ಬಂಡೀಪುರ ಕಾಡಿನಲ್ಲಿ ಸುಹಾಸ್-ಗ್ಯಾಬಿ ಎಲಾ ಮೊದಲ ವಿವಾಹ ವಾರ್ಷಿಕೋತ್ಸವ ಆಚರಣೆ!
'ಕಮಲಿ' ಧಾರಾವಾಹಿಯಲ್ಲಿ ಅನಿಕಾ ಪಾತ್ರವನ್ನು ನಿರ್ವಹಿಸಿದ ನಟಿ ಗ್ಯಾಬಿ ಎಲಾ ಸ್ಮಿತ್ ಈಗ ಕಿರುತೆರೆಯಿಂದ ಬಹಳ ದೂರ ಉಳಿದಿದ್ದಾರೆ. ಕಳೆದ ವರ್ಷ ಮದುವೆಯಾದ ಬಳಿಕ ಗ್ಯಾಬಿ ಕಿರುತೆರೆಗೆ ಗುಡ್ ಬೈ ಹೇಳಿದ್ದರು. ವೀಕ್ಷಕರೆಲ್ಲಾ ಸ್ವಲ್ಪ ಬ್ರೇಕ್ ಪಡೆದು ಮತ್ತೆ ನಟನೆಯನ್ನು ಮಾಡುತ್ತಾರೆ ಎಂದೇ ಭಾವಿಸಿದ್ದರು.
ಮದುವೆಯಾದ ಮೇಲೆ ನಟನೆಗೆ ಕಂಪ್ಲೀಟ್ ಬ್ರೇಕ್ ಕೊಟ್ಟು ಈಗ ಫುಲ್ ಟೈಮ್ ಫ್ಯಾಮಿಲಿಗೆ ಸಮಯ ಕೊಟ್ಟಿದ್ದಾರೆ. ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ.
ಕಮಲಿ ಧಾರಾವಾಹಿಯಲ್ಲಿ ಅನಿಕಾ ಎಂಬ ಪಾತ್ರದಿಂದಲೇ ಹೆಸರಾಗಿರುವ ಗ್ಯಾಬಿ ಎಲಾ ಸ್ಮಿತ್ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಒಂದು ವರ್ಷ ಕಳೆದಿದೆ.

ಕಮಲಿ ಮೂಲಕ ಚಿರಪರಿಚಿತೆ
ಸೂಪರ್ ಹಿಟ್ 'ಕಮಲಿ' ಧಾರಾವಾಹಿಯಲ್ಲಿ ಗುಂಡು ಮುಖದ ವಿಲನ್ ಅನಿಕಾ ಆಗಿ ಅಭಿನಯಿಸಿ ರಚನಾ ವೀಕ್ಷಕರ ಮನ ಗೆದ್ದಿದ್ದರು. ಮಾಡೆಲಿಂಗ್ ಮೂಲಕ ಬಣ್ಣದ ಜಗತ್ತಿಗೆ ಪರಿಚಿತರಾದ ಈ ಚೆಂದುಳ್ಳಿ ಚೆಲುವೆ, ಕಮಲಿ ಧಾರಾವಾಹಿಯಲ್ಲಿ ಖಡಕ್ ಖಳನಾಯಕಿ ಮಿಂಚಿದ್ದರು. ರಚನಾ ಅವರು ತಮ್ಮ ಹದಿನೇಳನೇ ವಯಸ್ಸಿಗೆ ಮಾಡೆಲಿಂಗ್ ಜಗತ್ತಿಗೆ ಕಾಲಿಟ್ಟರು.
ಮಾಡೆಲಿಂಗ್ ಎಂದರೆ ಇಷ್ಟವಂತೆ
ಗ್ಯಾಬಿ ಎಲಾ ಸ್ಮಿತ್ ಕುಟುಂಬದಲ್ಲಿ ಕಲಾವಿದರು ಅಂತ ಯಾರೂ ಇರಲಿಲ್ಲ. ಆದರೆ ಚಿಕ್ಕವಯಸ್ಸಿನಿಂದಲೂ ರಚನಾ ಸ್ಮಿತ್‌ಗೆ ನಟಿಯಾಗುವ ಆಸೆಯಿತ್ತು. ಹೀಗಾಗಿ ಎಸ್‌ಎಸ್ ಎಲ್‌ಸಿ ಮುಗಿಸುತ್ತಿದ್ದಂತೆ ಮಾಡೆಲಿಂಗ್‌ಗೆ ಎಂಟ್ರಿ ಕೊಟ್ಟರು. ಮಾಡೆಲಿಂಗ್ ಕ್ಷೇತ್ರದಲ್ಲಿ ಗೆದ್ದ ರಚನಾ 'ವರದನಾಯಕ' ಸಿನಿಮಾಗೆ ಆಡಿಶನ್ ಕೊಟ್ಟು ಆಯ್ಕೆಯಾಗುತ್ತಾರೆ. ಇಲ್ಲಿಂದ ರಚನಾ ಬಣ್ಣದ ಲೋಕದ ಪಯಣ ಶುರುವಾಗುತ್ತದೆ. ಇಲ್ಲಿಂದ ಸಿನಿಮಾ ಪಯಣ ಶುರುವಾಯಿತು. ಮುರುಗ ಅಲಿಯಾಸ್ ಮುನಿಕೃಷ್ಣ ನಟನೆಯ 'ಕೊಡೆಮುರುಗ', 'ವಿಕ್ಟರಿ', 'ಗೆಸ್ಟ್ ಹೌಸ್' ಚಿತ್ರಗಳಲ್ಲಿ ನಟಿಸಿದ್ದಾರೆ. ಅಲ್ಲದೇ ತೆಲುಗು ಸಿನಿಮಾ ಇಂಡಸ್ಟ್ರಿಗೂ ಎಂಟ್ರಿ ಕೊಟ್ಟಿದ್ದರು. ತೆಲುಗಿನ ಕೆಲ ಸಿನಿಮಾಗಳಲ್ಲೂ ರಚನಾ ಅವರು ಮಿಂಚಿದ್ದಾರೆ. ಇದಷ್ಟೇ ಅಲ್ಲದೇ, ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಲೈಫ್ ಸೂಪರ್ ಗುರು ರಿಯಾಲಿಟಿ ಶೋ ನಲ್ಲೂ ಕಾಣಿಸಿಕೊಂಡಿದ್ದರು.
ಪ್ರೀತಿಸಿ ಮದುವೆಯಾದ ಜೋಡಿ
ಬೆಳ್ಳಿತೆರೆಯ ಮೂಲಕ ನಟನಾ ಪಯಣ ಶುರು ಮಾಡಿದ್ದ ರಚನಾಗೆ ಜನಪ್ರಿಯತೆ ದೊರಕಿದ್ದು ಮಾತ್ರ 'ಕಮಲಿ'ಯ ಅನಿಕಾ ಆಗಿ ಬದಲಾದ ಬಳಿಕವೇ. ಕಿರುತೆರೆಯಲ್ಲಿ ಹೊಸ ಹವಾ ಸೃಷ್ಟಿ ಮಾಡಿದ್ದ ರಚನಾ ಸ್ಮಿತ್ ತಮ್ಮ ನಟನೆಯ ಮೂಲಕ ಸೀರಿಯಲ್ ಲೋಕದಲ್ಲಿ ಮನೆ ಮಾತಾಗಿದ್ದರು. ಇನ್ನು ಇದೇ ಕಮಲಿ ಧಾರಾವಾಹಿಯಲ್ಲಿ ಶಂಭು ಪಾತ್ರದಲ್ಲಿ ನಟಿಸುತ್ತಿದ್ದ ಸುಹಾಸ್‌ರನ್ನೇ ಗ್ಯಾಬಿ ಕಳೆದ ಮೂರು ವರ್ಷಗಳಿಂದ ಪ್ರೀತಿಸಿದ್ದರು. ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ಸಪ್ತಪದಿ ತುಳಿದಿದ್ದರು.
ಫಸ್ಟ್ ಮ್ಯಾರೇಜ್ ಆನಿವರ್ಸರಿ
ಇಬ್ಬರು ಎಂಗೇಜ್‌ಮೆಂಟ್ ಹಾಗೂ ಮದುವೆ ಸಿಂಪಲ್ ಆಗಿ ಕುಟುಂಬಸ್ಥರ ಸಮ್ಮುಖದಲ್ಲಿ ಮಾಡಿಕೊಂಡಿದ್ದರು. ಇದೀಗ ಮೊದಲ ವರ್ಷದ ಆನಿವರ್ಸರಿಯನ್ನು ಆಚರಿಸುತ್ತಿದ್ದಾರೆ. ಆನಿವರ್ಸರಿ ಸೆಲಬ್ರೇಷನ್ ಮೂಡ್‌ನಲ್ಲಿರುವ ಸುಹಾಸ್ ಮತ್ತು ಗ್ಯಾಬಿ ಇಬ್ಬರೂ ಹೊರಗಡೆ ಸುತ್ತಾಡಲು ಹೋಗಿದ್ದಾರೆ. ಬಂಡೀಪುರದಲ್ಲಿ ತಮ್ಮ ವಾರ್ಷಿಕೋತ್ಸವವನ್ನು ಸೆಲಬ್ರೇಟ್ ಮಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಸ್ವತಃ ಗ್ಯಾಬಿ ತಮ್ಮ ಇನ್ ಸ್ಟಾಗ್ರಾಂ ಪೇಜ್‌ನಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.


Click it and Unblock the Notifications











