ಮದುವೆಯಾಗುವುದಾಗಿ ನಂಬಿಸಿ ಲಂಡನ್ ಹುಡುಗನಿಗೆ ₹9.35 ಕೋಟಿ ಉಂಡೆನಾಮ ತಿಕ್ಕಿದ ಬಿಗ್ ಬಾಸ್ ಸ್ಫರ್ಧಿ ; ದೂರು ದಾಖಲು

ನಿಜಾ.. ಹಣ ಎಲ್ಲರ ಅವಶ್ಯಕತೆ ಮತ್ತು ಅನಿವಾರ್ಯತೆ. ಹಾಗಂಥ ಹಣವನ್ನು ಹೇಗೆ ಬೇಕಾದರೆ ಹಾಗೆ ಸಂಪಾದಿಸಲು ಸಾಧ್ಯ ಇಲ್ವಲ್ಲಾ..? ಒಳ್ಳೆ ಮಾರ್ಗದಲ್ಲಿ ನಡೆದು ನಾಲ್ಕು ಕಾಸು ಸಂಪದಾನೆ ಮಾಡಿದರಷ್ಟೇ ಶ್ರಮಕ್ಕೊಂದು ಬೆಲೆ ಇರುತ್ತೆ. ಆದರೆ.. ಈಗೀಗ ಹಣ ಮಾಡುವ ಧಾವಂತಕ್ಕೆ ಬಿದ್ದು ಹಲವಾರು ಜನ ಅಡ್ಡದಾರಿಯನ್ನು ಹಿಡಿಯುತ್ತಿದ್ದಾರೆ.

ಅದರಲ್ಲಿಯೂ ಬೆಳ್ಳಿತೆರೆ ಮತ್ತು ಕಿರುತೆರೆಯಲ್ಲಿ ಹೇಗಾದರೂ ಸರಿ ಏಕಾಏಕಿ ದುಡ್ಡು ಮಾಡಿ ಬಿಡಬೇಕು ಎಂಬ ಧಾವಂತಕ್ಕೆ ಬೀಳುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬಣ್ಣ ಬಣ್ಣದ ಮಾತುಗಳಿಂದ ನಂಬಿಸುವ ಇವರು ಎದುರಗಡೆ ಇರುವ ವ್ಯಕ್ತಿ ಚೂರು ಯಾಮಾರಿದರೂ ಸಾಕು ತಲೆಗೆ ಮಕ್ಮಲ್ ಟೋಪಿ ಹಾಕಿ ಹಣೆಗೆ ತುಪ್ಪ ಸವರುತ್ತಾರೆ.

From Bigg Boss to Big Fraud Ashu Reddy Booked in Massive 9 35 Crore Marriage Scam

ಇದಕ್ಕೆ ಕೈಗನ್ನಡಿ ಎಂಬಂತೆ ಈಗೀಗ ಚಿತ್ರರಂಗದವರ ಮೇಲೆ ವಂಚನೆ, ನಂಬಿಕೆ ದ್ರೋಹ, ಚೆಕ್ ಬೌನ್ಸ್, ಸೇರಿ ಹಲವರು ಆರೋಪಗಳು... ದಿನದಿಂದ ದಿನಕ್ಕೆ ಹೆಚ್ಚೆಚ್ಚು ಕೇಳಿ ಬರುತ್ತಲೇ ಇವೆ. ಹೆಜ್ಜೆ ಹೆಜ್ಜೆಗೂ ಮಹಾಮೋಸ ಮಾಡುವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಉದಾಹರಣೆಗೆ ಅಶು ರೆಡ್ಡಿ ಅವರ ಪ್ರಕರಣವನ್ನೇ ತೆಗೆದುಕೊಳ್ಳಿ.

ಹೌದು, ಅಶು ರೆಡ್ಡಿ.. ಪಕ್ಕದ ಆಂಧ್ರದ ಚೆಲುವೆ. ಡಬ್ ಸ್ಮ್ಯಾಶ್ ಮಾಡುತ್ತಲೇ ಜನಪ್ರಿಯವಾದ ಅಶು ರೆಡ್ಡಿ ಅವರನ್ನು ಹಲವರು ಜ್ಯೂನಿಯರ್ ಸಮಂತಾ ಎಂಧು ಕರೆಯುತ್ತಾರೆ. ಅಮೆರಿಕಾದ ಡಲ್ಲಾಸ್ ಬ್ಯಾಪಿಸ್ಟ್ ವಿಶ್ವ ವಿದ್ಯಾಲಯದಲ್ಲಿ ಎಂಬಿಎ ಪದವಿಯನ್ನು ಕೂಡ ಪಡೆದಿರುವ ಅಶು ರೆಡ್ಡಿ ''ಚಲ್ ಮೋಹನ್ ರಂಗ''.. ''ಫೋಕಸ್''.. ''ಯೆವಮ್''.. ''ಪದ್ಮವ್ಯೂಹಂ ಲೋ ಚಕ್ರಧಾರಿ'' ಸೇರಿ ಕೆಲ ಸಿನಿಮಾಗಳನ್ನು ಮಾಡಿದ್ದಾರೆ.

ಇನ್ನು 2019ರಲ್ಲಿ ತೆಲುಗಿನ ''ಬಿಗ್ ಬಾಸ್'' 3ನೇ ಸೀಸನ್‌ನಲ್ಲಿ ಭಾಗವಹಿಸಿದ್ದ ಅಶು ರೆಡ್ಡಿ ಆ ನಂತರ ಓಟಿಟಿಯಲ್ಲಿ ಪ್ರಸಾರವಾದ ''ಬಿಗ್ ಬಾಸ್ ನಾನ್-ಸ್ಟಾಪ್''ನಲ್ಲಿ ಕೂಡ ಭಾಗವಹಿಸಿದ್ದರು. ಇಂಥಾ ಅಶು ರೆಡ್ಡಿ ಪ್ರೀತಿ ಪ್ರೇಮ ಮದುವೆಯ ಹೆಸರಿನಲ್ಲಿ ಅನಿವಾಸಿ ಭಾರತೀಯನಿಗೆ 9.35 ಕೋಟಿ ಉಂಡೆನಾಮ ತಿಕ್ಕಿದ್ದಾರೆ ಎನ್ನುವ ಆರೋಪ ಸದ್ಯ ಕೇಳಿ ಬಂದಿದೆ.

ಅಶು ರೆಡ್ಡಿ ವಿರುದ್ದ ಲಂಡನ್‌ನ ಸಾಫ್ಟವೇರ್ ಇಂಜಿನಿಯರ್ ವೈ ವಿ ಧಮೇಂದ್ರ ಅವರ ತಂದೆ ಯೆನುಮುಲ ಸತ್ಯನಾರಾಯಣ ಹೈದರಾಬಾದ್‌ನ ಸಿಟಿ ಸೆಂಟ್ರಲ್ ಕ್ರೈಂ ಸ್ಟೇಷನ್‌ನಲ್ಲಿ ದೂರು ಸಲ್ಲಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಶುರು ಮಾಡಿದ್ದಾರೆ.

From Bigg Boss to Big Fraud Ashu Reddy Booked in Massive 9 35 Crore Marriage Scam

ವೈ ವಿ ಧರ್ಮೇಂದ್ರ ಅವರ ತಂದೆ ಯೆನುಮುಲ ಸತ್ಯನಾರಾಯಣ ನೀಡಿದ ದೂರಿನ ಅನ್ವಯ 2018ರಲ್ಲಿ ಧರ್ಮೇಂದ್ರ ಭಾರತಕ್ಕೆ ಬಂದಾಗ ಅಶು ಅವರ ಪರಿಚಯವಾಗಿತ್ತು. ಅಮೆರಿಕಾದಲ್ಲಿ ವಿದ್ಯಾಭ್ಯಾಸ ಮುಗಿಸಿ ಸಿನಿಮಾ ಅವಕಾಶಗಳಿಗಾಗಿ ಹೈದರಾಬಾದ್‌ಗೆ ಬಂದಿರುವುದಾಗಿ ಅಶು ರೆಡ್ಡಿ ಆಗ ಧರ್ಮೇಂದ್ರ ಅವರಿಗೆ ಹೇಳಿದ್ದರು.

ಆ ನಂತರ ಹೀಗೆ ಮಾತನಾಡುತ್ತಾ ಮಾತನಾಡುತ್ತಾ ಸ್ನೇಹಿತರಾದರು. ಸ್ನೇಹ ಆ ನಂತರ ಪ್ರೀತಿಯ ಸ್ವರೂಪ ಪಡೆಯಿತು. ಇನ್ನೇನು ಮದುವೆಯಾಗಬೇಕು ಎನ್ನುವಷ್ಟರಲ್ಲಿ ಅಶು ರೆಡ್ಡಿ ಆರ್ಥಿಕ ಸಮಸ್ಯೆಯ ರಾಗ ಎಳೆಯಲು ಶುರು ಮಾಡಿದರು. 2018 ರಿಂದ 2025ರವರೆಗೆ ನಿಧಾನವಾಗಿ ಹಂತ ಹಂತವಾಗಿ ಧರ್ಮೇಂದ್ರ ಅವರಿಂದ ಹಣ ಪಡೆದರು. ಕಾರು, 5ಕೆಜಿ ಚಿನ್ನ ಖರೀದಿ ಮಾಡುವುದಲ್ಲದೇ ಫ್ಲಾಟ್‌ ಕೂಡ ಖರೀದಿಸಿ ತಮ್ಮ ಹೆಸರಿಗೆ ಅಶು ನೊಂದಾಯಿಸಿಕೊಂಡರು.

ಹೀಗೆ 9.35 ಕೋಟಿಯನ್ನು ಧರ್ಮೇಂದ್ರ ಅವರಿಂದ ಅಶು ರೆಡ್ಡಿ ಪಡೆದಿದ್ದು, ಇವರ ಸಹೋದರಿಗೆ ಕೂಡ 50 ಲಕ್ಷ ಹಣವನ್ನು ಧರ್ಮೇಂದ್ರ ನೀಡಿದ್ದಾರೆ. ಕೊನೆಗೆ ಮದುವೆಗೆ ಧರ್ಮೇಂದ್ರ ಅವರ ಮನೆಯಲ್ಲಿ ತಯಾರಿ ಶುರು ಆದ ಮೇಲೆ ಮತ್ತೆ ಕುಂಟು ನೆಪ ಹೇಳಿರುವ ಅಶು ರೆಡ್ಡಿ ಮದುವೆಯನ್ನು ಮತ್ತೆ ಮುಂದೂಡಿ ಈಗ ಮದುವೆಯಾಗಲು ನಿರಾಕರಿಸುತ್ತಿದ್ದಾರೆ ಎಂದು ನೀಡಲಾದ ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ.

ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರ್ಥಿಕ ವ್ಯವಹಾರ, ಬ್ಯಾಂಕ್ ದಾಖಲೆಗಳು ಹಾಗೂ ಆಸ್ತಿ ಖರೀದಿ ವಿವರಗಳನ್ನು ಪರಿಶೀಲಿಸುತ್ತಿದ್ದಾರೆ. ಅಂದ್ಹಾಗೇ ಅಶು ರೆಡ್ಡಿಗೆ ವಿವಾದಗಳು ಹೊಸದೇನಲ್ಲ. ಈ ಹಿಂದೆ ರಾಮ್ ಗೋಪಾಲ್ ವರ್ಮಾ ಜೊತೆಗಿನ ಇವರ ಸಂದರ್ಶನದ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿತ್ತು. ತೆಲಂಗಾಣದ ಡ್ರಗ್ಸ್ ಪ್ರಕರಣದಲ್ಲಿ ಇವರ ಹೆಸರು ಕೇಳಿ ಬಂದಿತ್ತು. ಇನ್ನು ಪವನ್ ಕಲ್ಯಾಣ್ ಅವರ ಹೆಸರನ್ನ ಎದೆಯ ಭಾಗದಲ್ಲಿ (ಎದೆಯ ಪಕ್ಕದಲ್ಲಿ) ಟ್ಯಾಟೂ ಹಾಕಿಸಿಕೊಂಡು ಕೂಡ ಸುದ್ದಿಯಾಗಿದ್ದರು ಅಶು ರೆಡ್ಡಿ.

English summary
Shocking! NRI files ₹9.35 Cr fraud case against actress Ashu Reddy. Allegations of a marriage scam and multi-crore deception surface. Click for the latest updates on this developing story.
Read more about: tollywood fraud
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X