ನಾಳೆಯಿಂದ 'ಬಿಗ್ ಬಾಸ್' ಶುರು, ಈ ಬಾರಿ ಮನೆ ಪ್ರವೇಶಿಸಲಿರುವ ಸ್ಫರ್ಧಿಗಳು ಇವರೇ ?
ಹಿಂದಿಯಲ್ಲಿ ಜನಪ್ರಿಯವಾದ ನಂತರ ''ಬಿಗ್ ಬಾಸ್'' ದಕ್ಷಿಣದ ಭಾಷೆಗಳಲ್ಲಿ ಆರಂಭವಾಗಿತ್ತು.''ಕನ್ನಡ''ದ ಕಾರ್ಯಕ್ರಮದ ಸಾರಥ್ಯವನ್ನು ಕಳೆದ ಹನ್ನೊಂದು ವರ್ಷದಿಂದ ''ಸುದೀಪ್'' ವಹಿಸಿಕೊಂಡಿದ್ದರೆ ತೆಲುಗಿನಲ್ಲಿ ''ನಾಗಾರ್ಜುನ'' ಉಸ್ತುವಾರಿಯಲ್ಲಿ ಕಾರ್ಯಕ್ರಮ ಮೂಡಿ ಬರುತ್ತಿದೆ. ತಮಿಳಿನಲ್ಲಿ ಈ ಜವಾಬ್ದಾರಿಯನ್ನು ''ಕಮಲ್ ಹಾಸನ್'' ಕಳೆದ ವರ್ಷದಿಂದ ''ವಿಜಯ್ ಸೇತುಪತಿ'' ಅವರಿಗೆ ವಹಿಸಿದ್ದಾರೆ. ಮಲಯಾಳಂನಲ್ಲಿ ''ಮೋಹನ್ ಲಾಲ್'' ಬಿಗ್ ಬಾಸ್ ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದ್ದಾರೆ.
ಇಂಥಾ ''ಬಿಗ್ ಬಾಸ್'' ಕಾರ್ಯಕ್ರಮ ಈ ವರ್ಷ ಮತ್ತೆ ಶುರುವಾಗುತ್ತಿದೆ. ಈಗಾಗಲೇ ಎಲ್ಲಾ ಭಾಷೆಯಲ್ಲಿ ವೇದಿಕೆ ಕೂಡ ಸಿದ್ಧವಾಗಿದೆ. ಆದರೆ ಈ ಬಾರಿ ''ಹಿಂದಿ''ಯಲ್ಲಿ ಅಲ್ಲ ''ಕನ್ನಡ''ದಲ್ಲಿ ಅಲ್ಲ ಬದಲಿಗೆ ಎಲ್ಲರಿಗಿಂತ ಮೊದಲು ''ಮಲಯಾಳಂ'' ನಲ್ಲಿ ಕಾರ್ಯಕ್ರಮ ಶುರುವಾಗಲಿದೆ. ನಾಳೆ [ ಆಗಸ್ಟ್ 3] ''ಬಿಗ್ ಬಾಸ್'' ಸೀಸನ್-7ಗೆ ಸಂಜೆ 7ಕ್ಕೆ ಅದ್ಧೂರಿಯಾಗಿ ಚಾಲನೆಯನ್ನು ನೀಡಲಾಗುತ್ತಿದೆ.

ಈ ಕುರಿತು ಈಗಾಗಲೇ ಹಲವಾರು ಪ್ರೋಮೋಗಳು ಕೂಡ ಬಿಡುಗಡೆ ಮಾಡಲಾಗಿದೆ. ಈ ಹಿನ್ನೆಲೆ ಈ ಬಾರಿ ''ಬಿಗ್ ಬಾಸ್'' ಮನೆಯಲ್ಲಿ ಯಾರನ್ನೆಲ್ಲಾ ನೋಡಬಹುದು ಎನ್ನುವ ಪ್ರಶ್ನೆ ಕೂಡ ಹಲವು ಕೇರಳಿಗರಲ್ಲಿದೆ.
ಯಾಕೆಂದರೆ ಎಲ್ಲರಿಗೆ ಗೊತ್ತಿರುವಂತೆ ಆ ಭಾಷೆ ಈ ಭಾಷೆ ಅಲ್ಲ ಎಲ್ಲ ಭಾಷೆಯಲ್ಲಿ ಕೂಡ ಈ ಕಾರ್ಯಕ್ರಮದಲ್ಲಿ ಪ್ರತಿ ವರ್ಷ ಚಿತ್ರ ವಿಚಿತ್ರ ಆಸಾಮಿಗಳು ಇದ್ದೇ ಇರುತ್ತಾರೆ. ಇರದಿದ್ದರೆ ಶೋ ಅಪೂರ್ಣವೆನಿಸುತ್ತದೆ.
ಹೀಗಾಗಿಯೇ ಈ ವರ್ಷದ ಸ್ಫರ್ಧಿಗಳು ಯಾರಿರಬಹುದು ಎನ್ನುವ ಚರ್ಚೆ ಸದ್ಯ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿದೆ. ಇನ್ನು, ಎಲ್ಲಕ್ಕಿಂತ ಹೆಚ್ಚಾಗಿ ಈ ಬಾರಿ ಮಲಯಾಳಂನ ''ಬಿಗ್‌ಬಾಸ್''ನಲ್ಲಿ ಸಾಮಾನ್ಯ ಜನರಿಗೆ ಕೂಡ ಅವಕಾಶವನ್ನು ಕಲ್ಪಿಸಲಾಗಿದೆ. ''ಬಿಗ್ ಬಾಸ್''ನ ಈ ನಡೆಯಿಂದ ಈ ಬಾರಿ ಕೇರಳದಲ್ಲಿ ಯಾರಿಗೆಲ್ಲಾ ಲಾಟರಿ ಹೊಡೆಯಬಹುದು ಎನ್ನುವ ಕುತೂಹಲವಂತೂ ಇದ್ದೇ ಇದೆ.
ಇದಕ್ಕೆ ಪೂರಕವಾಗಿ ಈ ಬಾರಿ ಮಲಯಾಳಂ ''ಬಿಗ್ ಬಾಸ್''ನಲ್ಲಿ ಭಾಗವಹಿಸಲಿರುವ ಸ್ಫರ್ಧಿಗಳ ಲಿಸ್ಟ್ ಸದ್ಯ ವೈರಲ್ ಆಗಿದ್ದು ಆ ಪಟ್ಟಿ ಈ ಕೆಳಗಿನಂತೆ ಇದೆ.

ಮಲಯಾಳಂ 'ಬಿಗ್ ಬಾಸ್'ನ ಸಂಭಾವ್ಯ ಸ್ಫರ್ಧಿಗಳ ಪಟ್ಟಿ
* ರಾನಿಯಾ ರಾಣಾ - ಪ್ರಿನ್ಸ್ & ಫ್ಯಾಮಿಲಿ ಮೂಲಕ ಹೆಸರುವಾಸಿಯಾದ ಕಿರುತೆರೆಯ ನಟಿ.
* ಮುನ್ಶಿ ರಂಜಿತ್ - ಮಲಯಾಳಂ ಚಿತ್ರರಂಗದ ಗೌರವಾನ್ವಿತ್ ನಟ
* ಗಾಯತ್ರಿ ದೇವಿ { ಕಿಂಗಿನಿ } - ಹಾಸ್ಯಪ್ರಜ್ಞೆಯಿಂದ ಹೆಸರುವಾಸಿಯಾದ ಚೆಲುವೆ
* ಬೋಬನ್ ಅಲುಮ್ಮೂಡನ್ - 'ನಿರಾಮ್' ಖ್ಯಾತಿಯ ನಟಿ,
* ರೇಖಾ ರತೀಶ್ - 'ಪರಸ್ಪರಂ' ಖ್ಯಾತಿಯ ಕಿರುತೆರೆ ನಟಿ.
* ರೇಜನೀಶ್ ವಿಆರ್ - ಖ್ಯಾತ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್
* ಶಾನವಾಸ್ ಶಾನು - ''ಕುಂಕುಮಪೂವು''ದ ''ರುದ್ರ''ಪಾತ್ರಕ್ಕೆ ಹೆಸರುವಾಸಿಯಾದ ನಟ
* ಸುಜಯ ಪಾರ್ವತಿ - ಹಿರಿಯ ಪತ್ರಕರ್ತೆ
* ಬಿನ್ನಿ ಸೆಬಾಸ್ಟಿಯನ್ - ''ಗೀತ ಗೋವಿಂದಂ'' ಮೂಲಕ ಪರಿಚಿತರಾದ ನೂಬಿನ್ ಜಾನಿ ಅವರ ಪತ್ನಿ ಮತ್ತು ನಟಿ
* ವಿನ್ಸಿ ಅಲೋಶಿಯಸ್ - ''ಭೀಮಂತೆ ವಾಜಿ'' ಮತ್ತು ''ರೇಖಾ'' ಖ್ಯಾತಿಯ ಭರವಸೆಯ ಸ್ಟಾರ್
* ಆದಿತ್ಯನ್ ಜಯನ್ - ಟಿವಿ ನಟ ಅಂಬಿಲಿ ದೇವಿಯ ಮಾಜಿ ಪತಿ.
* ಕಿಲಿ ಪಾಲ್ - ಟಾಂಜಾನಿಯಾ ಮೂಲದ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್
* ರೇಣು ಸುಧಿ - ಮಾಡೆಲ್ ಮತ್ತು ದಿವಂಗತ ಹಾಸ್ಯನಟ ಕೊಲ್ಲಂ ಸುಧಿ ಅವರ ಪತ್ನಿ.
* ಮೈತ್ರೇಯನ್ - ಸಾಮಾಜಿಕ ಕಾರ್ಯಕರ್ತೆ ಮತ್ತು ಲೇಖಕಿ
* ಅವಂತಿಕಾ ಮೋಹನ್ - ಡಾ. ನಂದಿತಾ ಎಂದೇ ಜನಪ್ರಿಯರಾದ ವೈದ್ಯೆ
* ಅನುಮೋಲ್ ಅನುಕುಟ್ಟಿ - ಮ್ಯಾಜಿಕ್ ಮಾಡುವ ಮೂಲಕ ಖ್ಯಾತಿಯನ್ನು ಪಡೆದ ಹಾಸ್ಯ ನಟಿ
* ಸೀಮಾ ಜಿ. ನಾಯರ್ - ಹಿರಿಯ ನಟಿ.
* ಬೀನಾ ಆಂಟನಿ - ವಿವಾದಾತ್ಮಕ ಕಿರುತೆರೆ ನಟಿ
* ಮಸ್ತಾನಿ - ನಿರೂಪಕಿ
* ಅಪ್ಪಾನಿ ಶರತ್ - ''ಅಂಗಮಾಲಿ ಡೈರೀಸ್'' ನೊಂದಿಗೆ ಖ್ಯಾತಿ ಪಡೆದ ನಟ.
* ಜಾಸಿ ಆಶಿ - ಯಂಗ್ ಐಕಾನ್
ಹೀಗೆ ಇವರೆಲ್ಲರೂ ಈ ಬಾರಿ ಮಲಯಾಳಂನ ''ಬಿಗ್ ಬಾಸ್ ಸೀಸನ್ 7''ರಲ್ಲಿ ಭಾಗವಹಿಸುತ್ತಾರೆ ಎನ್ನುವ ಸುದ್ದಿ ಹಬ್ಬಿದೆ. ಇಂಗ್ಲೀಷ್‌ನ oneindia.com ಕೂಡ ಈ ಕುರಿತು ವರದಿಯನ್ನು ಮಾಡಿದೆ. ಇವರಲ್ಲಿ ಯಾರೆಲ್ಲಾ ಭಾಗವಹಿಸುತ್ತಾರೆ ಎನ್ನುವುದಕ್ಕೆ ಸ್ಪಷ್ಟವಾದ ಉತ್ತರ ಈ ಆಗಸ್ಟ್ 3 ರ ಸಂಜೆ 7ರ ನಂತರವಷ್ಟೇ ಸಿಗಲಿದೆ.


Click it and Unblock the Notifications











