ಮಾಸ್ಟರ್ ಆನಂದ್- ಯಶಸ್ವಿನಿಗೆ ನೆಟ್ಟಿಗರ ನೀತಿಪಾಠ: ಅಷ್ಟಕ್ಕೂ ಆಗಿದ್ದೇನು..?!

By ಶೃತಿ ಹರೀಶ್ ಗೌಡ

ಮಾಸ್ಟರ್ ಆನಂದ್ ಮಗಳು ವಂಶಿಕಾ 'ನನ್ನಮ್ಮ ಸೂಪರ್ ಸ್ಟಾರ್' ಶೋ ಮೂಲಕ ಕಿರುತೆರೆ ವೀಕ್ಷಕರಿಗೆ ಪರಿಚಿತರಾದವರು. ಆಕೆ ಹರಳು ಹುರಿದಂತೆ ಪಟ ಪಟ ಅಂತ ಮಾತನಾಡುವುದು, ಡ್ಯಾನ್ಸ್ ಮಾಡುವುದನ್ನು ನೋಡಿ ಮಾಸ್ಟರ್ ಆನಂದ್ ಮಗಳು ಅಪ್ಪನನ್ನೇ ಮೀರಿಸುತ್ತಿದ್ದಾಳೆ ಎನ್ನಲು ಆರಂಭಿಸಿದ್ದರು. ಆದರೆ ಕಳೆದ ಕೆಲ ದಿನಗಳಿಂದ ಅದೇ ವೀಕ್ಷಕರು ಆನಂದ್ ದಂಪತಿಗೆ ಹಿತವಚನ ಹೇಳುತ್ತಿದ್ದಾರೆ.

ಮಾಸ್ಟರ್ ಆನಂದ್ ಮಗಳಾದ ವಂಶಿಕಾ ಅಂಜನಿ ಕಶ್ಯಪ್ 'ನನ್ನಮ್ಮ ಸೂಪರ್ ಸ್ಟಾರ್' ಹಾಗೂ 'ಗಿಚ್ಚಿ ಗಿಲಿಗಿಲಿ' ಶೋನಲ್ಲಿ ಭಾಗವಹಿಸಿ ವೀಕ್ಷಕರನ್ನು ರಂಜಿಸುತ್ತಿದ್ದಾಳೆ. ಪ್ರತಿದಿನವೂ ಒಂದಲ್ಲ ಒಂದು ರೀಲ್ಸ್ ಮಾಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ವಂಶಿಕಾ ತನ್ನದೇ ಆದ ಫ್ಯಾನ್ ಫಾಲೋವರ್ಸ್ ಹೊಂದಿದ್ದಾಳೆ. ಇದರ ಜೊತೆಗೆ ಸಾಕಷ್ಟು ವಿಡಿಯೋಗಳಲ್ಲಿ ಕಾಣಿಸಿಕೊಂಡು ಸೋಶಿಯಲ್ ಮೀಡಿಯಾ ಮೂಲಕವೂ ಎಲ್ಲರನ್ನು ಆಕರ್ಷಿಸುತ್ತಿದ್ದಾಳೆ.

Fraud in the name of Vanshika: Master Anand- Yasaswini couple gets lessons from netizens

ಈಗ ಕೆಲವು ಪೋಷಕರು ಎಚ್ಚೆತ್ತುಕೊಳ್ಳಬೇಕಾಗಿದೆ. ಯಾಕೆಂದರೆ ವಂಶಿಕಾ ಹೆಸರು ಹೇಳಿಕೊಂಡು ನಿಶಾ ನರಸಪ್ಪ ಎಂಬಾಕೆ ಲಕ್ಷಾಂತರ ರೂಪಾಯಿ ಮೋಸ ಮಾಡಿದ್ದಾಳೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇದೀಗ ವೀಕ್ಷಕರು ಮಾಸ್ಟರ್ ಆನಂದ್ ಹಾಗೂ ಯಶಸ್ವಿನಿಗೆ ಬುದ್ಧಿವಾದ ಹೇಳುತ್ತಿದ್ದಾರೆ. ಮಗಳನ್ನು ಓದುವ ಕಡೆ ಗಮನ ಹರಿಸುವಂತೆ ಮಾಡಬೇಕಾಗಿತ್ತು. ಈಗ ಆ ಮಗುವಿನ ಭವಿಷ್ಯವನ್ನೇ ತಂದೆ-ತಾಯಿ ಹಾಳು ಮಾಡುತ್ತಿದ್ದಾರೆ ಎನ್ನುತ್ತಿದ್ದಾರೆ. ಇವರಿಗೆ ಎಲ್ಲೋ ಪರಿಚಯವಾದ ಹುಡುಗಿಯೇ ಮೋಸ ಮಾಡಿದ್ದಾಳೆ ಅಂದರೆ ಇವರೇನು ಮಾಡುತ್ತಿದ್ದರು ಎಂದು ಪ್ರಶ್ನಿಸುತ್ತಿದ್ದಾರೆ.

ಮಾಸ್ಟರ್ ಆನಂದ್‌ಗೆ ಬುದ್ದಿವಾದ

ವಂಚನೆ ಪ್ರಕರಣದಲ್ಲಿ ವಂಶಿಕಾ ಹೆಸರು ಮುನ್ನೆಲೆಗೆ ಬರುತ್ತಿದ್ದಂತೆ ಕೆಲವರು ಮಾಸ್ಟರ್ ಆನಂದ್‌ಗೆ ತಿಳಿ ಹೇಳುವ ಪ್ರಯತ್ನ ಮಾಡುತ್ತಿದ್ದಾರೆ. ಮಗುವನ್ನು ರೀಲ್ಸ್, ಡ್ಯಾನ್ಸ್ ರಿಯಾಲಿಟಿ ಶೋ ಎಂದು ಹಾಳು ಮಾಡಿದ್ದೀರಾ? ಈಗ ಆ ಮಗುವಿನ ಹೆಸರನ್ನು ಯಾರೋ ಬಳಿಸಿಕೊಂಡು ಹಣ ಮಾಡಿದ್ದಾರೆ. ಏನು ಮಾಡದ ಕಂದಮ್ಮ ತಪ್ಪಿತಸ್ಥ ಭಾವನೆಯಲ್ಲಿ ನರಳಾಡುವಂತಾಗಿದೆ. ಜೊತೆಗೆ ಹಣ ಕಳೆದುಕೊಂಡ ಪೋಷಕರು ಗೋಳಾಡುವುದನ್ನು ನೋಡಲು ಆಗುತ್ತಿಲ್ಲ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ನೆಟ್ಟಿಗರ ಚಕಾರ

ಮಗು ಹೇಗೋ 'ನನ್ನಮ್ಮ ಸೂಪರ್ ಸ್ಟಾರ್' ರಿಯಾಲಿಟಿ ಶೋನಲ್ಲಿ ಗೆದ್ದಿತ್ತು. ಅದನ್ನೆಲ್ಲಾ ಅಲ್ಲಿಗೆ ಬಿಟ್ಟು ಆಕೆಯನ್ನು ಓದಿಸಬೇಕಾಗಿತ್ತು. ಮುಂದೆ ಅವಳಿಗಾಗಿ ಅವಕಾಶಗಳು ಕಾದಿದ್ದವು, ನೀವು ಆ ಹುಡುಗಿಯ ಕೈಯಲ್ಲಿ ಡಾನ್ಸ್, ರೀಲ್ಸ್ ಮಾಡಿಸಿದ್ದು ಇನ್ನಷ್ಟು ಉತ್ಸಾಹವನ್ನು ತುಂಬಿದಂತಾಗಿ ಆಕೆ ಪದೇ ಪದೇ ಡ್ಯಾನ್ಸ್ ವಿಡಿಯೋ ಮಾಡುತ್ತಾ ಫೇಮಸ್ ಆದಳು. ಕೊನೆಗೆ ಅದು ಈಗ ಶಾಪ ಹಾಕುವ ಮಟ್ಟಕ್ಕೆ ಬಂದು ನಿಂತಿದೆ ಎಂದು ಜನರು ಚಕಾರ ಎತ್ತಿದ್ದಾರೆ.

ಎಲ್ಲಾ ಕೈಮೀರಿ ಹೋಗಿದೆ

ಹಲವರು ನಿಶಾ ಕೈಗೆ ಹಣ ಕೊಟ್ಟು ಕಳೆದುಕೊಂಡಿದ್ದಾರೆ. ಈಗ ನೀವು ದೂರು ನೀಡಿದರು ಸಹ ಏನು ಪ್ರಯೋಜನವಾಗುವುದಿಲ್ಲ. ಯಾಕೆಂದರೆ ಎಲ್ಲವೂ ಕೈಮೀರಿ ಹೋಗಿದೆ ಎನ್ನುತ್ತಿದ್ದಾರೆ. ಇನ್ನು ಮಾಸ್ಟರ್ ಆನಂದ ಪತ್ನಿ ಯಶಸ್ವಿನಿ ಮಾತನಾಡಿ ನಮಗೂ ನಿಶಾಗು ಯಾವುದೇ ಸಂಬಂಧ ಇಲ್ಲ, ಆಕೆ ನಮಗೆ ಯಾವುದೋ ಒಂದು ಕಾರ್ಯಕ್ರಮದಲ್ಲಿ ಪರಿಚಯವಾದವಳು ಎಂದಿದ್ದಾರೆ. ಏನೇ ಆದರೂ ಸಹ ಇಲ್ಲಿ ಮಾಸ್ಟರ್ ಆನಂದ್ ಮಗಳು ವಂಶಿಕಾ ಹೆಸರು ಹಾಳಾಗಿದೆ.

ಹಲವರಿಗೆ ಇದು ಎಚ್ಚರಿಕೆಯ ಪಾಠ

ಈ ರೀತಿಯ ಪ್ರಕರಣಗಳು ಸಿನಿಮಾ ರಂಗದಲ್ಲಾಗಲಿ, ರಿಯಾಲಿಟಿ ಶೋಗಳಲ್ಲಾಗಲಿ ನಡೆಯುತ್ತಲೇ ಇರುತ್ತವೆ. ಮೋಸ ಮಾಡುವವರು ಇರುವ ತನಕವೂ ಸಹ ಮೋಸ ಹೋಗುವವರು ಇದ್ದೇ ಇರುತ್ತಾರೆ. ಹೀಗಾಗಿ ಪ್ರತಿಯೊಂದು ಹೆಜ್ಜೆ ಇಡುವಾಗಲೂ ಮೋಸ ಹೋಗದೆ ತಮ್ಮ ಮಕ್ಕಳ ಶ್ರೇಯಸ್ಸಿಗಾಗಿ ಪೋಷಕರು ಶ್ರಮಿಸಬೇಕಿದೆ.

More from Filmibeat

English summary
Fraud in the name of Vanshika case: Master Anand- Yasaswini couple gets lessons from netizens. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X