ಮನೆಗೆ ಬಂದಳು ಮಹಾಲಕ್ಷ್ಮಿ ; ಮದುವೆಯಾದ 2 ವರ್ಷದ ನಂತರ ಹೆಣ್ಣು ಮಗುವಿಗೆ ಜನ್ಮ ನೀಡಿದ 38 ವರ್ಷದ ನಟಿ

ಸಾಮಾನ್ಯವಾಗಿ ಯಾರೇ ಮದುವೆಯಾಗಲಿ ಕೆಲ ದಿನ ಕಳೆಯುತ್ತಿದ್ದಂತೆಯೇ ಏನಾದರೂ ಗುಡ್ ನ್ಯೂಸ್ ಎಂಬ ಪ್ರಶ್ನೆಯನ್ನೇ ಅನೇಕರು ಕೇಳಲು ಶುರು ಮಾಡುತ್ತಾರೆ. ಇನ್ನು ಸೆಲೆಬ್ರೆಟಿಗಳ ವಿಚಾರದಲ್ಲಿ ಇದು ಇನ್ನೂ ಹೆಚ್ಚಾಗಿರುತ್ತೆ. ಎಲ್ಲಿಯೇ ಹೋದರೂ ಸಾಕು ಮುಜುಗರವಾಗುವಂತಹ ವೈಯಕ್ತಿಕ ಪ್ರಶ್ನೆಗಳನ್ನು ಕೇಳುತ್ತಲೇ ಇರುತ್ತಾರೆ. ಮದುವೆಯಾಗಿ ಒಂದು ವರ್ಷ ತುಂಬಿರುವುದಿಲ್ಲ ಆಗಲೇ ಮದುವೆ ಮುಂಚೆ ಗರ್ಭಿಣಿಯಾಗುವ ಟ್ರೆಂಡ್ ಇರುವ ಈ ಸಮಯದಲ್ಲಿ ಯಾಕೆ ಇಷ್ಟು ತಡ ಮಾಡ್ತಿದ್ದೀರಾ ಎಂದು ಕೇಳಿ ಹಿಂಸೆ ಕೊಡುತ್ತಾರೆ. ಸುಖಾ ಸುಮ್ಮನೆ ಕೆಲವರ ಪಿತ್ತ ನೆತ್ತಿಗೇರಿಸುತ್ತಾರೆ.

ಇನ್ನೂ ವಯಸ್ಸಾಗಿದ್ದರಂತೂ ಮುಗಿದೇ ಹೋಯ್ತು. ಗೆದ್ದಲು ಹುಳಗಳಂತೆ ಕೊರೆಯಲು ಶುರು ಮಾಡುತ್ತಾರೆ. ವಯಸ್ಸು ಮೀರುತ್ತಿದೆ, ಫರ್ಟಿಲಿಟಿ ಸಮಸ್ಯೆ ಕಾಡಬಹುದು, ಸಮಾಜ ಏನು ಅಂದುಕೊಳ್ಳಬಹುದು, ಎಂಬ ಭಯದ ವಾತಾವರಣವನ್ನು ನಿರ್ಮಾಣ ಮಾಡ್ತಾರೆ.

From Qubool Hai to Motherhood Surbhi Jyoti and Sumit Suri Welcome a Baby Girl

ಕೆಲವರು ಈ ಪ್ರಶ್ನೆ ಸಹಿಸಿಕೊಳ್ಳಲು ಸಾಧ್ಯವಾಗದೇ ರೇಗಿದ್ದು ಇದೆ. ಮಾರ್ಮಿಕವಾಗಿ ಉತ್ತರ ನೀಡಿದ್ದು ಇದೆ. ಹೀಗೆ ಸಿಕ್ಕ ಸಿಕ್ಕಲ್ಲಿ ಪ್ರಶ್ನೆಗಳನ್ನು ಕೇಳುವವರಿಗೆ ಸುರಭಿ ಜ್ಯೋತಿ ಉತ್ತರ ನೀಡಿದ್ದಾರೆ. ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಹೌದು, ಸುರಭಿ ಜ್ಯೋತಿ.. ಪಂಜಾಬ್‌ನ ಪೋರಿ. ಆರ್.ಜೆ. ಆಗಿ ಕೆಲಸ ಮಾಡುತ್ತಲೇ ಕಿರುತೆರೆ ಪ್ರವೇಶ ಮಾಡಿದ ಸುರಭಿ ಜ್ಯೋತಿ ''ಕಬೂಲ್ ಹೈ'' ಧಾರಾವಾಹಿಯ ಮೂಲಕ ಮನೆ ಮಾತಾದರು. ''ನಾಗಿನ್ 3'' ಧಾರಾವಾಹಿಯ ಮೂಲಕ ಕೀರ್ತಿಯ ಶಿಖರಕ್ಕೇರಿದರು. ''ಇಶ್ಕ್‌ಬಾಜ್''.. ''ಕೋಯಿ ಲೌಟ್ ಕೆ ಆಯಾ ಹೈ''.. ''ಯೇ ಜಾದು ಹೈ ಜಿನ್ ಕಾ''.. ಇವರ ಕೆಲ ಪ್ರಸಿದ್ಧ ಧಾರಾವಾಹಿಗಳು.

ಕಿರುತೆರೆ ಮಾತ್ರವಲ್ಲದೇ ಬೆಳ್ಳಿತೆರೆಯಲ್ಲಿ ಕೂಡ ಅದೃಷ್ಟ ಪರೀಕ್ಷೆ ಮಾಡಿಕೊಂಡ ಸುರಭಿ, ''ಇಕ್ ಕುಡಿ ಪಂಜಾಬ್ ದಿ''.. ''ರೌಲಾ ಪೈ ಗಯಾ''.. ಪಂಜಾಬಿ ಚಿತ್ರಗಲ್ಲಿ ಕಾಣಿಸಿಕೊಂಡಿದ್ದರು. ಹಿಂದಿಯ ''ಕ್ಯಾ ಮೇರಿ ಸೋನಮ್ ಗುಪ್ತಾ ಬೇವಫಾ ಹೈ'' ಚಿತ್ರದಲ್ಲಿ ಕೂಡ ಅಭಿನಯಿಸಿದ್ದರು. ಇಷ್ಟೇ ಅಲ್ಲ ಸುರಭಿ ಜ್ಯೋತಿ 'ಖತ್ರೋನ್ ಕೆ ಖಿಲಾಡಿ 7' ಸೀಸನ್ 7ರ ಸ್ಫರ್ಧಿಯೂ ಹೌದು.

ಇಂಥಾ ಸುರಭಿ ಜ್ಯೋತಿ ತಮ್ಮ 38ನೇ ವರ್ಷದಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಜೂನ್ 13ರಂದು ತಮ್ಮ ಮನೆಗೆ ಹೊಸ ಅತಿಥಿಯನ್ನು ಬರಮಾಡಿಕೊಂಡಿದ್ಧಾರೆ. ಈ ಕುರಿತು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಸುರಭಿ ನಮ್ಮ ಮನೆಗೆ ಮಗಳು ಬಂದಿದ್ಧಾಳೆ. ನಮ್ಮ ಹೃದಯ ಪ್ರೀತಿ ಮತ್ತು ಕೃತಜ್ಞತೆಯಿಂದ ತುಂಬಿದೆ ಎಂದು ಹೇಳಿದ್ದಾರೆ.

From Qubool Hai to Motherhood Surbhi Jyoti and Sumit Suri Welcome a Baby Girl

ಸದ್ಯ ಜೆನ್ನಿಫರ್ ವಿಂಗೇಟ್, ಅವಿಕಾ ಗೋರ್, ಹೀನಾ ಖಾನ್, ವೀರ ಕನ್ನಡಿಗ ನಟಿ ಅನಿತಾ, ಹೀಗೆ ಬೆಳ್ಳಿತೆರೆ ಮತ್ತು ಕಿರುತೆರೆಯ ಹಲವರು ಸುರಭಿ ಜ್ಯೋತಿಗೆ ಶುಭ ಕೋರುತ್ತಿದ್ಧಾರೆ. ಇವರ ಅಭಿಮಾನಿಗಳು ಸುರಭಿ ಜ್ಯೋತಿ ಅವರಿಗೆ ಅಭಿನಂದನೆ ಸಲ್ಲಿಸುತ್ತಿದ್ಧಾರೆ.

ಅಂದ್ಹಾಗೇ ಸದ್ಯ ತಾಯ್ತನದ ಸುಖವನ್ನು ಅನುಭವಿಸುತ್ತಿರುವ ಸುರಭಿ ಜ್ಯೋತಿ, ಅಕ್ಟೋಬರ್ 27, 2024ರಂದು ಸುಮಿತ್ ಸೂರಿ ಜೊತೆ ಸಪ್ತಪದಿ ತುಳಿದಿದ್ದರು. ಉತ್ತರಾಖಂಡದ ಜಿಮ್ ಕಾರ್ಬೆಟ್ ರೆಸಾರ್ಟ್‌ ಇವರ ಅದ್ಧೂರಿ ಮದುವೆಗೆ ಸಾಕ್ಷಿಯಾಗಿತ್ತು.

ಇನ್ನು ಸುಮಿತ್ ಸೂರಿ ಕೂಡ ಸುರಭಿ ಅವರಂತೆಯೇ ವೃತ್ತಿಯಲ್ಲಿ ನಟ. ಇಷ್ಟೇ ಅಲ್ಲ ನಿರ್ಮಾಪಕ ಕೂಡ ಹೌದು. ''ಹಾ ಕೆ ಸಾತ್'' ಎಂಬ ಮ್ಯೂಸಿಕ್ ವಿಡಿಯೋ ಚಿತ್ರೀಕರಣದ ಸಮಯದಲ್ಲಿ ಇವರಿಬ್ಬರ ಪರಿಚಯವಾಗಿತ್ತು. ಇಲ್ಲಿಂದ ಶುರುವಾದ ಇವರ ಸ್ನೇಹ ಆ ನಂತರ ಪ್ರೀತಿಯ ಸ್ವರೂಪ ಪಡೆಯಿತು. ಆ ನಂತರ ಮನೆಯವರ ಒಪ್ಪಿಗೆ ಪಡೆದು ಗುರು ಹಿರಿಯರ ಸಮ್ಮುಖದಲ್ಲಿ ಇಬ್ಬರು ಮದುವೆಯಾದರು. ಈಗ ಇಬ್ಬರು ತಂದೆ ತಾಯಿಯಾಗಿ ಬಡ್ತಿ ಪಡೆದಿದ್ದಾರೆ.

English summary
Surbhi Jyoti and Sumit Suri are blessed with a baby girl! From Qubool Hai fame to a brand-new chapter of motherhood—see the couple's happy announcement.
Read more about: pregnancy pregnant
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X