ಮದುವೆಯಾದ ಹನ್ನೊಂದೇ ದಿನಕ್ಕೆ ಬಿಗ್ ಬಾಸ್ ಸ್ಫರ್ಧಿ ಅರೆಸ್ಟ್ - ಏರ್‌ಪೋರ್ಟ್‌ನಲ್ಲಿ ಬಂಧಿಸಿದ ಪೊಲೀಸರು

ನಿಜಾ.. ಹಣ ಎಲ್ಲರ ಅವಶ್ಯಕತೆ ಮತ್ತು ಅನಿವಾರ್ಯತೆ. ಹಾಗಂಥ ಹಣವನ್ನು ಹೇಗೆ ಬೇಕಾದರೆ ಹಾಗೆ ಸಂಪಾದಿಸಲು ಸಾಧ್ಯ ಇಲ್ವಲ್ಲಾ..? ಒಳ್ಳೆ ಮಾರ್ಗದಲ್ಲಿ ನಡೆದು ನಾಲ್ಕು ಕಾಸು ಸಂಪದಾನೆ ಮಾಡಿದರಷ್ಟೇ ಶ್ರಮಕ್ಕೊಂದು ಬೆಲೆ ಇರುತ್ತೆ. ಆದರೆ.. ಈಗೀಗ ಹಣ ಮಾಡುವ ಧಾವಂತಕ್ಕೆ ಬಿದ್ದು ಹಲವಾರು ಜನ ಅಡ್ಡದಾರಿಯನ್ನು ಹಿಡಿಯುತ್ತಿದ್ದಾರೆ. ಅದರಲ್ಲಿಯೂ ಬೆಳ್ಳಿತೆರೆ ಮತ್ತು ಕಿರುತೆರೆಯಲ್ಲಿ ಹೇಗಾದರೂ ಸರಿ....

ಏಕಾಏಕಿ ದುಡ್ಡು ಮಾಡಿ ಬಿಡಬೇಕು ಎಂಬ ಧಾವಂತಕ್ಕೆ ಬೀಳುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬಣ್ಣ ಬಣ್ಣದ ಮಾತುಗಳಿಂದ ನಂಬಿಸು ಇವರು ಎದುರಗಡೆ ಇರುವ ವ್ಯಕ್ತಿ ಚೂರು ಯಾಮಾರಿದರೂ ಸಾಕು ತಲೆಗೆ ಮಕ್ಮಲ್ ಟೋಪಿ ಹಾಕಿ ಹಣೆಗೆ ತುಪ್ಪ ಸವರುತ್ತಾರೆ. ಜೈ ದುಧಾನೆ ಇದಕ್ಕೆ ಮತ್ತೊಂದು ಉದಾಹರಣೆ.

From Wedding Vows to Police Custody BB Marathi Star Jay Dudhane Nabbed in 5Cr Scam

ಹೌದು, ಜೈ ದುಧಾನೆ.. ಮರಾಠಿ ''ಬಿಗ್ ಬಾಸ್‌'' 3ರ ಸ್ಫರ್ಧಿ. ''ಬಿಗ್ ಬಾಸ್'' 3ರಲ್ಲಿ ಮೊದಲ ರನ್ನರ್ ಅಪ್ ಆಗಿ ಹೊರ ಹೊಮ್ಮಿದ್ದ ಜೈ ದುಧಾನೆ ''MTV ಸ್ಪ್ಲಿಟ್ಸ್‌ವಿಲ್ಲಾ'' ಸೀಸನ್ 13ರ ವಿನ್ನರ್ ಕೂಡ ಹೌದು. ಇನ್ನು 2023ರಲ್ಲಿ ತೆರೆಗೆ ಬಂದ ''ಗಡದ್ ಅಂಧಾರ್''.. ''ವೇದತ್ ಮರಾಠೆ ವೀರ್ ದೌಡ್ಲೆ ಸಾತ್'' ಚಿತ್ರಗಳಲ್ಲಿ ಕೂಡ ಪ್ರಮುಖ ಪಾತ್ರವನ್ನು ಜೈದೇವ್ ದುಧಾನೆ ನಿರ್ವಹಿಸಿದ್ದಾರೆ.

ಇನ್ನು ಸಾಮಾಜಿಕ ಜಾಲತಾಣದಲ್ಲಿ ತುಂಬಾನೇ ಸಕ್ರಿಯರಾಗಿರುವ ಜೈ ದುಧಾನೆ, ಮುಂಬೈನ ಥಾಣೆಯಲ್ಲಿ ತಮ್ಮದೇ ಜಿಮ್ ಹೊಂದಿದ್ದಾರೆ. ಮೊದಲಿಂದ ಫಿಟ್ನೆಸ್ ಫ್ರೀಕ್ ಆಗಿರುವ ಜೈ ತಮ್ಮ ಈ ಜಿಮ್‌ನಲ್ಲಿ ತಾವೇ ತರಬೇತಿಯನ್ನು ಕೂಡ ಕೊಡುತ್ತಾರೆ.

ಇಂಥಾ ಜೈ ದುಧಾನೆ ಅವರ ಮೇಲೆ ಸದ್ಯ 5 ಕೋಟಿಯ ವಂಚನೆ ಆರೋಪವನ್ನು ಮಾಡಲಾಗಿದೆ. ನಕಲಿ ದಾಖಲೆ ಸೃಷ್ಟಿ ಮಾಡಿ, ಕೆಲ ಅಂಗಡಿಗಳನ್ನು ಬೇರೆಯವರಿಗೆ ಜೈ ದುಧಾನೆ ಅಕ್ರಮವಾಗಿ ಮಾರಿದ್ದಾರೆ ಎನ್ನುವ ಆರೋಪವನ್ನು ಇವರ ಮೇಲೆ ಮಾಡಲಾಗಿದ್ದು ದೂರಿನಲ್ಲಿ ಜೈ ದುಧಾನೆ ಅವರ ಅಜ್ಜ, ಅಜ್ಜಿ, ತಾಯಿ ಮತ್ತು ಸಹೋದರಿಯ ಹೆಸರನ್ನು ಕೂಡ ಉಲ್ಲೇಖ ಮಾಡಲಾಗಿದೆ. ಇಡೀ ಕುಟುಂಬದ ಮೇಲೆ ವಂಚನೆ ಆರೋಪ ಹೊರಿಸಲಾಗಿದೆ.

ಸದ್ಯ ದೂರು ದಾಖಲಿಸಿಕೊಂಡ ಪೊಲೀಸರು ಮುಂಬೈ ವಿಮಾನ ನಿಲ್ಧಾಣದಲ್ಲಿ ಜೈ ದುಧಾನೆ ಅವರನ್ನು ಬಂಧಿಸಿದ್ದಾರೆ. ತನಿಖೆಯನ್ನು ಮುಂದುವರೆಸಿದ್ದಾರೆ. ಈ ಪ್ರಕರಣದ ಕುರಿತು ಹೆಚ್ಚಿನ ಮಾಹಿತಿಯನ್ನು ಪೊಲೀಸರು ಮಾಧ್ಯಮದವರ ಮುಂದೆ ಹಂಚಿಕೊಳ್ಳುವ ಸಾಧ್ಯತೆ ಇದೆ.

From Wedding Vows to Police Custody BB Marathi Star Jay Dudhane Nabbed in 5Cr Scam

ಅಂದ್ಹಾಗೇ ಹನ್ನೊಂದು ದಿನಗಳ ಹಿಂದೆಯಷ್ಟೇ ಜೈ ದುಧಾನೆ ಮದುವೆಆಯಗಿದ್ದರು. ಡಿಸೆಂಬರ್ 24, 2025 ರಂದು ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಹರ್ಷಲಾ ಪಾಟೀಲ್ ಅವರ ಜೊತೆ ಸಪ್ತಪದಿ ತುಳಿದಿದ್ದರು. ಸಾಂಪ್ರದಾಯಿಕ ಮಹಾರಾಷ್ಟ್ರ ಶೈಲಿಯಲ್ಲಿ ಅದ್ದೂರಿಯಾಗಿ ಈ ಮದುವೆ ನೆರವೇರಿತ್ತು. ''ಬಿಗ್ ಬಾಸ್'' ಮರಾಠಿ 3 ರ ಸಹ ಸ್ಪರ್ಧಿಗಳಾದ ಸುರೇಖಾ ಕುಡಾಚಿ ಮತ್ತು ತೃಪ್ತಿ ದೇಸಾಯಿ ಸೇರಿದಂತೆ ಬೆಳ್ಳಿತೆರೆ ಮತ್ತು ಕಿರುತೆರೆಯ ಹಲವರು ಬಂದು ನವ ಜೋಡಿಗೆ ಶುಭಾಶಯ ಕೋರಿದ್ದರು.

ಮದುವೆಯ ದಿನ ಜೈ ದುಧಾನೆ ಹಳದಿ ಕುರ್ತಾ, ಗೋಲ್ಡನ್ ಧೋತಿ ಮತ್ತು ಪೇಟಾ ಧರಿಸಿ ಮಿಂಚಿದರೆ ಹರ್ಷಲಾ ಹಳದಿ ಸೀರೆಯಲ್ಲಿ ಕಂಗೊಳಿಸುತ್ತಿದ್ದರು. ಹೀಗೆ ಹನ್ನೊಂದು ದಿನಗಳ ಹಿಂದೆ ಅದ್ದೂರಿಯಾಗಿ ಮದುವೆಯಾದ ಜೈ ದುಧಾನೆ ಸದ್ಯ ಪೊಲೀಸರ ಅತಿಥಿಯಾಗಿದ್ದಾರೆ. ಜೈ ದುಧಾನೆ ಬಂಧನದ ಸುದ್ದಿ ಸದ್ಯ ಮರಾಠತಿ ಕಿರುತೆರೆ ಮತ್ತು ಬೆಳ್ಳಿತೆರೆಯಲ್ಲಿ ಚರ್ಚೆಯ ವಿಷಯವಾಗಿದ್ದು ಈ ಪ್ರಕರಣ ಮುಂದೆ ಯಾವ ತಿರುವು ಪಡೆಯುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.

More from Filmibeat

English summary
From wedding bliss to airport handcuffs! 🚨 Jay Dudhane nabbed by Thane Police for an alleged ₹5 crore scam. Was the BB Marathi runner-up selling fake properties? Get the shocking details of the arrest that happened just days after his marriage.
Read more about: ಟಿವಿ bigg boss fraud
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X