ಹಸೆಮಣೆ ಏರಲು ಸಜ್ಜಾದ ‘ನಂದಗೋಕುಲ’ ರಕ್ಷಾ ; ಕೃಷ್ಣಪ್ರಿಯಾ ಮದುವೆಯಾಗುತ್ತಿರುವ ಹುಡುಗ ಯಾರು? ವಯಸ್ಸಿನ ಅಂತರ ಎಷ್ಟು?

ಮದುವೆ ಎನ್ನುವುದು ನಿರಂತರ ಕಲಿಕೆಯ ಪ್ರಕ್ರಿಯೆ. ಬದ್ದತೆ, ಹೊಂದಾಣಿಕೆ, ಸಂತೋಷದ ಜೀವನ. ಬದುಕಿನ ಮಹತ್ವದ ಹಂತ. ಎರಡು ಜೀವಗಳು ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ಕುಗ್ಗದೇ ಜೀವನಪೂರ್ತಿ, ಒಬ್ಬರಿಗೊಬ್ಬರು ಬೆನ್ನೆಲುಬಾಗಿ ಜೊತೆಯಾಗಿ ಇರಬೇಕಾದಂತಹ ಒಂದು ಬಂಧನ. ಇಂತಹ ಬಂಧನಕ್ಕೆ ಈ ವರ್ಷ ಹಲವು ತಾರೆಯರು ಒಳಗಾಗಿದ್ದಾರೆ. ಈ ಸಾಲಿಗೆ ಈಗ ಕನ್ನಡ ಕಿರುತೆರೆಯ ನಾಯಕಿ ಕೃಷ್ಣ ಪ್ರಿಯಾ ಭಟ್ ಸೇರಿಕೊಳ್ಳುತ್ತಿದ್ದಾರೆ.

ಹೌದು, ಕೃಷ್ಣಪ್ರಿಯಾ ಭಟ್.. ನಂದಗೋಕುಲದ ರಕ್ಷಾ. ಮಾಧವ.. ಕೇಶವ.. ವಲ್ಲಭ.. ಅವರ ಮುದ್ದಿನ ತಂಗಿ. ನಂದನ ಕೊನೆ ಮಗಳು. ಇಂಥಾ ಕೃಷ್ಣಪ್ರಿಯಾ ಕಳೆದ ವರ್ಷ ಆಗಸ್ಟ್ 24ರಂದು ಅಮೋಘ್ ಕುಂಟಿನಿ ಅವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈ ಮೂಲಕ ತಮ್ಮ ಅಭಿಮಾನಿಗಳಿಗೆ ಅಚ್ಚರಿಗೆ ದೂಡಿದ್ದರು.

From Reel Life to Real Love Nandagokula s Krishna Priya Bhat to Wed Amogha Kuntini on February 6

ಈಗ ತಮ್ಮ ಮನ ಮೆಚ್ಚಿದ ಹುಡುಗನ ಜೊತೆ ಕೃಷ್ಣಪ್ರಿಯಾ ಮದುವೆಯಾಗಲು ಅಣಿಯಾಗಿದ್ದಾರೆ. ಬ್ಯಾಚುಲರ್ ಪಾರ್ಟಿಯನ್ನು ಮಾಡಿ ಸಂಭ್ರಮ ಪಟ್ಟಿದ್ದಾರೆ. ಕೃಷ್ಣಪ್ರಿಯಾ ಮತ್ತು ಅಮೋಘ್ ಅವರ ಮದುವೆ ಸಮಾರಂಭ ಕೃಷ್ಣಪ್ರಿಯಾ ಅವರ ಊರಾದ ಬೆಳ್ತಂಗಡಿ ತಾಲೂಕಿನ ನಾರಾವಿಯಲ್ಲಿ ನಡೆಯಲಿದೆ. ಫೆಬ್ರುವರಿ 6ನೇ ತಾರೀಖಿನಂದು ಮದುವೆ ನಡೆಯಲಿದ್ದು ಫೆಬ್ರವರಿ 7ರಂದು ಶ್ರೀಕ್ಷೇತ್ರ ಧರ್ಮಸ್ಥಳ ಸಮೀಪವಿರುವ ಕನ್ಯಾಡಿ ಶ್ರೀರಾಮ ಮಂದಿರದಲ್ಲಿ ಆರತಕ್ಷತೆ ನಡೆಯಲಿದೆ.

ತಮ್ಮ ಮದುವೆಯ ಕುರಿತು ''ವಿಜಯ್ ಕರ್ನಾಟಕ''ಗೆ ನೀಡಿರುವ ಸಂದರ್ಶನದಲ್ಲಿ ಮಾಹಿತಿಯನ್ನು ಹಂಚಿಕೊಂಡಿರುವ ಕೃಷ್ಣಪ್ರಿಯಾ ಭಟ್ ಮದುವೆಯಾಗುತ್ತಿರುವ ಹುಡುಗ ಅಮೋಘ್ ಅವರು ನನ್ನ ಸಂಬಂಧಿಯೇ ಎಂದು ಹೇಳಿದ್ದಾರೆ. ಬಾಲ್ಯದಿಂದಲೇ ಒಬ್ಬರನ್ನೊಬ್ಬರು ನೋಡ್ಕೊಂಡು ಬೆಳೆದಿದ್ದೀವಿ ಎಂದು ಹೇಳಿರುವ ಕೃಷ್ಣಪ್ರಿಯಾ ಆ ನಂತರ ಸ್ನೇಹಿತರಾಗಿದ್ವಿ ಎಂದು ಹೇಳಿದ್ಧಾರೆ.

ಇನ್ನೂ ಕೃಷ್ಣಪ್ರಿಯಾ ಅವರದ್ದು ಲವ್ ಮ್ಯಾರೇಜಾ..? ಅರೆಂಜ್ ಮ್ಯಾರೇಜಾ..? ಅಥವಾ ಲವ್ ಕಂ ಅರೆಂಜ್ ಮ್ಯಾರೇಜಾ..? ಈ ಪ್ರಶ್ನೆ ಇವರ ಅಭಿಮಾನಿಗಳಲ್ಲಿ ಇರಬಹುದು. ಈ ಪ್ರಶ್ನೆಗೆ ಉತ್ತರ ನೀಡಿರುವ ಕೃಷ್ಣಪ್ರಿಯಾ
ಕುಟುಂಬದವರೇ ಮದುವೆ ನಿಶ್ಚಯಿಸಿದ್ದಾರೆ, ಮೊದಲಿಂದ ಇಬ್ಬರಿಗೂ ಪರಿಚಯ ಇರುವ ಇನ್ನೆಲೆ ನಮಗೂ ಕೂಡ ಇಷ್ಟ ಆಯ್ತು ಎಂದು ಹೇಳಿದ್ದಾರೆ. ಮದುವೆಗೆ ಒಪ್ಪಿಕೊಂಡ್ವಿ ಎಂದಿದ್ದಾರೆ.

ಅಂದ್ಹಾಗೇ ಕೃಷ್ಣಪ್ರಿಯಾ ಭಟ್ ಅವರ ಹೃದಯ ಗೆದ್ದ ಅಮೋಘ್ ಬೆಳ್ಳಿತೆರೆ ಮತ್ತು ಕಿರುತೆರೆ ಎರಡರಿಂದಲೂ ದೂರ. ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡಿರುವ ಅಮೋಘ್ ಟಾಟಾ EKXSI ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇನ್ನು ಯಕ್ಷಗಾನದಲ್ಲಿ ಅಪಾರವಾದ ಆಸಕ್ತಿಯನ್ನು ಹೊಂದಿರುವ ಅಮೋಘ್ ಚಂಡೆ ಕಲಾವಿದರು ಕೂಡ ಹೌದು. ಇನ್ನು ಇಬ್ಬರ ನಡುವೆ ಆರು ವರ್ಷಗಳ ಅಂತರ ಇದೆ ಎಂದು ಕೃಷ್ಣಪ್ರಿಯಾ ಭಟ್ ''ವಿಜಯ್ ಕರ್ನಾಟಕ''ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

From Reel Life to Real Love Nandagokula s Krishna Priya Bhat to Wed Amogha Kuntini on February 6

ಇನ್ನು ಸಾಮಾನ್ಯವಾಗಿ ಮದುವೆಯಾದ ಮೇಲೆ ಚಿತ್ರರಂಗದಿಂದ ಅಥವಾ ಕಿರುತೆರೆಯಿಂದ ಹಲವರು ದೂರವಾಗುತ್ತಾರೆ. ಮನೆ-ಸಂಸಾರ ಎಂದು ಬ್ಯುಸಿಯಾಗುತ್ತಾರೆ. ಮತ್ತೂ ಕೆಲ ಒಮ್ಮೆ ಗಂಡಿನ ಮನೆಯವರು ಬಣ್ಣದ ಪ್ರಪಂಚದಿಂದ ದೂರ ಆಗಬೇಕೆಂಬ ಷರತ್ತನ್ನು ಹಾಕಿರುತ್ತಾರೆ.

ಹೀಗಾಗಿ ಮದುವೆಯಾದರೆ ''ನಂದಗೋಕುಲ'' ಧಾರಾವಾಹಿಯಿಂದ ರಕ್ಷಾ ಹೊರ ನಡೆಯುತ್ತಾರಾ ಎನ್ನುವ ಅನುಮಾನ ಸದ್ಯ ಕಿರುತೆರೆಯ ಪ್ರೇಕ್ಷಕರಲ್ಲಿ ಕೆಲವರನ್ನು ಕಾಡುತ್ತಿದೆ. ಈ ಪ್ರಶ್ನೆಗೆ ಕೂಡ ಉತ್ತರ ನೀಡಿರುವ ಕೃಷ್ಣಪ್ರಿಯಾ ಭಟ್ ಮದುವೆಯ ನಂತರವೂ ನಾನು ''ನಂದಗೋಕುಲ'' ಧಾರಾವಾಹಿಯಲ್ಲಿ ಮುಂದುವರೆಯುತ್ತೇನೆ ಎಂದು ಹೇಳಿದ್ದಾರೆ. ಸದ್ಯಕ್ಕೆ ನನ್ನ ಕೆಲಸ ಮುಗಿಸಿ ಒಂದು ಚಿಕ್ಕ ವಿರಾಮ ಪಡೆದಿದ್ದು ಕೆಲ ಸಂಚಿಕೆಗಳು ಇನ್ನೂ ಪ್ರಸಾರವಾಗಬೇಕಿವೆ ಎಂದು ಹೇಳಿದ್ದಾರೆ. ಮದುವೆಯ ನಂತರವೂ ಬಣ್ಣದ ಜೊತೆಗಿನ ನನ್ನ ನಂಟು ಹೀಗೆ ಮುಂದುವರೆಯುತ್ತೆ ಎಂದಿದ್ದಾರೆ. ಸದ್ಯ ಕೃಷ್ಣಪ್ರಿಯಾ ಅವರಿಗೆ ಹಲವರು ಶುಭಾಶಯ ಕೋರುತ್ತಿದ್ದಾರೆ.

ಆದರೆ, ಕೃಷ್ಣಪ್ರಿಯಾ ಭಟ್ ಮಾತ್ರ

More from Filmibeat

English summary
Who is Amogha Kuntini? Meet the man marrying Nandagokula star Krishna Priya Bhat. All the details on their February 6 wedding date and journey inside!
Read more about: marriage ಟಿವಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X