DKD : ಸಣ್ಣ ಪ್ರಶ್ನೆ, ಉತ್ತರ ಹೊಳೆಯೋದು ಕಷ್ಟ, ತಲೆ ಕೆಡಿಸಿಕೊಂಡ್ರು ಶಿವಣ್ಣ, ರಕ್ಷಿತಾ, ರಾಘು!
ಡಿಕೆಡಿ ವೇದಿಕೆಯಲ್ಲಿ ಪರ್ಫಾಮೆನ್ಸ್ ಈ ಬಾರಿ ವಿಭಿನ್ನವಾಗಿ ಬರ್ತಾ ಇದೆ. ಡ್ಯಾನ್ಸ್ ಬರದೇ ಇರುವವರಿಂದ ಡ್ಯಾನ್ಸ್ ಮಾಡಿಸುವುದೇ ದೊಡ್ಡ ಸವಾಲಿನ ಕೆಲಸ. ಆದರೂ ಡ್ಯಾನ್ಸ್ ಮಾಸ್ಟರ್ಸ್‌ಗೆ ಸುಲಭದ ಕೆಲಸವಾಗಿದೆ. ಡ್ಯಾನ್ಸ್ ಬರದೇ ಇದ್ದವರಿಂದಾನೂ ವಾವ್ ಎನಿಸುವಂತೆ ಡ್ಯಾನ್ಸ್ ಮಾಡಿಸುತ್ತಿದ್ದಾರೆ. ಪ್ರತಿ ವಾರವೂ ನೋಡುಗರಿಗೆ ಫುಲ್ ಮನರಂಜನೆ ನೀಡುತ್ತಿದ್ದಾರೆ.
ಡ್ಯಾನ್ಸ್ ಜೊತೆಗೆ ಕಾಮಿಡಿಯೂ ಇರಲಿದೆ. ಇದೊಂದು ಅಪ್ಪಟ ಮನರಂಜನೆಯ ಕಾರ್ಯಕ್ರಮವಾಗಿರುವ ಕಾರಣ, ಡ್ಯಾನ್ಸ್ ಮಾಡಿ ಬರೀ ಸಲಹೆ-ಸೂಚನೆಗಳನ್ನ ತೆಗೆದುಕೊಂಡು ಹೋಗುವುದಿಲ್ಲ. ವೇದಿಕೆಯಲ್ಲಿದ್ದವರೆಲ್ಲ ಒಂದಷ್ಟು ಹಾಡು, ಹರಟೆ ಹೊಡೆದು ನೋಡುಗರಿಗೂ ಮಜಾ ನೀಡುತ್ತಾರೆ. ಇದೀಗ ವೇದಿಕೆ ಮೇಲೆ ಪ್ರಶ್ನೋತ್ತರಗಳ ಸ್ಪರ್ಧೆ ನಡೆದಿದೆ.

ಪ್ರಿಯಾ ಡ್ಯಾನ್ಸ್‌ಗೆ ಚಪ್ಪಾಳೆ
ಪ್ರಿಯಾ ಮತ್ತು ಆಯುಧ್ ಈ ಬಾರಿ ಡಿಕೆಡಿಯ ಜೋಡಿಯಾಗಿದ್ದಾರೆ. ಬಾ ನನ್ನ ರಾಜಾ ಎಂಬ ಹಾಡಿಗೆ ಪ್ರಿಯಾ ಹೆಜ್ಜೆ ಹಾಕಿದ್ದಾರೆ. ಪ್ರಿಯಾ ಕೂಡ ಡ್ಯಾನ್ಸ್ ಮಾಡಬಹುದಾ ಎಂಬ ಪ್ರಶ್ನೆಗೆ ಇಂದು ಉತ್ತರಿಸಿದ್ದಾರೆ. ಡ್ಯಾನ್ಸರ್ ಜೊತೆಗೆ ಅದ್ಭುತವಾಗಿ ಡ್ಯಾನ್ಸ್ ಮಾಡಿ, ಎಲ್ಲಾ ಜಡ್ಜಸ್‌ಗಳಿಂದ ಹೊಗಳಿಸಿಕೊಂಡಿದ್ದಾರೆ.
ರಕ್ಷಿತಾಗಾಗಿ ಜೋಕ್ ತಂದ ಪ್ರಿಯಾ
'ಸೀತಾರಾಮ' ಧಾರಾವಾಹಿ ಸೆಟ್‌ನಲ್ಲೂ ಫ್ರೀಯಾಗಿದ್ದಾಗ ಪ್ರಶ್ನೆಗಳ ಕಲರವ ಇರುತ್ತೆ. ಈಗ ಪ್ರಿಯಾ ಡಿಕೆಡಿಯಲ್ಲೂ ಅದನ್ನೇ ಮುಂದುವರೆಸಿದ್ದಾರೆ. ಕಳೆದ ಬಾರಿ ಪ್ರಿಯಾ ಪ್ರಶ್ನೆಗೆ ಶಿವಣ್ಣ ಶಾಕ್ ಆಗಿದ್ದರು. ಈ ವಾರ ದಿಲ್ ಖುಷ್ ಆಗಿದ್ದಾರೆ. ಆದರೆ ಪ್ರಿಯಾ ಈ ಬಾರಿ ಪ್ರಶ್ನೆ ತಂದಿರೋದು ರಕ್ಷಿತಾ ಮೇಡಂಗೋಸ್ಕರ. ಪ್ರಪಂಚದಲ್ಲಿ ಒಟ್ಟು ಎಷ್ಟು ದೇಶಗಳಿವೆ ಎಂದು ಪ್ರಿಯಾ ಪ್ರಶ್ನೆ ಕೇಳಿದ ಕೂಡಲೇ ರಕ್ಷಿತಾ ಅವರು ಒಂದು ಕ್ಷಣ ಯೋಚನೆ ಮಾಡುವುದಕ್ಕೆ ಶುರು ಮಾಡಿದರು. ಆಗ ಗಗನಾ ಒಂದು ದೇಶ ಅಂತ ಸನ್ನೆ ಮಾಡಿದಾಗ, ರಕ್ಷಿತಾ ಉತ್ತರ ಹೇಳಿದ್ದು ಹೇಗೆ ಅಂದ್ರೆ ಗಗನಾ ಹೇಳ್ತಾ ಇದಾಳೆ ಒಂದು ದೇಶ ಇದೆ ಅಂತ. ಮೋಹನ ಹೇಳ್ತಾ ಇದಾನೆ ಟು ಅಂತೆ. ರಾಘು ಹತ್ತಿರ ಬಂದಾಗ ಅವರು ಒಂದು ಅಂತ ಹೇಳಿದ್ರು ಆದ್ರೆ ಚಿನ್ನಿ ಮಾಸ್ಟರ್, ಸಾವಿರ ಅಂದ್ರು.
ದೇಶದ ವಿಚಾರಕ್ಕೆ ಫುಲ್ ಕಾಮಿಡಿ
ಚಿನ್ನಿ ಮಾಸ್ಟರ್ ಸಾವಿರ ಎಂದ ಕೂಡಲೇ ಪ್ರಿಯಾ ಶಾಕ್ ಆದ್ರು. ಮಾಸ್ಟರ್ ಏನ್ ನೀವೂ ಸಾವಿರ ಅಂದಾಗ ರಕ್ಷಿತಾ ಕೂಡಲೇ ಚಿನ್ನಿ ಮಾಸ್ಟರ್‌ಗೆ ಸಪೋರ್ಟ್ ಮಾಡಿದ್ರು. ಯಾಕಿಲ್ಲ ಅಂತ. ಆಗ ಶಿವಣ್ಣ ಮಧ್ಯ ಪ್ರವೇಶಿಸಿ, ಎಷ್ಟು ದೇಶ ಇದ್ರೆ ನಮಗೇನಮ್ಮ ನಾವಿರೋದೆ ನಮ್ಮ ದೇಶ. ಅದು ಭಾರತ ಎಂದಾಗ ಎಲ್ಲರೂ ಶಿಳ್ಳೆ ಚಪ್ಪಾಳೆ ಹೊಡೆದ್ರು. ಆಗ ಪ್ರಿಯಾ ಕೂಡ ಆನ್ಸರ್ ಹೇಳಿದ್ರು ನಮ್ಮ ಪ್ರಪಂಚದಲ್ಲಿ ಇರೋದು ಒಂದೇ ದೇಶ ಅದು ಭಾರತ, ಮಿಕ್ಕಿದ್ದೆಲ್ಲ ವಿದೇಶ ಅಂತ ಎಲ್ಲರನ್ನ ನಕ್ಕು ನಲಿಸಿದ್ರು.

ಶಿವಣ್ಣ ಪ್ರಶ್ನೆಗೆ ತಬ್ಬಿಬ್ಬಾದ ರಕ್ಷಿತಾ!
ಈಗ ಗಗನಾ ಕಡೆಯಿಂದಾನೂ ಪ್ರಶ್ನೆ ಬಂತು. ಒಂದು ಇರುವೆ ಮೇಲೆ ಆನೆಗೆ ಲವ್ ಆಗಿರುತ್ತೆ. ಆನೆ ಎಷ್ಟು ಪ್ರಪೋಸ್ ಮಾಡಿದ್ರೆ ಆನೆ ಒಪ್ಪುವುದೇ ಇಲ್ಲ ಯಾಕೆ ಎಂದು ಕೇಳಿದ್ರೆ, ಇರುವೆಗೆ ಆಲ್ ರೆಡಿ ಗರ್ಲ್ ಫ್ರೆಂಡ್ ಇರ್ತಾಳೆ ಅದಕ್ಕೆ ಎಂದಾಗ ಎಲ್ಲರೂ ನಕ್ಕಿದ್ದಾರೆ. ನೆಕ್ಸ್ಟ್ ಬರೋದೇ ಶಿವಣ್ಣನ ಪ್ರಶ್ನೆ. ಒಂದು ಬಾತುಕೋಳಿ ಮುಂದೆ ಹೋದ್ರೆ ಎಲ್ಲಾ ಬಾತುಕೋಳಿ ಅದರ ಹಿಂದೆ ಹೋಗೋದ್ಯಾಕೆ ಅಂತ. ರಕ್ಷಿತಾಗೆ ಉತ್ತರ ಗೊತ್ತಿತ್ತಾ ಅಂತ. ಹೇಳುವುದಕ್ಕೆ ಹೋದಾಗ ಶಿವಣ್ಣ ತಡೆದಿದ್ದಾರೆ. ಆಗ ಆಯುಧ್ ಬ್ಯಾಕ್ ಬ್ಯಾಕ್ ಅಂತಿರುತ್ತಲ್ಲ ಅದಕ್ಕೆ ಎಂದಾಗ ತಪ್ಪು ಉತ್ತರ ಕೊಟ್ಟವರು ನಕ್ಕು ಸುಮ್ಮನೆ ಆಗಿದ್ದಾರೆ.


Click it and Unblock the Notifications











