twitter
    For Quick Alerts
    ALLOW NOTIFICATIONS  
    For Daily Alerts

    ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ನವರ ನೆಚ್ಚಿನ ಸೀರಿಯಲ್‌ಗಳು ಇವು!

    |

    ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಸಿಎಂ ಸ್ಥಾನದಿಂದ ಇಳಿದ ನಂತರ ಸಧ್ಯ ತಮ್ಮ ಕುಟುಂಬ, ಆರೋಗ್ಯದ ಬಗ್ಗೆ ಹೆಚ್ಚು ಗಮನವನ್ನು ಹರಿಸಿದ್ದಾರೆ. ರಾಜ್ಯದ ಸಿಎಂ ಆಗಿ ಕಾರ್ಯ ನಿರ್ವಹಿಸುವಾಗ ಅತ್ಯಂತ ಶಿಸ್ತಿನಿಂದ, ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಿದ್ದ ಯಡಿಯೂರಪ್ಪನವರು ಸಾಕಷ್ಟು ಜನಪರ ಯೋಜನೆಗಳನ್ನು ತನ್ನ ಅಧಿಕಾರದ ಅವಧಿಯಲ್ಲಿ ಹೊರತಂದಿದ್ದಾರೆ.

    ಬಿಜೆಪಿ ಪಕ್ಷದಲ್ಲಿ ಒಳ್ಳೆಯ ಹೆಸರು ಮತ್ತು ಸ್ಥಾನ ಗಳಿಸಿದ್ದ ಯಡಿಯೂರಪ್ಪ ಸಾಕಷ್ಟು ಕೆಲಸ ಕಾರ್ಯಗಳಲ್ಲಿ ಬ್ಯುಸಿ ಆಗಿ ಇರುತ್ತಿದ್ದರೂ. ಹೀಗಾಗಿ ಹಲವು ಭಾರಿ ಆರೋಗ್ಯ ಸಮಸ್ಯೆಯೂ ಅವರನ್ನು ಕಾಡಿದೆ. ಕೋವಿಡ್ ಸಂದರ್ಭದಲ್ಲಿ ಬಿಡುವಿಲ್ಲದೇ ಕೆಲಸ ಮಾಡಿದ್ದ ಯಡಿಯೂರಪ್ಪ ನವರು ಕೋವಿಡ್ ಪಾಸಿಟಿವ್ ಬಂದು ಚಿಕಿತ್ಸೆಯನ್ನು ಕೂಡ ಪಡೆದುಕೊಂಡಿದ್ದರು.

    Recommended Video

    ಕಿರುತರೆಗೆ ಮತ್ತೊಂದು ಮನ್ವಂತರ ಸೃಷ್ಟಿಸಲು ಬರುತ್ತಿದ್ದಾರೆ ಟಿಎನ್ ಸೀತಾರಾಮ್ | Filmibeat Kannada

    ಹೀಗೆ ಒಂದೊತ್ತಿನ ಪುರುಸೋತ್ತಿಲ್ಲದೇ ಕೆಲಸ ಮಾಡುತ್ತಿದ್ದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಸಿಎಂ ಸ್ಥಾನದಿಂದ ಕೆಳಗಿಳಿನ ನಂತ ತಮಗೆ ತಾವು ಫ್ರೀ ಮಾಡಿಕೊಂಡಿದ್ದಾರೆ. ಈ ಫ್ರೀ ಸಮಯದಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ನವರು ಏನು ಮಾಡುತ್ತಿರುತ್ತಾರೆ ಅನ್ನೋದು ಹಲವರ ಪ್ರಶ್ನೆಯಾಗಿತ್ತು. ಈಗ ಅದಕ್ಕೆ ಉತ್ತರ ಸಿಕ್ಕಿದೆ. ಅಷ್ಟಕ್ಕೂ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹೇಗೆ ಸಮಯ ಕಳೆಯುತ್ತಿದ್ದಾರೆ ಅಂತ ಮುಂದೆ ಓದಿ.

    ಬಿಎಸ್‌ವೈ ಗೆ ಇಷ್ಟ ಆಗುವ ಕನ್ನಡದ ಸೀರಿಯಲ್ ಯಾವುವು ಗೊತ್ತಾ

    ಬಿಎಸ್‌ವೈ ಗೆ ಇಷ್ಟ ಆಗುವ ಕನ್ನಡದ ಸೀರಿಯಲ್ ಯಾವುವು ಗೊತ್ತಾ

    ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ನವರು ಮನೆಯಲ್ಲಿ ಸಮಯ ಸಿಕ್ಕಾಗಲೆಲ್ಲ ಕನ್ನಡದ ಜನಪ್ರಿಯ ಧಾರವಾಹಿಗಳನ್ನು ನೋಡುತ್ತಿದ್ದಾರೆ. ಹಳೆಯ ಧಾರವಾಹಿಗಳ ಎಪಿಸೋಡ್‌ಗಳನ್ನ ತರಿಸಿಕೊಂಡು ಅವುಗಳನ್ನು ನೋಡುತ್ತಿದ್ದಾರೆ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿದೆ. ಹೌದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ನವರು ಹಲವು ವರ್ಷಗಳ ಹಿಂದೆ ಪ್ರಸಾರವಾಗುತ್ತಿದ್ದ ಮುಕ್ತ ಮುಕ್ತ ಧಾರವಾಹಿ, ಮಾಯಾಮೃಗ ಮತ್ತು ಇತ್ತೀಚೆಗಿನ ಮಗಳು ಜಾನಕಿ ಧಾರವಾಹಿಯನ್ನು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ನೋಡುತ್ತಿದ್ದಾರಂತೆ.

    ದಶಕಗಳ ಹಿಂದಿನ ಸೀರಿಯಲ್‌ ಈಗ ನೋಡುತ್ತಿರೋದು ಯಾಕೆ

    ದಶಕಗಳ ಹಿಂದಿನ ಸೀರಿಯಲ್‌ ಈಗ ನೋಡುತ್ತಿರೋದು ಯಾಕೆ

    ಈ ಮೂರು ಜನಪ್ರಿಯ ಧಾರವಾಹಿಗಳನ್ನು ಟಿ.ಎನ್‌. ಸೀತಾರಾಮ್ ಅವರು ನಿರ್ದೇಶನ ಮಾಡಿದ್ದು, ಸ್ವತಃ ಈ ಮೂರು ಧಾರವಾಹಿಗಳನ್ನು ಹಾರ್ಡ್ ಡಿಸ್ಕ್‌ನಲ್ಲಿ ಹಾಕಿ ಟಿ.ಎನ್.ಸೀತಾರಾಮ್ ಅವರು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ನವರಿಗೆ ನೀಡಿದ್ದಾರೆ. ಹೀಗಾಗಿ ಒಂದನ್ನು ಬಿಡದೇ ಸಾಕಷ್ಟು ಜನಮನ್ನಣೆಯನ್ನು ಪಡೆದಿದ್ದ ದಶಕಗಳ ಹಿಂದೆ ಪ್ರಸಾರವಾಗುತ್ತಿದ್ದ ಧಾರವಾಹಿಗಳನ್ನು ನೋಡಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ನವರು ಸಮಯ ಕಳೆಯುತ್ತಿದ್ದಾರೆ.

    ರಾಜಕೀಯ ಬಗ್ಗೆ ವ್ಯವಸ್ಥಿತವಾಗಿ ಹೇಳಿದ್ದ ಧಾರವಾಹಿ ಇದು

    ರಾಜಕೀಯ ಬಗ್ಗೆ ವ್ಯವಸ್ಥಿತವಾಗಿ ಹೇಳಿದ್ದ ಧಾರವಾಹಿ ಇದು

    ಮುಕ್ತ ಮುಕ್ತ ಧಾರಾವಾಹಿ 2013 ಜನವರಿ 25ಕ್ಕೆ ಕೊನೆಯ ಸಂಚಿಕೆ ಮುಗಿಸಿತ್ತು. ಜಾಗತೀಕರಣ, ರೈತ ಸಮಸ್ಯೆ, ನಕ್ಸಲರು, ವೈದ್ಯಕೀಯ ವ್ಯವಸ್ಥೆ, ರಾಜಕೀಯ ಬಗ್ಗೆ ವ್ಯವಸ್ಥಿತವಾಗಿ ಹೇಳಬಹುದು ಎಂದು ತೋರಿಸಿಕೊಟ್ಟ ಧಾರಾವಾಹಿ ಇದು. ಸತತ ಮೂರು ವರ್ಷಗಳ ಕಾಲ ಪ್ರಸಾರವಾಗುವ ಮೂಲಕ ದಾಖಲೆ ನಿರ್ಮಿಸಿತ್ತು ಮುಕ್ತ ಮುಕ್ತ ಧಾರಾವಾಹಿ. ಶಾಂಭವಿ ಟೀಚರ್, ಕಲ್ಯಾಣಿ, ಶಶಿ, ಶಂಕರಮೂರ್ತಿ, ನಿರ್ಮಲಾ ಕೊಂಡಹಳ್ಳಿ, ಮಂಗಳತ್ತೆ, ಮಿಶ್ರ, ದೇಶಪಾಂಡೆ ಸೇರಿದಂತೆ ಸಿಎಸ್ ಪಿ ಪಾತ್ರದಲ್ಲಿ ಸ್ವತಃ ಸೀತಾರಾಮ್ ವೀಕ್ಷಕ ಬಳಗಕ್ಕೆ ಅಚ್ಚಳಿಯದ ನೆನಪು ನೀಡಿತ್ತು.

    ಮಗಳು ಜಾನಕಿ ಸೀರಿಯಲ್‌ ಅನ್ನು ಮೆಚ್ಚಿಕೊಂಡ ಬಿಎಸ್‌ವೈ

    ಮಗಳು ಜಾನಕಿ ಸೀರಿಯಲ್‌ ಅನ್ನು ಮೆಚ್ಚಿಕೊಂಡ ಬಿಎಸ್‌ವೈ

    ಇನ್ನು ಮಾಯಾಮೃಗ ಧಾರಾವಾಹಿ ವೀಕ್ಷಕರನ್ನು ಆಕರ್ಷಿಸಿತ್ತು. 1998ರಲ್ಲಿ ಡಿಡಿ ಚಂದನ ವಾಹಿನಿಯಲ್ಲಿ ಮೊದಲ ಬಾರಿಗೆ ಈ ಸೀರಿಯಲ್‌ ಪ್ರಸಾರ ಆಗಿತ್ತು. ನಂತರ 2014ರಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಮರು ಪ್ರಸಾರ ಆಗಿತ್ತು. ಲಕ್ಷ್ಮೀ ಚಂದ್ರಶೇಖರ್‌, ಮಾಳವಿಕಾ ಅವಿನಾಶ್‌, ಮಂಜು ಭಾಷಿಣಿ, ಎಂ.ಡಿ. ಪಲ್ಲವಿ, ಮುಖ್ಯಮಂತ್ರಿ ಚಂದ್ರು, ವೈಶಾಲಿ ಕಾಸರವಳ್ಳಿ ಮುಂತಾದವರು ಮಾಯಾಮೃಗ ದಲ್ಲಿ ನಟಿಸಿದ್ದರು. ಹಾಗೇ ಅತ್ತೆ ಸೊಸೆ ಜಗಳ, ಕುಟುಂಬದ ಒಳಗಿನ ದ್ವೇಷ, ಅಸೂಯೆ ಕಿತ್ತಾಟದ ಧಾರಾವಾಹಿಗಳ ನಡುವೆ ವಿಭಿನ್ನ ಎಂಬ ಕಾರಣಕ್ಕೆ ಜನರ ಮೆಚ್ಚುಗೆಗೆ ಒಳಗಾಗಿದ್ದ ಟಿಎನ್ ಸೀತಾರಾಮ್ ನಿರ್ದೇಶನದ ಮಗಳು ಜಾನಕಿ ಧಾರಾವಾಹಿ ಕೂಡ ಜನಮನ ಗೆದ್ದಿತ್ತು. ಹೀಗೆ ಸಾಕಷ್ಟು ಪ್ರಖ್ಯಾತಿಯನ್ನು ಪಡೆದಿರುವ ಈ ಮೂರು ಧಾರವಾಹಿಗಳು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ತುಂಬ ಹಿಡಿದ್ದು, ಮಿಸ್ ಮಾಡದೇ ನೋಡಿ ಸಮಯ ಕಳೆಯುತ್ತಿದ್ದಾರೆ.

    English summary
    Former cm B.S.Yediyurappa watching T.N Seetharam's kannada old serials at free time .
    Saturday, January 22, 2022, 10:17
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X