ಜಿಮ್‌ಗೆ ನುಗ್ಗಿ ₹10,000 ಕಳ್ಳತನ ಮಾಡಿದ ಬಿಗ್ ಬಾಸ್ ವಿನ್ನರ್, ದೂರು ದಾಖಲು

''ಬಿಗ್ ಬಾಸ್'' ಹಲವರ ಬದುಕು ಬದಲಿಸಿದೆ. ಇನ್ನು ಕೆಲವರ ಬದುಕನ್ನು ಬರ್ಬಾದ್ ಕೂಡ ಮಾಡಿದೆ. ಆ ಭಾಷೆ.. ಈ ಭಾಷೆ ಅಂತಲ್ಲ. ಎಲ್ಲೆಡೆ ಕೂಡ ಈ ಎರಡು ವರ್ಗಕ್ಕೆ ಸೇರುವ ಜನ ಕಣ್ಣಿಗೆ ಕಾಣಿಸಿಯೇ ಕಾಣಿಸುತ್ತಾರೆ. ಇದರ ನಡುವೆ ಇನ್ನೂ ಕೆಲವರು ಇರುತ್ತಾರೆ. ''ಬಿಗ್ ಬಾಸ್‌'' ಮನೆಗೆ ಹೋಗಿ ಬಂದ ನಂತರ ದೇಶ ಗೆದ್ದು ಭಾವನೆ ಇವರದ್ದು.

ಕುತ್ತಿಗೆಯ ಮೇಲೆ ತಲೆ ನಿಲ್ಲದಂತೆ ವರ್ತನೆ ಮಾಡುವ ಇವರು ''ಬಿಗ್ ಬಾಸ್‌''ದಿಂದ ಸಿಕ್ಕ ಚೂರೇ ಚೂರು ಜನಪ್ರಿಯತೆಯನ್ನೇ ನೆತ್ತಿಗೇರಿಸಿಕೊಂಡು ಓಡಾಡುತ್ತಾರೆ. ಮೈ ಮರೆಯುತ್ತಾರೆ. ಬದುಕೇ ಒಂದು ''ಬಿಗ್ ಬಾಸ್'' ಕಾರ್ಯಕ್ರಮ ಎಂಬ ಭ್ರಮೆಯಲ್ಲಿ ಮಾಡಬಾರದ್ದನ್ನೆಲ್ಲ ಮಾಡುತ್ತಾರೆ. ಪೊಲೀಸ್ ಠಾಣೆ.. ಕೋರ್ಟು.. ಕಚೇರಿ ಎಂದು ಅಲೆದಾಡುತ್ತಾರೆ. ಉದಾಹರಣೆಗೆ ಜೀಂಟೋ.

From Winner to Wanted Bigg Boss Star Jinto Arrested for Theft

ಹೌದು, ಜಿಂಟೋ, ಹೇಳಿಕೊಳ್ಳಲು ಬಾಡಿ ಬಿಲ್ಡರ್. ಮಲಯಾಳಂನ ಕಳೆದ ಸೀಸನ್‌ನ ''ಬಿಗ್ ಬಾಸ್‌'' ನಲ್ಲಿ ಭಾಗವಹಿಸಿದ್ದ ಪ್ರಚಂಡ ಪ್ರತಿಭೆ. ಮನೆಯೊಳಗೆ ಹೋದ ದಿನದಿಂದ ಹೊರ ಬರುವ ತನಕ ಕೂಡ ರಂಪ-ರಾಮಾಯಣದಿಂದಲೇ ಸುದ್ದಿಯಾಗಿದ್ದ ಈ ಜೀಂಟೋರನ್ನು ಕೇರಳಿಗರು ಅದ್ಹೇಗೆ ಸಹಿಸಿಕೊಂಡರೋ ಗೊತ್ತಿಲ್ಲ. ಆದರೆ.. ''ಬಿಗ್ ಬಾಸ್‌ ಸೀಸನ್‌ 6'' ''ವಿನ್ನರ್'' ಆಗಿ ಹೊರ ಹೊಮ್ಮಿದವರು ಈ ಜೀಂಟೋ.

ಇಂಥಾ ಜೀಂಟೋ ವಿರುದ್ಧ ಸದ್ಯ ಮಹಿಳೆಯೊಬ್ಬರು ಕೇರಳದ ಪಲರಿವತ್ತಂ ಪೊಲೀಸ್ ಠಾಣೆಯಲ್ಲಿ ದೂರನ್ನು ನೀಡಿದ್ದು ಕಳ್ಳತನದ ಆರೋಪ ಮಾಡಿದ್ದಾರೆ. ಮಹಿಳೆ ನೀಡಿರುವ ದೂರಿನ ಅನ್ವಯ ಗುತ್ತಿಗೆ ಆಧಾರದ ಮೇಲೆ ಮಹಿಳೆ ಪಡೆದಿರುವ ಜಿಮ್‌ಗೆ ಬೆಳಗಿನ ಜಾವ ಜೀಂಟೋ ಅಕ್ರಮವಾಗಿ ಪ್ರವೇಶ ಮಾಡಿದ್ದು, ಸಿಸಿಟಿವಿ ಕ್ಯಾಮರಾಗಳನ್ನು ಮತ್ತು ಇತರೆ ವಸ್ತುಗಳನ್ನು ಧ್ವಂಸ ಮಾಡಿದ್ದಾರೆ.

ಇಷ್ಟೇ ಅಲ್ಲದೇ ₹10,000 ಹಣ ಮತ್ತು ಮಹತ್ವದ ದಾಖಲೆಯನ್ನು ಕೂಡ ಜೀಂಟೋ ಕದ್ದೊಯ್ದಿದ್ದಾರೆ. ಈ ಕುರಿತು ಪೊಲೀಸರು ಕೂಡ ಮಾಹಿತಿಯನ್ನು ನೀಡಿದ್ದು ಐಪಿಸಿ ಸೆಕ್ಷನ್ 305ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳಲ್ಲಿ ಜಿಂಟೋ ಅಕ್ರಮವಾಗಿ ಜಿಮ್‌ ಆವರಣಕ್ಕೆ ಪ್ರವೇಶಿಸುತ್ತಿರುವುದು ಕಂಡುಬಂದಿದೆ ಎಂದು ಹೇಳಿದ್ದಾರೆ. ತನಿಖೆ ಮಾಡುತ್ತಿದ್ಧಾರೆ.

ಅಂದ್ಹಾಗೇ ಜೀಂಟೋ ಮತ್ತು ಈ ಮಹಿಳೆಯ ನಡುವೆ ಕಿರಿಕ್ ನಡೆಯುತ್ತಿರುವುದು ಇದು ಮೊದಲೇನಲ್ಲ. ಈ ಹಿಂದೆ ಕೂಡ ಸದ್ಯ ದೂರು ಸಲ್ಲಿಸಿರುವ ಮಹಿಳೆ ಜೀಂಟೋ ವಿರುದ್ಧ ಲೈಂಗಿಕ ಕಿರುಕುಳದ ಆರೋಪವನ್ನು ಮಾಡಿದ್ದರು. ಮಹಿಳೆಯ ಆರೋಪದ ಹಿನ್ನೆಲೆ ಜೀಂಟೋ ಅವರನ್ನು ಈ ಪೊಲೀಸರು ಬಂಧಿಸಿದ್ದರು ಕೂಡ.

From Winner to Wanted Bigg Boss Star Jinto Arrested for Theft

ಇನ್ನೂ ಈ ಹಿಂದೆ ಕೇರಳದಲ್ಲಿ ಗಾಂಜಾ ವಾಸನೆ ಎಲ್ಲರ ಮೂಗಿಗೆ ಬಡಿಯಲು ಶುರುವಾದಾಗ ಕೂಡ ಹೈಬ್ರಿಡ್ ಗಾಂಜಾ ಕೇಸ್‌ನಲ್ಲಿ ಜೀಂಟೋ ಅವರ ವಿಚಾರಣೆಯನ್ನು ಕೂಡ ಮಾಡಲಾಗಿತ್ತು. ಜೀಂಟೋ ವಿರುದ್ಧ ಸಾಕ್ಷ್ಯಗಳಿರದಿದ್ದರೂ ಕೂಡ ಶಂಕೆಯ ಆಧಾರದ ಮೇಲೆ ಪೊಲೀಸರು ವಿಚಾರಣೆಯನ್ನು ನಡೆಸಿದ್ದರು.

ಇದಲ್ಲದೇ ''ಬಿಗ್ ಬಾಸ್‌'' ನಲ್ಲಿ ನನಗೆ ಪರಿಚಯ ಇದೆ, ನಿಮಗೆ ಮನೆಗೆ ಕಳುಹಿಸುತ್ತೇನೆ ಎಂದು ಅನೇಕರಿಗೆ ವಂಚಿಸಿರುವ ಆರೋಪ ಕೂಡ ಜೀಂಟೋ ಮೇಲಿದೆ. ಕೆಲ ಹೊಸ ನಟಿಯರನ್ನು ಮತ್ತೆ ಮಾಡೆಲ್‌ಗಳನ್ನು ಕೂಡ ಸಿನಿಮಾದಲ್ಲಿ ಅವಕಾಶ ಕೊಡಿಸುವ ನೆಪದಲ್ಲಿ ಪಂಗನಾಮವನ್ನು ಜೀಂಟೋ ಹಾಕಿದ್ದಾರೆ ಎಂಬ ಸುದ್ದಿಯೂ ಇದೆ. ಸದ್ಯ ಪೊಲೀಸರು ಜೀಂಟೋ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡಿದ್ದು ಹೆಚ್ಚಿನ ಮಾಹಿತಿಯನ್ನು ಶೀಘ್ರದಲ್ಲಿ ಪೊಲೀಸರು ಹಂಚಿಕೊಳ್ಳುವ ನಿರೀಕ್ಷೆ ಇದೆ.

ಇನ್ನುಳಿದಂತೆ ಎಂದಿನಂತೆ ಈ ಬಾರಿ ಕೂಡ ಮಲಯಾಳಂನಲ್ಲಿ ಮೋಹನ್ ಲಾಲ್ ಸಾರಥ್ಯದಲ್ಲಿ ''ಬಿಗ್ ಬಾಸ್'' ಕಾರ್ಯಕ್ರಮ ಆರಂಭವಾಗಿದ್ದು, ಈಗಾಗಲೇ ಇಬ್ಬರು ಸ್ಫರ್ಧಿಗಳನ್ನು ಮನೆಯೊಳಗೆ ಹೊರಗಡೆ ಕಳುಹಿಸಲಾಗಿದೆ.

More from Filmibeat

English summary
The celebration is over for Bigg Boss winner Jinto. A theft complaint has led to his arrest, with a woman claiming he stole cash and documents. Read more about the allegations and the police action.
Read more about: bigg boss biggboss ಟಿವಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X