ಬಾಯ್ತುಂಬ ಅಣ್ಣ ಎಂದು ಕರೆದವನನ್ನೇ ಮದುವೆಯಾದ ಖ್ಯಾತ ನಟಿ, ಫೋಟೊ ವೈರಲ್
ಪ್ರೀತಿಗೆ ಭಾಷೆಗಳ, ಜಾತಿ ಮತಗಳ ಹಂಗಿಲ್ಲ. ವಯಸ್ಸಿನ ಗಡಿ ಇಲ್ಲ. ಅದು ಮೊದಲ ಮಳೆಯಲ್ಲಿ ಆಗ ತಾನೇ ಮೊಳಕೆಯೊಡೆದು ಹುಟ್ಟಿದ ಪುಟ್ಟ ಗಿಡದಂತೆ ಬೆಳೆಯುತ್ತಾ ಬೆಳೆಯುತ್ತಾ ರೂಪಾಂತರ ಹೊಂದುತ್ತದೆ. ಇಂಥಾ ಪ್ರೀತಿಯ ಬಲೆಯಲ್ಲಿ ಚಿತ್ರರಂಗದ ಹಲವು ತಾರೆಯರು ಸಿಲುಕಿದ್ದಾರೆ. ಪ್ರೀತಿ ಎಂದರೆ ಸಂತೋಷ. ಅದರ ಮಾಯೆಯೇ ಅಂತಹದ್ದು ಎನ್ನುವ ಮಾತುಗಳನ್ನಾಡಿದ್ದಾರೆ. ಕೇವಲ ಬೆಳ್ಳಿತೆರೆ ಮಾತ್ರ ಅಲ್ಲ ಕಿರುತೆರೆಯಲ್ಲಿ...
ಕೂಡ ತಮ್ಮ ಹೃದಯ ಗೆದ್ದ ವ್ಯಕ್ತಿಯನ್ನು ಅಳೆಯಲಾಗದಷ್ಟು.. ಅಂತ್ಯ ಇಲ್ಲದಷ್ಟು.. ಪ್ರೀತಿಸುವ ಅನೇಕರು ಇದ್ದಾರೆ. ಪ್ರೀತಿಯ ಸುಖದ ಕ್ಷಣಗಳನ್ನು ಗುನುಗುತ್ತಿದ್ದಾರೆ. ಆ ಪೈಕಿ ಹಲವರು ಮದುವೆಯಾಗಿ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಇನ್ನು ಕೆಲವರು ತಮ್ಮ ಪ್ರೀತಿಯ ಮೇಲೆ ಮದುವೆಯ ಅಧಿಕೃತ ಮುದ್ರೆಯನ್ನು ಹಾಕುತ್ತಿದ್ದಾರೆ. ಉದಾಹರಣೆಗೆ ಅಕ್ಷತಾ ಆಪ್ಟೆ ಮತ್ತು ಸ್ವಾನಂದ್ ಕೇತ್ಕರ್.

ಹೌದು, ಅಕ್ಷತಾ ಆಪ್ಟೆ ಮತ್ತು ಸ್ವಾನಂದ್ ಕೇತ್ಕರ್.. ಮರಾಠಿ ಕಿರುತೆರೆಯ ಜನಪ್ರಿಯ ತಾರೆಯರು. ''ತೂ ತೆವ್ಹಾ ತಶಿ''.. ''ಮುರಂಬಾ''.. ''ಸುಖಾಚ್ಯಾ ಸಾರಿಣಿ ಹೇ ಮನ್ ಬಾವರೆ''.. ''ಹೋನಾರ್ ಸೂನ್ ಮೀ ಹ್ಯಾ ಘರ್ಚೀ''.. ಧಾರಾವಾಹಿಗಳಲ್ಲಿ ಸ್ವಾನಂದ್ ಕೇತ್ಕರ್ ಅಭಿನಯಿಸಿದ್ದಾರೆ. ತಮ್ಮ ಅಭಿನಯದಿಂದ ಮಹಾರಾಷ್ಟ್ರದ ಮನ ಗೆದ್ದಿದ್ದಾರೆ.
ಇನ್ನು ಅಕ್ಷತಾ ಆಪ್ಟೆ ''ನವರಿ ಮಿಲೆ ಹಿಟ್ಲರ್ಲಾ'' ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದಾರೆ. ಮರಾಠಿ ರಂಗಭೂಮಿಯಲ್ಲಿ ಹಲವಾರು ನಾಟಕಗಳನ್ನು ಮಾಡಿದ್ದಾರೆ.
ಇಂಥಾ ಸ್ವಾನಂದ್ ಕೇತ್ಕರ್ ಮತ್ತು ಅಕ್ಷತಾ ಆಪ್ಟೆ 2023ರಲ್ಲಿ ಜೊತೆಯಾಗಿ ಒಂದು ಧಾರಾವಾಹಿ ಮಾಡಿದ್ದರು. ಆ ಧಾರಾವಾಹಿಯ ಹೆಸರು ''36 ಗುಣಿ ಜೋಡಿ''. ಕೇವಲ ಒಂದೇ ವರ್ಷ ಈ ಧಾರಾವಾಹಿ ಪ್ರಸಾರವಾದರು ಕೂಡ ಈ ಇಬ್ಬರಿಗೆ ಈ ಧಾರಾವಾಹಿ ಅಪಾರವಾದ ಹೆಸರು ನೀಡಿತ್ತು. ಇವತ್ತು ಕೂಡ ಸ್ವಾನಂದ್ ಕೇತ್ಕರ್ ಮತ್ತು ಅಕ್ಷತಾ ಆಪ್ಟೆ ಅವರನ್ನು ಮರಾಠಿಗರು ಗುರುತಿಸುವುದು ಈ ಧಾರಾವಾಹಿಯಲ್ಲಿ ಇವರು ನಿರ್ವಹಿಸಿದ್ದ ಪಾತ್ರಗಳ ಹೆಸರಿನ ಮೂಲಕವೇ.
ವಿಶೇಷ ಅಂದರೆ ಈ ಧಾರಾವಾಹಿಯಲ್ಲಿ ಇವರು ಇಬ್ಬರು ಅಣ್ಣ-ತಂಗಿ ಪಾತ್ರವನ್ನು ನಿರ್ವಹಿಸಿದ್ದರು. ಸ್ವಾನಂದ್ ಅವರನ್ನು ಬಾಯ್ತುಂಬ ಈ ಧಾರಾವಾಹಿಯಲ್ಲಿ ಅಕ್ಷತಾ ಅಣ್ಣ ಎಂದು ಕರೆಯುತ್ತಿದ್ದರೆ, ಅಕ್ಷತಾ ಅವರನ್ನು ಸ್ವಾನಂದ್ ತಂಗಿ ಎಂದೇ ಕರೆಯುತ್ತಿದ್ದರು.

ಆದರೆ.. ಹೀಗೆ ಅಣ್ಣ-ತಂಗಿ ಪಾತ್ರಗಳನ್ನು ನಿರ್ವಹಿಸಿದ ಇವರು ಇಬ್ಬರು ಈಗ ನಿಜ ಜೀವನದಲ್ಲಿ ಮದುವೆಯ ಬಂಧನಕ್ಕೊಳಗಾಗಿದ್ದಾರೆ. ಗಂಡ-ಹೆಂಡ್ತಿಯಾಗಿ ಹೊಸ ಬದುಕನ್ನು ಶುರು ಮಾಡಿದ್ದಾರೆ. ಸದ್ಯ ಅಕ್ಷತಾ ಮತ್ತು ಸ್ವಾನಂದ್ ಅವರಿಗೆ ಹಲವರು ಶುಭಾಶಯವನ್ನು ಕೋರುತ್ತಿದ್ದಾರೆ.
ಮರಾಠಿಯ ಕಲಾವಿದರಾದ ಋಜೂತಾ ದೇಶಮುಖ್.. ಅನುಷ್ಕಾ ಸರ್ಕಟೆ.. ಸಾನಿಕಾ ಕಾಶಿಕರ್.. ರಾಜ್ ಮೋರೆ.. ಅದ್ವೈತ್ ದಾದರ್ಕರ್.. ಸೇರಿದಂತೆ ಹಲವರು ನವ ಜೋಡಿಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ.

ಅಂದ್ಹಾಗೇ ಅಕ್ಷತಾ ಆಪ್ಟೆ ಮತ್ತು ಸ್ವಾನಂದ್ ಕೇತ್ಕರ್ ''36 ಗುಣಿ ಜೋಡಿ'' ಧಾರಾವಾಹಿಯಲ್ಲಿ ಅಣ್ಣ-ತಂಗಿ ಪಾತ್ರವನ್ನು ನಿರ್ವಹಿಸುವ ಮೊದಲು ''ಮುಶಾಫಿರಿ'' ಎಂಬ ನಾಟಕವನ್ನು ಮಾಡಿದ್ದರು. ಈ ಸಮಯದಲ್ಲಿ ಮೊದಲ ನೋಟದಲ್ಲಿಯೇ ಇಬ್ಬರಲ್ಲಿಯೂ ಪ್ರೇಮಾಂಕುರವಾಗಿತ್ತು. ಜನವರಿ 23-2023 ರಲ್ಲಿ ಈ ಧಾರಾವಾಹಿ ಶುರುವಾಗಿತ್ತು.
ಆದರೆ ಅದಕ್ಕೂ ಕೆಲ ದಿನ ಮೊದಲು ಅಂದರೆ ಜನವರಿ 4-2023ರಲ್ಲಿ ಇವರು ಇಬ್ಬರು ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈಗ ಎಂಗೇಜ್ಮೆಂಟ್ ನಡೆದ ಎರಡು ವರ್ಷದ ನಂತರ ಈ ಜೋಡಿ ಮದುವೆಯ ಬಂಧನಕ್ಕೊಳಗಾಗಿದೆ. ಸದ್ಯ ಈ ಜೋಡಿಯ ಮದುವೆಯ ಫೋಟೊ ಮತ್ತು ವಿಇಡಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.


Click it and Unblock the Notifications











