ಇವರೇ ನೋಡಿ ಈ ಬಾರಿ ಕನ್ನಡ ''ಬಿಗ್ ಬಾಸ್‌'' ಮನೆಗೆ ಬರುತ್ತಿರುವ ಮೊದಲ ಸ್ಫರ್ಧಿ..!

''ಬಿಗ್ ಬಾಸ್'' ಕನ್ನಡದಲ್ಲಿ ಜನಮನ್ನಣೆ ಗಳಿಸಿದೆ ಅಂದರೆ ಅದಕ್ಕೆ ಕಾರಣ ಕಿಚ್ಚ ಸುದೀಪ್. ವಾರಾಂತ್ಯಕ್ಕೆ ಒಮ್ಮೆ ಬಂದು ತಮ್ಮ ಮಾತಿನ ಚಾಕಚಕ್ಯತೆಯಿಂದಲೇ ಇಡೀ ವಾರದ ಪ್ರೇಕ್ಷಕರ ಹತಾಶೆಯನ್ನು ದೂರ ಮಾಡುವ ಸುದೀಪ್, ಕಳೆದ ವರ್ಷ ಬಿಗ್ ಬಾಸ್‌ಗೆ ಗುಡ್‌ಬೈ ಹೇಳಿದ್ದಾಗ ಒಂದು ವರ್ಗ ಬೇಸರ ಮಾಡಿಕೊಂಡಿತ್ತು. ಮತ್ತೊಂದು ವರ್ಗ.. ಸುದೀಪ್ ಇನ್ಮುಂದೆ ಹೆಚ್ಚೆಚ್ಚು ಚಿತ್ರಗಳನ್ನು ಮಾಡುತ್ತಾರೆ ಎಂದು ಸಂಭ್ರಮದಿಂದ ಕುಣಿದಿತ್ತು.

ಆದರೆ.. ಆ ಸಂಭ್ರಮ ಉಳಿದಿದ್ದು ಕೆಲ ದಿನಗಳು ಮಾತ್ರ. ಸದ್ಯ ಸುದೀಪ್ ಮತ್ತೆ ''ಬಿಗ್ ಬಾಸ್'' ಮನೆಗೆ ಮರಳಿದ್ದಾರೆ. ಇನ್ನೇನು ಈ ಕಾರ್ಯಕ್ರಮ ಇದೇ ತಿಂಗಳಾಂತ್ಯಕ್ಕೆ ಶುರು ಕೂಡ ಆಗಲಿದ್ದು ಈಗಾಗಲೇ ಚಿಕ್ಕ ಪ್ರೋಮೋವನ್ನು ಕೂಡ ಬಿಡುಗಡೆ ಮಾಡಲಾಗಿದೆ.

From Radha Ramana to Bigg Boss 12 Shwetha Prasad s Next Big Move Confirmed

ಇನ್ನೂ..ಪ್ರತಿ ವರ್ಷ ''ಬಿಗ್ ಬಾಸ್'' ಶುರುವಾಗುವ ಆಚೀಚೆ ಹಲವು ಹೆಸರುಗಳು ಅಂತೆ-ಕಂತೆಯ ಸಂತೆಯಲ್ಲಿ ಕೇಳಿ ಬರಲು ಶುರುವಾಗುತ್ತವೆ. ಬಣ್ಣದ ಲೋಕದಲ್ಲಿದ್ದವರೇ ಈ ಬಾರಿ ತಮ್ಮ ಹೆಸರು ''ಬಿಗ್ ಬಾಸ್‌'' ಕಿವಿಗೆ ಬೀಳಲಿ ಎಂದು ಪ್ರಾರ್ಥನೆಯನ್ನು ಮಾಡುತ್ತಾರೆ. ಹೇಗಾದರೂ ಮಾಡಿ ಮನೆಯನ್ನೊಮ್ಮೆ ಪ್ರವೇಶಿಸಬೇಕೆಂಬ ಕನಸನ್ನು ಇಲ್ಲಿ ಹಲವರು ಕಾಣುತ್ತಾರೆ. ಅದಕ್ಕೆ ನಾನಾ ಸರ್ಕಸನ್ನೂ ಕೂಡ ಮಾಡುತ್ತಾರೆ.

ಆದರೆ.. ಹೀಗೆ ಗಮನ ಸೆಳೆಯುವ ಪ್ರಯತ್ನ ಮಾಡುವವರಿಗೆಲ್ಲಾ ಸುಲಭಕ್ಕೆ ''ಬಿಗ್ ಬಾಸ್‌''ನ ಬಾಗಿಲು ತೆರೆಯುವುದಿಲ್ಲ. ಬದಲಿಗೆ ಕೆಲ ಒಮ್ಮೆ ತಮ್ಮ ಪಾಡಿಗೆ ತಾವು ಕೆಲಸ ಮಾಡಿಕೊಂಡಿದ್ದವರ ಪಾಲಿಗೆ ಅಚ್ಚರಿ ಎಂಬಂತೆ ಈ ಭಾಗ್ಯದ ಬಾಗಿಲು ತೆರೆಯುತ್ತೆ. ಉದಾಹರಣೆಗೆ ''ಶ್ವೇತಾ ಪ್ರಸಾದ್'' ಅವರನ್ನೇ ತೆಗೆದುಕೊಳ್ಳಿ.

ಹೌದು .. ಶ್ವೇತಾ ಪ್ರಸಾದ್ .. ''ರಾಧಾ ರಮಣ''ದ ರಾಧಾ ಮಿಸ್. ಕಿರುತೆರೆಯಲ್ಲಿ ಹೆಸರು.. ಕೀರ್ತಿ ಗಳಿಸಿದ ಶ್ವೇತಾ ಪ್ರಸಾದ್ ಬೆಳ್ಳಿತೆರೆಯಲ್ಲಿ ಕೂಡ ಅದೃಷ್ಟ ಪರೀಕ್ಷೆಯನ್ನು ಮಾಡಿಕೊಂಡರು.

''ಕಾಟೇರ''.. ''ಕಳ್ಬೆಟ್ಟದ ದರೋಡೆಕೋರರು''.. ''ಪದವಿ ಪೂರ್ವ''.. ಸೇರಿ ಕೆಲವು ಚಿತ್ರಗಳಲ್ಲಿ ಕೂಡ ಮಹತ್ತರ ಪಾತ್ರವನ್ನು ನಿರ್ವಹಿಸಿದರು. 2017ರಲ್ಲಿ ಬೆಂಗಳೂರು ಟೈಮ್ಸ್‌ನ ಮೋಸ್ಟ್ ಡಿಸೈರೇಬಲ್ ಮಹಿಳೆ ಪ್ರಶಸ್ತಿಯನ್ನು ಕೂಡ ಮುಡಿಗೇರಿಸಿಕೊಂಡರು.ಕೇವಲ ಕಲಾವಿದೆಯಾಗಿ ಮಾತ್ರ ಅಲ್ಲ ನಿರ್ಮಾಪಕಿಯಾಗಿ ಕೂಡ ಹೆಸರು ಮಾಡಿದವರು ಶ್ವೇತಾ ಪ್ರಸಾದ್. ''ಬಂದೂಕ್'' ಇತ್ತೀಚೆಗೆ ಇವರು ಅಭಿನಯಿಸಿದ ಚಿತ್ರ.

From Radha Ramana to Bigg Boss 12 Shwetha Prasad s Next Big Move Confirmed

ಇಂಥಾ ಶ್ವೇತಾ ಪ್ರಸಾದ್ ಸದ್ಯ ಈ ಬಾರಿಯ ''ಬಿಗ್ ಬಾಸ್‌'' ಮನೆಗೆ ಹೋಗುತ್ತಿರುವುದು ನೂರಕ್ಕೆ ನೂರು ಸತ್ಯ ಎನ್ನುವ ಮಾತು ಸದ್ಯ ಕಿರುತೆರೆ ವಲಯದಿಂದ ಹಿಡಿದು ಚಿತ್ರರಂಗದವರೆಗೆ ಕೇಳಿ ಬರುತ್ತಿದೆ. ಹೀಗೆ ಕೇಳಿ ಬರುತ್ತಿರುವ ಸುದ್ದಿ, ಈ ಭವಿಷ್ಯವಾಣಿ ಈ ಬಾರಿ ನಿಜವಾಗುತ್ತಾ ? ಎನ್ನುವುದಕ್ಕೆ ಉತ್ತರ ಕಾರ್ಯಕ್ರಮದ ಆರಂಭದ ದಿನ ಅಂದರೆ ಸೆಪ್ಟೆಂಬರ್ 28ರಂದೇ ಸಿಗಲಿದೆಯಾದರೂ ಕೂಡ ತಿಂಗಳ ಹಿಂದೆ ಶ್ವೇತಾ ಪ್ರಸಾದ್ ಮಾತನಾಡಿದ್ದ ಮಾತು ಹರಿದಾಡುತ್ತಿರುವ ಈ ಸುದ್ದಿಯನ್ನು ಪುಷ್ಟಿಕರಿಸುವಂತೆ ಇದೆ.

ಹೌದು, ಅಸಲಿಗೆ ಒಂದೂವರೆ ತಿಂಗಳ ಹಿಂದೆ ಶ್ವೇತಾ ಪ್ರಸಾದ್, ''ಬಾಸ್‌ ಟಿವಿ''ಗೆ ಸಂದರ್ಶನವನ್ನು ನೀಡಿದ್ದರು. ಈ ಸಂದರ್ಶನದಲ್ಲಿ ''ಬಿಗ್ ಬಾಸ್‌'' ಮನೆಗೆ ಈ ಬಾರಿ ಶ್ವೇತಾ ಪ್ರಸಾದ್ ಹೋಗ್ತಾರಾ ಎನ್ನುವ ಪ್ರಶ್ನೆಗೆ ಉತ್ತರ ನೀಡಿದ್ದ ಶ್ವೇತಾ ಪ್ರಸಾದ್ ಸ್ವಲ್ಪ ಕುತೂಹಲ ಹಾಗೇ ಇರಲಿ, ಯಾರಿಗೆ ಗೊತ್ತು ನಾನು ಹೋದರು ಹೋಗಬಹುದು ಎಂದು ಹೇಳಿದ್ದರು. ಪ್ರತಿ ಸೀಸನ್‌ನಲ್ಲಿ ಕೂಡ ನನಗೆ ಅವಕಾಶ ಬಂದಿದೆ, ಈ ಸೀಸನ್‌ನಲ್ಲಿ ಬಂದರೆ ನಾನು ಹೋಗಬಹುದು ಎಂದು ಹೇಳಿದ್ದರು. ಈ ಹಿನ್ನೆಲೆ ಸದ್ಯ ಶ್ವೇತಾ ಪ್ರಸಾದ್ ಈ ಬಾರಿ ಬಿಗ್ ಬಾಸ್ ಮನೆಗೆ ಹೋಗುವುದು ಖಚಿತ ಎನ್ನುವ ಮಾತು ಸೋಶಿಯಲ್ ಮೀಡಿಯಾದಲ್ಲಿ ಬಲವಾಗಿ ಕೇಳಿ ಬರುತ್ತಿದೆ. ನಿಜಕ್ಕೂ ಈ ಬಾರಿ ಬಿಗ್ ಬಾಸ್‌ ಮನೆಯಲ್ಲಿ ಶ್ವೇತಾ ಅವರನ್ನು ನೋಡಬಹುದಾ ? ಉತ್ತರ ಇನ್ನೇನು ಕೆಲವೇ ದಿನಗಳಲ್ಲಿ ಸಿಗಲಿದೆ.

More from Filmibeat

English summary
The rumour mill is on fire! Fans are buzzing about Shwetha Prasad's potential entry into the Bigg Boss Kannada 12 house. We reveal if the beloved "Radha" is the next big contestant. Read on for the latest updates!
Read more about: biggboss bigg boss ಟಿವಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X