ಹಣ ಸುಲಿಗೆ ಆರೋಪದಡಿ ವೈರಲ್ ನಿರೂಪಕಿ ದಿವ್ಯಾ ವಸಂತ್ ಬಂಧನ: ಎಲ್ಲಿ? ಯಾವಾಗ?

By ಫಿಲ್ಮಿಬೀಟ್ ಡೆಸ್ಕ್

ಕೆಲವು ದಿನಗಳ ಹಿಂದೆ ಹಣ ಸುಲಿಗೆ ಪ್ರಕರಣದಲ್ಲಿ 'ಗಿಚ್ಚಿ ಗಿಲಿಗಿಲಿ' ರಿಯಾಲಿಟಿ ಶೋ ಸ್ಪರ್ಧಿ ಹಾಗೂ ಮಾಜಿ ಸುದ್ದಿ ವಾಹಿನಿಯ ನಿರೂಪಕಿ ದಿವ್ಯಾ ವಸಂತ್ ಹೆಸರು ಕೇಳಿ ಬಂದಿತ್ತು. ಈ ಸಂಬಂಧ ಜೈ ಭೀಮಾ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆರಂಭದಲ್ಲಿ ಸುದ್ದಿ ವಾಹಿನಿಯಲ್ಲಿ ನಿರೂಪಕಿಯಾಗಿದ್ದರು. ಬಳಿಕ 'ಗಿಚ್ಚಿ ಗಿಲಿಗಿಲಿ' ರಿಯಾಲಿಟಿ ಶೋನಲ್ಲೂ ಭಾಗವಹಿಸಿದ್ದರು. ಈಗ ಬೆದರಿಕೆ ಹಾಕಿ ಹಣ ಗಳಿಸುವ ದಾರಿ ಹಿಡಿದಿದು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಕನ್ನಡ ಸುದ್ದಿ ವಾಹಿನಿಯಿಂದ ಹೊರ ಬಂದ್ಮೇಲೆ ದಿವ್ಯಾ ವಸಂತ್ ಇನ್‌ಸ್ಟಾಗ್ರಾಂ ರೀಲ್ಸ್ ಹಾಗೂ ಯೂಟ್ಯೂಬ್ ವಿಡಿಯೋಗಳಿಂದ ಸದ್ದು ಮಾಡಿದ್ದರು. ಈಗ ದಿವ್ಯಾ ವಸಂತ್ ಮೇಲೆ ಬೆದರಿಕೆ ಹಾಗೂ ಸುಲಿಗೆ ಯತ್ನ ಆರೋಪ ಮಾಡಲಾಗಿತ್ತು. ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗುತ್ತಿದ್ದಂತೆ ನಿರೂಪಕಿ ದಿವ್ಯಾ ವಸಂತ್ ಕಾಣೆಯಾಗಿದ್ದರು.

Former news anchor and gichchi gili gili contestant Divya Vasanth arrest in Kerala

ದಿವ್ಯಾ ವಸಂತ್ ಹುಡುಕಾಟಕ್ಕೆ ಬೆಲೆ ಬೀಸಿದ್ದ ಪೊಲೀಸರಿಗೆ ಕೊನೆಗೂ ಕೇರಳದಲ್ಲಿ ಸಿಕ್ಕಿಬಿದ್ದಿದ್ದಾರೆ. ಬೆಂಗಳೂರಿನ ಜೀವನ್ ಭೀಮಾನಗರದ ಪೊಲೀಸರು ದಿವ್ಯಾ ವಸಂತ್ ಅವರನ್ನು ಬಂಧಿಸಿದ್ದು, ಬೆಂಗಳೂರಿಗೆ ಕರೆ ತರುತ್ತಿದ್ದಾರೆ ಅನ್ನೋ ಮಾಹಿತಿ ಹೊರಬೀಳುತ್ತಿದೆ.

ಜೈ ಭೀಮಾನಗರ ಪೊಲೀಸ್ ಠಾಣಾ ವ್ಯಾಪ್ತಿಯ 'ಸ್ಪಾ'ವೊಂದರ ವ್ಯವಸ್ಥಾಪಕನನ್ನು ಬೆದರಿಸಿ, ಹಣ ಸುಲಿಗೆ ಮಾಡುವ ಯತ್ನದ ಆರೋಪವನ್ನು ದಿವ್ಯಾ ವಸಂತ್ ಎದುರಿಸುತ್ತಿದ್ದಾರೆ. ಪೊಲೀಸರು ವೆಂಕಟೇಶ್, ದಿವ್ಯಾ ವಸಂತ ಸಹೋದರ ಸಂದೇಶ್ ಅವರನ್ನು ಈಗಾಗಲೇ ಬಂಧಿಸಿದ್ದರು. ಆದರೆ, ದಿವ್ಯಾ ವಸಂತ್ ತಲೆ ಮರೆಸಿಕೊಂಡಿದ್ದರು. ಈಗ ಕೇರಳದಲ್ಲಿ ಅವರನ್ನು ಬಂಧಿಸಿರೋ ಬಗ್ಗೆ ಮಾಹಿತಿ ಹೊರಬಿದ್ದಿದೆ.

ದಿವ್ಯಾ ವಸಂತ್ ಕರ್ನಾಟಕದಿಂದ ತಮಿಳುನಾಡಿಗೆ ಪರಾರಿಯಾಗಿದ್ದರು. ಆ ಬಳಿಕ ತಮಿಳುನಾಡಿನಿಂದ ಕೇರಳಕ್ಕೆ ಎಸ್ಕೇಪ್ ಆಗಿದ್ದರು ಅಂತ ಹೇಳಲಾಗುತ್ತಿದೆ. ಜೈ ಭೀಮಾನಗರದ ಪೊಲೀಸರು ಖಚಿತ ಮಾಹಿತಿಯನ್ನು ಆಧರಿಸಿ ಕೇರಳಕ್ಕೆ ತೆರಳಿ ಅವರನ್ನು ಬಂಧಿಸಿದ್ದಾರೆ ಅನ್ನೋ ಎಂದು ಹೇಳಲಾಗುತ್ತಿದೆ. ಇನ್ನೂ ಹೆಚ್ಚಿನ ಮಾಹಿತಿ ಈಗ ಹೊರಬೀಳಬೇಕಿದೆ.

ಅಸಲಿಗೆ ನಡೆದ ಘಟನೆ ಏನೆಂದರೆ, ಇಂದಿರಾನಗರದ ಶ್ರೀ ಸ್ಪಾ ಆ್ಯಂಡ್ ಬ್ಯೂಟಿ ಪಾರ್ಲರ್‌ಗೆ ವೆಂಕಟೇಶ್‌ ಹಾಗೂ ದಿವ್ಯಾ ತಂಡ ಈಶಾನ್ಯ ರಾಜ್ಯದ ಯುವತಿಯನ್ನು ಕೆಲಸಕ್ಕೆ ಸೇರಿಸಿದ್ದರು. ಬಳಿಕ ದಿವ್ಯಾ ಸೋದರ ಸಂದೇಶ್ ಸ್ಪಾಗೆ ಗ್ರಾಹಕನಾಗಿ ಎಂಟ್ರಿ ಕೊಟ್ಟಿದ್ದ. ಅದೇ ಯುವತಿ ಬಳಿ ಮಸಾಜ್‌ಗೆ ಬುಕ್‌ ಮಾಡಿದ್ದ. ಆಕೆಯ ಜೊತೆ ಸಲುಗೆಯಿಂದ ಇರುವ ವಿಡಿಯೋವನ್ನು ರಹಸ್ಯ ಕ್ಯಾಮರಾದಲ್ಲಿ ಸೆರೆಹಿಡಿದಿದು ನಿಮ್ಮ ಸ್ಪಾದಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಎಂದು ಸ್ಪಾ ವ್ಯವಸ್ಥಾಪಕರನ್ನು ಬೆದರಿಸಿದ್ದರು. ಬಳಿಕ 15 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದರು.

ಈ ಗ್ಯಾಂಗ್‌ನ ಬೆದರಿಕೆ ಬಳಿಕ 'ಸ್ಪಾ'ದ ವ್ಯವಸ್ಥಾಪಕರು ಜೈಭೀಮಾನಗರದ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದರು. ಬಳಿಕ ತನಿಖೆ ಆರಂಭಿಸಿದ್ದ ಪೊಲೀಸರು ವೆಂಕಟೇಶ್‌ ಹಾಗೂ ಸಂದೇಶ್‌ನನ್ನು ಬಂಧಿಸಿ, ಕಾಣೆಯಾಗಿದ್ದ ದಿವ್ಯಾ ವಸಂತ್‌ಗೆ ಹುಡುಕಾಟ ಮುಂದುವರೆಸಿದ್ದರು.

More from Filmibeat

English summary
Anchor Divya Vasanth arrest in Kerala
Read more about: anchor arrest ಬಂಧನ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X