಿದ್ದಾರೆ. ಇನ್ನು ವೈಷ್ಣವಿ ಬೇರೆ ಬೇರೆ ರೀತಿಯ ಭಂಗಿಯಲ್ಲಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.
ವೈಷ್ಣವಿ ಗೌಡ ನಟನೆಗೆ ಫಿದಾ ಆದ ಅಭಿಮಾನಿಗಳು
ಇನ್ನು ವೈಷ್ಣವಿ ಗೌಡ ಮೊದಲ ಬಾರಿಗೆ ಬಣ್ಣ ಹಚ್ಚಿದ್ದು ದೇವಿ ಧಾರಾವಾಹಿಗೆ. ಈ ಧಾರಾವಾಹಿಯ ಮೂಲಕ ಕಿರುತೆರೆಗೆ ಎಂಟ್ರಿಯಾದ ವೈಷ್ಣವಿ ಗೌಡ ಆ ಬಳಿಕ ಹಿಂದೆ ತಿರುಗಿ ನೋಡುವ ಮಾತೇ ಎದುರಾಗಿಲ್ಲ.. ಆ ಬಳಿಕ ನಂತರ 'ಪುನರ್ ವಿವಾಹ'ದಲ್ಲಿ ನಟಿಸಿ ಜನರ ಮನಸ್ಸು ಗೆದ್ದರು.

ಬಿಗ್ ಬಾಸ್ ಮೂಲಕ ಮನಗೆದ್ದ ನಟಿ
ಇನ್ನೂ ಬಿಗ್ ಬಾಸ್ ಸೀಸನ್ 08 ಮೂಲಕ ಇನ್ನಷ್ಟು ಜನರ ಮನಸ್ಸಿಗೆ ಹತ್ತಿರ ಆಗಿದ್ದರು. ನಟಿಗೆ ಇನ್‌ಸ್ಟಾಗ್ರಾಮ್‌ನಲ್ಲಿ 1.3 ಮಿಲಿಯನ್ ಫಾಲೋವರ್ಸ್ ಇದ್ದಾರೆ. ಈವರೆಗೆ 1,000 ಕ್ಕೂ ಹೆಚ್ಚು ಪೋಸ್ಟ್‌ಗಳನ್ನು ಹಂಚಿಕೊಂಡಿದ್ದಾರೆ. ಇನ್ನು ವೈಷ್ಣವಿ ಗೌಡ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರುತ್ತಾರೆ.
ವೈಷ್ಣವಿ ಫೋಟೋಗೆ ಲೈಕ್ ನೀಡುತ್ತಿರುವ ಅಭಿಮಾನಿಗಳು
ಆಗ್ಗಾಗೆ ಫೋಟೋಶೂಟ್ ಮಾಡಿಸಿಕೊಂಡು ಅಭಿಮಾನಿಗಳ ಕಣ್ಣಿಗೆ ರಸದೂಟ ಉಣ ಬಡಿಸುತ್ತಾ ಇರುತ್ತಾರೆ. ವೈಷ್ಣವಿ ಫೋಟೋಗೆ ನೆಟ್ಟಿಗರು ನಾನಾ ರೀತಿ ಕಾಮೆಂಟ್ ಸಹ ಮಾಡಿದ್ದಾರೆ. ಸೂಪರ್ ಸ್ಮೈಲ್, ಬ್ಯೂಟಿಫುಲ್ ಎಂದೆಲ್ಲ ಕಾಮೆಂಟ್ ಮಾಡುತ್ತಿದ್ದಾರೆ. ಇನ್ನೂ ಕೆಲವರು ಮಾಡರ್ನ್ ಸೀತಮ್ಮ ಎಂದೆಲ್ಲ ಕರೆಯುತ್ತಿದ್ದಾರೆ .
ಇನ್ನೂ ವೈಷ್ಣವಿ ಗೌಡ ನೋಟಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ವೈಷ್ಣವಿ ಗೌಡ ಫ್ಯಾಷನ್‌ಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಾರೆ. ವೈಷ್ಣವಿ ಗೌಡ ಫೋಟೋದಲ್ಲಿ ಬಹಳ ಕ್ಯೂಟ್ ಆಗಿ ಕಾಣಿಸುತ್ತ ಇರುವುದರಿಂದ ನೋಡುಗರು ಮೆಚ್ಚಿಕೊಂಡಿದ್ದಾರೆ. ಇವರ ನಟನೆಗೆ ಅನೇಕರು ಫಿದಾ ಆಗಿದ್ದು ನೆಚ್ಚಿನ ನಟಿಗೆ ಶುಭ ಹಾರೈಸುತ್ತಾ ಇರುತ್ತಾರೆ ಅಭಿಮಾನಿಗಳು.


Click it and Unblock the Notifications











