ನಾಳೆಯಿಂದ 'ಬಿಗ್ ಬಾಸ್' ಶುರು, ಇಲ್ಲಿದೆ ಮನೆ ಪ್ರವೇಶಿಸಲಿರುವ ಸ್ಫರ್ಧಿಗಳ ಪಟ್ಟಿ

ಒಂದು ಕಾಲದಲ್ಲಿ ಸಂಚಲನ ಸೃಷ್ಟಿಸಿ, ಕಿರುತೆರೆಯಲ್ಲಿ ಹೊಸದೊಂದು ಅಲೆಯನ್ನು ಎಬ್ಬಿಸಿದ ಕಾರ್ಯಕ್ರಮ ''ಬಿಗ್ ಬಾಸ್''. ಕೇವಲ ಹಿಂದಿಯಲ್ಲಿ ಮಾತ್ರ ಅಲ್ಲ ಆರು ಭಾಷೆಗಳಲ್ಲಿ ಈ ಕಾರ್ಯಕ್ರಮದ್ದೇ ಹವಾ ಇತ್ತು. ಆದರೆ ಕಾಲ ಕ್ರಮೇಣ ಈ ಕಾರ್ಯಕ್ರಮ ಹಳಿ ತಪ್ಪಿತು. ''ಬಿಗ್ ಬಾಸ್'' ವಿವಾದಾತ್ಮಕ ವ್ಯಕ್ತಿಗಳಿಗಷ್ಟೇ ಲಾಯಕ್ಕು ಎನ್ನುವ ಅಭಿಪ್ರಾಯ ವ್ಯಕ್ತವಾಗಲು ಶುರುವಾಯ್ತು. ಹಾಗಂಥ .. ಈ ಕಾರ್ಯಕ್ರಮದ ಜನಪ್ರಿಯತೆ ಕಡಿಮೆ ಆಗಲಿಲ್ಲ.

ಯಾಕೆಂದರೆ.. ಮತ್ತೊಬ್ಬರ ಖಾಸಗೀ ಬದುಕಿನ ಮೇಲಿರೋ ಮನುಷ್ಯ ಸಹಜ ಕ್ಯೂರಿಯಾಸಿಟಿಯನ್ನೇ ಬಂಡವಾಳ ಮಾಡಿಕೊಂಡ ಬಿಗ್ ಬಾಸ್ ಕಾರ್ಯಕ್ರಮವನ್ನ ಜನ ಈಗಲೂ ಕೂಡ ಬೈದುಕೊಂಡೂ ನೋಡುತ್ತಾರೆ. ನೋಡುತ್ತಲೇ ಬೈಯುತ್ತಾರೆ.ಇಂಥಾ ಬಿಗ್ ಬಾಸ್ ಕಾರ್ಯಕ್ರಮ ಈಗಾಗಲೇ ಮಲಯಾಳಂನಲ್ಲಿ ಶುರುವಾಗಿದೆ. ಇಬ್ಬರು ಸ್ಫರ್ಧಿಗಳನ್ನು ಮನೆಯಿಂದ ಹೊರಗಡೆ ಕೂಡ ಕಳುಹಿಸಲಾಗಿದೆ. ಈಗ ಹಿಂದಿ ಬಿಗ್ ಬಾಸ್‌ನ ಸರದಿ.

From Gaurav Khanna to Ashnoor Kaur Your Complete Guide to Bigg Boss 19 Contestants

ಹೌದು, ಮಲಯಾಳಂ ಬೆನ್ನಲ್ಲಿಯೇ ಈಗ ಹಿಂದಿ ''ಬಿಗ್ ಬಾಸ್‌''ನ ಹತ್ತೊಂಬತ್ತನೇ ಸೀಸನ್ ಶುರುವಾಗುತ್ತಿದೆ. ನಾಳೆ ಈ ಕಾರ್ಯಕ್ರಮಕ್ಕೆ ಅದ್ಧೂರಿ ಚಾಲನೆ ಸಿಗಲಿದೆ. ಇನ್ನು ಪ್ರತಿ ವರ್ಷ ''ಬಿಗ್ ಬಾಸ್‌''ನಲ್ಲಿ ಯಾರೆಲ್ಲಾ ಭಾಗವಹಿಸಬಹುದು ಎನ್ನುವ ಕುತೂಹಲ ಹಲವರಲ್ಲಿರುತ್ತೆ. ಹಲವು ಹೆಸರುಗಳು ಅಂತೆ ಕಂತೆಯ ಸಂತೆಯಲ್ಲಿ ಚಾಲ್ತಿ ಕೂಡ ಇರುತ್ತವೆ. ಈ ವರ್ಷ ಇದೇ ತರಹದ ವಾತಾವರಣ ಇದೆ. ಇದಕ್ಕೆ ಪೂರಕವಾಗಿ ನಾಳೆಯ ಗ್ರ್ಯಾಂಡ್ ಪ್ರಿಮಿಯರ್‌ನ ಪ್ರೋಮೋವನ್ನು ಕೂಡ ಜೀಯೋ ಹಾಟ್ ಸ್ಟಾರ್ ಹಂಚಿಕೊಂಡಿದ್ದು ಇಬ್ಬರು ಸ್ಫಧಿಗಳು ಡ್ಯಾನ್ಸ್ ಮಾಡುತ್ತಿರುವುದನ್ನು ಈ ಪ್ರೋಮೊದಲ್ಲಿ ತೋರಿಸಲಾಗಿದೆ.

ಈ ಪ್ರೋಮೋ ಬಿಡುಗಡೆಯಾಗುತ್ತಿದ್ದಂತೆಯೇ ಕುತೂಹಲ ಇನ್ನೂ ಹೆಚ್ಚಾಗಿದ್ದು ಸ್ಫರ್ಧಿಗಳ ಕುರಿತು ಚರ್ಚೆ ಜೋರಾಗಿ ನಡೆಯುತ್ತಿದೆ. ಹಿಂದಿಯ ''ಬಿಗ್ ಬಾಸ್‌' 19'ನಲ್ಲಿ ಭಾಗವಹಿಸಲಿರುವ ಸ್ಫರ್ಧಿಗಳ ಲಿಸ್ಟ್ ಕೂಡ ಸದ್ಯ ವೈರಲ್ ಆಗಿದೆ. ಆ ಪಟ್ಟಿ ಈ ಕೆಳಗಿನಂತೆ ಇದೆ.

ಹಿಂದಿ ''ಬಿಗ್‌ ಬಾಸ್‌-19' 'ನ ಸಂಭಾವ್ಯ ಸ್ಫರ್ಧಿಗಳ ಪಟ್ಟಿ

* ಅಶ್ನೂರ್ ಕೌರ್ - 21ರ ಹರೆಯದ ಚೆಲುವೆ : ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈ.. ಪಟಿಯಾಲಾ ಬೇಬ್ಸ್.. ಸ್ಕೂಲ್ ಫ್ರೆಂಡ್ಸ್.. ಸುಮನ್ ಇಂದೋರಿ.. ಇವರು ಅಭಿನಯಿಸಿರುವ ಕೆಲ ಜನಪ್ರಿಯ ಧಾರಾವಾಹಿಗಳು

* ಗೌರವ್ ಖನ್ನಾ - ವಯಸ್ಸು 43 : ಹಿಂದಿ ಕಿರುತೆರೆಯ ಖ್ಯಾತ ಕಲಾವಿದ. ಅನುಪಮಾ.. ಸಿಐಡಿ.. ದಿಲ್ ಸೇ ದಿಯಾ ವಚನ್.. ಹೀಗೆ ಎರಡು ದಶಕಗಳಲ್ಲಿ ಹಲವಾರು ಧಾರಾವಾಹಿಗಳಲ್ಲಿ ಮಿಂಚಿರುವ ಇವರು ಸೆಲೆಬ್ರಿಟಿ ಮಾಸ್ಟರ್‌ಚೆಫ್ ನ ವಿನ್ನರ್ ಕೂಡ ಹೌದು.

* ವಹಬ್ಬಿಜ್ ದೊರಾಬ್ಜಿ - ವಯಸ್ಸು 39 : ಪ್ಯಾರ್ ಕೀ ಯೇ ಏಕ್ ಕಹಾನಿ.. ಸಾವಿತ್ರಿ.. ಬಹು ಹಮಾರಿ ರಜಿನಿಕಾಂತ್.. ದೀವಾನಿಯತ್.. ಧಾರಾವಾಹಿಗಳ ಮೂಲಕ ಜನ ಮನ ಗೆದ್ದ ನಟಿ

* ಧೀರಜ್ ಧೂಪರ್ - ವಯಸ್ಸು 40 : ಸಸುರಾಲ್ ಸಿಮರ್ ಕಾ.. ಕುಂಡಲಿ ಭಾಗ್ಯ.. ಶ್ರೀಮತಿ ತೆಂಡೂಲ್ಕರ್.. ಧಾರಾವಾಹಿಗಳ ಮೂಲಕ ಜನಪ್ರಿಯವಾದ ನಟ.

* ಶೆಹಬಾಜ್ ಬದೇಶಾ ಅಥವಾ ಮೃದುಲ್ ತಿವಾರಿ : ಬಿಗ್ ಬಾಸ್ 13ರಲ್ಲಿ ಭಾಗವಹಿಸಿ ಎರಡನೇ ರನ್ನರ್ ಅಪ್ ಆಗಿದ್ದ ಶೆಹನಾಜ್ ಗಿಲ್ ಅವರ ಸಹೋದರ ಶೆಹಬಾಜ್ ಈ ಬಾರಿ ಬಿಗ್ ಬಾಸ್ ಮನೆಗೆ ಬರುವ ಸಾಧ್ಯತೆ ಇದೆ. ಇವರ ಮತ್ತು ಯೂಟ್ಯೂಬರ್ ಮೃದುಲ್ ತಿವಾರಿ ನಡುವೆ ಸ್ಫರ್ಧೆ ಇದ್ದು ಇಬ್ಬರಲ್ಲಿ ಒಬ್ಬರಿಗೆ ಅವಕಾಶ ಸಿಗಲಿದೆ.

* ಪಾಯಲ್ ಗೇಮಿಂಗ್ (ಪಾಯಲ್ ಧಾರೆ): ಆನ್ ಲೈನ್‌ನಲ್ಲಿ ಆಟ ಆಡುವುದು ಹೇಗೆ ಎನ್ನುವುದನ್ನು ಕಲಿಸಿ ಕೊಡುವ ಪ್ರಸಿದ್ದ ಇನ್‌ಫ್ಲೂಯೆನ್ಸರ್ ಇವರು. ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಜನ ಫಾಲೋವರ್ಸ್‌ಗಳನ್ನು ಹೊಂದಿರುವ ಪಾಯಲ್ ಇಂದಿನ ಯುವ ಜನಾಂಗದವನ್ನು ಈ ಬಾರಿ ಬಿಗ್ ಬಾಸ್‌ ಮನೆಯಲ್ಲಿ ಪ್ರತಿನಿಧಿಸಲಿದ್ದಾರೆ.

* ಆವೇಜ್ ದರ್ಬಾರ್ ಮತ್ತು ನಗ್ಮಾ ಮಿರಾಜ್ಕರ್ : ರಿಯಲ್ ಲೈಫಿನಲ್ಲಿ ಗಂಡ ಹೆಂಡತಿಯಾಗಿರುವ ಆವೇಜ್ ದರ್ಬಾರ್ ಮತ್ತು ನಗ್ಮಾ ಮಿರಾಜ್ಕರ್ ಕೂಡ ಈ ಬಾರಿ ಬಿಗ್ ಬಾಸ್ ಮನೆ ಪ್ರವೇಶ ಮಾಡಲಿದ್ದಾರೆ. 30 ಲಕ್ಷಕ್ಕೂ ಅಧಿಕ ಫಾಲೋವರ್ಸ್‌ಗಳನ್ನು ಹೊಂದಿರುವ ಈ ಜೋಡಿ ಯಾವ ರೀತಿಯ ಮೋಡಿ ಮಾಡಲಿದೆ ಎನ್ನುವುದನ್ನು ಕಾದು ನೋಡಬೇಕಿದೆ. ಆವೇಜ್ ನೃತ್ಯ ನಿರ್ದೇಶಕರಾಗಿ ಹೆಸರು ಮಾಡಿದ್ದು ನಗ್ಮಾ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಆಗಿ ಕ್ರಿಯೇಟರ್ ಆಗಿ ಗುರುತಿಸಿಕೊಂಡಿದ್ದಾರೆ.

ಕೇವಲ ಇವರು ಮಾತ್ರ ಅಲ್ಲ ಕೃಷ್ಣಾ ಶ್ರಾಫ್.. ಮಿಕ್ಕಿ ಮೇಕ್‌ ಓವರ್.. ಫೈಸಲ್ ಶೇಖ್.. ಮಮತಾ ಕುಲಕರ್ಣಿ.. ಚಹಲ್ ಮಾಜಿ ಪತ್ನಿ ಧನಶ್ರೀ ವರ್ಮಾ.. ಅಪೂರ್ವ ಮುಖಿಜಾ.. ಹೀಗೆ ಹಲವರ ಹೆಸರುಗಳು ಸದ್ಯ ಸಂಭಾವ್ಯ ಸ್ಫರ್ಧಿಗಳ ಲಿಸ್ಟ್‌ನಲ್ಲಿ ಕಂಡು ಬರುತ್ತಿವೆ. ಇಂಗ್ಲೀಷ್‌ನ oneindia.com, ಡೆಕ್ಕನ್ ಕ್ರೋನಿಕಲ್ ಸೇರಿ ಹಲವು ಮಾಧ್ಯಮಗಳು ಕೂಡ ಈ ಕುರಿತು ವರದಿಯನ್ನು ಮಾಡಿದೆ. ಇವರಲ್ಲಿ ಯಾರೆಲ್ಲಾ ಭಾಗವಹಿಸುತ್ತಾರೆ ಎನ್ನುವುದಕ್ಕೆ ಸ್ಪಷ್ಟವಾದ ಉತ್ತರ ನಾಳೆ ರಾತ್ರಿ 09-30ಕ್ಕೆ ಸ್ಪಷ್ಟವಾಗಿ ಸಿಗಲಿದೆ.

ಅಂದ್ಹಾಗೇ ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗುವ ಒಂದು ಗಂಟೆಯ ಮೊದಲು ಜೀಯೋ ಹಾಟ್‌ ಸ್ಟಾರ್‌ನಲ್ಲಿ ಕಾರ್ಯಕ್ರಮ ಶುರುವಾಗಲಿದೆ. ಈ ಮೂಲಕ ಆಸಕ್ತ ಬಿಗ್ ಬಾಸ್ ಪ್ರೇಮಿಗಳಿಗೆ ಎಲ್ಲರಿಗಿಂತ ಮೊದಲು ಕಾರ್ಯಕ್ರಮ ಕಣ್ತುಂಬಿಕೊಳ್ಳುವ ಸೌಲಭ್ಯವನ್ನು ಆಯೋಜಕರು.. ವಾಹಿನಿಯವರು ನೀಡಿದ್ದಾರೆ. ಕಲರ್ಸ್‌ನಲ್ಲಿ ರಾತ್ರಿ 10-30ಕ್ಕೆ ಕಾರ್ಯಕ್ರಮ ಶುರುವಾದರೆ ಜೀಯೋ ಹಾಟ್‌ಸ್ಟಾರ್‌ನಲ್ಲಿ ಕಾರ್ಯಕ್ರಮ ರಾತ್ರಿ 9ಕ್ಕೆ ಆರಂಭವಾಗಲಿದೆ.

More from Filmibeat

English summary
Meet the star-studded lineup for Bigg Boss 19! From TV icon Gaurav Khanna to fan favorite Ashnoor Kaur, see who is confirmed to enter the house.
Read more about: bigg boss biggboss ಟಿವಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X